ಕಲ್ಲಿದ್ದಲು ಸಚಿವಾಲಯ

ಸುಸ್ಥಿರ ಇಂಧನ ಅಭಿವೃದ್ಧಿ

Posted On: 23 MAR 2023 4:35PM by PIB Bengaluru

ಸುಸ್ಥಿರ ಇಂಧನ ಅಭಿವೃದ್ಧಿಯನ್ನು ಉತ್ತೇಜಿಸಲು, ಕಲ್ಲಿದ್ದಲು ಕಂಪನಿಗಳು ಸೌರ ಯೋಜನೆಗಳನ್ನು ಸ್ಥಾಪಿಸಲು ಪ್ರಾರಂಭಿಸಿವೆ. ಈ ಉದ್ದೇಶಕ್ಕಾಗಿ ಕೈಗೊಂಡ ಕ್ರಮಗಳು ಮತ್ತು ಹಂಚಿಕೆಯಾದ ನಿಧಿಗಳ ವಿವರಗಳು ಈ ಕೆಳಗಿನಂತಿವೆ:

       i.  ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಕಂಪನಿಯು ಕೋಲ್ ಇಂಡಿಯಾ ಲಿಮಿಟೆಡ್ ಮತ್ತು ಅದರ ಅಂಗಸಂಸ್ಥೆಗಳಲ್ಲಿ ಈವರೆಗೆ 11.5 ಮೆಗಾವ್ಯಾಟ್ ಮೇಲ್ಛಾವಣಿ ಮತ್ತು ಗ್ರೌಂಡ್ ಮೌಂಟೆಡ್ ಯೋಜನೆಗಳನ್ನು ಸ್ಥಾಪಿಸಿದೆ. 300 ಮೆಗಾವ್ಯಾಟ್ ಸಾಮರ್ಥ್ಯದ ಗ್ರೌಂಡ್ ಮೌಂಟೆಡ್ ಪ್ರಾಜೆಕ್ಟ್ ಗಳಿಗೆ ಕಾರ್ಯ ನಿಯೋಜನೆಗಳನ್ನು ನೀಡಲಾಗಿದೆ. ಕೋಲ್ ಇಂಡಿಯಾ ಲಿಮಿಟೆಡ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದರೆ 2022-23ರ ಹಣಕಾಸು ವರ್ಷದಲ್ಲಿ ಸೌರ ವಿದ್ಯುತ್ ಯೋಜನೆಗಳ ಅಭಿವೃದ್ಧಿಗೆ 853 ಕೋಟಿ ರೂ.ಗಳ ಬಂಡವಾಳ ವೆಚ್ಚವನ್ನು ನಿಗದಿಪಡಿಸಿದ್ದು ಫೆಬ್ರವರಿ 23ರವರೆಗೆ ಈಗಾಗಲೇ 402 ಕೋಟಿ ರೂ.ಗಳನ್ನು ವೆಚ್ಚಮಾಡಲಾಗಿದೆ.

     ii. ಎನ್ ಎಲ್ ಸಿಐಎಲ್ ಈಗಾಗಲೇ ಸುಮಾರು 1421 ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸಿದೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಕೇಂದ್ರ ಸಾರ್ವಜನಿಕ ವಲಯದ ಯೋಜನೆಯ ಅಡಿಯಲ್ಲಿ ಎನ್ ಎಲ್ ಸಿಐಎಲ್ ಹೆಚ್ಚುವರಿಯಾಗಿ ಸುಮಾರು 4610 ಮೆಗಾವ್ಯಾಟ್ ಅನ್ನು ಉತ್ಪಾದಿಸುತ್ತಿದೆ, ಇದು 2030ರ ವೇಳೆಗೆ ಒಟ್ಟು 6031 ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸಬಲ್ಲದು. ಹೆಚ್ಚುವರಿಯಾಗಿ 4610 ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನದ ವಿಸ್ತರಣೆಯನ್ನು ಮುಂದಿನ ಎಂಟು ವರ್ಷಗಳ ಅವಧಿಯಲ್ಲಿ 23,403 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.

ಪ್ರಸ್ತುತ, ಪರ್ಯಾಯ ಇಂಧನಗಳಾದ ಕೋಲ್ ಬೆಡ್ ಮೀಥೇನ್ (ಸಿಬಿಎಂ), ಕೋಲ್ ಮೈನ್ ಮೀಥೇನ್ (ಸಿಎಂಎಂ) ಮತ್ತು ಕಲ್ಲಿದ್ದಲಿನಿಂದ ರಾಸಾಯನಿಕಗಳಂತಹ ಕಲ್ಲಿದ್ದಲಿನ ಪರ್ಯಾಯ ಬಳಕೆಯನ್ನು ಭಾರತ ಸರ್ಕಾರವು ಪ್ರಮುಖವಾಗಿ ಪ್ರೋತ್ಸಾಹಿಸುತ್ತಿದೆ. ಅದರಂತೆ, ಸಿಐಎಲ್ ಮತ್ತು ಎನ್ ಎಲ್ ಸಿಐಎಲ್ ತನ್ನ ವ್ಯವಹಾರ ಮೌಲ್ಯ ಸರಪಳಿಯಲ್ಲಿ ಶುದ್ಧ ಕಲ್ಲಿದ್ದಲು ತಂತ್ರಜ್ಞಾನದ ಅನುಷ್ಠಾನಕ್ಕೆ ವಿಶೇಷ ಒತ್ತು ನೀಡಿವೆ. ಆದಾಯ ಹಂಚಿಕೆ ಆಧಾರದ ಮೇಲೆ ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ ಗೆ ಸಿಬಿಎಂನ ಒಂದು ಯೋಜನೆಯನ್ನು ನೀಡಲಾಗಿದ್ದು, ಈ ಯೋಜನೆಯನ್ನು ಪ್ರಾರಂಭಿಸಲು ಯಾವುದೇ ನಿಧಿಯ ಅಗತ್ಯವಿಲ್ಲ.

ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿಯವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

*****



(Release ID: 1910023) Visitor Counter : 105


Read this release in: English , Urdu