ಗೃಹ ವ್ಯವಹಾರಗಳ ಸಚಿವಾಲಯ
ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಎಡಪಂಥೀಯ ಉಗ್ರವಾದ (ಎಲ್ ಡಬ್ಲ್ಯುಇ) ಭದ್ರತಾ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ
Posted On:
21 MAR 2023 6:01PM by PIB Bengaluru
ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಎಡಪಂಥೀಯ ಉಗ್ರವಾದ (ಎಲ್ ಡಬ್ಲ್ಯುಇ) ಭದ್ರತಾ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಭಾರತ ಸರ್ಕಾರ (ಜಿಒಐ) 2015 ರಲ್ಲಿ 'ಎಲ್ ಡಬ್ಲ್ಯುಇ ಯನ್ನು ನಿಭಾಯಿಸಲು ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆ' ಯನ್ನು ಅನುಮೋದಿಸಿತು. ಈ ನೀತಿಯು ಭದ್ರತೆಗೆ ಸಂಬಂಧಿಸಿದ ಕ್ರಮಗಳು, ಅಭಿವೃದ್ಧಿ ಮಧ್ಯಪ್ರವೇಶಗಳು, ಸ್ಥಳೀಯ ಸಮುದಾಯಗಳ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ಖಾತ್ರಿಪಡಿಸುವುದು ಇತ್ಯಾದಿಗಳನ್ನು ಒಳಗೊಂಡ ಬಹುಮುಖಿ ಕಾರ್ಯತಂತ್ರವನ್ನು ರೂಪಿಸುತ್ತದೆ.
ಈ ನೀತಿಯ ಸ್ಥಿರ ಅನುಷ್ಠಾನದಿಂದ ರಾಷ್ಟ್ರದಾದ್ಯಂತ ಎಲ್ ಡಬ್ಲ್ಯುಇ ಹಿಂಸಾಚಾರದಲ್ಲಿ ನಿರಂತರವಾದ ಕುಸಿತ ಸಾಧ್ಯವಾಗಿದೆ. 2010 ರಲ್ಲಿ ಗರಿಷ್ಟ ಪ್ರಮಾಣದಲ್ಲಿದ್ದ ಎಲ್ ಡಬ್ಲ್ಯುಇ ಸಂಬಂಧಿತ ಹಿಂಸಾತ್ಮಕ ಘಟನೆಗಳ ಸಂಖ್ಯೆಗೆ ಹೋಲಿಸಿದರೆ 2022 ರಲ್ಲಿ ಎಲ್ ಡಬ್ಲ್ಯುಇ ಸಂಬಂಧಿತ ಹಿಂಸಾತ್ಮಕ ಘಟನೆಗಳ ಸಂಖ್ಯೆ 77% ನಷ್ಟು ಕಡಿಮೆಯಾಗಿದೆ. 2010ಕ್ಕೆ ಹೋಲಿಸಿದರೆ 2022ರಲ್ಲಿ ಭದ್ರತಾ ಪಡೆಗಳು ಮತ್ತು ನಾಗರಿಕರ ಸಾವಿನ ಸಂಖ್ಯೆ ಶೇ.90ರಷ್ಟು ಕಡಿಮೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಛತ್ತೀಸ್ ಗಢದಲ್ಲಿ ಎಲ್ ಡಬ್ಲ್ಯುಇ ಸಂಬಂಧಿತ ಹಿಂಸಾತ್ಮಕ ಘಟನೆಗಳು ಮತ್ತು ಸಾವುಗಳ ವಿವರಗಳು ಈ ಕೆಳಗಿನಂತಿವೆ:-
ಕ್ರಮ ಸಂಖ್ಯೆ
|
ವರ್ಷ
|
ಎಡಪಂಥೀಯ ತೀವ್ರಗಾಮಿಗಳಿಂದ ನಡೆದ ಹಿಂಸಾತ್ಮಕ ಘಟನೆಗಳು
|
ಭದ್ರತಾ ಪಡೆಗಳಿಂದ ನಡೆದ ಘಟನೆಗಳು
|
ಹತ್ಯೆಗೀಡಾದ ಭದ್ರತಾ ಪಡೆಗಳ ಸಿಬ್ಬಂದಿ
|
ಹತ್ಯೆಗೀಡಾದ
ನಾಗರಿಕರು
|
ಎಡಪಂಥೀಯ ಉಗ್ರಗಾಮಿಗಳು ಕೊಲ್ಲಲ್ಪಟ್ಟರು
|
1.
|
2018
|
275
|
117
|
55
|
98
|
125
|
2.
|
2019
|
182
|
81
|
22
|
55
|
79
|
3.
|
2020
|
241
|
74
|
36
|
75
|
44
|
4.
|
2021
|
188
|
67
|
45
|
56
|
48
|
5.
|
2022
|
246
|
59
|
10
|
51
|
31
|
6.
|
2023 (2023ರ ಫೆಬ್ರವರಿ 28ರ ವರೆಗೆ )
|
37
|
04
|
7
|
10
|
1
|
ಗೃಹ ವ್ಯವಹಾರಗಳ ಸಹಾಯಕ ಸಚಿವ ಶ್ರೀ ನಿತ್ಯಾನಂದ ರೈ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದರು.
****
(Release ID: 1909667)
Visitor Counter : 173