ಉಪರಾಷ್ಟ್ರಪತಿಗಳ ಕಾರ್ಯಾಲಯ

‘ಭಾರತದ ವಿರುದ್ಧ ವಿನಾಶಕಾರಿ ಕಥನಗಳನ್ನು ರೂಪಿಸುವವರ ಬಗ್ಗೆ ಬುದ್ಧಿಜೀವಿಗಳು ಮತ್ತು ಜನರು ತಿಳಿದಿರಬೇಕು’: ಉಪರಾಷ್ಟ್ರಪತಿ


​​​​​​​‘ಸಾಂವಿಧಾನಿಕ ಸಂಸ್ಥೆಗಳ ಮುಖ್ಯಸ್ಥರಿಗೆ ಘರ್ಷಣೆಗೆ ಅವಕಾಶವಿಲ್ಲ, ಸಹಯೋಗದಲ್ಲಿ ಕಾರ್ಯ ನಿರ್ವಹಿಸಿ ಪರಿಹಾರ ಕಂಡುಕೊಳ್ಳಬೇಕು’: ಉಪರಾಷ್ಟ್ರಪತಿ

ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ರಚನಾತ್ಮಕ ಸಂವಾದಾತ್ಮಕ ಕಾರ್ಯವಿಧಾನ ಅಳವಡಿಸಿಕೊಳ್ಳಲು ಉಪರಾಷ್ಟ್ರಪತಿ ಕರೆ

ಕಾನೂನು ಎಲ್ಲರಿಗೂ ಸಮಾನ; ಯಾರೂ ಕಾನೂನಿಗಿಂತ ಮೇಲಲ್ಲ - ಉಪರಾಷ್ಟ್ರಪತಿ

ಸಂಸತ್ತು, ಜನರ ಆದೇಶವನ್ನು ಪ್ರತಿಬಿಂಬಿಸುತ್ತದೆ, ಅದು ಸಂವಿಧಾನದ ಅಂತಿಮ ಮತ್ತು ವಿಶೇಷ ವಾಸ್ತುಶಿಲ್ಪ – ಉಪರಾಷ್ಟ್ರಪತಿ

ಮಾಜಿ ರಾಜ್ಯಪಾಲ ಶ್ರೀ ಪಿ ಎಸ್ ರಾಮಮೋಹನ್ ರಾವ್ ಅವರ ಸ್ಮರಣಸಂಚಿಕೆ ಬಿಡುಗಡೆ ಮಾಡಿದ ಉಪರಾಷ್ಟ್ರಪತಿ; ಕಾರ್ಯಕ್ರಮದಲ್ಲಿ ಮಾಜಿ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಭಾಗಿ

Posted On: 19 MAR 2023 8:03PM by PIB Bengaluru

'ಜಾಗತಿಕ ಮಟ್ಟದಲ್ಲಿ ಭಾರತದ ಉದಯವು ಅನೇಕ ಸವಾಲುಗಳೊಂದಿಗೆ ಬರುತ್ತಿದೆ – ಅದು ದೇಶದ ಒಳಗಿನಿಂದ ಮತ್ತು ಹೊರಗಿನಿಂದ ಬರುತ್ತಿದೆ. ನಮ್ಮ ಬೆಳವಣಿಗೆಯ ಪಥವನ್ನು ಕಡಿಮೆ ಮಾಡಲು, ನಮ್ಮ ಕ್ರಿಯಾತ್ಮಕ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಹಾಳು ಮಾಡಲು ವಿನಾಶಕಾರಿ ನಿರೂಪಣೆಗಳನ್ನು ಸಂಘಟಿಸುವ ಇನ್ ಕ್ಯುಬೇಟರ್‌ಗಳು ಮತ್ತು ವಿತರಕರು’ ಇದ್ದಾರೆ ಎಂಬುದನ್ನು ಬುದ್ಧಿಜೀವಿಗಳು ಮತ್ತು ಜನರು ತಿಳಿದಿರಬೇಕು ಎಂದು ಉಪರಾಷ್ಟ್ರಪತಿ ಶ್ರೀ ಜಗದೀಪ್ ಧಂಖರ್ ಅವರು ಎಚ್ಚರಿಸಿದ್ದಾರೆ,.

ನವದೆಹಲಿಯಲ್ಲಿ ತಮಿಳುನಾಡು ಮಾಜಿ ರಾಜ್ಯಪಾಲ ಶ್ರೀ ಪಿ ಎಸ್ ರಾಮಮೋಹನ್ ರಾವ್ ಅವರ ಸ್ಮರಣಸಂಚಿಕೆ ‘ಗವರ್ನರ್‌ ಪೆಟ್ ಟು ಗವರ್ನರ್ ಹೌಸ್: ಎ ಹಿಕ್ಸ್ ಒಡಿಸ್ಸಿ’ ಪುಸ್ತಕ ಬಿಡುಗಡೆ ಮಾಡಿ, ಉಪರಾಷ್ಟ್ರಪತಿ ಅವರು ಸಭೆ ಉದ್ದೇಶಿಸಿ ಮಾತನಾಡುತ್ತಿದ್ದರು. ಸಾರ್ವಜನಿಕ ಜೀವನಕ್ಕೆ ನೀಡಿದ ಕೊಡುಗೆ ಮತ್ತು ಅವರ ಒಳನೋಟವುಳ್ಳ ಅನುಭವಗಳನ್ನು ಆತ್ಮಚರಿತ್ರೆಯಲ್ಲಿ ಹಂಚಿಕೊಂಡಿದ್ದಕ್ಕಾಗಿ ಮಾಜಿ ರಾಜ್ಯಪಾಲರನ್ನು ಶ್ರೀ ಧಂಖರ್ ಅವರು ಶ್ಲಾಘಿಸಿದರು.

'ಪ್ರಜಾಪ್ರಭುತ್ವದ ಮೂಲತತ್ವ' 'ಎಲ್ಲರೂ ಕಾನೂನಿಗೆ ಸಮಾನವಾಗಿ ಜವಾಬ್ದಾರರಾಗಿರುತ್ತಾರೆ'. ಯಾರೂ ಕಾನೂನಿನ ಮೂಲಕ ವಿಶೇಷ ಪರಿಗಣನೆ ಹೊಂದಲು ಸಾಧ್ಯವಿಲ್ಲ. ಭಾರತವು ಅತ್ಯಂತ ರೋಮಾಂಚಕ ಪ್ರಜಾಪ್ರಭುತ್ವವನ್ನು ಹೊಂದಿದೆ. 'ಕಾನೂನಿನ ಮುಂದೆ ಇರುವ ಸಮಾನತೆ ವಿಷಯದಲ್ಲಿ ನಾವೆಂದಿಗೂ ಚೌಕಾಸಿ ನಡೆಸಲು ಸಾಧ್ಯವೇ ಇಲ್ಲ' ಎಂದು ಉಪರಾಷ್ಟ್ರಪತಿ ಹೇಳಿದರು.

ಆಡಳಿತದ ಕ್ರಿಯಾಶೀಲತೆಯು ಯಾವಾಗಲೂ ಸವಾಲಿನದ್ದಾಗಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಸಾಂವಿಧಾನಿಕ ಸಂಸ್ಥೆಗಳು ಪರಸ್ಪರ ಸಾಮರಸ್ಯದ ಕಾರ್ಯ ನಿರ್ವಹಣೆ ಅಗತ್ಯವಿದೆ. ಆದರೆ, 'ಸಂಸ್ಥೆಗಳ ಮುಖ್ಯಸ್ಥರಾಗಿರುವವರಿಗೆ ತಿಕ್ಕಾಟ ನಡೆಸಲು ಅಥವಾ ದೂರು ಹೇಳಲು ಅವಕಾಶವಿಲ್ಲ. ಅವರು ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸಬೇಕು ಮತ್ತು ಒಗ್ಗಟ್ಟಿನಿಂದ ನಿರ್ಣಯ ಕಂಡುಕೊಳ್ಳಬೇಕು.’ ಈ ನಿಟ್ಟಿನಲ್ಲಿ ‘ಸಂಸ್ಥೆಗಳ ಚುಕ್ಕಾಣಿ ಹಿಡಿದಿರುವವರಲ್ಲಿ - ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ರಚನಾತ್ಮಕ, ಸಂವಾದಾತ್ಮಕ ಕಾರ್ಯ ವಿಧಾನ ಅಳವಡಿಸಿಕೊಳ್ಳಬೇಕು ಎಂದು ಉಪರಾಷ್ಟ್ರಪತಿ ಸಲಹೆ ನೀಡಿದರು.
ಪ್ರಜಾಸತ್ತಾತ್ಮಕ ಆಡಳಿತದ ಸ್ಥಿರತೆ, ಸಾಮರಸ್ಯ ಮತ್ತು ಉತ್ಪಾದಕತೆ ನಿರ್ಧರಿಸುವುದು ನಮ್ಮ ಸಂವಿಧಾನದ ಪ್ರಾಮುಖ್ಯತೆಯಾಗಿದೆ. ಸಂಸತ್ತು ಜನರ ಆದೇಶವನ್ನು ಪ್ರತಿಬಿಂಬಿಸುತ್ತದೆ, ಅದು ಸಂವಿಧಾನದ ಅಂತಿಮ ಮತ್ತು ವಿಶೇಷ ವಾಸ್ತುಶಿಲ್ಪವಾಗಿದೆ ಎಂದು ಶ್ರೀ ಧಂಖರ್ ತಿಳಿಸಿದರು.

ಭಾರತದ ಮಾಜಿ ಉಪರಾಷ್ಟ್ರಪತಿ, ಶ್ರೀ ವೆಂಕಯ್ಯ ನಾಯ್ಡು, ಹರಿಯಾಣ ರಾಜ್ಯಪಾಲ ಶ್ರೀ ಬಂಡಾರು ದತ್ತಾತ್ರೇಯ ಮತ್ತು ತಮಿಳುನಾಡಿನ ರಾಜ್ಯಪಾಲ ಮತ್ತು ಲೇಖಕ ಶ್ರೀ ಪಿ.ಎಸ್. ರಾಮಮೋಹನ್ ರಾವ್, ಸಂಸದರಾದ ಶ್ರೀ ಕೆ. ಕೇಶವ ರಾವ್, ಶ್ರೀ ವೈ.ಎಸ್. ಚೌಡಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಗೌರವಾನ್ವಿತ ಉಪರಾಷ್ಟ್ರಪತಿ ಅವರ ಭಾಷಣದ ಪಠ್ಯ (ಉದ್ಧರಣಗಳು):

‘ಗವರ್ನರ್‌ ಪೆಟ್ ಟು ಗವರ್ನರ್ ಹೌಸ್: ಎ ಹಿಕ್ಸ್ ಒಡಿಸ್ಸಿ’ ಸ್ಮರಣಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ನಾನು ಭಾಗಿಯಾಗಿರುವುದು ನನಗೆ ಗೌರವ ತಂದಿದೆ. 1956ರಲ್ಲಿ ಅವರು ಐಪಿಎಸ್ ಸೇರಿದಾಗಿನಿಂದ ಲೇಖಕರ ದೂರದೃಷ್ಟಿ ಮತ್ತು ಅವರ ವಿಶಿಷ್ಟ ಸಾರ್ವಜನಿಕ ಸೇವಾ ಪಯಣದ ಕುರಿತು ನಾನಾ ವಿಷಯಗಳನ್ನು ದಾಖಲಿಸಿರುವ ಪ್ರಯತ್ನಗಳಿಗಾಗಿ ನಾನು ಅವರನ್ನು ಶ್ಲಾಘಿಸಲು ಬಯಸುತ್ತೇನೆ.

ಶ್ರೀ ಪಿ.ಎಸ್. ರಾಮಮೋಹನ್ ರಾವ್ ಅವರು ತಮ್ಮ ಕಾಲೇಜು ಸ್ನೇಹಿತರಿಗಾಗಿ 'ಹಿಕ್' ಮೂಲಕ, ಸಾರ್ವಜನಿಕ ಹಿತಾಸಕ್ತಿಗಳ ನಿರಂತರ ಪ್ರಗತಿಯ ಮೇಲೆ ಪರಿಣಾಮ ಬೀರುವ ಕರ್ತವ್ಯದ ಭವ್ಯ ಬದ್ಧತೆಯನ್ನು ಪ್ರದರ್ಶಿಸುವ 6 ದಶಕಗಳ ಸಾರ್ವಜನಿಕ ಸೇವೆಯನ್ನು ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ.

“ಗವರ್ನರ್ ಪೆಟ್ ಟು ಗವರ್ನರ್ ಹೌಸ್: ಎ ಹಿಕ್ಸ್ ಒಡಿಸ್ಸಿ" ಲೇಖಕರ ಸುದೀರ್ಘ, ಘಟನಾತ್ಮಕ ಮತ್ತು ಸಾಹಸಮಯ ಪ್ರಯಾಣ ಮತ್ತು ಅನುಭವ ಒಳಗೊಂಡಿದೆ, ಒಳನೋಟದಿಂದ ಅವರ ಉತ್ಸಾಹ ಮತ್ತು ಧ್ಯೇಯವನ್ನು ಬಹಿರಂಗಪಡಿಸುತ್ತದೆ. ಆಂಧ್ರಪ್ರದೇಶ ಡಿಜಿಪಿ ಮತ್ತು ತಮಿಳುನಾಡು ರಾಜ್ಯಪಾಲರಾಗಿ ಅವರ ಸ್ಥಾನವು ಅವರ ಸಾಧನೆಗಳ ಹೆಜ್ಜೆ ಗುರುತುಗಳನ್ನು ಮೂಡಿಸುತ್ತದೆ. ಪುಸ್ತಕದಲ್ಲಿ ಯಾವುದೇ ಆಡಂಬರವಿಲ್ಲ. ಹಲವಾರು ಅಂಶಗಳಲ್ಲಿ ಸಾಹಿತ್ಯಿಕ ಆಡಂಬರ, ತಡೆರಹಿತ ಓದುವಿಕೆಗೆ ಪೂರಕವಾಗಿದೆ. ಇದು ಮಾಹಿತಿ ಯೋಗ್ಯ ಮತ್ತು ಸ್ಫೂರ್ತಿದಾಯಕ ಕೃತಿಯಾಗಿದೆ.

ವಾಸ್ತವವಾಗಿ, ಸಮಗ್ರತೆ, ಬದ್ಧತೆ, ರಾಷ್ಟ್ರೀಯತೆ ಐಚ್ಛಿಕವಲ್ಲ, ಅವು ಕಡ್ಡಾಯವಾಗಿರುತ್ತವೆ.

ಉತ್ತಮ ತಿಳಿವಳಿಕೆಯುಳ್ಳ ಮತ್ತು ಜ್ಞಾನವುಳ್ಳ ವ್ಯಕ್ತಿಯು ನಿಷ್ಪಾಪ ಭಾಷೆಯಲ್ಲಿ ವಿಶಿಷ್ಟವಾದ ಪ್ರಾಮಾಣಿಕತೆಯಿಂದ ಸುತ್ತುವರೆದಿರುವ ನೆನಪುಗಳ ಸರಮಾಲೆಯನ್ನು ಬರೆದಿದ್ದಾರೆ. ಪ್ರಮುಖ ಐತಿಹಾಸಿಕ ಘಟನೆಗಳು ಮತ್ತು ಅವರ 6 ದಶಕಗಳ ಸಾರ್ವಜನಿಕ ಸೇವೆಯಲ್ಲಿ ಅಧಿಕಾರಶಾಹಿ ಕಾರ್ಯ ಚಟುವಟಿಕೆಗಳನ್ನು ಪ್ರತಿಬಿಂಬಿಸಿದ್ದಾರೆ.

ಶ್ರೀ ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಈ ದೇಶದ ರಾಷ್ಟ್ರಪತಿಯಾಗಿ ಪಡೆದ ಗೌರವ ದೇಶಕ್ಕಿತ್ತು. ಆದರೆ ಕಲಾಂ ಸಾಬ್ ಹೇಗೆ ಅಭ್ಯರ್ಥಿಯಾದರು ಎಂಬುದನ್ನು ಪುಸ್ತಕದಲ್ಲಿ ವಿವರಿಸಲಾಗಿದೆ, ಒಳನೋಟವುಳ್ಳ ವಿವರಗಳು ಲಭ್ಯವಿವೆ. ಪ್ರತಿಷ್ಠಿತ ಲೇಖಕರು ಅದಕ್ಕೆ  ವೇಗ ನೀಡಿದ್ದಾರೆ.

ಪುಸ್ತಕವು ಅವರ ಹಿಡಿತ, ರಾಜಿಯಾಗದ ಆತ್ಮಸಾಕ್ಷಿ ಮತ್ತು ಸಾರ್ವಜನಿಕ ಒಳಿತಿಗಾಗಿ ಇರುವ ಬದ್ಧತೆಯನ್ನು ಬಹಿರಂಗಪಡಿಸುತ್ತದೆ.

ಈ ಕೃತಿಯು ಖಂಡಿತವಾಗಿಯೂ ನಮ್ಮ ಜ್ಞಾನವನ್ನು ಉತ್ಕೃಷ್ಟಗೊಳಿಸುತ್ತದೆ. ಅಧಿಕಾರಶಾಹಿ ಕಾರ್ಯ ನಿರ್ವಹಣೆಯ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸುತ್ತದೆ. ಜತೆಗೆ, ರಾಜ್ಯಪಾಲರ ಸಾಂವಿಧಾನಿಕ ಕಚೇರಿಯ ಸವಾಲುಗಳನ್ನೂ ಸಹ ಹೆಚ್ಚಿಸುತ್ತದೆ.

ಪ್ರಖ್ಯಾತ ಲೇಖಕರು ದಶಕಗಳಿಂದ ಆಡಳಿತ, ಅಧಿಕಾರಶಾಹಿಯ ಭಾಗವಾಗಿದ್ದಾರೆ.  ನಾಗರಿಕ ಸೇವಕರು ಮತ್ತು ರಾಜಕೀಯ ಕಾರ್ಯ ನಿರ್ವಾಹಕರ ನಡುವಿನ ಸಂಬಂಧದ ಕ್ರಿಯಾಶೀಲತೆಯನ್ನು ಅವರು ಪ್ರತಿಬಿಂಬಿಸಿದ್ದಾರೆ. ಈ ಸಂಬಂಧ ಸವಾಲಾಗಿ ಪರಿಣಮಿಸುತ್ತಿದೆ. ಅಧಿಕಾರಶಾಹಿಯು ರಾಜಕೀಯ ನಾಯಕರೊಂದಿಗೆ ಎಷ್ಟು ಕೃತಜ್ಞತೆ ಪಡೆದಿದೆ ಎಂದರೆ ನಿಮ್ಮ ನಡವಳಿಕೆಯನ್ನು ನಿಯಂತ್ರಿಸುವ 1968ರ ನಿಯಮಗಳು ಸಂಪೂರ್ಣ ಉಲ್ಲಂಘನೆಯಾಗುವುದಿಲ್ಲ, ಅವು ಸದೃಢ ಮಾರ್ಗಸೂಚಿಯಾಗಿವೆ.

ಒಬ್ಬ ವ್ಯಕ್ತಿ, ಆತನ ಕುಟುಂಬ ಮತ್ತು ಅವನ ಅಂಗವಿಕಲ ಮಗ ಮತ್ತು ವಿವಿಧ ಆಯ್ಕೆಗಳೊಂದಿಗೆ ಕಠಿಣ ನಿರ್ಧಾರಗಳನ್ನು ಮಾಡಿದ ಆತನ ಜೀವನ ಕುರಿತು ಪುಸ್ತಕದಲ್ಲಿ ಪ್ರಸ್ತಾಪಿಸಿರುವುದು ಹಿತಕರವಾಗಿದೆ. ವಿವಿಧ ಆಯ್ಕೆಗಳು ಲಭ್ಯವಿವೆ – ಪುಸ್ತಕ ಓದುತ್ತಾ ಹೋದರೆ, ಲೇಖಕರು ಗೀತೆಯ ಸರಿಯಾದ ಮಾರ್ಗದಲ್ಲಿ ಹೋಗಿದ್ದಾರೆ ಎಂದು ನಾನು ಧೈರ್ಯದಿಂದ ಹೇಳುತ್ತೇನೆ.

ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯು ಸವಾಲಿನ ವಾತಾವರಣದಲ್ಲಿ ಬೆನ್ನುಮೂಳೆಯ ಬೆಂಬಲ ವ್ಯವಸ್ಥೆಯಾಗಿ ಹೇಗೆ ಹೊರಹೊಮ್ಮುತ್ತದೆ ಎಂಬುದನ್ನು ಪುಸ್ತಕದಲ್ಲಿ ಬಹಿರಂಗಪಡಿಸಿರುವುದು ಯಾರೊಬ್ಬರನ್ನು ಸಹ ಸ್ಫೂರ್ತಿದಾಯಕವಾಗಿ ಪ್ರೇರೇಪಿಸುತ್ತದೆ.

ರಾವ್ ಸಾಬ್ ಅವರು ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಚಳವಳಿಯೊಂದಿಗೆ ಸಂಪರ್ಕ ಹೊಂದಿದ್ದ ಕುಟುಂಬದಿಂದ ಬಂದವರು. ಪ್ರತಿಷ್ಠಿತ ಲೇಖಕರು ರಾಷ್ಟ್ರೀಯತೆ ಮತ್ತು ನಮ್ಮ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ತಮ್ಮ ಅಚಲ ಬದ್ಧತೆ ಪ್ರದರ್ಶಿಸಿದ್ದಾರೆ.

ಅವರು 1956ರಿಂದ ರಾಷ್ಟ್ರದ ಬೆಳವಣಿಗೆಯ ಕಥೆ ಮತ್ತು ಪ್ರಯಾಣದ ಭಾಗವಾಗಿದ್ದಾರೆ, ಈಗ ಅವರು ಅಮೃತ ಕಾಲದಲ್ಲಿದ್ದಾರೆ.

ಅವರ ಜೀವನ ಪಯಣ ಮತ್ತು ಶ್ಲಾಘನೀಯ ಸಾಧನೆಗಳು 2047ರ ಯೋಧರು ಎಂದು ನಾನು ಕರೆಯುವ ನಮ್ಮ ಯುವಕರಿಗೆ ಪ್ರೇರಕ ಮತ್ತು ಸ್ಫೂರ್ತಿದಾಯಕವಾಗಿದೆ. 2047ರಲ್ಲಿ ನಾವು ನಮ್ಮ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವಾಗ ಭಾರತವು ಏನಾಗಲಿದೆ ಎಂಬುದಕ್ಕೆ ಅವರು ನಮ್ಮ ಭರವಸೆ ಮತ್ತು ಆಕಾಂಕ್ಷೆಗಳನ್ನು ಅನುವಾದಿಸುತ್ತಾರೆ.

ಸ್ನೇಹಿತರೆ, ಅವರೊಂದಿಗೆ ಸಾಮಾನ್ಯವಾದ ಕೆಲವು ವಿಷಯಗಳನ್ನು ಹಂಚಿಕೊಳ್ಳುವ ಸೌಭಾಗ್ಯ ನನ್ನದಾಗಿದೆ. ನಾನು ಸಹ ರಾಜ್ಯಪಾಲನಾಗಿದ್ದೆ, ಅವರು ಸಹ ಆ ಹುದ್ದೆ ಅಲಂಕರಿಸಿದ್ದಾರೆ. ಅವರಿಗೆ ಒಬ್ಬ ಮಹಿಳಾ ಮುಖ್ಯಮಂತ್ರಿಯೂ ಇದ್ದರು; ಗಟ್ಟಿಮುಟ್ಟಾದ ವ್ಯಕ್ತಿತ್ವದ ಮಮತಾ ಜೀ ಮುಖ್ಯಮಂತ್ರಿ ಆದಾಗ ರಾಜ್ಯಪಾಲರಾಗಿ ಕೆಲಸ ಮಾಡುವ ಸೌಭಾಗ್ಯ ನನಗೂ ಸಿಕ್ಕಿತ್ತು. ನಾವಿಬ್ಬರೂ ಆ ನಿಷ್ಣಾತ ರಾಜಕಾರಣಿಗಳೊಂದಿಗೆ ವ್ಯವಹರಿಸಬೇಕಾಗಿತ್ತು. ಸಹಜವಾಗಿ ನಾವು ನಮ್ಮ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಜಿ ಅವರಿಂದ ಸುಲಭವಾಗಿ ಹೊರಗುಳಿದಿದ್ದೇವೆ. ಅವರು ಜಯಲಲಿತಾ ಜಿ, ಮಮತಾ ಜಿ ಮತ್ತು ಮಾಯಾವತಿ ಜಿ - ಈ ದೇಶದ ರಾಜಕೀಯ ಕ್ಷೇತ್ರದ ಮೇಲೆ ಅತ್ಯಂತ ಪರಿಣಾಮಕಾರಿಯಾಗಿ ಪ್ರಭಾವ ಬೀರಿದ ಮೂವರು ಮಹಿಳಾ ರಾಜಕಾರಣಿಗಳೊಂದಿಗೆ ವ್ಯವಹರಿಸಿದರು.

ಬೇರೆ ಬೇರೆ ಕಾರಣಗಳಿಂದ ನಾವಿಬ್ಬರೂ ನಮ್ಮ ಅವಧಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನಾನು ಇಲ್ಲೇ ಇರಬೇಕಾಗಿತ್ತು. ಅವರು ಆತ್ಮಸಾಕ್ಷಿಯ ಕರೆಗೆ ಮಣಿಯಬೇಕಿತ್ತು. ಆದರೆ ಪುಸ್ತಕವನ್ನು ಕೆದಕುತ್ತಾ ಹೋದರೆ ಒಂದೇ ಒಂದು ದಿನವೂ ವಿರಮಿಸಲಿಲ್ಲ ಎಂಬುದನ್ನು ಚೆನ್ನಾಗಿ ಯೋಚಿಸಿದೆ.

ಗೌರವಾನ್ವಿತ ಪ್ರಧಾನಿಯ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಗೌರವಾನ್ವಿತ ಗೃಹ ಸಚಿವರೊಂದಿಗೆ ಅವರು ನಡೆಸಿದ ಸಂಭಾಷಣೆ ವಿಷಯ ಕುರಿತು ನಾನು ಸ್ಪರ್ಶಿತನಾಗಿದ್ದೇನೆ. ಅವರು ಆ ಸಂಭಾಷಣೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆದರೆ ನಾವು ಯಾವಾಗಲೂ ಅವರ ಬಗ್ಗೆ ಹೆಮ್ಮೆಪಡುತ್ತೇವೆ. ಏಕೆಂದರೆ, ಅವರು ಆತ್ಮಸಾಕ್ಷಿಯ ಕರೆಗೆ ಮಣಿದರು. ಅವರು ಕಚೇರಿಗೆ ಅಂಟಿಕೊಳ್ಳಲಿಲ್ಲ. ಅವರು ಅದನ್ನು ಸುಲಭವಾಗಿ ಮಾಡಬಹುದಿತ್ತು.

ಇನ್ನೊಂದು ವಿಷಯವನ್ನು ನಾನು ಪ್ರಸ್ತಾಪಿಸಬಹುದು. ಆದರೆ ಅವರ ಹಕ್ಕು 100% ಸಮರ್ಥನೀಯವಾಗಿದೆ. ನಾವಿಬ್ಬರೂ ಸಾಂವಿಧಾನಿಕ ನಿಬಂಧನೆಗಳಿಗೆ ನಿಷ್ಠುರವಾಗಿ ನಿಷ್ಠೆಯಿಂದ ನಡೆದುಕೊಂಡಿದ್ದೇವೆ. ಸಾಂವಿಧಾನಿಕ ವಿಧೇಯಕಗಳಿಂದ ಹಿಂದೆ ಸರಿಯುವ ಸಂದರ್ಭವೇ ಇರಲಿಲ್ಲ ಎಂದು ಅಧಿಕಾರ ತ್ಯಜಿಸಿದ ನಂತರ ಹೇಳಲು ಸಾಕಷ್ಟು ಧೈರ್ಯ ಬೇಕು. ವೆಂಕಯ್ಯನಾಯ್ಡು ಅವರು ನನ್ನನ್ನೂ ಒಳಗೊಂಡಂತೆ ಅನೇಕರಿಗೆ ಮಾರ್ಗದರ್ಶಕರಾಗಿದ್ದರು ಎಂದು ನಾನು ಆರಂಭದಲ್ಲೇ ಹೇಳಿದ್ದೇನೆ. ಆ ವಿಷಯದಲ್ಲಿ ನಾನು ಅದೃಷ್ಟಶಾಲಿಯಾಗಿದ್ದೆ. ನನಗೆ ನಿರಂತರ ಮಾರ್ಗದರ್ಶನ, ಪ್ರಬುದ್ಧ ಮಾರ್ಗದರ್ಶನ ಸಿಗುತ್ತಿತ್ತು. ಈಗ ನಾನು ಅವರ ಮುಂದೆ ಹೇಳಬಲ್ಲೆ - ಬರೆದಿರುವ ಪ್ರತಿಯೊಂದು ಪದವೂ, ನಾನು ಮಾಡಿದ ಪ್ರತಿಯೊಂದು ಸಾರ್ವಜನಿಕ ಹೇಳಿಕೆಯೂ ಅತ್ಯಂತ ಅಲಂಕಾರಿಕ ರೀತಿಯಲ್ಲಿದೆ, ನನ್ನ ಅಂಶವನ್ನು ಇದರಲ್ಲಿ ಹಾಕಲಾಗಿದೆ. ನಾನು ಶ್ರೀ ರಾವ್ ಅವರಿಂದ ಹೊರಗುಳಿದಿದ್ದೇನೆ, ಆದರೂ ಅವರು ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಿದ್ದಾರೆ.

ನಾನು ಭಾವಿಸುವ ಇನ್ನೊಂದು ವಿಷಯವೆಂದರೆ ದೇಶದ ಏಕೈಕ ರಾಜ್ಯಪಾಲರು ಅದೃಷ್ಟವಂತರು, ಅವರ ಮ್ಯಾಜಿಕ್ ಎಷ್ಟು ಅದ್ಭುತವಾಗಿದೆ ಎಂದು ನೋಡಬೇಕು, ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ.

ಸಂವಿಧಾನ ವಿಧಿ 161 ಮತ್ತು 76ರ ಅಡಿ, ರಾಜ್ಯಪಾಲರು ವಿಧಾನಮಂಡಲದ ಉಭಯ ಸದನ ಉದ್ದೇಶಿಸಿ ಭಾಷಣ ಮಾಡಬೇಕಾಗುತ್ತದೆ. ಅಭ್ಯಾಸದ ಪ್ರಕಾರ, ಸರ್ಕಾರ ನೀಡಿದ ಭಾಷಣ ಓದಲು ರಾಜ್ಯಪಾಲರ ಅಗತ್ಯವಿದೆ. ನಾನು ಅದನ್ನು 3 ಸಂದರ್ಭಗಳಲ್ಲಿ ಮಾಡಿದ್ದೇನೆ. ಈ ಮೂರೂ ಸಂದರ್ಭಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ನಾನು ಹಾಗೆ ಮಾಡುತ್ತೇನೋ ಅಥವಾ ಇಲ್ಲವೋ ಎಂಬುದು ಖಚಿತವಾಗಿರಲಿಲ್ಲ. ಈ ಪ್ರಕ್ರಿಯೆಯಲ್ಲಿ, ಮಾನ್ಯ ಮುಖ್ಯಮಂತ್ರಿಗಳು, ನನಗೆ ಮಾರ್ಗದರ್ಶನ ನೀಡುವ ಮತ್ತು ನನಗೆ ಜ್ಞಾನೋದಯ ಮಾಡುವ ಜನರು ನನ್ನಲ್ಲಿದ್ದಾರೆ ಎಂಬುದನ್ನು ಮರೆತೇಬಿಟ್ಟರು.  ಆದರೆ ಅವರ ವಿಷಯದಲ್ಲಿ ಮತ್ತು ಬಹುಶಃ ಭಾರತದ ಸಂಸದೀಯ ಇತಿಹಾಸದಲ್ಲಿ ಇದೊಂದು ಏಕೈಕ ಪ್ರಕರಣವಾಗಿದೆ. ನನ್ನ ಕಾರ್ಯಾಲಯದ ಹಿರಿಯ ಅಧಿಕಾರಿ ಮುಖ್ಯಮಂತ್ರಿಗೆ ಪತ್ರ ಬರೆಯುತ್ತಾರೆ, ನಾನು ನಿಮ್ಮ ಭಾಷಣ ಪ್ರತಿಯ ಕರಡನ್ನು ತಿದ್ದಬಹುದೇ? ಇದಕ್ಕೆ ಅವರು ಗಾಬರಿಗೊಂಡಿರಬಹುದು, ಆದರೂ ಅವರು ಒಪ್ಪಿಗೆ ಸೂಚಿಸಿದರು. ನಾವು ಮಾಡಿದ ಬದಲಾವಣೆಯು ಭಾಷಣದ ಆಧಾರವಾಗಿದ್ದ ತಿರುಳನ್ನು ಬದಲಿಸಲಿಲ್ಲ. ಭಾಷಣದ ರೂಪ, ವಿರೂಪಗಳನ್ನು ಬದಲಾಯಿಸಿದೆವು, ಆದರೆ ಭಾಷಣದ ದಿಕ್ಕನ್ನು ಬದಲಿಸಲಿಲ್ಲ. ನಾವು ತಿದ್ದುಪಡಿ ಮಾಡಿದ ಪ್ರತಿಯ ಪ್ರಕಾರ, "ಕಳೆದ ಒಂದು ವರ್ಷದ ಎಲ್ಲಾ ಆಘಾತಕಾರಿ ಘಟನೆಗಳ ನಂತರವೂ, ನಾನು ಸೆಲ್ವಿ ಜಯಲಲಿತಾ ಅವರನ್ನು ತಮಿಳುನಾಡಿನ ಸಿಎಂ ಆಗಿ ಮರಳಿ ಸ್ವಾಗತಿಸುತ್ತೇನೆ" ಎಂದು ನಾನು ಉಲ್ಲೇಖಿಸಿದ್ದೆ..

ಆದ್ದರಿಂದಲೇ ಶ್ರೀಮತಿ ಜಯಲಲಿತಾ ಮತ್ತೆ ಅಧಿಕಾರಕ್ಕೆ ಬಂದಾಗ ಸಹಾಯ ಪಡೆಯುವ ಸ್ಥಿತಿಯಲ್ಲಿ ಅವರು, ಶ್ರೀ ರಾವ್ ಅವರನ್ನು ಹೊಂದಿದ್ದರು.

ವೆಂಕಯ್ಯನಾಯ್ಡು ಜಿ ಸೂಚಿಸಿದಂತೆ, ಭಾರತ ಹಿಂದೆಂದೂ ಕಾಣದ ಪ್ರಗತಿ ಕಾಣುತ್ತಿದೆ ಮತ್ತು ಈ ಪ್ರಗತಿಯನ್ನು ಯಾರಿಂದಲೂ ತಡೆಯಲಾಗದು. ರಾಷ್ಟ್ರದ ಜಾಗತಿಕ ಪ್ರಸ್ತುತತೆ ಮತ್ತು ಮಾನ್ಯತೆ ಹಿಂದೆಂದೂ ಕಾಣದ ಮಟ್ಟದಲ್ಲಿದೆ. ಈ ಪ್ರಗತಿಯು ದೇಶದ  ಒಳಗಿನಿಂದ ಮತ್ತು ಹೊರಗಿನಿಂದ ಅನೇಕ ಸವಾಲುಗಳನ್ನು ಹೊಂದಿದೆ.

ಪ್ರಜ್ಞಾವಂತರು ಮತ್ತು ಮಾಧ್ಯಮ ಪ್ರತಿನಿಧಿಗಳು ಇಲ್ಲಿ ಮುಂದೆ ಬರಬೇಕು. ನಮ್ಮ ಬೆಳವಣಿಗೆಯ ಪಥ ಕಡಿಮೆ ಮಾಡಲು, ನಮ್ಮ ರೋಮಾಂಚನಕಾರಿ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಕಳಂಕಗೊಳಿಸಲು ವಿನಾಶಕಾರಿ ನಿರೂಪಣೆಗಳನ್ನು ರೂಪಿಸುವ ಭಾರತ ವಿರೋಧಿ ಶಕ್ತಿಗಳ ಇನ್ ಕ್ಯುಬೇಟರ್‌ಗಳು ಮತ್ತು ವಿತರಕರ ಬಗ್ಗೆ ನಾವೆಲ್ಲರೂ ತಿಳಿದಿರಬೇಕು. ನಾವೆಲ್ಲರೂ ನಮ್ಮ ರಾಷ್ಟ್ರ ಮತ್ತು ರಾಷ್ಟ್ರೀಯತೆಯನ್ನು ನಂಬುವ ಜತೆಗೆ, ಭಾರತ ವಿರೋಧಿಗಳ ದುಸ್ಸಾಹಸಗಳನ್ನು ತಟಸ್ಥಗೊಳಿಸಲು ತೊಡಗಿಸಿಕೊಳ್ಳುವುದು ಅತ್ಯಗತ್ಯ.

ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನವಾಗಿ ಕಾನೂನಿಗೆ ಜವಾಬ್ದಾರರಾಗಿರುತ್ತಾರೆ. ಕಾನೂನಿನಿಂದ ಯಾರೂ ವಿಶೇಷ ಪರಿಗಣನೆ ಹೊಂದಲು ಸಾಧ್ಯವಿಲ್ಲ, ಎ ಮತ್ತು ಬಿ ನಡುವೆ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ.

ನೀವು ತುಂಬಾ ಎತ್ತರದಲ್ಲಿದ್ದರೆ, ಕಾನೂನು ಯಾವಾಗಲೂ ನಿಮ್ಮ ಮೇಲಿರುತ್ತದೆ. ಅಂತಹ ಸವಲತ್ತುಗಳು ಇರಬಾರದು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಈ ಸವಲತ್ತುಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಕಾನೂನಿನ ಕಠಿಣತೆಗಳು ಎಲ್ಲರಿಗೂ ಅನ್ವಯಿಸುತ್ತವೆ. ಕೆಲವು ಜನರು ದುರದೃಷ್ಟವಶಾತ್ ನಾವು ವಿಭಿನ್ನರು ಮತ್ತು ವಿಭಿನ್ನವಾಗಿ ವ್ಯವಹರಿಸಬೇಕು ಎಂದು ಭಾವಿಸುತ್ತಾರೆ.

ನಮ್ಮದು ಅತ್ಯಂತ ರೋಮಾಂಚಕ ಮತ್ತು ಕ್ರಿಯಾತ್ಮಕ ಪ್ರಜಾಪ್ರಭುತ್ವ. ಸಮಾನತೆ ಎನ್ನುವುದು ನಾವು ಎಂದಿಗೂ ಚೌಕಾಸಿ ನಡೆಸಲಾಗದ ಸ್ಪಷ್ಟ ವಿಷಯ. ಕಾನೂನಿನ ಅನುಸರಣೆ ಐಚ್ಛಿಕವಲ್ಲ. ಕೆಲವರು ಅದನ್ನು ಅರಿತುಕೊಳ್ಳಬೇಕು. ಗುಪ್ತಚರ ಮತ್ತು ಮಾಧ್ಯಮಗಳು ಅದರಲ್ಲಿ ಬಹಳಷ್ಟು ಅರ್ಥ ನೋಡಬೇಕಾಗಿದೆ.

ಪ್ರಜಾಪ್ರಭುತ್ವದಲ್ಲಿ ಆಡಳಿತದ ಕ್ರಿಯಾಶೀಲತೆ ಯಾವಾಗಲೂ ಸವಾಲಿನದ್ದಾಗಿರುತ್ತದೆ, ಸಾಂವಿಧಾನಿಕ ಸಂಸ್ಥೆಗಳ ಸಾಮರಸ್ಯದ ಕಾರ್ಯ ನಿರ್ವಹಣೆ ಅಗತ್ಯವಿರುತ್ತದೆ, ಅದು ಯಾವಾಗಲೂ ಸಂಭವಿಸುತ್ತದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಯಾವಾಗಲೂ ಸಮಸ್ಯೆಗಳಿರುತ್ತವೆ. ಸಮಸ್ಯೆಗಳಿಲ್ಲದ ದಿನಗಳೇ ಇರುವುದಿಲ್ಲ.  ಏಕೆಂದರೆ ನಮ್ಮದು ಕ್ರಿಯಾತ್ಮಕ ಸಮಾಜವಾಗಿರುವುದರಿಂದ ಅದು ಪದೇಪದೆ ಸಂಭವಿಸುತ್ತದೆ.
ಈ ಸಂಸ್ಥೆಗಳ ಮುಖ್ಯಸ್ಥರಾಗಿರುವವರು ಕಿತ್ತಾಟ ನಡೆಸಲು ಅಥವಾ ದೂರು ಹೇಳಲು  ಅವಕಾಶವಿಲ್ಲ. ಕಾರ್ಯಾಂಗ, ಶಾಸಕಾಂಗ ಅಥವಾ ನ್ಯಾಯಾಂಗದ ಮುಖ್ಯಸ್ಥರಾಗಿ ಇರುವವರು ಸಂತೃಪ್ತರಾಗಿರಲು ಸಾಧ್ಯವಿಲ್ಲ, ಅವರು ಮುಖಾಮುಖಿಯಾಗಿ ವರ್ತಿಸಲು ಸಾಧ್ಯವಿಲ್ಲ. ಅವರು ಸಹಯೋಗದಲ್ಲಿ ಕಾರ್ಯ ನಿರ್ವಹಿಸಬೇಕು ಮತ್ತು ಒಟ್ಟಿಗೆ ಸೇರಿ ಪರಿಹಾರ ಕಂಡುಕೊಳ್ಳಬೇಕು.

ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ - ಈ ಸಂಸ್ಥೆಗಳ ಚುಕ್ಕಾಣಿ ಹಿಡಿದಿರುವವರಲ್ಲಿ ರಚನಾತ್ಮಕ ಕಾರ್ಯ ವಿಧಾನದ ಅಗತ್ಯವಿದೆ ಎಂದು ನಾನು ಬಹಳ ಸಮಯದಿಂದ ಯೋಚಿಸುತ್ತಿದ್ದೇನೆ. ಪರಸ್ಪರ ಸಂವಹನದ ರಚನಾತ್ಮಕ ಕಾರ್ಯ ವಿಧಾನವು ಬಹಳ ದೂರ ಸಾಗುತ್ತದೆ. ಈ ಸಂಸ್ಥೆಗಳ ಮುಖ್ಯಸ್ಥರಾಗಿರುವವರು ತಮ್ಮ ವೇದಿಕೆಗಳನ್ನು ಇತರ ಸಂಸ್ಥೆಗಳೊಂದಿಗೆ ಸಂವಾದಕ್ಕೆ ಬಳಸುವಂತಿಲ್ಲ.

ನಾನು ಬಹಳ ಸಮಯದಿಂದ ಹೇಳುತ್ತಿದ್ದೇನೆ. ನನಗೆ ಇದರಲ್ಲಿ ಯಾವುದೇ ಸಂದೇಹವಿಲ್ಲ.  ದೇಶದ ಶ್ರೇಷ್ಠ ಪ್ರಜಾಪ್ರಭುತ್ವವು ಅರಳುತ್ತದೆ. ಇದು ನಮ್ಮ ಸಂವಿಧಾನದ ಪ್ರಾಮುಖ್ಯತೆಯಾಗಿದ್ದು, ಅದು ಪ್ರಜಾಪ್ರಭುತ್ವ ಆಡಳಿತದ ಸ್ಥಿರತೆ, ಸಾಮರಸ್ಯ ಮತ್ತು ಉತ್ಪಾದಕತೆಯನ್ನು ನಿರ್ಧರಿಸುತ್ತದೆ. ಜನರ ಆದೇಶವನ್ನು ಪ್ರತಿಬಿಂಬಿಸುವ ಸಂಸತ್ತು ಸಂವಿಧಾನದ ಅಂತಿಮ ಮತ್ತು ವಿಶೇಷ ವಾಸ್ತುಶಿಲ್ಪವಾಗಿದೆ. ಸಂವಿಧಾನವು ಸಂಸತ್ತಿನ ಮೂಲಕ ಜನರಿಂದ ವಿಕಸನಗೊಳ್ಳಬೇಕು.

ಸಂವಿಧಾನವನ್ನು ರೂಪಿಸುವಲ್ಲಿ ಕಾರ್ಯಾಂಗ ಯಾವುದೇ ಪಾತ್ರ ಹೊಂದಿಲ್ಲ.  ನ್ಯಾಯಾಂಗ ಸೇರಿದಂತೆ ಯಾವುದೇ ಸಂಸ್ಥೆಯು ಸಂವಿಧಾನ ರೂಪಿಸುವಲ್ಲಿ ಯಾವುದೇ ಪಾತ್ರ ಹೊಂದಿಲ್ಲ. ಸಂವಿಧಾನದ ವಿಕಾಸವು ಸಂಸತ್ತಿನಲ್ಲಿ ನಡೆಯಬೇಕು, ಅದನ್ನು ನೋಡಲು ಇನ್ನಾವುದೇ ಉತ್ಕೃಷ್ಟ ಸಂಸ್ಥೆ ಇರಲು ಸಾಧ್ಯವಿಲ್ಲ. ಇದು ಸಂಸತ್ತಿನೊಂದಿಗೆ ಕೊನೆಗೊಳ್ಳಬೇಕು, ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗವು ತಮ್ಮ ಕಟ್ಟುಪಾಡುಗಳನ್ನು ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿ ಸಾಮರಸ್ಯ, ಒಗ್ಗಟ್ಟು ಮತ್ತು ಏಕತೆದಿಂದ ಕಾರ್ಯ ನಿರ್ವಹಿಸಿದಾಗ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಾರ್ವಜನಿಕ ಹಿತಾಸಕ್ತಿಗಳು ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತವೆ. ಇದನ್ನು ಉಲ್ಲಂಘಿಸುವುದರಿಂದ ಪ್ರಜಾಪ್ರಭುತ್ವಕ್ಕೆ ಸಮಸ್ಯೆ ಉಂಟಾಗುತ್ತದೆ. ಇದು ಸರ್ವೋತ್ಕೃಷ್ಟವಾಗಿದೆ, ಇದರ ಯಾವುದೇ ಉಲ್ಲಂಘನೆಯು ಪ್ರಜಾಪ್ರಭುತ್ವಕ್ಕೆ ಸಮಸ್ಯೆ ಉಂಟುಮಾಡುತ್ತದೆ. ಸಂವಿಧಾನ ನಮಗೆ ನೀಡಿರುವ ಅಧಿಕಾರ ಸ್ವಾಮ್ಯಸೂಚಕವಾಗಿದೆ. ನಾವೆಲ್ಲರೂ ಒಟ್ಟಾಗಿ ಎದುರಿಸಬೇಕಾದ ಮತ್ತು ಸಾಮರಸ್ಯದಿಂದ ಬಿಡುಗಡೆ ಮಾಡಬೇಕಾದ ಸವಾಲಾಗಿದೆ.

ಸ್ನೇಹಿತರೆ, ನನಗೆ ಪುಸ್ತಕ ಓದುವ ಅವಕಾಶ ಸಿಕ್ಕಿತು. ಅನೇಕ ಜನರು ಶ್ರೀ ರಾವ್ ಅವರ ವ್ಯಕ್ತಿತ್ವ ಪ್ರತಿಬಿಂಬಿಸಿದ್ದಾರೆ. ಸಮರ್ಥನೀಯವಾಗಿ ಪ್ರಖ್ಯಾತ ಲೇಖಕರು ಮಹತ್ವದ ಮತ್ತು ವೈವಿಧ್ಯಮಯ ಮೂಲೆಗಳಿಂದ ಪ್ರಶಂಸೆ ಪಡೆದಿದ್ದಾರೆ.  "ನೀವು ಜನರ ಗವರ್ನರ್" ಎಂಬುದನ್ನು ನಾವೆಲ್ಲರೂ ಒಪ್ಪುತ್ತೇವೆ.

ಗೌರವಾನ್ವಿತ ಮಹಿಳೆಯರೆ ಮತ್ತು ಮಹನೀಯರೆ, ಈ ಉಪಕ್ರಮಕ್ಕಾಗಿ ಲೇಖಕರನ್ನು ಮತ್ತೊಮ್ಮೆ ಶ್ಲಾಘಿಸುವ ಮೂಲಕ ನನ್ನ ಭಾಷಣ ಮುಕ್ತಾಯಗೊಳಿಸುತ್ತೇನೆ. ಈ ರೀತಿಯ ಪುಸ್ತಕವನ್ನು ಬರೆಯುವುದು ಬೆದರಿಕೆ ಹುಟ್ಟಿಸುವಂತಿದೆ.

"ಗವರ್ನರ್‌ಪೆಟ್‌ ಟು ಗವರ್ನರ್ ಹೌಸ್: ಎ ಹಿಕ್ಸ್ ಒಡಿಸ್ಸಿ" ನಿಮ್ಮ ಸಮಯಕ್ಕೆ ಯೋಗ್ಯವಾಗಿದೆ ಮತ್ತು ಅದನ್ನು ಎಲ್ಲರನ್ನೂ ಶಿಫಾರಸು ಮಾಡುತ್ತದೆ.

ಜೈ ಹಿಂದ್.”

*****
 



(Release ID: 1908721) Visitor Counter : 210


Read this release in: English , Hindi , Urdu