ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿ (ಎನ್ ಹೆಚ್ 275)


ಕಿಲೋ ಮೀಟರ್ 42+640ರಲ್ಲಿ ಒಳಚರಂಡಿ ಸಮಸ್ಯೆ

Posted On: 18 MAR 2023 8:27PM by PIB Bengaluru

ಕರ್ನಾಟಕದಲ್ಲಿ ನಿನ್ನೆ ಅಂದರೆ ಮಾರ್ಚ್ 17ರಂದು ರಾತ್ರಿ ಅಧಿಕ ಮಳೆ ಸುರಿದಿದೆ.(ಸಾಮಾನ್ಯ 0.1 ಮಿಮೀ ಬದಲಾಗಿ 3.9 ಮಿಮೀ) ಇದರ ಪರಿಣಾಮ ಪ್ರಾಣಿಗಳ ಓಡಾಟದ ಮೇಲ್ಸೇತುವೆಯ ಕೆಳಗೆ ಕಿಲೋ ಮೀಟರ್ 42.640 ರಲ್ಲಿ ಗ್ರಾಮಸ್ಥರು ಒಳಚರಂಡಿ ಮಾರ್ಗವನ್ನು ನಿರ್ಬಂಧಿಸಿದ್ದರಿಂದ ಮುಳುಗಡೆಯಾಗಿದೆ. 

ಮಾದಾಪುರ ಮತ್ತು ಇತರ ಸುತ್ತಮುತ್ತಲ ಭಾಗಗಳಲ್ಲಿ ತಮ್ಮ ಕೃಷಿ ಜಮೀನು ಮತ್ತು ಗ್ರಾಮಕ್ಕೆ ಕಿಲೋ ಮೀಟರ್ 42+640 ರಲ್ಲಿ ಪ್ರವೇಶಿಸಲು 3 ಮೀಟರ್ ಅಗಲದವರೆಗೆ ಚರಂಡಿಯನ್ನು ಮಣ್ಣಿನಿಂದ ಮುಚ್ಚುವ ಮೂಲಕ ಸರ್ವಿಸ್ ರಸ್ತೆಯಿಂದ ತಮ್ಮದೇ ಆದ ಮಾರ್ಗವನ್ನು ನಿರ್ಮಿಸುವ ಮೂಲಕ ರಸ್ತೆ ಕಡಿತ ದಾರಿ ಮಾರ್ಗ ಮಾಡಿಕೊಂಡಿದ್ದರಿಂದ  ಪ್ರಾಣಿಗಳ ಮೇಲ್ಸೇತುವೆ ಕೆಳಗೆ ಅವ್ಯಾಹತ ಮಳೆ ಸುರಿದಾಗ ಮುಳುಗಡೆ ಉಂಟಾಯಿತು. 

ಗ್ರಾಮಸ್ಥರು ಪ್ರವೇಶಕ್ಕಾಗಿ ನಿರ್ಮಿಸಿದ್ದ ದಂಡೆಯನ್ನು ಇಂದು ಅಂದರೆ ಮಾರ್ಚ್ 18ರಂದು ಮುಂಜಾನೆಯೇ ತೆರವುಗೊಳಿಸಲಾಗಿದೆ. 

ಮಾದಾಪುರ ಗ್ರಾಮದ ಅಕ್ಕಪಕ್ಕದ ಹೊಲಗಳಿಗೆ ಅನುಕೂಲವಾಗುವಂತೆ 1.2 ಮೀ ಡಯಾ ಪೈಪ್‌ನ ಎರಡು ಸಾಲುಗಳನ್ನು ಪೈಪ್ ಡ್ರೈನ್ ಮೂಲಕ ಒದಗಿಸಲು ನಿರ್ಧರಿಸಲಾಯಿತು. ಈ ಕಾಮಗಾರಿ ಪ್ರಗತಿಯಲ್ಲಿದ್ದು ಇಂದು ರಾತ್ರಿ 11.30ರ ಹೊತ್ತಿಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

****(Release ID: 1908464) Visitor Counter : 110


Read this release in: English , Urdu , Hindi , Telugu