ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಸಂಶೋಧನಾ ಸಹಕಾರ ಬಲಪಡಿಸಲು ಭಾರತ ಮತ್ತು ಸ್ವೀಡನ್ ನಡುವೆ ಸಹಕಾರದ ತಿಳಿವಳಿಕೆ ಪತ್ರಕ್ಕೆ ಸಹಿ

Posted On: 13 MAR 2023 7:27PM by PIB Bengaluru

ಭಾರತ ಮತ್ತು ಸ್ವೀಡನ್ ದೇಶಗಳ ಸಂಶೋಧನಾ ಸಂಸ್ಥೆಗಳ ನಡುವೆ ಸಹಕಾರ ಬಲಪಡಿಸಲು ಮತ್ತು ಸಂಶೋಧನಾ ಜಾಲವನ್ನು ಉತ್ತೇಜಿಸಲು ಭಾರತದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿ (ಎಸ್ಇಆರ್ ಬಿ) ಮತ್ತು ಸ್ವೀಡನ್ ನ ಸ್ಟಾಕ್‌ಹೋಮ್ ನಲ್ಲಿರುವ ಸ್ವೀಡಿಷ್ ಫೌಂಡೇಶನ್ ಫಾರ್ ಇಂಟರ್ ನ್ಯಾಷನಲ್ ಕೋಆಪರೇಷನ್ ಇನ್ ರಿಸರ್ಚ್ ಅಂಡ್ ಹೈಯರ್ ಎಜುಕೇಶನ್ (ಸ್ಟಿಂಟ್) ನಡುವೆ ಸಹಕಾರದ ಜ್ಞಾಪಕ ಪತ್ರಕ್ಕೆ ಸಹಿ ಹಾಕಲಾಯಿತು. 

ಸಹಕಾರದ ಜ್ಞಾಪನಾ ಪತ್ರಕ್ಕೆ 2023 ಮಾರ್ಚ್ 13ರಂದು ಎಸ್ಇಆರ್ ಬಿ ಕಾರ್ಯದರ್ಶಿ ಡಾ. ಅಖಿಲೇಶ್ ಗುಪ್ತಾ ಮತ್ತು ಸ್ಟಿಂಟ್ ಕಾರ್ಯ ನಿರ್ವಾಹಕ ನಿರ್ದೇಶಕ, ಡಾ. ಆಂಡ್ರಿಯಾಸ್ ಗೊಥೆನ್‌ಬರ್ಗ್ ಉಪಸ್ಥಿತಿಯಲ್ಲಿ ಸ್ಟಿಂಟ್ ಸಂಸ್ಥೆಯ ಎಪಿಎಸಿ ಪ್ರತಿನಿಧಿ ಡಾ. ಎರಿಕ್ ಫೋರ್ಸ್‌ಬರ್ಗ್ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ ಟಿ) ಕಾರ್ಯದರ್ಶಿ ಡಾ. ಎಸ್. ಚಂದ್ರಶೇಖರ್ ಮತ್ತು ಸ್ವೀಡನ್ ನ ಅಂತಾರಾಷ್ಟ್ರೀಯ ಅಭಿವೃದ್ಧಿ ಸಹಕಾರ ಮತ್ತು ವಿದೇಶಿ ವ್ಯಾಪಾರ ಸಚಿವರ ರಾಜ್ಯ ಕಾರ್ಯದರ್ಶಿಶ್ರೀ ಹಾಕನ್ ಜೆವ್ರೆಲ್ ಅವರು ಸಹಿ ಹಾಕಿದರು.

ಸಹಕಾರದ ತಿಳಿವಳಿಕೆ ಪತ್ರವು ಎರಡೂ ದೇಶಗಳಲ್ಲಿ ಚಲನಾಶೀಲ ನಿಧಿಯ ಅವಕಾಶಗಳನ್ನು ಉತ್ತೇಜಿಸುವ ಗುರಿ ಹೊಂದಿದೆ. ಇದು ಚಲನಶೀಲ ಚಟುವಟಿಕೆಗಳ ಮೂಲಕ, ವಿಚಾರಗೋಷ್ಠಿಗಳು, ಕಾರ್ಯಾಗಾರಗಳು ಮತ್ತು ಸಮ್ಮೇಳನಗಳ ಮೂಲಕ ಶೈಕ್ಷಣಿಕ ಸಹಕಾರವನ್ನು ಸುಗಮಗೊಳಿಸುತ್ತದೆ.

IMG-5474

ಡಿಎಸ್‌ಟಿ ಕಾರ್ಯದರ್ಶಿ ಡಾ. ಎಸ್. ಚಂದ್ರಶೇಖರ್ ತಮ್ಮ ವಿಶೇಷ ಭಾಷಣದಲ್ಲಿ, ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ನೇತ್ತ್ವದಲ್ಲಿ ಇಂತಹ ಅನೇಕ ಅಂತಾರಾಷ್ಟ್ರೀಯ ಸಹಭಾಗಿತ್ವಗಳು ಉತ್ತೇಜನ ಪಡೆಯುತ್ತಿವೆ. ವಿಶೇಷವಾಗಿ ಭಾರತದ ಜಿ-20 ಅಧ್ಯಕ್ಷೀಯ ಸಂವತ್ಸರದಲ್ಲಿ ಮತ್ತು ಭಾರತ ಮತ್ತು ಸ್ವೀಡನ್ ನಡುವಿನ ಪಾಲುದಾರಿಕೆಯು ವಿಶೇಷವಾಗಿ ಸ್ಮಾರ್ಟ್‌ ಸಿಟಿಗಳಲ್ಲಿ ಜಂಟಿ ವಿಜ್ಞಾನ ಮತ್ತು ತಂತ್ರಜ್ಞಾನ  ಪ್ರಯತ್ನಗಳನ್ನು ಮುನ್ನಡೆಸುತ್ತಿದೆ ಎಂದರು. ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟರ್, ಸಾರಿಗೆ ಮತ್ತು ಇನ್ನೂ ಅನೇಕ ಭವಿಷ್ಯದ ಮತ್ತು ಅತಿ ನವ್ಯವಾದ ತಂತ್ರಜ್ಞಾನ ವಲಯದಲ್ಲಿ ಇದು ಸಾಧ್ಯವಾಗುತ್ತಿದೆ. "ಈ ಸಹಕಾರ ತಿಳಿವಳಿಕೆ ಪತ್ರವು ನಮ್ಮ ಯುವ ವಿಜ್ಞಾನಿಗಳು ಮತ್ತು ಸ್ವೀಡಿಷ್ ಸಂಶೋಧಕರ ನಡುವೆ ಚಟುವಟಿಕೆಗಳ ಸುಗಮ ವಿನಿಮಯವನ್ನು ಸಕ್ರಿಯಗೊಳಿಸುತ್ತದೆ" ಎಂದು ಅವರು ಹೇಳಿದರು.

“ಇದು ಭಾರತ ಮತ್ತು ಸ್ವೀಡನ್ ನಡುವಿನ ಸಹಭಾಗಿತ್ವದ ಮೈಲಿಗಲ್ಲಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಹಕಾರ ಉತ್ತೇಜಿಸಲು ಸ್ವೀಡನ್ ಮತ್ತು ಭಾರತಕ್ಕೆ ಅಪಾರ ಅವಕಾಶ ನೀಡುತ್ತದೆ. ಇದು ಸ್ವೀಡನ್ ಮತ್ತು ಭಾರತದಲ್ಲಿನ ಸಂಶೋಧಕರ ನಡುವಿನ ಪರಸ್ಪರ ಕ್ರಿಯೆಯನ್ನು ಒಳಗೊಂಡಿರುವ ಹೆಚ್ಚಿನ ಸಾಮಾನ್ಯ ಯೋಜನೆಗಳಿಗೆ ಕಾರಣವಾಗಬಹುದು, ಅಲ್ಲಿ ಅವರು ಒಟ್ಟಿಗೆ ಸೇರಿ ಸಂಶೋಧನೆಯ ಹೊಸ ಕ್ಷೇತ್ರಗಳನ್ನು ಅನ್ವೇಷಿಸಬಹುದು" ಎಂದು ಅಂತಾರಾಷ್ಟ್ರೀಯ ಅಭಿವೃದ್ಧಿ ಸಹಕಾರ ಮತ್ತು ವಿದೇಶಿ ವ್ಯಾಪಾರದ ಸಚಿವರ ರಾಜ್ಯ ಕಾರ್ಯದರ್ಶಿ ಶ್ರೀ ಹಾಕನ್ ಜೆವ್ರೆಲ್ ತಿಳಿಸಿದರು.

IMG-5479


“ಈ ಜಂಟಿ ಸಹಭಾಗಿತ್ವವು ಸ್ವೀಡನ್ ಮತ್ತು ಭಾರತದ ಸಂಶೋಧಕರ ನಡುವೆ ಹೊಸ ಸಂಶೋಧನಾ ಸಂಪರ್ಕಗಳನ್ನು ಪ್ರೇರೇಪಿಸುತ್ತದೆ ಎಂದು ನನಗೆ ಆತ್ಮವಿಶ್ವಾಸವಿದೆ. ಎಸ್ಇಆರ್ ಬಿ ಜತೆಗಿನ ಸ್ಟಿಂಟ್ ಪಾಲುದಾರಿಕೆಯು ಸ್ವೀಡನ್ ಮತ್ತು ಭಾರತದ ವಿಶ್ವವಿದ್ಯಾಲಯಗಳ ನಡುವಿನ ಶೈಕ್ಷಣಿಕ ಸಹಕಾರ ಹೆಚ್ಚಿಸಲು ಇದೊಂದು ಸ್ವಾಭಾವಿಕ ಹೆಜ್ಜೆಯಾಗಿದೆ, ವಿಶೇಷವಾಗಿ 2 ದೇಶಗಳ ವಿಶ್ವವಿದ್ಯಾಲಯಗಳ ನಡುವೆ ಹೊಸ ಸಹಭಾಗಿತ್ವದ ಯೋಜನೆಗಳನ್ನು ಪ್ರಾರಂಭಿಸಲು ಕಳೆದ ವರ್ಷ ಸ್ಟಿಂಟ್ ನೀಡಿದ ಕರೆಯ ಹಿನ್ನೆಲೆಯಲ್ಲಿ ಈ ಸಹಭಾಗಿತ್ವ ಮಹತ್ವದ್ದಾಗಿದೆ ಎಂದು ಸ್ಟಿಂಟ್  ಕಾರ್ಯ ನಿರ್ವಾಹಕ ನಿರ್ದೇಶಕ  ಡಾ. ಆಂಡ್ರಿಯಾಸ್ ಗೊಥೆನ್‌ಬರ್ಗ್ ತಿಳಿಸಿದರು.

ಎರಡೂ ಸಂಸ್ಥೆಗಳು ತಮ್ಮ ನಿಯಮಿತ ಧನಸಹಾಯ ಕಾರ್ಯಕ್ರಮಗಳ ಮೂಲಕ ಸಂಶೋಧಕರ ಚಲನಶೀಲತೆ ಸುಗಮಗೊಳಿಸುತ್ತವೆ ಮತ್ತು ಆರ್ಥಿಕ ನೆರವು ನೀಡುತ್ತವೆ.
ಸ್ವೀಡನ್ ರಾಯಭಾರ ಕಚೇರಿಯ ವಿಜ್ಞಾನ ಮತ್ತು ಅನುಶೋಧನೆ ಕಚೇರಿಯ ಅನುಶೋಧನೆ ಮತ್ತು ವಿಜ್ಞಾನದ ವಿಭಾಗದ ಕೌನ್ಸೆಲರ್  ಡಾ. ಪರ್-ಆರ್ನೆ ವಿಕ್ಸ್ ಟ್ರಾಮ್, ಡಿಎಸ್ ಟಿ, ಎಸ್ಇಆರ್ ಬಿ ಮತ್ತು ಸ್ವೀಡನ್‌ನ ಇತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಭಾಗವಹಿಸುವ ಸಂಶೋಧನಾ ಗುಂಪುಗಳ ನಡುವೆ ಕಾರ್ಯಾಗಾರಗಳು ಒಳಗೊಂಡಂತೆ ಹೊಸ ಚಲನಶೀಲ ಯೋಜನೆಗಳಿಗೆ ಧನಸಹಾಯ ಕೇಂದ್ರೀಕರಿಸಿ ಈ ಎರಡೂ ಸಂಸ್ಥೆಗಳು ಅರ್ಹ ಸಂಶೋಧಕರಿಗೆ ಆಹ್ವಾನ ನೀಡುತ್ತವೆ. ಸ್ವೀಡನ್‌ನ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಭಾರತದ ಸಂಶೋಧನಾ ಸಂಸ್ಥೆಗಳ ಸಂಶೋಧಕರು ಮತ್ತು ವಿದ್ವಾಂಸರು ಈ ಕರೆ ಅಥವಾ ಆಹ್ವಾನದ ಅಡಿ ನಿಧಿಗಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ, ಇದರಲ್ಲಿ ಅಪ್ಲಿಕೇಶನ್‌ಗಳಿಗೆ ಜಂಟಿಯಾಗಿ ಹಣ ನೀಡಲಾಗುತ್ತದೆ.

<><><><><>



(Release ID: 1906727) Visitor Counter : 150


Read this release in: English , Hindi