ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಅಹಮದಾಬಾದ್ ನ ನಗರ ಶೆರ್ಪಾ ಸಭೆಯ 2 ನೇ ದಿನದಂದು ವಿಶ್ವ ಪರಂಪರೆಯ ನಗರಕ್ಕೆ ಸುಮಾರು 40 ಪ್ರತಿನಿಧಿಗಳು ಭೇಟಿ
ಜಿ20 ಎರಡನೇ ದಿನದ ಕಾರ್ಯಕ್ರಮದಲ್ಲಿ ನಿಯೋಜಿತ ಗುಂಪುಗಳು ಮತ್ತು ಯು20 ಆದ್ಯತೆಗಳ ನಡುವೆ ಒಮ್ಮತದ ಕ್ಷೇತ್ರಗಳನ್ನು ಅನ್ವೇಷಿಸಲಾಯಿತು.
Posted On:
10 FEB 2023 7:05PM by PIB Bengaluru
ಅಹಮಬಾಬಾದ್ ನಲ್ಲಿ 2023 ರ ಫೆಬ್ರವರಿ 9-10 ರಂದು ನಡೆದ ಆರನೇ ನಗರ20 [ಯು20] ಶೆರ್ಪಾ ಕುರಿತ 2 ನೇ ದಿನದ ಸಭೆಯಲ್ಲಿ ವಿಶ್ವ ಪಾರಂಪರಿಕ ಗೋಡೆ ನಗರಕ್ಕೆ 40 ಮಂದಿ ಪ್ರತಿನಿಧಿಗಳು ಭೇಟಿ ನೀಡಿದರು. ಬೆಳಿಗ್ಗೆ ಪಾರಂಪರಿಕ ನಡಿಗೆ ಆಯೋಜಿಸಲಾಗಿತ್ತು.
2023 ರ ಫೆಬ್ರವರಿ 9 ರಂದು ಅಹಮದಾಬಾದ್ ನಲ್ಲಿ ನಗರ ಶೆರ್ಪಾ ಸಭೆಯನ್ನು ಆಯೋಜಿಸಲಾಗಿತ್ತು. ಸುಮಾರು 40 ನಗರಗಳಿಂದ 70ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ವೀಕ್ಷಕ ನಗರಗಳು ಹಾಗೂ ಇತರೆ ಭಾಗಗಳಿಂದ 200 ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಯು20 ಸಂಚಾಲಕರು, ವಿವಿಧ ಕಾರ್ಯ ಗುಂಪುಗಳ ಪ್ರತಿನಿಧಿಗಳು ಮತ್ತು ಜಿ20 ನಿಯೋಜಿತ ಗುಂಪುಗಳು, ಸರ್ಕಾರದ ಹಿರಿಯ ಅಧಿಕಾರಿಗಳು, ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಘಟನೆಗಳು ಮತ್ತು ಇತರರನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗಿತ್ತು.
ನಗರ ಶೆರ್ಪಾಗಳ ಸಭೆಯಲ್ಲಿ ಎರಡನೇ ದಿನ ಔಪಚಾರಿಕ ಅಧಿವೇಶನಗಳು ಯು 20 ಕೇಂದ್ರ ಬಿಂದುವಾಗಿರುವ ಚರ್ಚೆಗಳೊಂದಿಗೆ ಪ್ರಾರಂಭವಾದವು. ಅಧಿವೇಶನವನ್ನು ಯು20 ಸಂಚಾಲಕರು ನಿರೂಪಣೆ ಮಾಡಿದ್ದು, ಮೊದಲಾರ್ದದಲ್ಲಿ ಅಹಮದಾಬಾದ್ ಶೆರ್ಪಾ ಆರನೇ ಯು20 ಸಭೆಗೆ ಪ್ರಸ್ತಾವಿತ ಆರು ಆದ್ಯತೆಗಳನ್ನು ಪ್ರಸ್ತುತಪಡಿಸಿದರು. ನಂತರ ಪ್ರತಿಯೊಂದು ಆದ್ಯತೆ ಕುರಿತು ದುಂಡು ಮೇಜಿನ ಚರ್ಚೆಗಳು ನಡೆದವು. ಆದ್ಯತೆಯ ಕ್ಷೇತ್ರಗಳೆಂದರೆ (i) ಪರಿಸರದ ಬಗ್ಗೆ ಜವಾಬ್ದಾರಿತನದ ವರ್ತನೆಯನ್ನು ಉತ್ತೇಜಿಸುವುದು, (ii) ಜಲ ಭದ್ರತೆಯನ್ನು ಖಾತರಿಪಡಿಸುವುದು, (iii) ಹವಾಮಾನ ಹಣಕಾಸು ವಲಯಕ್ಕೆ ವೇಗ ನೀಡುವುದು, (iv)ಸ್ಥಳೀಯ ಗುರುತು ಎತ್ತಿ ಹಿಡಿಯುವುದು, (v) ನಗರ ಆಡಳಿತ ಮತ್ತು ಯೋಜನೆಗಾಗಿ ಚೌಕಟ್ಟುಗಳನ್ನು ಮರುಶೋಧಿಸುವುದು ಹಾಗೂ (vi) ಡಿಜಿಟಲ್ ನಗರ ಭವಿಷ್ಯವನ್ನು ವೇಗವರ್ದಿಸುವುದು.
ನಗರ ವೀಕ್ಷಕರು ಮತ್ತು ಭಾಗವಹಿಸಿದ್ದವರು ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು ಮತ್ತು ಹಲವಾರು ಪ್ರಸ್ತಾವಿತ ಆದ್ಯತೆಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಇವುಗಳನ್ನು ಅಧ್ಯಕ್ಷತೆ ವಹಿಸಿದ್ದ ನಗರ ಗಮನಿಸಿದೆ ಮತ್ತು ಅಹಮದಾಬಾದ್ ಶೆರ್ಪಾ ಶ್ರೀ ಪ್ರವೀಣ್ ಚೌಧರಿ ಅವರು ಈ ಸಹಯೋಗವನ್ನು ಮುಂದುವರೆಸಲು ಮತ್ತು ಸಾಮೂಹಿಕವಾಗಿ ಅಂತಿಮ ಪ್ರಕಟಣೆಯ ಕರಡನ್ನು ರಚಿಸಲು ಯು20 ನಗರಗಳ ಬೆಂಬಲ ಕೋರಿದರು.
ಎರಡನೇ ಅಧಿವೇಶನ ಪ್ರಧಾನಮಂತ್ರಿಗಳ ಸಲಹಾ ಮಂಡಳಿ ಸದಸ್ಯ ಶ್ರೀ ಸಂಜೀವ್ ಸನ್ಯಾಲ್ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಯು20 ಇತರೆ ನಿಯೋಜಿತ ಗುಂಪುಗಳ ನಡುವೆ ಒಮ್ಮತದ ಕ್ಷೇತ್ರಗಳು ಮತ್ತು ಯು20 ಆದ್ಯತೆಗಳನ್ನು ಅನ್ವೇಷಿಸಲಾಯಿತು. ನವೋದ್ಯಮ 20 ನಿಯೋಜಿತ ಗುಂಪು, ಆಲೋಚನೆ 20 ನಿಯೋಜಿತ ಗುಂಪು ಮತ್ತು ಯುವ 20 ನಿಯೋಜಿತ ಗುಂಪಿನಿಂದ ಕ್ರಮವಾಗಿ ಶ್ರೀ ಚಿಂತನ್ ವೈಷ್ಣವ್, ಶ್ರೀಮತಿ ಜಾಹ್ನವಿ ತ್ರಿಪಾಠಿ ಮತ್ತು ಶ್ರೀ ಆಕಾಶ್ ಝಾ ಅವರ ಪ್ರಾತ್ಯಕ್ಷಿಕೆಯನ್ನು ಈ ಅಧಿವೇಶನ ಒಳಗೊಂಡಿತ್ತು. ಗುಜರಾತ್ ಜಿ20 ನಿಯೋಜಿತ ಗುಂಪಿನಿಂದ ಗುಜರಾತ್ ಸರ್ಕಾರದ ಆರ್ಥಿಕ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮೋನ ಖಂಧರ್ ಅವರ ಪ್ರಾತ್ಯಕ್ಷಿಕೆಯೂ ಸಹ ಸೇರಿತ್ತು.
ಅಧಿವೇಶನ ಮುಕ್ತಾಯಗೊಂಡ ನಂತರ ಅಹಮದಾಬಾದ್ ನ ಮಹಾಪೌರರಾದ ಶ್ರೀ ಕೀರ್ತಿಕುಮಾರ್ ಜೆ ಪರಮರ್ ಅವರು ಕಂಕಾರಿಯಾ ಕೆರೆ ದಂಡೆಯಲ್ಲಿ ಬೀಳ್ಕೊಡುಗೆ ಔತಣಕೂಟಕ್ಕೆ ಪ್ರತಿನಿಧಿಗಳನ್ನು ಆಹ್ವಾನಿಸಿದರು. ಅಹಮದಾಬಾದ್ ನಗರ ಸಭೆ ಆಯುಕ್ತರಾದ ಶ್ರೀ ಎಂ ಥೆನ್ನರಸನ್ ಅವರು ಅಹಮದಾಬಾದ್ ನಲ್ಲಿ ಕೈಗೊಂಡಿರುವ ನಗರ ಉಪಕ್ರಮಗಳ ಕುರಿತು ಮಾತನಾಡಿದರು. ತದ ನಂತರ ಅವರು ಅಧಿವೇಶನದಲ್ಲಿ ನಗರದ ಪ್ರತಿನಿಧಿಗಳ ಸಂವಾದಕ್ಕಾಗಿ ಅಧಿವೇಶನವನ್ನು ಮುಕ್ತಗೊಳಿಸಿದರು. ಅಹಮದಾಬಾದ್ ನಲ್ಲಿ ಆಯೋಜಿಸಿದ್ದ ಅದ್ಭುತ ಆತಿಥ್ಯಕ್ಕಾಗಿ ನಗರ ಪ್ರತಿನಿಧಿಗಳು ಅತೀವ ಮೆಚ್ಚುಗೆ ಸೂಚಿಸಿದರು. ತರುವಾಯ ಅಹಮದಾಬಾದ್ ಶೆರ್ಪಾ ಅವರು ಜಿ20 ನಾಯಕತ್ವ, ವಸತಿ ಸಚಿವಾಲಯ ಮತ್ತು ಗುಜರಾತ್ ಸರ್ಕಾರದ ನಗರ ವ್ಯವಹಾರಗಳು ಮತ್ತು ವಸತಿ ಸಚಿವಾಲಯ, ಅಹಮದಾಬಾದ್ ಮಹಾಪೌರರು ಮತ್ತು ಕಾರ್ಯಕ್ರಮದ ಯಶಸ್ಸಿಗಾಗಿ ದುಡಿದ ಅಹಮದಾಬಾದ್ ನಗರ ಪಾಲಿಕೆಯ ಎಲ್ಲಾ ಸಿಬ್ಬಂದಿಯನ್ನು ವಂದನಾರ್ಪಣೆಯಲ್ಲಿ ಅಭಿನಂದಿಸಿದರು. ಯು20 ಸಂಚಾಲಕರು, ನಗರ ವ್ಯವಹಾರಗಳ ರಾಷ್ಟ್ರೀಯ ಸಂಸ್ಥೆ ಮತ್ತು ಇತರೆ ಪಾಲುದಾರ ಸಂಘಟನೆಗಳ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಂಕಾರಿಯಾ ಕೆರೆ ಬಳಿ ಯು20 ಪ್ರತಿನಿಧಿಗಳಿಗೆ ಅಹಮದಾಬಾದ್ ಮಹಾಪೌರರ ಬೀಳ್ಕೊಡುಗೆ ಔತಣ ಕೂಟದ ಮೂಲಕ ಅಧಿವೇಶನ ಸಂಪನ್ನಗೊಂಡಿತು. ಗುಜರಾತ್ ನ ಸಾಂಪ್ರದಾಯಿಕ ನೃತ್ಯವನ್ನೊಳಗೊಂಡ ವಿಶೇಷ ಕಾರ್ಯಕ್ರಮವನ್ನು ಔತಣ ಕೂಟದಲ್ಲಿ ಆಯೋಜಿಸಲಾಗಿತ್ತು.
*****
(Release ID: 1898166)
Visitor Counter : 130