ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

ನೇಪಾಳ ಪ್ರಜೆಗಳಲ್ಲಿ ಆನುವಂಶಿಕ ವೈವಿಧ್ಯತೆಯನ್ನು ತಂದ ವಲಸೆ ಘಟನೆಗಳನ್ನು ವಿವರಿಸುವ ಅಧ್ಯಯನಗಳು

Posted On: 27 JAN 2023 5:31PM by PIB Bengaluru

ಟಿಬೆಟೊ-ಬರ್ಮನ್ ಸಮುದಾಯಗಳು ಪೂರ್ವ-ಐತಿಹಾಸಿಕ ಹಿಮಾಲಯದ ವಸಾಹತುಗಾರರು, ಅವರ ಪೂರ್ವ ಏಷ್ಯಾದ ಪೂರ್ವಜರನ್ನು ನವಶಿಲಾಯುಗದ ವಲಸೆಯಿಂದ ಗುರುತಿಸಬಹುದು, ಹೆಚ್ಚಾಗಿ ಟಿಬೆಟ್‌ನಿಂದ ಸುಮಾರು 8 KYA (ಕಿಲೋ ವರ್ಷಗಳ ಹಿಂದೆ) ಜನಸಂಖ್ಯೆಯ ಆನುವಂಶಿಕ ಅಧ್ಯಯನವು ಹೇಳುತ್ತದೆ. ಇತಿಹಾಸಪೂರ್ವ ಹಿಮಾಲಯದ ಜನಸಂಖ್ಯೆಯ ಮಾತೃ ಮೂಲವನ್ನು ಪುನರ್ನಿರ್ಮಿಸುವ ಅಧ್ಯಯನವು ನೇಪಾಳದ ಜನಸಂಖ್ಯೆಯಲ್ಲಿ ಆನುವಂಶಿಕ ವೈವಿಧ್ಯತೆಗೆ ಕಾರಣವಾದ ಜೆನೆಟಿಕ್ ಡ್ರಿಫ್ಟ್, ಎಂಡೋಗಾಮಿ, ಮಿಶ್ರಣ, ಪ್ರತ್ಯೇಕತೆ ಮತ್ತು ನೈಸರ್ಗಿಕ ಆಯ್ಕೆಯನ್ನು ವಿವರಿಸಲು ಸಹಾಯ ಮಾಡುತ್ತದೆ. ಪೂರ್ವಕ್ಕೆ ಬಂದ ವಲಸೆ ಘಟನೆಗಳ ಮೇಲೆ, ಇಂದಿನ ನೇಪಾಳಿ ಜನಸಂಖ್ಯೆಗೆ ಯುರೇಷಿಯನ್ ಪೂರ್ವಜರ ಮೇಲೆ ಬೆಳಕು ಚೆಲ್ಲುತ್ತದೆ. 

ಆಧುನಿಕ ಮಾನವ ಸುಮಾರು 2,00,000 ವರ್ಷಗಳ ಹಿಂದೆ (KYA) ಆಫ್ರಿಕಾದಲ್ಲಿ ಹುಟ್ಟಿಕೊಂಡಿದ್ದಾನೆ. 60 ಮತ್ತು 70 KYA ನಡುವೆ ಆಫ್ರಿಕಾದಿಂದ ವಲಸೆ ಬಂದಿದ್ದಾನೆ ಎಂದು ಬಹುತೇಕರು ಒಪ್ಪಿಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಹಲವಾರು ಜನಸಂಖ್ಯೆಯು ಹುಟ್ಟಿಕೊಂಡಿತು, ಪ್ರತಿಯೊಂದೂ ತನ್ನದೇ ಆದ ವಿಕಸನೀಯ ಇತಿಹಾಸವನ್ನು ಹೊಂದಿದೆ. ಜೆನೆಟಿಕ್ ಡ್ರಿಫ್ಟ್, ಎಂಡೋಗಾಮಿ, ಮಿಶ್ರಣ, ಪ್ರತ್ಯೇಕತೆ ಮತ್ತು ನೈಸರ್ಗಿಕ ಆಯ್ಕೆಯು ವಿಶ್ವಾದ್ಯಂತ ಮಾನವ ಜನಸಂಖ್ಯೆಯಲ್ಲಿ ಅನುವಂಶಿಕ ವೈವಿಧ್ಯತೆಗೆ ಕಾರಣವಾದ ಕೆಲವು ವಿಕಸನೀಯ ಪ್ರಕ್ರಿಯೆಗಳಾಗಿವೆ, ಅವುಗಳಲ್ಲಿ ಆನುವಂಶಿಕ ಕಾಯಿಲೆಗಳಿಗೆ ಒಳಗಾಗುವಿಕೆ ಮತ್ತು ಪ್ರತಿರೋಧ, ಸಾಂಕ್ರಾಮಿಕ ರೋಗಗಳು, ಔಷಧಿಗಳಿಗೆ ಚಿಕಿತ್ಸಕ ಪ್ರತಿಕ್ರಿಯೆ ಮತ್ತು ಇತರ ಪರಿಸ್ಥಿತಿಗಳು ಒಳಗೊಂಡಿವೆ. ಈ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳುವುದು.

ನೇಪಾಳದಂತಹ ದೇಶದಲ್ಲಿ ಹೆಚ್ಚು ಪ್ರಸ್ತುತವಾಗಿದೆ, ಇದು ವಿಶ್ವದ ಅತ್ಯಂತ ಶ್ರೀಮಂತ ಜನಾಂಗೀಯ, ಸಾಂಸ್ಕೃತಿಕ, ಭಾಷಾ ಮತ್ತು ಸಾಮಾಜಿಕ ವೈವಿಧ್ಯತೆಯನ್ನು ಹೊಂದಿರುವ ದೇಶವಾಗಿದೆ. ಮಾನವಶಾಸ್ತ್ರೀಯವಾಗಿ ಉತ್ತಮವಾಗಿ ವ್ಯಾಖ್ಯಾನಿಸಲಾದ ಜನಸಂಖ್ಯೆಯನ್ನು, ಪೂರ್ವ ಏಷ್ಯನ್ನರಿಗೆ (ಮಂಗೋಲಿಯನ್ನರು/ ಟಿಬೆಟಿಯನ್ನರು/ ಚೈನೀಸ್/ ಆಗ್ನೇಯ ಏಷ್ಯನ್ನರು) ಫಿನೋಟೈಪಿಕ್ ಆಗಿ ಹೋಲುವ ಜನಸಂಖ್ಯೆಯನ್ನು ಹೊಂದಿದೆ; ಕೆಲವು ದಕ್ಷಿಣ ಏಷಿಯನ್ನರನ್ನು ಹೋಲುತ್ತವೆ. ಕೆಲವು ಪಶ್ಚಿಮ ಯುರೇಷಿಯನ್ನರನ್ನು ಹೋಲುತ್ತವೆ. ಪಶ್ಚಿಮ ಮತ್ತು ಪೂರ್ವ ಹಿಮಾಲಯದ ನಡುವೆ ಸೇತುವೆಯಾಗಿ ಸೇವೆ ಸಲ್ಲಿಸುತ್ತಿರುವ ನೇಪಾಳವು ದಕ್ಷಿಣ ಮತ್ತು ಪೂರ್ವ ಏಷ್ಯಾದ ಆನುವಂಶಿಕ ವಂಶಾವಳಿಯನ್ನು ಅರ್ಥಮಾಡಿಕೊಳ್ಳಲು ವಿಶಿಷ್ಟವಾದ ನೆಲೆಯಾಗಿದೆ. 

ಆನುವಂಶಿಕ ವೈವಿಧ್ಯತೆ ಮತ್ತು ನೇಪಾಳದ ಜನರು ಮತ್ತು ಇಲ್ಲಿನ ಪ್ರಾಚೀನ ಇತಿಹಾಸವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸ್ವಾಯತ್ತ ಸಂಸ್ಥೆಯಾದ ಲಕ್ನೋಡ ಬೀರ್ಬಲ್ ಸಾಹ್ನಿ ಇನ್ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸ್‌ ನೇಪಾಳದ ಜನಸಂಖ್ಯೆಯ ಮೂಲ ಮೈಟೊಕಾಂಡ್ರಿಯದ ಡಿಎನ್ ಎ ಅಧ್ಯಯನವನ್ನು ನಡೆಸುತ್ತಿದೆ.

ನೇಪಾಳದ ಹೆಚ್ಚಿನ ಶೆರ್ಪಾ ಜನರು ನೆಲೆಸಿರುವ ಸ್ಥಳಗಳು ಹೊರತುಪಡಿಸಿ, ಟಿಬೆಟೊ-ಬರ್ಮನ್ ಮಾತನಾಡುವ ಟಿಬೆಟ್, ಮ್ಯಾನ್ಮಾರ್, ಆಗ್ನೇಯ ಟಿಬೆಟ್, ಈಶಾನ್ಯ, ಉತ್ತರದ ಜನಸಂಖ್ಯೆಯ ಹಂಚಿಕೆಯ ಪೂರ್ವಜರು, ಭಾರತದ ಉತ್ತರಾಖಂಡ, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ಜನರು ದಕ್ಷಿಣ ಏಷ್ಯಾದ ಆನುವಂಶಿಕ ಸಾಮರಸ್ಯವನ್ನು ಒಳಗೊಂಡಿರುತ್ತಾರೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.  

ಪೂರ್ವಜರಲ್ಲಿ ಕೆಲವು ಆರಂಭಿಕ ಮಿಶ್ರಣ ಗುಣಗಳನ್ನು ನೋಡುತ್ತೇವೆ. ಭಾರತದ ಉತ್ತರಾಖಂಡದ ಕೆಲವು ಹಿಮಾಲಯದ ಜನರು ಮತ್ತು ನೇಪಾಳೀಯರು ಸಾಮ್ಯತೆಯನ್ನು ಹೊಂದಿರುವುದನ್ನು ನೋಡುತ್ತೇವೆ. ಹ್ಯೂಮನ್ ಜೆನೆಟಿಕ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಹಿಮಾಲಯದ ದಕ್ಷಿಣದಲ್ಲಿ ವಾಸಿಸುವ ಟಿಬೆಟೋ-ಬರ್ಮನ್ ಜನಸಂಖ್ಯೆಯ ಸಂಕೀರ್ಣತೆಯನ್ನು ವಿಭಜಿಸುವಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ ಮತ್ತು ಇತರ ಆನುವಂಶಿಕ ಗುರುತುಗಳ ಕುರಿತು ಹೆಚ್ಚಿನ ಅಧ್ಯಯನವನ್ನು ಸೂಚಿಸುತ್ತದೆ.

Publication details

DOI: https://doi.org/10.1007/s00439-022-02488-z
 

*******


(Release ID: 1894228) Visitor Counter : 129


Read this release in: English , Urdu , Hindi , Marathi