ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೇವಲ ಎರಡು ವರ್ಷಗಳಲ್ಲಿ ಭಾರತವು ನಾಲ್ಕು ದೇಶೀಯ ಲಸಿಕೆಗಳನ್ನು ಅಭಿವೃದ್ಧಿಪಡಿಸಿದೆ : ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ 

"ಕೋವಿಡ್ ಸುರಕ್ಷಾ ಅಭಿಯಾನ "ದ ಮೂಲಕ ಡಿಬಿಟಿ ನಾಲ್ಕು ಲಸಿಕೆಗಳನ್ನು ವಿತರಿಸಿದೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಮರ್ಥ ಮಾರ್ಗದರ್ಶನ ಮತ್ತು ನಾಯಕತ್ವದಲ್ಲಿ ಕೋವ್ಯಾಕ್ಸಿನ್ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ

ಈ ನಾಲ್ಕು ಲಸಿಕೆಗಳೆಂದರೆ -ವಿಶ್ವದ ಮೊದಲ ಮತ್ತು ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಡಿಎನ್ಎ ಲಸಿಕೆ ಜೈಕೋವ್-ಡಿ, ಭಾರತದ ಮೊದಲ ಸಸಾರಜನಕ ಉಪಘಟಕ ಲಸಿಕೆ ಕಾರ್ಬೋವ್ಯಾಕ್ಸ್ ಟಿ.ಎಂ  ಲಸಿಕೆ, ಜೆಮ್ ಕೋವ್ಯಾಕ್ ಟಿಎಂ – 19- ವಿಶ್ವದ ಮೊದಲ ಮತ್ತು ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಎಂಆರ್.ಎನ್ಎ ಲಸಿಕೆ ಮತ್ತು ವಿಶ್ವದ ಪ್ರಥಮ ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಮೂಗಿನ ಮೂಲಕ ನೀಡಬಹುದಾದ (ಇಂಟ್ರಾನಾಸಲ್) ಕೋವಿಡ್ -19 ಲಸಿಕೆ ಇನ್ ಕೋವ್ಯಾಕ್.

ಲಸಿಕೆ ಅಭಿವೃದ್ಧಿಗೆ ಹಣಕಾಸಿನ ನೆರವು, ಜೊತೆಗೆ ವಿವಿಧ ಕೋವಿಡ್ -19 ಲಸಿಕೆ ಅಭಿವೃದ್ಧಿ ಚಟುವಟಿಕೆಗಳಿಗೆ ತಜ್ಞ ವೈಜ್ಞಾನಿಕ ಮತ್ತು ತಾಂತ್ರಿಕ ಮೇಲ್ವಿಚಾರಣೆ ಹಾಗೂ ನಿಗಾ ಬೆಂಬಲವನ್ನು ಅಭಿಯಾನದ ಅಡಿಯಲ್ಲಿ ಒದಗಿಸಲಾಗಿದೆ

ಭಾರತ್ ಬಯೋಟೆಕ್ ನ ಮಾಲೂರು ಘಟಕ ಮತ್ತು ಹೈದರಾಬಾದ್ ನ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ ನಲ್ಲಿ ಕೋವಾಕ್ಸಿನ್® ಉತ್ಪಾದನೆಯನ್ನು ಹೆಚ್ಚಿಸಲು "ಕೋವಿಡ್ ಸುರಕ್ಷಾ ಅಭಿಯಾನ"ದಡಿ ಉತ್ಪಾದನಾ ಸೌಕರ್ಯ ವರ್ಧನೆಗೆ ಬೆಂಬಲ 

Posted On: 27 JAN 2023 6:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮರ್ಥ ಮಾರ್ಗದರ್ಶನ ಮತ್ತು ನಾಯಕತ್ವದಲ್ಲಿ ಭಾರತವು ಕೇವಲ ಎರಡು ವರ್ಷಗಳಲ್ಲಿ ನಾಲ್ಕು ದೇಶೀಯ ಲಸಿಕೆಗಳನ್ನು ಅಭಿವೃದ್ಧಿಪಡಿಸಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಇಂದು ಹೇಳಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) "ಕೋವಿಡ್ ಸುರಕ್ಷಾ ಅಭಿಯಾನ"ದ ಮೂಲಕ ನಾಲ್ಕು ಲಸಿಕೆಗಳನ್ನು ವಿತರಿಸಿದ್ದು, ಕೋವ್ಯಾಕ್ಸಿನ್ ಉತ್ಪಾದನೆಯನ್ನು ಹೆಚ್ಚಿಸಿದೆ ಮತ್ತು ಭವಿಷ್ಯದ ಲಸಿಕೆಗಳ ಸುಗಮ ಅಭಿವೃದ್ಧಿಗೆ ಅಗತ್ಯ ಮೂಲಸೌಕರ್ಯಗಳನ್ನು ಸೃಷ್ಟಿಸಿದೆ, ಇದರಿಂದ ನಮ್ಮ ದೇಶವು ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ಅವರು ಹೇಳಿದರು. ಈ ಲಸಿಕೆಗಳನ್ನು ಹಲವರ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ಈ ನಾಲ್ಕು ಲಸಿಕೆಗಳೆಂದರೆ -ವಿಶ್ವದ ಮೊದಲ ಮತ್ತು ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಡಿಎನ್ಎ ಲಸಿಕೆ ಜೈಕೋವ್-ಡಿ, ಭಾರತದ ಮೊದಲ ಸಸಾರಜನಕ ಉಪಘಟಕ ಲಸಿಕೆ ಕಾರ್ಬೋವ್ಯಾಕ್ಸ್ ಟಿ.ಎಂ  ಲಸಿಕೆ, ಜೆಮ್ ಕೋವ್ಯಾಕ್ ಟಿಎಂ – 19- ವಿಶ್ವದ ಮೊದಲ ಮತ್ತು ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಎಂಆರ್.ಎನ್ಎ ಲಸಿಕೆ ಮತ್ತು ವಿಶ್ವದ ಪ್ರಥಮ ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಮೂಗಿನ ಮೂಲಕ ನೀಡಬಹುದಾದ (ಇಂಟ್ರಾನಾಸಲ್) ಕೋವಿಡ್ -19 ಲಸಿಕೆ ಇನ್ ಕೋವ್ಯಾಕ್.

ಮೂಗಿನ ಮೂಲಕ ನೀಡಬಹುದಾದ ಕೋವಿಡ್ ಲಸಿಕೆಯ ಔಪಚಾರಿಕ ಬಿಡುಗಡೆಯ ನಂತರ, ಡಿ.ಬಿ.ಟಿ. ಕಾರ್ಯದರ್ಶಿ ಶ್ರೀ ರಾಜೇಶ್ ಗೋಖಲೆ ಮತ್ತು ಇಲಾಖೆಯ ಇತರ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯ ಬಳಿಕ ಮಾತನಾಡಿದ ಡಾ. ಜಿತೇಂದ್ರ ಸಿಂಗ್, ಲಸಿಕೆ ಅಭಿವೃದ್ಧಿಗೆ ಹಣಕಾಸಿನ ನೆರವು, ಜೊತೆಗೆ ವಿವಿಧ ಕೋವಿಡ್ -19 ಲಸಿಕೆ ಅಭಿವೃದ್ಧಿ ಚಟುವಟಿಕೆಗಳಿಗೆ ತಜ್ಞ ವೈಜ್ಞಾನಿಕ ಮತ್ತು ತಾಂತ್ರಿಕ ಮೇಲ್ವಿಚಾರಣೆ ಮತ್ತು ನಿಗಾ ಬೆಂಬಲವನ್ನು ಈ ಅಭಿಯಾನದ ಅಡಿಯಲ್ಲಿ ಒದಗಿಸಲಾಗಿದೆ ಎಂದು ಉಲ್ಲೇಖಿಸಿದರು.

ಸಾಂಕ್ರಾಮಿಕದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಕೋವಿಡ್ -19ಗೆ ಲಸಿಕೆ ಅಭಿವೃದ್ಧಿ ಪಡಿಸಲು ಮೋದಿ ಸರ್ಕಾರವು ಹೆಚ್ಚಿನ ಆದ್ಯತೆಯನ್ನು ನೀಡಿತ್ತು, ಅದರಂತೆ, ಆತ್ಮನಿರ್ಭರ ಭಾರತ್ 3.0 ಪ್ಯಾಕೇಜ್ ಅಡಿಯಲ್ಲಿ ಒಟ್ಟು 900 ಕೋಟಿ ರೂ.ಗಳ ವೆಚ್ಚದಲ್ಲಿ ಭಾರತ ಸರ್ಕಾರವು "ಕೋವಿಡ್ ಸುರಕ್ಷಾ ಅಭಿಯಾನ" ವನ್ನು ಘೋಷಿಸಿತು ಎಂದು ಡಾ.ಜಿತೇಂದ್ರ ಸಿಂಗ್ ಒತ್ತಿ ಹೇಳಿದರು. ಸುರಕ್ಷಿತ, ಪರಿಣಾಮಕಾರಿ, ಅಗ್ಗದ ಮತ್ತು ದೇಶೀಯ ಕೋವಿಡ್ -19 ಲಸಿಕೆಗಳನ್ನು ತ್ವರಿತ ರೀತಿಯಲ್ಲಿ ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುವುದು ಇದರ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು.

ಭಾರತ್ ಬಯೋಟೆಕ್ ನ ಮಾಲೂರು ಘಟಕ ಮತ್ತು ಹೈದರಾಬಾದ್ ನ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ ನಲ್ಲಿ ಕೋವಾಕ್ಸಿನ್® ಉತ್ಪಾದನೆಯನ್ನು ಹೆಚ್ಚಿಸಲು "ಕೋವಿಡ್ ಸುರಕ್ಷಾ ಅಭಿಯಾನ"ದಡಿ ಉತ್ಪಾದನಾ ಸೌಕರ್ಯವರ್ಧನೆಗೆ ಬೆಂಬಲ ನೀಡಲಾಗಿದೆ ಎಂದು ಡಾ.ಜಿತೇಂದ್ರ ಸಿಂಗ್ ಒತ್ತಿ ಹೇಳಿದರು.

ತುರ್ತು ಆಧಾರದ ಮೇಲೆ ಲಸಿಕೆಯನ್ನು ತಲುಪಿಸಲು "ಕೋವಿಡ್ ಸುರಕ್ಷಾ ಅಭಿಯಾನ"ಕ್ಕೆ ಬಲವಾದ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯ ಅಗತ್ಯವಿತ್ತು ಎಂದು ಡಾ.ಜಿತೇಂದ್ರ ಸಿಂಗ್ ತಿಳಿಸಿದರು. ಅಂತಹ ಮಾದರಿಯನ್ನು ಅಭಿವೃದ್ಧಿಪಡಿಸಲು ಮತ್ತು ವೈಜ್ಞಾನಿಕ ಸಮುದಾಯ ಮತ್ತು ಲಸಿಕೆ ತಯಾರಕರೊಂದಿಗೆ ಅಲ್ಪ ಅವಧಿಯಲ್ಲಿ ಲಸಿಕೆಗಳನ್ನು ತಲುಪಿಸಲು ಡಿಬಿಟಿ ಅಗತ್ಯ ಬಲ ಮತ್ತು ಮೂಲಸೌಕರ್ಯವನ್ನು ಹೊಂದಿದೆ, ಇದು ನಮ್ಮ ದೇಶಕ್ಕೆ ಮತ್ತು ಜಾಗತಿಕ ಸಮುದಾಯಕ್ಕೆ ಅಗತ್ಯವಾಗಿದೆ ಎಂದೂ ಅವರು ಹೇಳಿದರು.

ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮೂರು ದಶಕಗಳಿಗೂ ಹೆಚ್ಚು ಸುದೀರ್ಘ ಅನುಭವ ಹೊಂದಿರುವ ಡಿಬಿಟಿ, ಈಗಾಗಲೇ ತನ್ನ ಸ್ವಾಯತ್ತ ಸಂಸ್ಥೆಗಳು ಮತ್ತು ಉದ್ಯಮ-ಶೈಕ್ಷಣಿಕ ಮುಖಾಮುಖಿ ಸಂಸ್ಥೆ ಮೂಲಕ, ಅಂದರೆ ತ್ವರಿತ ಲಸಿಕೆ ಅಭಿವೃದ್ಧಿಯನ್ನು ಸಕ್ರಿಯಗೊಳಿಸಲು ಬಿ.ಐ.ಆರ್.ಎ.ಸಿ ಹೊಂದಿದೆ, ಹೀಗಾಗಿ ಬಿ.ಐ.ಆರ್.ಎ.ಸಿ. ಮೂಲಕ ಈ ಅಭಿಯಾನ ಅನುಷ್ಠಾನದ ನೇತೃತ್ವವನ್ನು ಡಿಬಿಟಿಗೆ ವಹಿಸಲಾಗಿದೆ ಎಂದು ಸಚಿವರು ಹೇಳಿದರು.

ಕೋವಿಡ್ -19 ಸಾಂಕ್ರಾಮಿಕವು ಸೋಂಕನ್ನು ನಿರ್ವಹಿಸುವ ಮತ್ತು ಅದನ್ನು ತಡೆಗಟ್ಟುವ ವಿಷಯದಲ್ಲಿ ಜಾಗತಿಕ ವೈಜ್ಞಾನಿಕ ಸಮುದಾಯಕ್ಕೆ ತೀವ್ರ ಸವಾಲುಗಳನ್ನು ತಂದೊಡ್ಡಿತ್ತು ಎಂದು ಡಾ.ಜಿತೇಂದ್ರ ಸಿಂಗ್ ಹೇಳಿದರು. ತನ್ನ ಅತ್ಯುನ್ನತ ಮಟ್ಟದ ನಾಯಕತ್ವ ಮತ್ತು ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವ ದೃಷ್ಟಿಕೋನಕ್ಕಾಗಿ ಭಾರತ ಸರ್ಕಾರವು ಅಂತಾರಾಷ್ಟ್ರೀಯ ಸಮುದಾಯದಿಂದ ಜಾಗತಿಕವಾಗಿ ಪ್ರಶಂಸೆ ಪಡೆದಿದೆ ಎಂದರು.

ಕೋವಿಡ್ ಸುರಕ್ಷಾ ಅಭಿಯಾನದ ಅಡಿಯಲ್ಲಿ ಬೆಂಬಲ ಪಡೆದ ಹಾಗೂ ತುರ್ತು ಬಳಕೆಗೆ ಅನುಮೋದನೆ ಗಳಿಸಿದ (ಇ.ಯು.ಎ.) 4 ಕೋವಿಡ್-19 ಲಸಿಕೆಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ: 1. ಜೈ ಕೋವ್-ಡಿ - ವಿಶ್ವದ ಪ್ರಥಮ ಮತ್ತು ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಡಿಎನ್ಎ ಲಸಿಕೆ.  12 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಬಳಸಲು 2021 ರ ಆಗಸ್ಟ್ 20 ರಂದು ಇಯುಎ ಪಡೆಯಿತು;  ನಂತರ 2022 ಏಪ್ರಿಲ್ 26 ರಂದು 2-ಡೋಸ್ ನೀಡಿಕೆಗಾಗಿ ಇಯುಎ; 2. ಕಾರ್ಬೆವಾಕ್ಸ್ ಟಿಎಂ - ಭಾರತದ ಮೊದಲ ಸಸಾರಜನಕ ಉಪ ಘಟಕ ಲಸಿಕೆ.  (18ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಬಳಸಲು 2021ರ ಡಿಸೆಂಬರ್ 29 ರಂದು ಇಯುಎ ಸ್ವೀಕರಿಸಿದೆ; ತದನಂತರ 2022ರ ಫೆಬ್ರವರಿ 22 ರಂದು 12-18 ವರ್ಷ ವಯಸ್ಸಿನವರಿಗೂ ಬಳಸಲು; ಮತ್ತು 2022ರ ಏಪ್ರಿಲ್ 26 ರಂದು 5-12 ವರ್ಷ ವಯಸ್ಸಿನವರಿಗೆ ಬಳಸಲು ಇಯುಎ ಪಡೆಯಿತು; 2022 ಜೂನ್, 4ರಂದು ವೈವಿಧ್ಯಮಯ "ಮುನ್ನೆಚ್ಚರಿಕೆ ಡೋಸ್" ಎಂದು ಸೇರಿಸಲಾಯಿತು; 3.  ಜೆಮ್ ಕೋವ್ಯಾಕ್ ಟಿಎಂ -19 - ವಿಶ್ವದ ಮೊದಲ ಮತ್ತು ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಎಂಆರ್.ಎನ್ಎ ಲಸಿಕೆ. (2022 ಜೂನ್28ರಂದು ಇಯುಎ ಸ್ವೀಕರಿಸಿತು); 4. ಇನ್ ಕೋವ್ಯಾಕ್-ವಿಶ್ವದ ಪ್ರಥಮ ಮತ್ತು ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಮೂಗಿನ ಮೂಲಕ ಹಾಕುವ (ಇಂಟ್ರಾನಾಸಲ್) ಕೋವಿಡ್ -19 ಲಸಿಕೆ (18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೇಲ್ಪಟ್ಟವರಿಗೆ ಪ್ರಾಥಮಿಕ ಸರಣಿಯಲ್ಲಿ ಬಳಸಲು 2022 ರ ಸೆಪ್ಟೆಂಬರ್ 6 ರಂದು ಇಯುಎ ಪಡೆಯಿತು ಮತ್ತು 2022 ರ ನವೆಂಬರ್ 25 ರಂದು ಏಕರೂಪದ ಮತ್ತು ವೈವಿಧ್ಯಮಯ ಬೂಸ್ಟರ್ ಆಗಿ ಸೇರಿತು).

ಕೋವಿಡ್ ಸುರಕ್ಷಾ ಅಭಿಯಾನದ ಅಡಿ ಬೆಂಬಲಿತ ಚಿಕಿತ್ಸಾಲಯ ಪ್ರಯೋಗ ತಾಣಗಳು ಜೈ ಕೋವ್-ಡಿ, ಕೋವ್ಯಾಕ್ಸ್, ಜೆಮ್ ಕೋವ್ಯಾಕ್ ಟಿಎಂ -19, ಕೊರ್ಬೆವ್ಯಾಕ್ಸ್ ಟಿಎಂ, ಕೋವ್ಯಾಕ್ಸಿನ್ ಬೂಸ್ಟರ್, ಆರ್.ಬಿಸಿಜಿ (ಸೀರಮ್ ಇನ್ಸ್ ಸ್ಟಿಟ್ಯೂಟ್) ಮತ್ತು ಜೆ ಮತ್ತು ಜೆಯ ಕೋವಿಡ್ ಲಸಿಕೆಯ ಚಿಕಿತ್ಸಾಲಯ ಪ್ರಯೋಗಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಡಿಬಿಟಿ ಕಾರ್ಯದರ್ಶಿ ಗೋಖಲೆ ಮಾಹಿತಿ ನೀಡಿದರು. ಸುಮಾರು 1.5 ಲಕ್ಷ ವಿಷಯಗಳ ಎಲೆಕ್ಟ್ರಾನಿಕ್ ಸ್ವಯಂಸೇವಕರ ದತ್ತಾಂಶ ನೆಲೆಯನ್ನು ಸಹ ಸಿದ್ಧಪಡಿಸಲಾಗಿದೆ ಎಂದರು.

ಲಸಿಕೆ ಅಭಿವೃದ್ಧಿದಾರರಿಗೆ ಡಿಬಿಟಿ ಸ್ವಾಯತ್ತ ಸಂಸ್ಥೆಗಳಲ್ಲಿ ಪ್ರಾಣಿ ಸವಾಲು ಸೌಲಭ್ಯಗಳು ಮತ್ತು ಇಮ್ಯುನೊ ಅಸ್ಸೇ ಪ್ರಯೋಗಾಲಯಗಳಂತಹ ನಿರ್ಣಾಯಕ ಸೇವೆಗಳನ್ನು ನೀಡಿದೆ.

ಡಿಬಿಟಿಯ ಸ್ವಾಯತ್ತ ಸಂಸ್ಥೆಯಾದ ಫರಿದಾಬಾದ್ ನ ಅನುವಾದಾತ್ಮಕ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಟಿಎಚ್ಎಸ್.ಟಿ.ಐ) ಜೈ ಕೋವ್-ಡಿ ಮತ್ತು ಕಾರ್ಬೆವ್ಯಾಕ್ಸ್ ಟಿ.ಎಂ. ಗಾಗಿ ಹ್ಯಾಮ್ಸ್ ಸ್ಟರ್ ಮಾದರಿಗಳು ಮತ್ತು ತಟಸ್ಥೀಕರಣ ವಿಶ್ಲೇಷಣೆಗಳನ್ನುನೀಡಿತು.

ಟಿಎಚ್ಎಸ್.ಟಿ.ಐ ಬಯೋ ಅಸ್ಸೇ ಪ್ರಯೋಗಾಲಯವನ್ನು ಜಾಗತಿಕ ಸಿಇಪಿಐ ಜಾಲದ 7 ಪ್ರಯೋಗಾಲಯಗಳಲ್ಲಿ ಒಂದಾಗಿ ಗುರುತಿಸಲಾಗಿದೆ.

ಡಿಬಿಟಿಯ ಸ್ವಾಯತ್ತ ಸಂಸ್ಥೆಯಾದ ನವದೆಹಲಿಯ ರೋಗನಿರೋಧಕ ಶಾಸ್ತ್ರದ ರಾಷ್ಟ್ರೀಯ ಸಂಸ್ಥೆ (ಎನ್ಐಐ), ಇನ್ ಕೋವ್ಯಾಕ್ ಮೂರನೇ ಹಂತದ ಚಿಕಿತ್ಸಾಲಯ ಪ್ರಯೋಗಗಳಿಗೆ ಇಮ್ಯುನೊ ಜೆನೆಸಿಟಿ ಅಸ್ಸೆ ಸೇವೆಗಳನ್ನು ಒದಗಿಸಿದೆ.

***



(Release ID: 1894224) Visitor Counter : 127


Read this release in: English , Urdu , Hindi , Tamil