ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಭಾರತದ ತಂತ್ರಜ್ಞಾನವನ್ನು ವೇಗಗೊಳಿಸಲು ಸರ್ಕಾರ ವಿಧಿಬದ್ಧವಾಗಿ ಕಡಿಮೆ,  ತತ್ವಾಧಾರಿತವಾಗಿ ಹೆಚ್ಚಿನ ಕಾನೂನು ಚೌಕಟ್ಟು ಜಾರಿಗೆ ತರಲಿದೆ: ಎಂಒಎಸ್ ಶ‍್ರೀ ರಾಜೀವ್ ಚಂದ್ರಶೇಖರ್  


ದೇಶದ ಎಲ್ಲಾ ಕಾನೂನುಗಳನ್ನು ಅನುಸರಿಸಿದರೆ ಕ್ರಿಪ್ಟೋ ಕರೆನ್ಸಿಗೆ ಯಾವುದೇ ಸಮಸ್ಯೆ ಇಲ್ಲ: ಶ‍್ರೀ ರಾಜೀವ್ ಚಂದ್ರಶೇಖರ್

ಶ್ರೀ ರಾಜೀವ್ ಚಂದ್ರಶೇಖರ್ ಅವರಿಂದ ಎನ್.ಎಕ್ಸ್.ಪಿ ನಾಯಕರ ಭೇಟಿ ಮತ್ತು ಅವರಿಂದ ಮಾರ್ಗದರ್ಶನ ಪಡೆಯುತ್ತಿರುವ ನವೋದ್ಯಮ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ವೇಗಗೊಳಿಸಲು ಸೆಮಿಕಾನ್ ಇಂಡಿಯಾ ಫ್ಯೂಚರ್ ಡಿಸೈನ್ ನಿಂದ ಉಪಕ್ರಮ

Posted On: 19 JAN 2023 6:06PM by PIB Bengaluru

ಭಾರತದ ತಂತ್ರಜ್ಞಾನವನ್ನು ವೇಗಗೊಳಿಸಲು ಮತ್ತು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ನಿರ್ಮಿಸಲು ಸರ್ಕಾರ ವಿಧಿಬದ್ಧವಾಗಿ ಕಡಿಮೆ ಮತ್ತು ಹೆಚ್ಚು ತತ್ವಾಧಾರಿತವಾದ ಸಮಗ್ರ ಕಾನೂನು ಚೌಕಟ್ಟನ್ನು ರೂಪಿಸಲಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಬೆಂಗಳೂರಿನಲ್ಲಿಂದು ಹೇಳಿದ್ದಾರೆ.

ಎಂ.ಒ.ಎಸ್ ಶ್ರೀ ರಾಜೀವ್ ಚಂದ್ರಶೇಖರ್ ಅವರು ಐಟೆಕ್ ಅಂತರರಾಷ್ಟ್ರೀಯ ಕಾನೂನು ಸಮ್ಮೇಳನ– 2023 ರಲ್ಲಿ ಭಾಷಣ

“ಸರ್ಕಾರ ಉದ್ದೇಶಿತ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ, ರಾಷ್ಟ್ರೀಯ ದತ್ತಾಂಶ ಚೌಕಟ್ಟು, ತಿದ್ದುಪಡಿ ಮಾಡಲಾದ ಐಟಿ ನಿಯಮಗಳಂತಹ ಶಾಸನಗಳನ್ನು ಒಳಗೊಂಡಿರುವ ಸಮಗ್ರ ಕಾನೂನು ಚೌಕಟ್ಟಿನ ಮೇಲೆ ಕಾರ್ಯನಿರ್ವಹಿಸುತ್ತಿದೆ ಮತ್ತು ಮುಂಬರುವ ಡಿಜಿಟಲ್ ಇಂಡಿಯಾ ಕಾಯ್ದೆಗೆ ಇದು ರೋಚಕ ಆರಂಭ ಮತ್ತು ನಾವೀನ್ಯತೆಯ ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಹಾಗೂ ಬೆಂಬಲಿಸಲು ಕಡಿಮೆ ವಿಧಿಬದ್ಧವಾಗಿ ಮತ್ತು ಹೆಚ್ಚು ತತ್ವಾಧಾರಿತವಾಗಿದೆ” ಎಂದು ಶ್ರೀ ರಾಜೀವ್ ಚಂದ್ರಶೇಖರ್ ಹೇಳಿದರು. ಐಟೆಕ್ ಅಂತರರಾಷ್ಟ್ರೀಯ ಕಾನೂನು ಸಮ್ಮೇಳನ -2023 ನಡೆದಿದ್ದು, ಸಮ್ಮೇಳನದಲ್ಲಿ ಕಾನೂನು ಪಂಡಿತರು ಮತ್ತು ತಜ್ಞರು ಭಾಗವಹಿಸಿದ್ದರು.

ಕಾನೂನು ಕ್ಷೇತ್ರದಲ್ಲಿ ನಿಪುಣತೆಯ ವಿಶಾಲ ವ್ಯಾಪ್ತಿಯ ಐಟೆಕ್ ಕಾನೂನು ಸಮ್ಮೇಳನ ಕೇಂದ್ರೀಕೃತಗೊಂಡಿದೆ.

ಸರ್ಕಾರಕ್ಕೆ ಯಾವಾಗಲೂ ಪಾಲುದಾರರ ಅಭಿಪ್ರಾಯಗಳು ಮಹತ್ವದ್ದಾಗಿದೆ ಎಂದು ಹೇಳಿದ ಸಚಿವರು, “ಯಾವುದೇ ಮಸೂದೆ ಅಥವಾ ಶಾಸನದ ಪರಿಣಾಮಕಾರಿ ಅನುಷ್ಠಾನ ಹಾಗೂ ಅಂಗೀಕಾರಕ್ಕಾಗಿ ಕಾನೂನು ರೂಪಿಸಲು ಕರಡು ಪ್ರಕ್ರಿಯೆಯಲ್ಲಿ ನೆರವಾಗಲು ಎಷ್ಟು ಮನಸ್ಸುಗಳು ಒಗ್ಗೂಡುತ್ತವೆಯೋ ಅಷ್ಟೂ ಒಳ್ಳೆಯದು. ಕಾನೂನು ರೂಪಿಸುವ ಪ್ರಕ್ರಿಯೆಯಲ್ಲಿ ಹಲವಾರು ಪಾಲುದಾರರು ಭಾಗಿಯಾಗುವಂತೆ ನಾವು ಪ್ರಯತ್ನಿಸುತ್ತಿದ್ದೇವೆ. ಇದು ಪಾಲುದಾರರ ಶಾಸನದಂತೆ, ಸರ್ಕಾರದ ಶಾಸನವೂ ಆಗಿದೆ.” ಎಂದರು.  

ನಂತರ ಸಂವಾದ ಗೋಷ್ಠಿಯಲ್ಲಿ “ಭಾರತ ಎಲ್ಲಾ ವಿಷಯಗಳಲ್ಲಿ ಬ್ಲಾಕ್ ಚೈನ್ ಮೂಲಕ ಜಗತ್ತನ್ನು ಮುನ್ನಡೆಸುತ್ತದೆ – ಗಾತ್ರ ಮತ್ತು ಪ್ರಮಾಣದಲ್ಲಿ ಹಾಗೂ ನಾವು ವೆಬ್ 3.0 ಗೆ ಹೇಗೆ ವಲಸೆ ಹೋಗುತ್ತೇವೆ ಎಂಬುದನ್ನು ಆಧರಿಸಿದೆ” ಎಂದರು.  

ಕ್ರಿಪ್ಟೋ ಕರೆನ್ಸಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ದೇಶದ ಎಲ್ಲಾ ಕಾನೂನುಗಳನ್ನು ಅನುಸರಿಸಿದರೆ ಕ್ರಿಪ್ಟೋ ಕರೆನ್ಸಿಗೆ ಯಾವುದೇ ಸಮಸ್ಯೆ ಇಲ್ಲ. ಒಂದು ವೇಳೆ ನೀವು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವಂತಿದ್ದರೆ ಆರ್.ಬಿ.ಐ ಮೂಲಕ ಮುಂದುವರೆಯಬೇಕು. ನಿಯಮಗಳ ಪ್ರಕಾರ ನಿಮ್ಮ ಎಲ್.ಆರ್.ಎಸ್ ಅರ್ಹತೆ, ಡಾಲರ್ ಗಳನ್ನು ಪಡೆದುಕೊಳ್ಳುವಂತೆ” ಹೇಳಿದರು.  

ಸಚಿವರು ನಂತರ ಬೆಂಗಳೂರಿನ ಎನ್.ಎಕ್ಸ್.ಪಿ ಕಚೇರಿ ಕಚೇರಿಗೆ ಭೇಟಿ ನೀಡಿದರು ಮತ್ತು ಅಲ್ಲಿನ ನಾಯಕರನ್ನು ಭೇಟಿ ಮಾಡಿದರು. ಅವರಿಂದ ಮಾರ್ಗದರ್ಶನ ಪಡೆಯುತ್ತಿರುವ ನವೋದ್ಯಮಗಳು ಮತ್ತು ಉದ್ಯಮಿಗಳೊಂದಿಗೆ ಅವರು ಸಂವಾದ ನಡೆಸಿದರು. ಅವರು ತಮ್ಮ ಯೋಜನೆಗಳ ಕುರಿತು ಸಚಿವರೊಂದಿಗೆ ವಿವರಗಳನ್ನು ಹಂಚಿಕೊಂಡರು ಮತ್ತು ಭಾರತದ ವಿನ್ಯಾಸ ಸಂಪರ್ಕಿತ ಪ್ರೋತ್ಸಾಹಕ ಯೋಜನೆ ಕುರಿತು ಆಸಕ್ತಿ ವ್ಯಕ್ತಪಡಿಸಿದರು. ಶ್ರೀ ರಾಜೀವ್ ಚಂದ್ರಶೇಖರ್ ಅವರು ತಮ್ಮ ಬೆಳವಣಿಗೆಯಲ್ಲಿ ವಿನ್ಯಾಸ ಸಂಪರ್ಕಿತ ಪ್ರೋತ್ಸಾಹಕ – ಡಿಎಲ್ಐ ಯೋಜನೆ ನೆರವಾಗುತ್ತದೆ ಎಂದರು.  

ಸಂಜೆ ಸಚಿವರು ಗ್ಲೋಬಲ್ ಕೆಪಬಿಲಿಟಿ ಸೆಂಟರ್ ನ ಮುಖ್ಯಸ್ಥರನ್ನು ಭೇಟಿ ಮಾಡಿ ಸೆಮಿಕಂಡಕ್ಟರ್ ಮತ್ತು ವಿದ್ಯುನ್ಮಾನ ವಲಯದ ಬೆಳವಣಿಗೆ ಕುರಿತು ಚರ್ಚಿಸಿದರು.(Release ID: 1892336) Visitor Counter : 155


Read this release in: English , Urdu , Hindi