ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ

ಗ್ರಾಮೀಣ ಉದ್ಯಮಿ ಯೋಜನೆಯಡಿ 200 ಬುಡಕಟ್ಟು ಮಹಿಳೆಯರ ಸನ್ಮಾನ ಕಾರ್ಯಕ್ರಮದಲ್ಲಿ ಸಹಾಯಕ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಭಾಗವಹಿಸಲಿದ್ದಾರೆ.


ಈ ಯೋಜನೆಯು ಬುಡಕಟ್ಟು ಸಮುದಾಯಗಳಲ್ಲಿ ಅವರನ್ನು ಒಳಗೊಳ್ಳುವ  ಅಂತರ್ಗತ ಮತ್ತು ಸುಸ್ಥಿರ ಬೆಳವಣಿಗೆಗಾಗಿ ಕೌಶಲ್ಯ ತರಬೇತಿಯನ್ನು ವೃದ್ಧಿಸುವ ಉದ್ದೇಶವನ್ನು ಹೊಂದಿದೆ

Posted On: 17 JAN 2023 6:19PM by PIB Bengaluru

ಪ್ರಮುಖಾಂಶಗಳು:

- ಬುಡಕಟ್ಟು ಸಮುದಾಯಗಳ ಅಂತರ್ಗತ ಮತ್ತು ಸುಸ್ಥಿರ ಬೆಳವಣಿಗೆಗಾಗಿ ಕೌಶಲ್ಯ ತರಬೇತಿಯನ್ನು ಹೆಚ್ಚಿಸಲು ಗ್ರಾಮೀಣ ಉದ್ಯಮಿ ಯೋಜನೆಯನ್ನು ಪ್ರಾರಂಭಿಸಲಾಯಿತು
ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ವಿದ್ಯುನ್ಮಾನ ಹಾಗು ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ನಾಳೆ ಜಾರ್ಖಂಡ್ ನಲ್ಲಿ ನಡೆಯಲಿರುವ ಗ್ರಾಮೀಣ ಉದ್ಯಮಿ ಯೋಜನೆಯ 3ನೇ ಹಂತದಲ್ಲಿ  ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದ 200 ಕ್ಕೂ ಹೆಚ್ಚು ಬುಡಕಟ್ಟು ಮಹಿಳೆಯರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಗುಮ್ಲಾದ ಬಿಶುನ್ಪುರದ ಗಾಂಧಿ ಸಭಾಗರ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ ಮತ್ತು ರಾಜ್ಯಸಭಾ ಸದಸ್ಯ ಶ್ರೀ ಸಮೀರ್ ಓರನ್ ಉಪಸ್ಥಿತರಿರಲಿದ್ದಾರೆ.

ಪ್ರಶಿಕ್ಷಣಾರ್ಥಿಗಳನ್ನು ಸನ್ಮಾನಿಸಿದ ನಂತರ, ಶ್ರೀ ರಾಜೀವ್ ಚಂದ್ರಶೇಖರ್ ಅವರು ಈ ಕಾರ್ಯಕ್ರಮದ ಅಡಿಯಲ್ಲಿ ತರಬೇತುದಾರರು ಮತ್ತು ಪ್ರಶಿಕ್ಷಣಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಬುಡಕಟ್ಟು ಸಮುದಾಯಗಳ ಅಂತರ್ಗತ ಮತ್ತು ಸುಸ್ಥಿರ ಬೆಳವಣಿಗೆಗಾಗಿ ಕೌಶಲ್ಯ ತರಬೇತಿಯನ್ನು ಹೆಚ್ಚಿಸಲು ಗ್ರಾಮೀಣ ಉದ್ಯಮಿ ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮವು ಭಾರತದ ಯುವಜನರಿಗೆ ಬಹು ಕೌಶಲ್ಯ ನೀಡುವುದು ಮತ್ತು ಜೀವನೋಪಾಯವನ್ನು ಕೈಗೊಳ್ಳಲು ಸಮರ್ಥವಾಗುವಂತೆ  ಅವರಿಗೆ ಕ್ರಿಯಾತ್ಮಕ ಕೌಶಲ್ಯಗಳನ್ನು ನೀಡುವ ನಿಟ್ಟಿನ ಪ್ರಯತ್ನವಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬುಡಕಟ್ಟು ಸಮುದಾಯಗಳನ್ನು ತಮ್ಮ ತಮ್ಮ ಭೌಗೋಳಿಕ ಪ್ರದೇಶಗಳಲ್ಲಿ ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಅವರ ಸಮಗ್ರ ಅಭಿವೃದ್ಧಿಯನ್ನು ಖಾತ್ರಿಪಡಿಸಲು ಕಾರ್ಮಿಕಶಕ್ತಿಯಾಗಿ ಅವರ ಭಾಗೀದಾರಿಕೆಗೆ ಒತ್ತು ನೀಡಿದ್ದಾರೆ.

ಗ್ರಾಮೀಣ / ಸ್ಥಳೀಯ ಆರ್ಥಿಕತೆಯನ್ನು ವಿಸ್ತರಿಸಲು, ಉದ್ಯೋಗಾವಕಾಶಗಳನ್ನು ಹೆಚ್ಚಿಸಲು, ಬಲವಂತದ ವಲಸೆಯನ್ನು ಕಡಿಮೆ ಮಾಡಲು ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಕಾರಣವಾಗುವ ಉದ್ದೇಶದಿಂದ ಇದನ್ನು ಸಂಸದೀಯ ಸಂಕುಲ್ ಪರಿಯೋಜನಾ ಅಡಿಯಲ್ಲಿ ಜಾರಿಗೆ ತರಲಾಗಿದೆ.

ರಾಷ್ಟ್ರೀಯ ಸರಾಸರಿಗೆ ಹೋಲಿಸಿದಾಗ ಕೌಶಲ್ಯ ಮತ್ತು ಶಿಕ್ಷಣದ ಅನುಪಸ್ಥಿತಿಯಲ್ಲಿ, ಬುಡಕಟ್ಟು ಜೀವನೋಪಾಯದಲ್ಲಿ ಸಂಘಟಿತ ವಲಯಗಳ ಕೊಡುಗೆ ಸಾಂಪ್ರದಾಯಿಕವಾಗಿ ಕನಿಷ್ಠ ಪ್ರಮಾಣದ್ದಾಗಿದೆ.

*****



(Release ID: 1891911) Visitor Counter : 166


Read this release in: English , Urdu , Hindi , Punjabi