ಸಹಕಾರ ಸಚಿವಾಲಯ
azadi ka amrit mahotsav

ಬಹು ರಾಜ್ಯ ಸಹಕಾರಿ ಸಂಘಗಳು (ಎಂಎಸ್.ಸಿಎಸ್) ಕಾಯ್ದೆ, 2002ರ ಅಡಿಯಲ್ಲಿ ರಾಷ್ಟ್ರಮಟ್ಟದ ಬಹು-ರಾಜ್ಯ ಸಹಕಾರಿ ರಫ್ತು ಸಂಘವನ್ನು ಸ್ಥಾಪಿಸಲು ಸಂಪುಟದ ಅನುಮೋದನೆ


ಬಹು ರಾಜ್ಯ ಸಹಕಾರಿ ಸಂಘಗಳ (ಎಂ.ಎಸ್.ಸಿ.ಎಸ್) ಕಾಯ್ದೆ, 2002ರ ಅಡಿಯಲ್ಲಿ ನೋಂದಾಯಿಸಲಾಗುವುದು
.
ಪಿಎಸಿಎಸ್ ಟು ಅಪೆಕ್ಸ್: ಪ್ರಾಥಮಿಕ  ಸೊಸೈಟಿಗಳು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಒಕ್ಕೂಟಗಳು ಮತ್ತು ಬಹುರಾಜ್ಯ ಸಹಕಾರಿ ಸಂಘಗಳು ಸೇರಿದಂತೆ ಪ್ರಾಥಮಿಕದಿಂದ ರಾಷ್ಟ್ರಮಟ್ಟದವರೆಗಿನ ಸಹಕಾರಿ ಸಂಘಗಳು ಅದರ ಸದಸ್ಯರಾಗಬಹುದು. ಈ ಎಲ್ಲಾ ಸಹಕಾರಿಗಳು ಅದರ ಉಪವಿಧಿಗಳ ಪ್ರಕಾರ ಸೊಸೈಟಿಯ ಮಂಡಳಿಯಲ್ಲಿ ತಮ್ಮ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತವೆ.

ಸಂಬಂಧಿತ ಕೇಂದ್ರ ಸಚಿವಾಲಯಗಳ ಬೆಂಬಲದೊಂದಿಗೆ ದೇಶಾದ್ಯಂತದ ವಿವಿಧ ಸಹಕಾರಿ ಸಂಘಗಳು ಉತ್ಪಾದಿಸುವ ಹೆಚ್ಚುವರಿ ಸರಕುಗಳು / ಸೇವೆಗಳ ರಫ್ತಿಗೆ ಪ್ರಧಾನ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ಸಹಕಾರಿಗಳ ಸಮಗ್ರ ಬೆಳವಣಿಗೆಯ ಮಾದರಿಯ ಮೂಲಕ "ಸಹಕಾರ-ದಿಂದ-ಸಮೃದ್ಧಿ" ಯ ಗುರಿಯನ್ನು ಸಾಧಿಸಲು ನೆರವಾಗುತ್ತದೆ.

Posted On: 11 JAN 2023 3:37PM by PIB Bengaluru

ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ತಮ್ಮ ರಫ್ತು ಸಂಬಂಧಿತ ನೀತಿಗಳು, ಯೋಜನೆಗಳು ಮತ್ತು ಸಂಸ್ಥೆಗಳ ಮೂಲಕ ‘ಸಂಪೂರ್ಣ ಸರ್ಕಾರ ವಿಧಾನದೊಂದಿಗೆ’ ಸಹಕಾರಿ ಸಂಸ್ಥೆಗಳು ಮತ್ತು ಸಂಬಂಧಿತ ಕಾಯಗಳು ಉತ್ಪಾದಿಸಿದ ಎಲ್ಲಾ ಸರಕುಗಳು ಮತ್ತು ಸೇವೆಗಳ ರಫ್ತು ಕೈಗೊಳ್ಳಲು ಸಂಬಂಧಿತ ಸಚಿವಾಲಯಗಳು ವಿಶೇಷವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವಾಣಿಜ್ಯ ಸಚಿವಾಲಯದ ಬೆಂಬಲದೊಂದಿಗೆ ಬಹು ರಾಜ್ಯ ಸಹಕಾರಿ ಸಂಘಗಳು (ಎಂಎಸ್.ಸಿ.ಎಸ್) ಕಾಯ್ದೆ, 2002 ರ ಅಡಿಯಲ್ಲಿ ರಾಷ್ಟ್ರ ಮಟ್ಟದ ಬಹು ರಾಜ್ಯ ಸಹಕಾರಿ ರಫ್ತು ಸಂಘವನ್ನು ಸ್ಥಾಪಿಸಲು ಮತ್ತು ಉತ್ತೇಜಿಸಲು ತನ್ನ ಅನುಮೋದನೆ ನೀಡಿದೆ.

ಉದ್ದೇಶಿತ ಸೊಸೈಟಿಯು ರಫ್ತು ಕೈಗೊಳ್ಳಲು ಮತ್ತು ಉತ್ತೇಜಿಸಲು ಪ್ರಧಾನ (ಅಂಬ್ರೆಲಾ) ಸಂಸ್ಥೆಯಾಗಿ ಕಾರ್ಯನಿರ್ವಹಿಸುವ ಮೂಲಕ ಸಹಕಾರಿ ವಲಯದಿಂದ ರಫ್ತಿಗೆ ಉತ್ತೇಜನ ನೀಡುತ್ತದೆ. ಇದು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತೀಯ ಸಹಕಾರಿಗಳ ರಫ್ತು ಸಾಮರ್ಥ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಈ ಉದ್ದೇಶಿತ ಸೊಸೈಟಿಯು ಭಾರತ ಸರ್ಕಾರದ ವಿವಿಧ ಸಚಿವಾಲಯಗಳ ವಿವಿಧ ರಫ್ತು ಸಂಬಂಧಿತ ಯೋಜನೆಗಳು ಮತ್ತು ನೀತಿಗಳ ಪ್ರಯೋಜನಗಳನ್ನು 'ಸಂಪೂರ್ಣ ಸರ್ಕಾರಿ ವಿಧಾನ'ದ ಮೂಲಕ ಕೇಂದ್ರೀಕೃತ ರೀತಿಯಲ್ಲಿ ಪಡೆಯಲು ಸಹಕಾರಿಗಳಿಗೆ ಸಹಾಯ ಮಾಡುತ್ತದೆ. ಇದು  ಸಹಕಾರಿಗಳ ಸಮಗ್ರ ಬೆಳವಣಿಗೆಯ ಮಾದರಿಯಾಗಿದ್ದು, ಅಲ್ಲಿ ಸದಸ್ಯರು ತಮ್ಮ ಸರಕುಗಳು ಮತ್ತು ಸೇವೆಗಳ ರಫ್ತಿನ ಮೂಲಕ ಉತ್ತಮ ಬೆಲೆಗಳನ್ನು ಪಡೆಯುವುದರ ಜೊತೆಗೆ, ಸೊಸೈಟಿಯಿಂದ ಹೆಚ್ಚುವರಿಯಾಗಿ ಉತ್ಪತ್ತಿಯಾದ ಲಾಭಾಂಶವನ್ನು ವಿತರಣೆಯ ಮೂಲಕ ಎರಡೂ ಪ್ರಯೋಜನಗಳನ್ನು ಪಡೆಯುವ ಕಾರಣ ಸಹಕಾರ-ದಿಂದ-ಸಮೃದ್ಧಿಯ ಗುರಿಯನ್ನು ಸಾಧಿಸಲು ಸಹ ಇದು ನೆರವಾಗುತ್ತದೆ.

ಉದ್ದೇಶಿತ ಸೊಸೈಟಿಯ ಮೂಲಕ ಹೆಚ್ಚಿನ ರಫ್ತು ವಿವಿಧ ಹಂತಗಳಲ್ಲಿ ಸಹಕಾರಿಗಳಿಂದ ಸರಕು ಮತ್ತು ಸೇವೆಗಳ ಉತ್ಪಾದನೆಯನ್ನು ಹೆಚ್ಚಿಸುತ್ತವೆ, ಇದರಿಂದಾಗಿ ಸಹಕಾರಿ ವಲಯದಲ್ಲಿ ಹೆಚ್ಚಿನ ಉದ್ಯೋಗಕ್ಕೂ ಕಾರಣವಾಗುತ್ತದೆ. ಸರಕುಗಳ ಸಂಸ್ಕರಣೆ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಸೇವೆಗಳನ್ನು ಹೆಚ್ಚಿಸುವುದು ಹೆಚ್ಚುವರಿ ಉದ್ಯೋಗವನ್ನು ಸೃಷ್ಟಿಸುತ್ತದೆ. ಸಹಕಾರಿ ಉತ್ಪನ್ನಗಳ ಹೆಚ್ಚಿದ ರಫ್ತು ಕೂಡ "ಮೇಕ್ ಇನ್ ಇಂಡಿಯಾ"ವನ್ನೂ ಉತ್ತೇಜಿಸುತ್ತದೆ, ಈ ಮೂಲಕ ಆತ್ಮನಿರ್ಭರ ಭಾರತಕ್ಕೂ ಕಾರಣವಾಗುತ್ತದೆ.

*****


(Release ID: 1890431) Visitor Counter : 180