ಕಲ್ಲಿದ್ದಲು ಸಚಿವಾಲಯ
ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರ ಕಲ್ಲಿದ್ದಲು ಸಚಿವಾಲಯವು ಅಧಿಕ ಬ್ಲಾಕ್ ಗಳನ್ನು ಗುರುತಿಸಿದೆ.
Posted On:
28 DEC 2022 3:55PM by PIB Bengaluru
ಬೆಂಕಿಯಲ್ಲಿ ಉರಿಸಿ (ಕೋಕಿಂಗ್) ಕಲ್ಲಿದ್ದಲು ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ, ಕಲ್ಲಿದ್ದಲು ಸಚಿವಾಲಯವು ನಾಲ್ಕು ಕೋಕಿಂಗ್ ಕಲ್ಲಿದ್ದಲು ಬ್ಲಾಕ್ ಗಳನ್ನು ಗುರುತಿಸಿದೆ ಮತ್ತು ಸೆಂಟ್ರಲ್ ಮೈನ್ ಪ್ಲಾನಿಂಗ್ ಮತ್ತು ಡಿಸೈನ್ ಇನ್‌ಸ್ಟಿಟ್ಯೂಟ್ (ಸಿ.ಎಂ.ಪಿ.ಡಿ.ಐ.) ಸಂಸ್ಥೆಗಳು ಮುಂಬರುವ ತಿಂಗಳುಗಳಲ್ಲಿ 4 ರಿಂದ 6 ಹೊಸ ಕೋಕಿಂಗ್ ಕಲ್ಲಿದ್ದಲು ಬ್ಲಾಕ್ ಗಳಿಗೆ ಭೂವೈಜ್ಞಾನಿಕ ವರದಿಯನ್ನು (ಜಿ.ಆರ್.) ಅಂತಿಮಗೊಳಿಸಲಿವೆ. ದೇಶೀಯ ಕಚ್ಚಾ ಕೋಕಿಂಗ್ ಕಲ್ಲಿದ್ದಲು ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಆನಂತರ ಇವುಗಳನ್ನು ಖಾಸಗಿ ವಲಯಕ್ಕಾಗಿ ಹರಾಜಿನಲ್ಲಿ ಇಡಲಾಗುವುದು.
ಆತ್ಮನಿರ್ಭರ ಭಾರತ್ ಅಡಿಯಲ್ಲಿ ಕೇಂದ್ರ ಕಲ್ಲಿದ್ದಲು ಸಚಿವಾಲಯವು ಈ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ, ದೇಶೀಯ ಕಚ್ಚಾ ಕೋಕಿಂಗ್ ಕಲ್ಲಿದ್ದಲು ಉತ್ಪಾದನೆಯು 2030 ರ ವೇಳೆಗೆ 140 ಮಿಲಿಯನ್ ಟನ್ ತಲುಪುವ ಸಾಧ್ಯತೆಯಿದೆ. ಕೋಲ್ ಇಂಡಿಯಾ ಲಿಮಿಟೆಡ್ (ಸಿ.ಐ.ಎಲ್.) ಸಂಸ್ಥೆಯು ಅಸ್ತಿತ್ವದಲ್ಲಿರುವ ಗಣಿಗಳಿಂದ ಕಚ್ಚಾ ಕೋಕಿಂಗ್ ಕಲ್ಲಿದ್ದಲು ಉತ್ಪಾದನೆಯನ್ನು 26 ಮಿಲಿಯನ್ ಟನ್ ಗೆ ಹೆಚ್ಚಿಸಲು ಯೋಜಿಸಿದೆ. ಆರ್ಥಿಕ ವರ್ಷ 2025 ರ ವೇಳೆಗೆ ಸುಮಾರು 22 ಮಿಲಿಯನ್ ಟನ್ ನ ಗರಿಷ್ಠ ಉತ್ಪಾದನಾ ಸಾಮರ್ಥ್ಯ ಹೊಂದುವ ಒಂಬತ್ತು ಹೊಸ ಗಣಿಗಳನ್ನು ಗುರುತಿಸಿದೆ. ಅಲ್ಲದೆ, ಖಾಸಗಿ ಕ್ಷೇತ್ರದ ಸಂಸ್ಥೆಗಳಿಗೆ ಆದಾಯ ಹಂಚಿಕೆಯ ವಿನೂತನ ಮಾದರಿಯಲ್ಲಿ, ಒಟ್ಟು 30 ಕೋಕಿಂಗ್ ಕಲ್ಲಿದ್ದಲು ಗಣಿಗಳಲ್ಲಿ 2 ಮಿಲಿಯನ್ ಟನ್ ನ ಗರಿಷ್ಠ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಪ್ರಸ್ತುತ ಸ್ಥಗಿತಗೊಂಡ ಎಂಟು ಗಣಿಗಳನ್ನು ನೀಡಿದೆ.
*****
(Release ID: 1887084)
Visitor Counter : 124