ಕಲ್ಲಿದ್ದಲು ಸಚಿವಾಲಯ

​​​​​​​ಕಲ್ಲಿದ್ದಲು ಗಣಿ ಮುಚ್ಚುವಿಕೆ ತಡೆಗೆ ಕಲ್ಲಿದ್ದಲು ಸಚಿವಾಲಯದ ಪರಿವರ್ತನಾ ಪ್ರಯತ್ನಗಳು


ಗಣಿ ಮುಚ್ಚುವಿಕೆಯ ಸಮಗ್ರ ಚೌಕಟ್ಟಿನ ಬಗ್ಗೆ ಸಚಿವಾಲಯ ಕಾರ್ಯನಿರ್ವಹಿಸುತ್ತಿದೆ

ಮುಂದಿನ ಐದು ವರ್ಷಗಳಲ್ಲಿ ಮೂವತ್ತು ಹೊಸ ಪರಿಸರ ಉದ್ಯಾನವನಗಳನ್ನು ರಚಿಸಲಾಗುವುದು

Posted On: 21 DEC 2022 6:07PM by PIB Bengaluru

ಕಲ್ಲಿದ್ದಲು ಗಣಿಗಾರಿಕೆಯ ದುಷ್ಪರಿಣಾಮಗಳನ್ನು ತಗ್ಗಿಸಲು ಕಲ್ಲಿದ್ದಲು ಸಚಿವಾಲಯವು ವಿವಿಧ ಕ್ರಮಗಳನ್ನು ಕೈಗೊಂಡಿದೆ ಮತ್ತು ವಿವಿಧ ಕಲ್ಲಿದ್ದಲು ಗಣಿಗಾರಿಕೆ ಚಟುವಟಿಕೆಗಳಿಂದ ಪ್ರಭಾವಿತವಾಗಿರುವ ವಿವಿಧ ಪ್ರದೇಶಗಳಲ್ಲಿ ಸುಸ್ಥಿರ ಪರಿಸರ ಸ್ನೇಹಿ ಅಭ್ಯಾಸಗಳಿಗೆ ತನ್ನನ್ನು ತಾನು ತೊಡಗಿಸಿಕೊಂಡಿದೆ. ಅಂತಹ ಒಂದು ಅಂಶವೆಂದರೆ ಜಸ್ಟ್ ಟ್ರಾನ್ಸಿಶನ್ (ಜೆಟಿ) ಫಾರ್ ಆಲ್ ತತ್ವವನ್ನಾಧರಿಸಿ ಕೈಬಿಡಲಾದ/ಮುಚ್ಚಿದ/ಪಾರಂಪರಿಕ ಗಣಿಗಳು ಅಥವಾ ಮುಂದಿನ ದಿನಗಳಲ್ಲಿ ಮುಚ್ಚಲಿರುವ ಗಣಿ ಮುಚ್ಚುವಿಕೆಯ ಪ್ರಕರಣಗಳ ಕುರಿತು ಕೆಲಸ ಮಾಡುವುದಾಗಿದೆ. 

ಕಾಲಾನಂತರದಲ್ಲಿ, ಹಳೆಯ ಗಣಿಗಳು ಖನಿಜ ಸಂಪತ್ತು ಖಾಲಿಯಾಗುವುದು, ಕಾರ್ಯಸಾಧ್ಯತೆಯ ಸಮಸ್ಯೆಗಳು, ಸುರಕ್ಷತಾ ಕಾರಣಗಳು ಇತ್ಯಾದಿಗಳಿಂದಾಗಿ ಮುಚ್ಚಲ್ಪಡುತ್ತವೆ. ಇಂಥ ಗಣಿಗಳು ಮುಚ್ಚುವುದರಿಂದ ಅವುಗಳ ಮೇಲೆ ಆಧಾರವಾಗಿರುವ ಕುಟುಂಬಗಳು ಮತ್ತು ಸಮುದಾಯಗಳ ಜೀವನೋಪಾಯ ಮಾರ್ಗವನ್ನು ಖಚಿತಪಡಿಸಲು ಸಾಮಾಜಿಕ, ವಾಸ್ತವಿಕ ಮತ್ತು ಪರಿಸರದ ಮೇಲಾಗುವ ಪರಿಣಾಮಗಳನ್ನು ಪರಿಗಣನೆಗೆ ತೆಗೆದುಕೊಂಡು ಸೂಕ್ತ ರೀತಿಯಲ್ಲಿ ಮುಚ್ಚಲ್ಪಡಬೇಕು. ಗಣಿಗಳ ಮುಚ್ಚುವಿಕೆಯಿಂದಾಗಿ, ಅಪಾರ ಪ್ರಮಾಣದ ಭೂಮಿ ಲಭ್ಯವಾಗುತ್ತದೆ, ಇದು ಪ್ರಾದೇಶಿಕ ರೂಪಾಂತರ ಮತ್ತು ಆರ್ಥಿಕ ವೈವಿಧ್ಯೀಕರಣಕ್ಕೆ ಭಾರಿ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದ್ದರಿಂದ, ಭಾರತೀಯ ಕಲ್ಲಿದ್ದಲು ವಲಯವು ಜೆಟಿ ತತ್ವಗಳನ್ನಾಧರಿಸಿ  ಸಮಗ್ರ ಗಣಿ ಮುಚ್ಚುವಿಕೆಯ ಚೌಕಟ್ಟನ್ನು ಅಭಿವೃದ್ಧಿಪಡಿಸುವ ಪ್ರಯತ್ನಕ್ಕೆ ಮುಂದಾಗಿದೆ. ಪ್ರತಿಯೊಬ್ಬ ಬಾಧಿತ ವ್ಯಕ್ತಿಯ ಜೀವನೋಪಾಯವನ್ನು ಸುರಕ್ಷಿತಗೊಳಿಸಲಾಗುತ್ತದೆ ಮತ್ತು ಯಾರೂ ಇದರಿಂದ ಹೊರಗುಳಿಯುವುದಿಲ್ಲ  ಎಂಬುದನ್ನು ಒಳಗೊಂಡ  ಜಸ್ಟ್ ಟ್ರಾನ್ಸಿಶನ್ ಬಗ್ಗೆ ಎಲ್ಲಾ ಮಧ್ಯಸ್ಥಗಾರರಿಗೆ ನ್ಯಾಯಯುತ, ನ್ಯಾಯೋಚಿತ ಮತ್ತು ಸಮಾನವಾದ ಪರಿವರ್ತನೆ ಎಂದು ವಿವರಿಸಬೇಕು.

JT ತತ್ವಗಳನ್ನಾಧರಿಸಿ  ಕಲ್ಲಿದ್ದಲು ಗಣಿ ಮುಚ್ಚುವ ಚೌಕಟ್ಟನ್ನು ಅಭಿವೃದ್ಧಿಪಡಿಸುವಲ್ಲಿ ತಮ್ಮ ಪರಿಣತಿಯನ್ನು ಒದಗಿಸಲು ವಿಶ್ವ ಬ್ಯಾಂಕ್ ಮತ್ತು GIZ (ಜರ್ಮನ್ ಡೆವಲಪ್‌ಮೆಂಟ್ ಏಜೆನ್ಸಿ) ನಂತಹ ಜಾಗತಿಕ ಪರಿಣಿತ ಏಜೆನ್ಸಿಗಳು ಕಲ್ಲಿದ್ದಲು ಸಚಿವಾಲಯವನ್ನು ಸಂಪರ್ಕಿಸಿವೆ. ಈ ಹಿಂದೆ ಮುಚ್ಚಿದ, ಕೈಬಿಡಲಾದ ಅಥವಾ ಸಂಪನ್ಮೂಲದ ಕೊರತೆಯಿಂದಾಗಿ ಮುಚ್ಚಲಿರುವ ಮತ್ತು ಕೆಲವು ಮುಚ್ಚಿದ ಜಾರ್ಖಂಡ್/ ಛತ್ತೀಸ್‌ಗಢದ ಗಣಿಗಳಿಗೆ ಪ್ರಾಯೋಗಿಕವಾಗಿ ಗಣಿ ಮುಚ್ಚುವಿಕೆಯ ಚೌಕಟ್ಟನ್ನು ರಚಿಸುವ ಗುರಿಯನ್ನು ಹೊಂದಿದ್ದು, ಪ್ರಸ್ತಾವನೆ ಸಲ್ಲಿಸಲಾಗಿದೆ. JT ತತ್ವಗಳನ್ನಾಧರಿಸಿ ಕಲ್ಪಿಸಲಾದ ಕಲ್ಲಿದ್ದಲು ಗಣಿ ಮುಚ್ಚುವಿಕೆಯ ಚೌಕಟ್ಟು ಕಲ್ಲಿದ್ದಲು ಪ್ರದೇಶಗಳ ಆರ್ಥಿಕ ವೈವಿಧ್ಯೀಕರಣಕ್ಕಾಗಿ ಮರುಪಡೆಯಲಾದ ಭೂಮಿ ಮತ್ತು ಮೂಲಸೌಕರ್ಯ ಸ್ವತ್ತುಗಳ ಮರುಬಳಕೆಯ ಜೊತೆಗೆ ಪ್ರಭಾವಿತ ಸ್ಥಳೀಯ ಜನರು ಮತ್ತು ಸಮುದಾಯದ ಜೀವನೋಪಾಯಕ್ಕೆ ಪ್ರೋತ್ಸಾಹ ನೀಡುತ್ತದೆ. ಈ ಚೌಕಟ್ಟು  ಬಲವಾದ ನೀತಿ ನಿರೂಪಣೆ, ಬಲವಾದ ಸಾಂಸ್ಥಿಕ ವ್ಯವಸ್ಥೆ, ಸುಸ್ಥಿರ ಧನಸಹಾಯ ಕಾರ್ಯವಿಧಾನ ಮತ್ತು ಪಾಲುದಾರರ ಸಮಾಲೋಚನಾ ಸಾಧನಗಳನ್ನು ಹೊಂದಿರುತ್ತದೆ. 

ಕಲ್ಲಿದ್ದಲು ಸಚಿವಾಲಯದೊಂದಿಗೆ ಸಂಯೋಜಿಸಲಾದ ಸಂಸದೀಯ ಸಮಾಲೋಚನಾ ಸಮಿತಿಯು ಇಂದೋರ್‌ನಲ್ಲಿ 09.11.2022 ರಂದು ಕಲ್ಲಿದ್ದಲು ಗಣಿ ಮುಚ್ಚುವಿಕೆಯ ಬೆಳೆಯುತ್ತಿರುವ ಸಮಸ್ಯೆ-ಎಲ್ಲರಿಗಾಗಿ ಜಸ್ಟ್ ಟ್ರಾನ್ಸಿಶನ್ ಸಾಧಿಸುವ ಕುರಿತು  ಚರ್ಚಿಸಿತು. ಚರ್ಚೆಯ ಸಂದರ್ಭದಲ್ಲಿ ಸಮಿತಿಯ ಸದಸ್ಯರು ಕಲ್ಲಿದ್ದಲು ಗಣಿ ಮುಚ್ಚುವ ನಿಟ್ಟಿನಲ್ಲಿ ಕಲ್ಲಿದ್ದಲು ಸಚಿವಾಲಯ ಮತ್ತು ಕಲ್ಲಿದ್ದಲು/ಲಿಗ್ನೈಟ್ ಪಿಎಸ್‌ಯುಗಳು ಕೈಗೊಂಡಿರುವ ಪ್ರಯತ್ನಗಳನ್ನು ಶ್ಲಾಘಿಸಿದರು. ಕಲ್ಲಿದ್ದಲು ಗಣಿ ಮುಚ್ಚುವಿಕೆಯ ಚೌಕಟ್ಟನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕಲ್ಲಿದ್ದಲು ವಲಯವು ಕೈಗೊಂಡ ಉಪಕ್ರಮಗಳನ್ನು ಸದಸ್ಯರು ಮನ್ನಿಸಿದರು ಮತ್ತು ಅತ್ಯುತ್ತಮ ಜಾಗತಿಕ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಆಶಯ ವ್ಯಕ್ತಪಡಿಸಿದರು. ಗಣಿಗಳನ್ನು ಮುಚ್ಚಲು ಜಸ್ಟ್ ಟ್ರಾನ್ಸಿಶನ್ ತತ್ವದ ಅನ್ವಯವು ಸಾಮಾಜಿಕ ಸಮಾನತೆ ಮತ್ತು ನ್ಯಾಯಕ್ಕಾಗಿ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು.
 
ಕಲ್ಲಿದ್ದಲು ಪ್ರದೇಶದ ಆರ್ಥಿಕ ಪರಿವರ್ತನೆಯ ಪ್ರಕ್ರಿಯೆಯಲ್ಲಿ, ಸೌರ ಪಾರ್ಕ್‌ಗಳು, ಪರಿಸರ ಉದ್ಯಾನವನಗಳು, ಮೀನು-ಸಾಕಣೆ, ಗೋದಾಮು, ರೆಸಾರ್ಟ್‌ಗಳಂತಹ ಉದ್ಯೋಗ ಮತ್ತು ಆದಾಯ ಉತ್ಪಾದನೆಗೆ ಮಾರ್ಗಗಳನ್ನು ಸೃಷ್ಟಿಸಲು ವಸ್ತು ಸಂಗ್ರಹಾಲಯ, ಪ್ರವಾಸಿ ಸ್ಪಾಟ್, ಗಾಲ್ಫ್ ಕೋರ್ಸ್, OC/UG  ಖಾಲಿ ಜಾಗಗಳನ್ನು ಬಳಸಿಕೊಂಡು ಪಂಪ್ಡ್ ಹೈಡ್ರೊ ಅಳವಡಿಕೆ ಮತ್ತು ಇತರ ಇಂಧನ ಸಂಬಂಧಿತ ಮೂಲಸೌಕರ್ಯಗಳನ್ನು ನಿರ್ಮಿಸುವುದು ಮುಂತಾದವುಗಳ ಮೂಲಕ ಸಾರ್ವಜನಿಕ / ಖಾಸಗಿ ಸಂಸ್ಥೆಗಳನ್ನು ತೊಡಗಿಸಿಕೊಳ್ಳುವ ಮೂಲಕ ಮರುಪಡೆಯಲಾದ ಭೂಮಿ ಮತ್ತು ಗಣಿ ಆಸ್ತಿಯನ್ನು ಮರುಬಳಕೆ ಮಾಡಲಾಗುತ್ತದೆ.

ಕಲ್ಲಿದ್ದಲು/ಲಿಗ್ನೈಟ್ PSUಗಳು ಸುಸ್ಥಿರ ಗಣಿ ಮುಚ್ಚುವ ಅಭ್ಯಾಸಗಳನ್ನು ಕೈಗೊಳ್ಳುವ ಮೂಲಕ ಕಳೆದ 3 ವರ್ಷಗಳಲ್ಲಿ 8 ಪರಿಸರ-ಉದ್ಯಾನಗಳನ್ನು ಅಭಿವೃದ್ಧಿಪಡಿಸಿವೆ. ಈ ಗಣಿಗಾರಿಕೆ ತಾಣಗಳು ಈಗ ಸ್ಥಿರವಾಗಿವೆ, ಪ್ರಾಕೃತಿಕವಾಗಿ ಸುಸ್ಥಿರವಾಗಿವೆ  ಮತ್ತು ಕಲಾತ್ಮಕವಾಗಿ ಬಹಳ ಸುಂದರವಾದ ನೋಟವನ್ನು ಹೊಂದಿವೆ. ಇಂಥ ಕೆಲವು ತಾಣಗಳನ್ನು ಈಗಾಗಲೇ ಸ್ಥಳೀಯ ಪ್ರವಾಸೋದ್ಯಮ ವಲಯದೊಂದಿಗೆ ಸಂಯೋಜಿಸಲಾಗಿದೆ ಮತ್ತು ಕಲ್ಲಿದ್ದಲು/ಲಿಗ್ನೈಟ್ ಪಿಎಸ್‌ಯುಗಳು ಇತರ ಉದ್ಯಾನವನಗಳ ಏಕೀಕರಣಕ್ಕಾಗಿ ಆಯಾ ರಾಜ್ಯ ಪ್ರವಾಸೋದ್ಯಮ ಇಲಾಖೆಗಳನ್ನು ಸಂಪರ್ಕಿಸುತ್ತಿವೆ. ಈ ತಾಣಗಳು  ಸ್ವಯಂ-ಪೋಷಣೆಗಾಗಿ ಆದಾಯವನ್ನು ಗಳಿಸುವ ಮತ್ತು ಸ್ಥಳೀಯ ಜನರಿಗೆ ಉದ್ಯೋಗದ ಸಾಮರ್ಥ್ಯವನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಮರುಪಡೆಯಲಾದ ಭೂಮಿಯಲ್ಲಿ ಗಣಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪರಿಸರ-ಉದ್ಯಾನಗಳು/ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಯು ಕಲ್ಲಿದ್ದಲು/ಲಿಗ್ನೈಟ್ PSUಗಳ ಪ್ರಮುಖ  ಕ್ಷೇತ್ರಗಳಲ್ಲಿ ಒಂದಾಗಿವೆ. ಮುಂಬರುವ 4-5 ವರ್ಷಗಳಲ್ಲಿ, 30 ಕ್ಕೂ ಹೆಚ್ಚು ಹೊಸ ಪರಿಸರ-ಉದ್ಯಾನಗಳು/ಪ್ರವಾಸೋದ್ಯಮ ತಾಣಗಳನ್ನು ರಚಿಸಲು ಮತ್ತು ಅಸ್ತಿತ್ವದಲ್ಲಿರುವ 9 ಪರಿಸರ-ಉದ್ಯಾನಗಳ ವಿಸ್ತರಣೆಯನ್ನು ಕೈಗೊಳ್ಳಲು ಯೋಜನೆ ಹಮ್ಮಿಕೊಳ್ಳಲಾಗಿದೆ.

 ಈ ಪ್ರಕ್ರಿಯೆಯಲ್ಲಿ ಕಲಿತ ಪಾಠಗಳೊಂದಿಗೆ, ಮುಚ್ಚುವಿಕೆಯ ಚೌಕಟ್ಟು ಕ್ರಮೇಣ ಪರಿಷ್ಕರಿಸಲ್ಪಡುತ್ತದೆ, ಇದು ಸಾಮರ್ಥ್ಯ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ ಮತ್ತು ದೀರ್ಘಾವಧಿಯಲ್ಲಿ ಸಂಭವಿಸಬಹುದಾದ ಗಣಿಗಳ ಮುಚ್ಚುವಿಕೆಯ ಪ್ರಕ್ರಿಯೆ ನಿರ್ವಹಿಸಲು ದೃಢವಾದ ಚೌಕಟ್ಟು ರಚಿಸುತ್ತದೆ. 

*****
 (Release ID: 1885565) Visitor Counter : 135


Read this release in: English , Urdu