ಪ್ರಕಟಣಾ ದಿನಾಂಕ:
21 DEC 2022 3:16PM by PIB Bengaluru
ಭಾರತದಲ್ಲಿ ಕಲ್ಲಿದ್ದಲು ಇಂಧನದ ಪ್ರಮುಖ ಮೂಲವಾಗಿರುವುದರಿಂದ, ಇದರ ಬೇಡಿಕೆಯು 2030-2035 ರ ನಡುವೆ ಗರಿಷ್ಠ ಮಟ್ಟದಲ್ಲಿ ಮುಂದುವರಿಯಲಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 398.2 ದಶಲಕ್ಷ ಟನ್ಗಳಿಗೆ ಹೋಲಿಸಿದರೆ 2022-23 ರಲ್ಲಿ (ಏಪ್ರಿಲ್, 22 ರಿಂದ ಅಕ್ಟೋಬರ್, 22 ರವರೆಗೆ), ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ಬಳಕೆ 447.6 ದಶಲಕ್ಷ ಟನ್ಗಳಷ್ಟು (MT) ಏರಿಕೆಯಾಗಿದೆ, ಅಂದರೆ ಶೇ 12 ರಷ್ಟು ವೃದ್ಧಿಸಿದೆ.
ಗಣನೀಯ ಪ್ರಮಾಣದ ಮೀಸಲು ಹೊಂದಿರುವ ಕೈಗೆಟುಕುವ ಇಂಧನ ಮೂಲವಾಗಿರುವುದರಿಂದ, ಭವಿಷ್ಯದಲ್ಲಿ ಕಲ್ಲಿದ್ದಲು ಇಂಧನದ ನಿರೀಕ್ಷಿತ ಪ್ರಮುಖ ಮೂಲವಾಗಿ ಉಳಿಯಲಿದೆ. ಸ್ಥಿರತೆ ಮತ್ತು ಇಂಧನ ಭದ್ರತೆಗಾಗಿ ದೇಶಕ್ಕೆ ನಿರಂತರ ಕಲ್ಲಿದ್ದಲು ಆಧಾರಿತ ಉತ್ಪಾದನೆಯ ಸಾಮರ್ಥ್ಯದ ಅಗತ್ಯವಿರುತ್ತದೆ.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು 2030 ರ ವೇಳೆಗೆ ಪಳೆಯುಳಿಕೆ ರಹಿತ ಇಂಧನ ಆಧಾರಿತ ಇಂಧನ ಸಂಪನ್ಮೂಲಗಳಿಂದ ಸುಮಾರು 50 ಪ್ರತಿಶತ ಸಂಚಿತ ವಿದ್ಯುತ್ ಸ್ಥಾಪಿತ ಸಾಮರ್ಥ್ಯವನ್ನು ಸಾಧಿಸುವ ಯೋಜನೆ ಹೊಂದಿದೆ. 31.10.2022 ರಿಂದ ಇಲ್ಲಿಯವರೆಗೆ, ದೇಶದಲ್ಲಿ ಪಳೆಯುಳಿಕೆಯಲ್ಲದ ಇಂಧನ ಮೂಲಗಳಿಂದ ಒಟ್ಟು 172.72 ಗಿಗಾ ವ್ಯಾಟ್ ಸಾಮರ್ಥ್ಯವನ್ನು ಸ್ಥಾಪಿಸಲಾಗಿದೆ. ಇದು 119.09 ಗಿಗಾ ವ್ಯಾಟ್ ಆರ್ ಇ (ಸೌರ 61.63 GW, ಪವನ 41.84 GW, ಎಸ್ ಹೆಚ್ ಪಿ 4.92 GW ಮತ್ತು ಜೈವಿಕ-ಇಂಧನ 10.70 GW ಅನ್ನು ಒಳಗೊಂಡಿದೆ), 46.85 ಗಿಗಾ ವ್ಯಾಟ್ ಬೃಹತ್ ಜಲವಿದ್ಯುತ್ ಮತ್ತು 6.78 ಗಿಗಾ ವ್ಯಾಟ್ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು ಒಳಗೊಂಡಿದೆ.
ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
*****