ಆಯುಷ್
ವರ್ಷಾಂತ್ಯದ ಅವಲೋಕನ : ಆಯುಷ್ ಸಚಿವಾಲಯ
ಡಬ್ಲೂಎಚ್‌ಒ- ಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರ (ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್) ಸ್ಥಾಪನೆ - ಭಾರತದಲ್ಲಿ ಸ್ಥಾಪನೆಯಾದ ಅಂತಹ ಮೊದಲ ಕೇಂದ್ರ
ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿಯಲ್ಲಿ ಮೂರು ರಾಷ್ಟ್ರೀಯ ಆಯುಷ್ ಸಂಸ್ಥೆಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
Posted On:
21 DEC 2022 12:12PM by PIB Bengaluru
2022ನೇ ವರ್ಷವು ಆಯುಷ್ ಸಚಿವಾಲಯಕ್ಕೆ ಒಂದು ಮಹತ್ವದ ಹೆಗ್ಗುರುತಾಗಿದೆ, ಏಕೆಂದರೆ ಅದು ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಪರಿಣಾಮಕಾರಿಯಾಗಿ ತನ್ನ ದೂರದೃಷ್ಟಿ ಮತ್ತು ಧ್ಯೇಯವನ್ನು ದೃಢವಾಗಿ ಪುನರುಚ್ಚಿಸಿತು. ಈ ವರ್ಷ ಭಾರತೀಯ ಸಂಪ್ರದಾಯ ವೈದ್ಯಪದ್ಧತಿಯ ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಪ್ರಚಾರಕ್ಕೆ ಒಂದು ಹೊಸ ಯುಗವಾಗಿತ್ತು. ಅದು ಭಾರತದಲ್ಲಿ ಸಾಂಪ್ರದಾಯಿಕ ಔಷಧಕ್ಕಾಗಿ ಡಬ್ಲೂಎಚ್ ಒ- ಜಾಗತಿಕ ಕೇಂದ್ರ ಸ್ಥಾಪನೆಯಾಗಿರಬಹುದು ಅಥವಾ ಮೊದಲ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವಿನ್ಯ ಶೃಂಗಸಭೆಯ ಯಶಸ್ವಿ ಸಂಘಟನೆ ಮತ್ತು ಅವುಗಳ ಪರಿಣಾಮಗಳಾಗಿರಬಹುದು. ಸಚಿವಾಲಯದ ಕೆಲವು ಉಪಕ್ರಮಗಳು ಮತ್ತು ಅನೇಕ ಸಾಧನೆಗಳು ಹೀಗಿವೆ.
ಡಬ್ಲ್ಯುಎಚ್‌ಒ - ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ (ಡಬ್ಲ್ಯುಎಚ್‌ಒ - ಜಿಸಿಟಿಎಂ), ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರವೊಂದರಲ್ಲಿ ಇಂತಹ ಮೊದಲ ಕೇಂದ್ರವು ಭಾರತದ ಗುಜರಾತ್‌ನ ಜಾಮ್‌ನಗರದಲ್ಲಿ ನಿರ್ಮಾಣಗೊಳ್ಳುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರು 2020ರ ನವೆಂಬರ್ 13 ರಂದು “ಜಾಗತಿಕ ಆರೋಗ್ಯವನ್ನು ಸುಧಾರಿಸಲು ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆ ಸಾಧಿಸಲು ಸಾಂಪ್ರದಾಯಿಕ ಔಷಧ”ದ ದೂರದೃಷ್ಟಿಯೊಂದಿಗೆ ಭಾರತದಲ್ಲಿ ಡಬ್ಲ್ಯುಎಚ್‌ಒ - ಜಿಸಿಟಿಎಂ ಅನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು. ಅದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2022 ರ ಏಪ್ರಿಲ್‌ನಲ್ಲಿ ಮಾರಿಷಸ್ ಪ್ರಧಾನಿ ಮತ್ತು ಡಿಜಿ-ಡಬ್ಲೂಎಚ್‌ಒ ಉಪಸ್ಥಿತಿಯಲ್ಲಿ ಶಂಕುಸ್ಥಾಪನೆ ಮಾಡುವ ಮೂಲಕ ನೆರವೇರಿಸಿದರು ಮತ್ತು ಗುಜರಾತ್‌ನ ಜಾಮ್‌ನಗರದ ಐಟಿಆರ್‌ಎನಲ್ಲಿ ತಾತ್ಕಾಲಿಕ ಕಚೇರಿಯ ಕಾರ್ಯಾಚರಣೆ ಆರಂಭಿಸಲಾಯಿತು.
ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ಭಾರತದ ಮೊದಲ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆ 2022 ಇತಿಹಾಸವನ್ನು ಸೃಷ್ಟಿಸಿತು, ಅದು ಎಫ್‌ಎಂಜಿಸಿ, ವೈದ್ಯಕೀಯ ಮೌಲ್ಯ ಪ್ರಯಾಣ (ಭಾರತದಲ್ಲಿ ಗುಣಮುಖರಾಗುವುದು), ಫಾರ್ಮಾ, ತಂತ್ರಜ್ಞಾನ ಮತ್ತು ರೋಗಪತ್ತೆ ಮತ್ತು ರೈತರು ಮತ್ತು ಕೃಷಿಯಂತಹ ಪ್ರಮುಖ ವಲಯಗಳಲ್ಲಿ ಸುಮಾರು 9000 ಕೋಟಿ ರೂ. ಗೂ ಅಧಿಕ ಒಪ್ಪಿಗೆ ಪತ್ರ (ಲೆಟರ್ ಆಫ್ ಇಂಟೆಂಟ್) ಗೆ ಸಾಕ್ಷಿಯಾಯಿತು. ಆಯುಷ್ ವಲಯದಲ್ಲಿ ಈ ಪ್ರಮಾಣದ ಮೊದಲ ಬೃಹತ್ ಕಾರ್ಯಕ್ರಮ, ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಂಸ್ಥೆಗಳು ಮತ್ತು ವಿವಿಧ ಕ್ಷೇತ್ರಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲು ಹಾದಿ ಸುಗಮಗೊಳಿಸಿತು, ಆರ್ಥಿಕ ಪರಿಗಣನೆಗಳಿಗೆ ಉತ್ತೇಜನ ನೀಡಿತು, ಪರಸ್ಪರ ಸಂಶೋಧನೆ ಮತ್ತು ಜಾಗತಿಕ ಮಟ್ಟದಲ್ಲಿ ಆಯುಷ್ ತಲುಪುವುದನ್ನು ವೃದ್ಧಿಸಿತು.
ಪ್ರಧಾನಮಂತ್ರಿ ಅವರು ಜಿಎಐಐಎಸ್ 2022 ನಲ್ಲಿ ಆಯುಷ್ ವಲಯದ ಹಲವು ಹೊಸ ಉಪಕ್ರಮಗಳನ್ನು ಘೋಷಿಸಿದರು. ಒಂದು ಪ್ರಮುಖ ಉಪಕ್ರಮದಲ್ಲಿ, ಆಯುಷ್ ಚಿಕಿತ್ಸೆಯ ಪ್ರಯೋಜನವನ್ನು ಪಡೆಯಲು ಭಾರತಕ್ಕೆ ಭೇಟಿ ನೀಡಲು ಬಯಸುವ ವಿದೇಶಿ ಪ್ರಜೆಗಳಿಗೆ ವಿಶೇಷ ಆಯುಷ್ ವೀಸಾ ವಿಭಾಗವನ್ನು ಆರಂಭಿಸುವುದಾಗಿ ಸರ್ಕಾರ ಘೋಷಿಸಿತು. ಆಯುಷ್ ಉತ್ಪನ್ನಗಳಿಗೆ ವಿಶೇಷ ಆಯುಷ್ ಮಾರ್ಕ್, ದೇಶಾದ್ಯಂತ ಆಯುಷ್ ಉತ್ಪನ್ನಗಳ ಪ್ರಚಾರ, ಸಂಶೋಧನೆ ಮತ್ತು ಉತ್ಪಾದನೆಯನ್ನು ಉತ್ತೇಜಿಸಲು ಆಯುಷ್ ಪಾರ್ಕ್‌ಗಳ ಜಾಲವನ್ನು ಅಭಿವೃದ್ಧಿಪಡಿಸುವುದು. ಆಯುರ್ವೇದ ಪೌಷ್ಟಿಕಾಂಶದ ಪೂರಕಗಳ ಉತ್ಪಾದಕರಿಗೆ ಅನುಕೂಲವಾಗುವಂತೆ "ಆಯುಷ್ ಆಹಾರ್" ಹೆಸರಿನ ಹೊಸ ವಿಭಾಗವನ್ನು ಘೋಷಿಸಲಾಗಿದೆ.
ಆಯುಷ್ ಆರೋಗ್ಯರಕ್ಷಣೆ ಮೂಲಸೌಕರ್ಯ ಮತ್ತು ಸಂಸ್ಥೆಗಳ ರಚನೆಯ ವಿಚಾರದಲ್ಲಿ 2022 ಒಂದು ಐತಿಹಾಸಿಕ ವರ್ಷವಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿಯಲ್ಲಿ ಮೂರು ರಾಷ್ಟ್ರೀಯ ಆಯುಷ್ ಸಂಸ್ಥೆಗಳನ್ನು ಉದ್ಘಾಟಿಸಿದರು. ಗೋವಾದಲ್ಲಿ ಅಖಿಲ ಭಾರತ ಆಯುರ್ವೇದ ಕೇಂದ್ರ, ಘಾಜಿಯಾಬಾದ್‌ನಲ್ಲಿರುವ ಯುನಾನಿ ವೈದ್ಯಕೀಯ ರಾಷ್ಟ್ರೀಯ ಕೇಂದ್ರ ಮತ್ತು ದೆಹಲಿಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೋಮಿಯೋಪತಿ ರಾಷ್ಟ್ರೀಯ ಕೇಂದ್ರ. ಈ ಸಂಸ್ಥೆಗಳು ಗುಣಮಟ್ಟದ ಮಾನವ ಸಂಪನ್ಮೂಲ ಮತ್ತು ತರಬೇತಿ ಪಡೆದ ಆಯುಷ್ ವೃತ್ತಿಪರರ ಲಭ್ಯತೆಯ ಗುಂಪನ್ನು ಒಗ್ಗೂಡಿಸುತ್ತದೆ. ಈ ಸಂಸ್ಥೆಗಳ ಮೂಲಕ ಸುಮಾರು 400 ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಾರೆ ಮತ್ತು ರೋಗಿಗಳ ಆರೈಕೆಗಾಗಿ 550 ಹೆಚ್ಚುವರಿ ಹಾಸಿಗೆಗಳನ್ನು ಸೇರ್ಪಡೆ ಮಾಡಲಾಗುತ್ತದೆ.
ವರ್ಷದ ಆರಂಭದಲ್ಲಿ, ನವಿ ಮುಂಬೈನ ಖಾರ್ಘರ್‌ನಲ್ಲಿ ಆಯುಷ್ ಕಟ್ಟಡ ಸಂಕೀರ್ಣವನ್ನು ಉದ್ಘಾಟಿಸಲಾಯಿತು, ಇದು ಹೋಮಿಯೋಪತಿಯ ಪ್ರಾದೇಶಿಕ ಸಂಶೋಧನಾ ಸಂಸ್ಥೆ (ಆರ್‌ಆರ್‌ಐಎಚ್), ಹೋಮಿಯೋಪತಿ ಸಂಶೋಧನಾ ಕೇಂದ್ರ ಮಂಡಳಿ (ಸಿಸಿಆರ್‌ಎಚ್) ಮತ್ತು ಸೆಂಟ್ರಲ್ ಕೌನ್ಸಿಲ್ ಅಡಿಯಲ್ಲಿ ಯುನಾನಿ ಔಷಧದಲ್ಲಿ ಸಂಶೋಧನೆಗಾಗಿ ಯುನಾನಿ ವೈದ್ಯಕೀಯ ಪ್ರಾದೇಶಿಕ ಸಂಶೋಧನಾ ಸಂಸ್ಥೆ (ಸಿಸಿಆರ್‌ಯುಎಂ) ಅನ್ನು ಒಳಗೊಂಡಿದೆ. ಆಯುಷ್‌ನ ಕೇಂದ್ರ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ಅವರು ಲೇಹ್‌ನ ಸಬೂ ಥಾಂಗ್ ಪ್ರದೇಶದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೋವಾ-ರಿಗ್ಪಾ (ಎನ್‌ಐಎಸ್‌ಆರ್) ನ ಹೊಸ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಭಾರತೀಯ ಔಷಧ ಮತ್ತು ಹೋಮಿಯೋಪತಿ (ಪಿಸಿಐಎಂ&ಎಚ್) ಆಯೋಗ ಮತ್ತು ಭಾರತೀಯ ಔಷಧೀಯ ಆಯೋಗದ (ಐಪಿಸಿ) ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ "ಒಂದು ಮೂಲಿಕೆ- ಒಂದು ಮಾನದಂಡ"ದ ಸಹಕಾರ ಮತ್ತು ಅನುಕೂಲವನ್ನು ಸಾಧಿಸಲು ಮಹತ್ವದ ಕ್ರಮವನ್ನು ಕೈಗೊಳ್ಳಲಾಗಿದೆ. ಮಾನದಂಡಗಳ ಈ ಸಮನ್ವಯತೆಯು "ಒಂದು ಮೂಲಿಕೆ, ಒಂದು ಗುಣಮಟ್ಟ ಮತ್ತು ಒಂದು ರಾಷ್ಟ್ರ" ದ ಉದ್ದೇಶವನ್ನು ಪೂರೈಸುತ್ತದೆ ಮತ್ತು ಭಾರತದಲ್ಲಿ ವ್ಯಾಪಾರ ಮಾಡುವುದು ಸುಲಭವಾಗುತ್ತದೆ ಮತ್ತು ಭಾರತೀಯ ಸಸ್ಯಶಾಸ್ತ್ರದ ಒಟ್ಟಾರೆ ವ್ಯಾಪಾರವನ್ನು ಸುಧಾರಿಸುತ್ತದೆ.
ಸಾಂಪ್ರದಾಯಿಕ ಔಷಧದ ಪ್ರಮಾಣೀಕರಣದ ವಲಯದಲ್ಲಿ ಮಾಹಿತಿಯ ವಿನಿಮಯವನ್ನು ಉತ್ತೇಜಿಸಲು ಇದು ಸಹಕಾರ ಸಮನ್ವಯವನ್ನು ಇನ್ನಷ್ಟು ಸುಗಮಗೊಳಿಸುತ್ತದೆಂದು ನಂಬಲಾಗಿದೆ. ಮೊನೊಗ್ರಾಫ್‌ಗಳ ಪ್ರಕಟಣೆಯ ಏಕೈಕ ಅಧಿಕಾರವು ಪಿಸಿಐಎಂ&ಎಚ್ ನೊಂದಿಗೆ ಇರುತ್ತದೆ, ಆದರೆ ಪಿಸಿಐಎಂ&ಎಚ್ ಮತ್ತು ಐಪಿಸಿಯಿಂದ ಅಭಿವೃದ್ಧಿಪಡಿಸಲಾದ ಮೊನೊಗ್ರಾಫ್(ಗಳು) ಅದಕ್ಕೆ ಅನುಗುಣವಾಗಿ ಗುರುತಿಸಲ್ಪಡುತ್ತದೆ; ಆಯಾ ಮೊನೊಗ್ರಾಫ್‌ಗಳಲ್ಲಿ ಐಪಿಸಿಯ ಕೊಡುಗೆಯನ್ನು ಸೂಕ್ತ ಸ್ಥಳದಲ್ಲಿ ಗುರುತಿಸಲಾಗುತ್ತದೆ. ಮೊನೊಗ್ರಾಫ್‌ಗಳ ತಾಂತ್ರಿಕ ವಿಷಯವನ್ನು ಪಿಸಿಐಎಂ&ಎಚ್ ಮತ್ತು ಐಪಿಸಿ ಜಂಟಿಯಾಗಿ ಅಭಿವೃದ್ಧಿಪಡಿಸುತ್ತದೆ.
ಆಯುಷ್ ಸಚಿವಾಲಯ ಎಲ್ಲಾ ಆಯುಷ್ ವ್ಯವಸ್ಥೆಗಳಲ್ಲಿ ಸಾಕ್ಷ್ಯ ಆಧಾರಿತ ಸಂಶೋಧನೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ಅದಕ್ಕೆ ಅನುಗುಣವಾಗಿ ಭಾರತ ಸರ್ಕಾರದ ಆಯುಷ್ ಸಚಿವಾಲಯ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ನಡುವೆ ಆಯುಷ್ ವಲಯದಲ್ಲಿ ಜೈವಿಕ ತಾಂತ್ರಿಕ ಮಧ್ಯಪ್ರವೇಶದ ಮೂಲಕ ಪರಸ್ಪರ ಸಹಯೋಗಕ್ಕಾಗಿ ಸಹಕಾರ, ಸಮನ್ವಯ ಮತ್ತು ಸಹಭಾಗಿತ್ವದ ಸಾಧ್ಯತೆಯನ್ನು ಅನ್ವೇಷಿಷಲು ಒಂದು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಆಯುಷ್ ಗ್ರಿಡ್ ಯೋಜನೆಯಡಿಯಲ್ಲಿ ಆಯುಷ್ ವಲಯದ ಡಿಜಿಟಲೀಕರಣಕ್ಕಾಗಿ ಆಯುಷ್ ಸಚಿವಾಲಯಕ್ಕೆ ತಾಂತ್ರಿಕ ಬೆಂಬಲವನ್ನು ಒದಗಿಸಲು ಆಯುಷ್ ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) ನಡುವೆ ಒಂದು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಆಯುಷ್ ಸಚಿವಾಲಯವು ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಭಾಗವಾಗಿ ‘ಆಯುಷ್ ಗ್ರಿಡ್’ ಯೋಜನೆಯ ಪರಿಕಲ್ಪನೆ ಮಾಡಿದೆ, ಅದು ಕಾರ್ಯಾಚರಣೆಯ ದಕ್ಷತೆ ಪರಿವರ್ತಿಸಲು, ಸೇವಾ ವಿತರಣೆಯನ್ನು ಸುಧಾರಿಸಲು ಮತ್ತು ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಲು ‘ಮಾಹಿತಿ ಮತ್ತು ತಂತ್ರಜ್ಞಾನ’ವನ್ನು ಬಳಸಿಕೊಳ್ಳುವುದಾಗಿದೆ.
ಆಯುಷ್‌ನ ಅಂತಾರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ (ಐಎಸ್‌ಒ)ಗೆ ಬಲವಾದ ಅಸ್ತಿತ್ವವನ್ನು ಸೃಷ್ಟಿಸಲು, ಐಎಸ್‌ಒ/ಟಿಸಿ 215 ಅಡಿಯಲ್ಲಿ ಐಎಸ್‌ಒ ನಲ್ಲಿ ರಚಿಸಲಾದ ನಿರ್ದಿಷ್ಟ ಕಾರ್ಯಕಾರಿ ಸಮಿತಿ (ಡಬ್ಲೂಜಿ10 - ಸಾಂಪ್ರದಾಯಿಕ ಔಷಧ)- ಆಯುಷ್ ಮಾಹಿತಿಯಲ್ಲಿ ಅಂತಾರಾಷ್ಟ್ರೀಯ ಮಾನದಂಡಗಳನ್ನು ರೂಪಿಸಲಿದೆ. ಇದನ್ನು ಮುಂದವರಿಸಿಕೊಂಡು ಹೋಗುತ್ತಾ, ಸಾಂಪ್ರದಾಯಿಕಸಾಂಪ್ರದಾಯಿಕ ಔಷಧಕ್ಕಾಗಿ ಕೃತಕ ಬುದ್ದಿಮತ್ತೆಗಾಗಿ ಟಾಕಿಂಗ್ ಗ್ರೂಪ್ (ಜಿಟಿ) ಯನ್ನು ಆರೋಗ್ಯದಲ್ಲಿ ಕೃತಕ ಬುದ್ದಿಮತ್ತೆ ಕುರಿತು ಡಬ್ಲೂಎಚ್‌ಒ/ಐಟಿಯು-ಫೋಕಸ್ ಗ್ರೂಪ್‌ನಲ್ಲಿ ಆರೋಗ್ಯಕ್ಕಾಗಿ ಕೃತಕ ಬುದ್ದಿಮತ್ತೆಗಾಗಿ (ಎಫ್‌ಜಿ-ಎಐ೪ಎಚ್) ಫೋಕಸ್ ಗ್ರೂಪ್ ರಚಿಸಲಾಗಿದೆ. ಆಯುಷ್ ಸಚಿವಾಲಯವು ಇತರ ಸಾಂಪ್ರದಾಯಿಕ ಔಷಧ ಪಾಲುದಾರರೊಂದಿಗೆ ಈ ಕೆಲಸವನ್ನು ಮುನ್ನಡೆಸುತ್ತದೆ.
ಆಯುಷ್ ಸಚಿವಾಲಯ ಮತ್ತು ಆಹಾರ ನಿಯಂತ್ರಣಕ್ಕಾಗಿ ಭಾರತದ ಅತ್ಯುನ್ನತ ಸಂಸ್ಥೆಯ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್ ಎಸ್ ಎಐ) "ಆಯುರ್ವೇದ ಆಹಾರ" ವಿಭಾಗದಡಿಯಲ್ಲಿ ಆಹಾರ ಉತ್ಪನ್ನಗಳಿಗೆ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡ ನಿಯಮಗಳನ್ನು ರೂಪಿಸಿದೆ. ಈ ಸಮಗ್ರ ಉಪಕ್ರಮವು ಗುಣಮಟ್ಟದ ಆಯುರ್ವೇದ ಆಹಾರ ಉತ್ಪನ್ನಗಳ ಉತ್ಪಾದನೆಯನ್ನು ಖಾತ್ರಿಪಡಿಸುತ್ತದೆ ಮತ್ತು ಮೇಕ್-ಇನ್-ಇಂಡಿಯಾ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ವಿಸ್ತರಿಸಲು ನೆರವು ನೀಡುತ್ತದೆ. ನಿಬಂಧನೆಗಳ ಪ್ರಕಾರ, "ಆಯುರ್ವೇದ ಆಹಾರ"ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟವು ಈಗ ಕಟ್ಟುನಿಟ್ಟಾದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಆಯುರ್ವೇದ ಆಹಾರ) ನಿಯಮ 2022ಕ್ಕೆ ಒಳಪಟ್ಟಿರುತ್ತದೆ, "ಆಯುರ್ವೇದ ಆಹಾರ" ವಿಭಾಗಕ್ಕಾಗಿ ವಿಶೇಷ ಲಾಂಛನವನ್ನು ರಚಿಸಲಾಗಿದೆ, ಇದು ಆಯುರ್ವೇದ ಆಹಾರ ಉತ್ಪನ್ನಗಳಲ್ಲಿ ಸುಲಭವಾಗಿ ಗುರುತಿಸಲು ಮತ್ತು ಗುಣಮಟ್ಟವನ್ನು ಬಲಪಡಿಸಲು ಅನುವು ಮಾಡಿಕೊಡುತ್ತದೆ.
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ 2 ವರ್ಷಗಳ ಬಿಡುವಿನ ಬಳಿಕ ಅಂತಾರಾಷ್ಟ್ರೀಯ ಯೋಗ ದಿನ 2022 (ಐಡಿವೈ 2022) ಭೌತಿಕ ರೂಪದಲ್ಲಿ ಮರಳಿತು. ಐಡಿವೈ 2022ರ ವಿಷಯವು "ಮಾನವೀಯತೆಗಾಗಿ ಯೋಗ" ಮತ್ತು ಈ ಆವೃತ್ತಿಯು ಜಗತ್ತಿನಾದ್ಯಂತ ಮಾನವೀಯತೆಯ ಸೇವೆಯಲ್ಲಿ ಯೋಗದ ಪ್ರಾಮುಖ್ಯತೆ ಮತ್ತು ಕೊಡುಗೆಯನ್ನು ಎತ್ತಿ ತೋರಿಸಿತು ಮತ್ತು ಕೋವಿಡ್ ಪೂರ್ವ ಮತ್ತು ನಂತರದ ಅವಧಿಯಲ್ಲಿ ಜನರ ಸಂಕಷ್ಟಗಳನ್ನು ತಗ್ಗಿಸಿತು. ಪ್ರಧಾನ ಕಾರ್ಯಕ್ರಮವನ್ನು ಮೈಸೂರಿನ ಮೈಸೂರು ಅರಮನೆಯಲ್ಲಿ ಆಯೋಜಿಸಲಾಗಿದ್ದು, ಪ್ರಧಾನಮಂತ್ರಿ ಅವರು ಸಾಮೂಹಿಕ ಯೋಗ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಈ ವರ್ಷ ಇನ್ನೂ ಹೊಸ ಉಪಕ್ರಮಗಳನ್ನು ಕಂಡುಬಂದವು, "ಗಾರ್ಡಿಯನ್ ರಿಂಗ್" ಕಾರ್ಯಕ್ರಮ, ಇದು 79 ದೇಶಗಳು ಮತ್ತು ವಿಶ್ವಸಂಸ್ಥೆಯ ಸಂಸ್ಥೆಗಳ ನಡುವಿನ ಸಹಯೋಗದ ವ್ಯಾಯಾಮವಾಗಿದ್ದು, ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ಜೊತೆಗೆ ರಾಷ್ಟ್ರೀಯ ಗಡಿಗಳನ್ನು ಮೀರಿ ಯೋಗದ ಏಕೀಕರಿಸುವ ಶಕ್ತಿಯನ್ನು ವಿವರಿಸುತ್ತದೆ. ಐಡಿವೈ ಆಚರಣೆಗಳೊಂದಿಗೆ “ಆಜಾದಿ ಕಾ ಅಮೃತ್ ಮಹೋತ್ಸವ”ವನ್ನು ಸಂಯೋಜಿಸಿ, ದೇಶಾದ್ಯಂತ 75 ಸ್ಮರಣೀಯ ಸ್ಥಳಗಳಲ್ಲಿ ಸಾಮೂಹಿಕ ಯೋಗ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಗಳಲ್ಲಿ 22.12 ಕೋಟಿಗೂ ಅಧಿಕ ಜನರು ಭಾಗವಹಿಸಿದ್ದರು. ನಾನಾ ಪಾಲುದಾರರೊಂದಿಗೆ ಆಯುಷ್ ಸಚಿವಾಲಯದ ಉಪಕ್ರಮಗಳ ಮೂಲಕ ಜಾಗತಿಕ ವ್ಯಾಪ್ತಿಯು ಸುಮಾರು 125 ಕೋಟಿ ತಲುಪಿತ್ತು.
ಅಂತೆಯೇ 7ನೇ ಆಯುರ್ವೇದ ದಿನವನ್ನು ಭಾರತದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈಭವದಿಂದ ದೊಡ್ಡ ಪ್ರಮಾಣದಲ್ಲಿ ಆಚರಿಸಲಾಯಿತು. ಇದನ್ನು "ಹರ್ ದಿನ್ ಹರ್ ಘರ್ ಆಯುರ್ವೇದ" ಎಂಬ ಘೋಷಣೆಯೊಂದಿಗೆ ಆಚರಿಸಲಾಯಿತು, ಆ ಮೂಲಕ ಆಯುರ್ವೇದದ ಪ್ರಯೋಜನಗಳನ್ನು ದೊಡ್ಡ ಮತ್ತು ತಳ ಸಮುದಾಯಕ್ಕೆ ಪ್ರಚುರ ಪಡಿಸಲಾಯಿತು. ಕಾರ್ಯಕ್ರಮವನ್ನು 3-ಜೆಗಳು - ಜನ್ ಸಂದೇಶ್, ಜನ್ ಭಾಗಿದಾರಿ ಮತ್ತು ಜನಾಂದೋಲನದ ಗುರಿಯೊಂದಿಗೆ ಆಯೋಜಿಸಲಾಗಿತ್ತು. ಮತ್ತು ಆರು ವಾರಗಳ ಅವಧಿಯ ಆಚರಣೆಯಲ್ಲಿ ದೇಶದಾದ್ಯಂತ ಭಾರಿ ಸಂಖ್ಯೆಯ ಜನರು ಭಾಗವಹಿಸಿದ್ದು ಕಂಡುಬಂದಿತು. 5000 ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಆಯುಷ್ ಸಂಸ್ಥೆಗಳು/ಕೌನ್ಸಿಲ್‌ಗಳ ಸಚಿವಾಲಯವು ಹೆಚ್ಚಿನ ಬೆಂಬಲದೊಂದಿಗೆ ಆಯೋಜಿಸಿದೆ. ಭಾರತ ಸರ್ಕಾರದ 26 ಸಚಿವಾಲಯಗಳು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾರತ ಹೈಕಮೀಷನ್‌ಗಳು ಮತ್ತು ರಾಯಭಾರ ಕಚೇರಿಗಳು ಕಾರ್ಯಕ್ರಮ ಆಯೋಜಿಸಿದ್ದವು.ನಮ್ಮ ಪ್ರಧಾನಮಂತ್ರಿ ಅವರು ಸಮಗ್ರ ಆರೋಗ್ಯ ರಕ್ಷಣಾ ವಿಧಾನಕ್ಕೆ ಒತ್ತು ನೀಡುವುದನ್ನು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ನಮ್ಮ ಆಧುನಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯೊಂದಿಗೆ ಆಯುಷ್ ವ್ಯವಸ್ಥೆಯ ಸಂಯೋಜನೆಯಿಂದ ಮಾತ್ರ ಇದನ್ನು ಸಾಧಿಸಬಹುದು. ಆಯುಷ್ ಸಚಿವಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಡುವಿನ ಅಂತರ-ಸಚಿವಾಲಯದ ಸಮನ್ವಯವು ಸಂಯೋಜನೆ ಮತ್ತು ಪರಿಣಾಮಕಾರಿ ಸಮನ್ವಯ ಸಾಧಿಸಲು ಅಗತ್ಯ ವೇಗವನ್ನು ಸೃಷ್ಟಿಸಿದೆ ಮತ್ತು ಏಕೀಕರಣದ ಪ್ರಕ್ರಿಯೆ ಬಲಪಡಿಸಲು ಮತ್ತು ತ್ವರಿತವಾಗಿ ನಿಗಾ ಮಾಡುವುದರರಿಂದ ಜನರು ವಿಸ್ತೃತ ಆರೋಗ್ಯ ಸೇವೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಮುಂದಿನ 25 ವರ್ಷಗಳ ಅಮೃತ ಕಾಲ ಸಾಂಪ್ರದಾಯಿಕ ಔಷಧಿಗಳ ಸುವರ್ಣ ಯುಗವಾಗಲಿದೆ ಎಂಬುದು ಸಾಬೀತಾಗಲಿದೆ ಎಂದು ಪ್ರಧಾನಮಂತ್ರಿ ಪುನರುಚ್ಚರಿಸಿದ್ದಾರೆ. ಆಯುಷ್ ಸಚಿವಾಲಯವು ಕೈಗೊಂಡ ನೀತಿ ಉಪಕ್ರಮಗಳು ಆಯುಷ್‌ನ ವ್ಯಾಪಕ ಸ್ವೀಕೃತಿಯನ್ನು ಸಕ್ರಿಯಗೊಳಿಸುತ್ತದೆ ಮತ್ತು 2023ರ ವೇಳೆಗೆ ಭಾರತೀಯ ಆಯುಷ್ ವಲಯವು 23 ಶತಕೋಟಿ ಅಮೆರಿಕನ್ ಡಾಲರ್‌ಗಿಂತ ಅಧಿಕ ಮಾರುಕಟ್ಟೆಯನ್ನು ಹೊಂದಲಿದೆ ಎಂದು ನಂಬಲಾಗಿದೆ.
****
(Release ID: 1885395)
Visitor Counter : 149