ಗೃಹ ವ್ಯವಹಾರಗಳ ಸಚಿವಾಲಯ

ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳ ಅಭಿವೃದ್ಧಿ

Posted On: 20 DEC 2022 5:34PM by PIB Bengaluru

ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ 'ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳ ಅಭಿವೃದ್ಧಿ' ಕುರಿತಂತೆ ಲಿಖಿತ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಗೃಹ ವ್ಯವಹಾರಗಳ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ, ಎಡಪಂಥೀಯ ಉಗ್ರವಾದ (ಎಲ್.ಡಬ್ಲ್ಯು.ಇ.) ಪಿಡುಗನ್ನು ಸಮಗ್ರವಾಗಿ ಪರಿಹರಿಸಲು, ಭಾರತ ಸರ್ಕಾರ (ಜಿ.ಒ.ಐ.) 2015ರಲ್ಲಿ 'ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆ'ಗೆ ಅನುಮೋದನೆ ನೀಡಿದೆ ಎಂದು ಹೇಳಿದರು. ಈ ನೀತಿಯು ಭದ್ರತೆಗೆ ಸಂಬಂಧಿಸಿದ ಕ್ರಮಗಳು, ಅಭಿವೃದ್ಧಿ ಹಸ್ತಕ್ಷೇಪ, ಸ್ಥಳೀಯ ಸಮುದಾಯಗಳ ಹಕ್ಕುಗಳು ಮತ್ತು ಅಧಿಕಾರಗಳನ್ನು ಖಾತ್ರಿಪಡಿಸುವುದು ಇತ್ಯಾದಿಗಳನ್ನು ಒಳಗೊಂಡ ಬಹುಮುಖ ಕಾರ್ಯತಂತ್ರವನ್ನು ರೂಪಿಸುತ್ತದೆ.

ಈ ನೀತಿಯ ಅಚಲ ಅನುಷ್ಠಾನವು ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳಲ್ಲಿ ಹಿಂಸಾಚಾರದ ಸ್ಥಿರವಾದ ಇಳಿಕೆಗೆ ಕಾರಣವಾಗಿದೆ. ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳ ಹಿಂಸಾಚಾರದ ಘಟನೆಗಳು 2010ರಲ್ಲಿ 2,213 ರಿಂದ 2021ರಲ್ಲಿ 509 ಕ್ಕೆ 77 ಪ್ರತಿಶತದಷ್ಟು ಕಡಿಮೆಯಾಗಿದೆ. ಅಂತೆಯೇ, ಅದರ ಪರಿಣಾಮವಾಗಿ ಸಂಭವಿಸುವ ಸಾವುಗಳು (ನಾಗರಿಕರು + ಭದ್ರತಾ ಪಡೆಗಳು) 2010ರಲ್ಲಿ 1,005ರಿಂದ 2021ರಲ್ಲಿ 147ಕ್ಕೆ 85 ಪ್ರತಿಶತದಷ್ಟು ಕಡಿಮೆಯಾಗಿದೆ. 2022ರಲ್ಲಿ ಕೂಡಾ ಈ ಕುಸಿತದ ಪ್ರವೃತ್ತಿ ಮುಂದುವರಿಯುತ್ತಿದೆ.

ಹಿಂಸಾಚಾರದ ಭೌಗೋಳಿಕ ಹರಡುವಿಕೆಯು ಗಮನಾರ್ಹವಾಗಿ ಕಡಿಮೆಯಾಗಿದೆ. 2010ರಲ್ಲಿ 96 ಜಿಲ್ಲೆಗಳ 465 ಪೊಲೀಸ್ ಠಾಣೆಗಳಿಗೆ ಹೋಲಿಸಿದರೆ 2021ರಲ್ಲಿ 46 ಜಿಲ್ಲೆಗಳ 191 ಪೊಲೀಸ್ ಠಾಣೆಗಳು ಮಾತ್ರ ಎಡಪಂಥೀಯ ಉಗ್ರವಾದ ಬಾಧಿತ ಸಂಬಂಧಿತ ಹಿಂಸಾಚಾರವನ್ನು ವರದಿ ಮಾಡಿವೆ. ಭೌಗೋಳಿಕ ಹರಡುವಿಕೆಯಲ್ಲಿನ ಕುಸಿತವು ಭದ್ರತೆಗೆ ಸಂಬಂಧಿತ ವೆಚ್ಚ (ಎಸ್.ಆರ್.ಇ.) ಯೋಜನೆಯ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳ ಕಡಿಮೆ ಸಂಖ್ಯೆಯಲ್ಲಿ ಪ್ರತಿಬಿಂಬಿತವಾಗಿದೆ. 2018ರ ಏಪ್ರಿಲ್ ನಲ್ಲಿ 126 ರಿಂದ 90 ಕ್ಕೆ ಮತ್ತು ಜುಲೈ 2021ರಲ್ಲಿ 70 ಕ್ಕೆ ಎಸ್.ಆರ್.ಇ. ಜಿಲ್ಲೆಗಳ ಸಂಖ್ಯೆ ಕಡಿಮೆಯಾಗಿದೆ.

ಅಂತೆಯೇ, ಹೆಚ್ಚಿನ ಎಡಪಂಥೀಯ ಉಗ್ರವಾದ ಬಾಧಿತ ಜಿಲ್ಲೆಗಳು ಎಂದು ವರ್ಗೀಕರಿಸಲಾದ, ಹಿಂಸಾಚಾರದಲ್ಲಿ ಸುಮಾರು 90 ಪ್ರತಿಶತದಷ್ಟು ಕೊಡುಗೆ ನೀಡುತ್ತಿದ್ದ ಜಿಲ್ಲೆಗಳ ಸಂಖ್ಯೆ, 2018ರಲ್ಲಿದ್ದ 35ರಿಂದ 30 ಕ್ಕೆ, ಮತ್ತು 2021ರಲ್ಲಿ 25ಕ್ಕೆ ಮತ್ತಷ್ಟು ಇಳಿದಿದೆ. ಎಸ್.ಆರ್.ಇ. ಯೋಜನೆಯಡಿ ಬರುವ ಜಿಲ್ಲೆಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ:-

ಕ್ರಮ ಸಂಖ್ಯೆ

ರಾಜ್ಯಗಳು

ಜಿಲ್ಲೆಗಳ ಸಂಖ್ಯೆ

ಎಸ್.ಆರ್.ಇ. ಯೋಜನೆಯಡಿ ಬರುವ ಜಿಲ್ಲೆಗಳು

  1.  

ಆಂದ್ರ ಪ್ರದೇಶ

05

ಪೂರ್ವ ಗೋದಾವರಿ, ಶ್ರೀಕಾಕುಳಂ, ವಿಶಾಖಪಟ್ಟಣಂ, ವಿಜಿಯಾನಗ್ರಾಮ್, ಪಶ್ಚಿಮ ಗೋದಾವರಿ.

  1.  

ಬಿಹಾರ್

10

ಔರಂಗಾಬಾದ್, ಬಂಕಾ, ಗಯಾ, ಜಮುಯಿ, ಕೈಮೂರ್, ಲಖಿಸರಾಯ್, ಮುಂಗೇರ್, ನವಾಡಾ, ರೋಹ್ತಾಸ್, ಪಶ್ಚಿಮ ಚಂಪಾರಣ್.

  1.  

ಛತ್ತೀಸ್ ಗಢ

14

ಬಲರಾಂಪುರ, ಬಸ್ತಾರ್, ಬಿಜಾಪುರ, ದಾಂತೇವಾಡ, ಧಮ್ತಾರಿ, ಗರಿಯಾಬಂದ್, ಕಂಕೇರ್, ಕೊಂಡಗಾಂವ್, ಮಹಾಸಮುಂದ್, ನಾರಾಯಣಪುರ, ರಾಜನಂದಗಾಂವ್, ಸು14ಕ್ಮಾ, ಕಬೀರ್ ಧಾಮ್, ಮುಂಗೇಲಿ.

  1.  

ಜಾರ್ಖಂಡ್

16

ಬೊಕಾರೊ, ಛತ್ರ, ಧನ್ ಬಾದ್, ದುಮ್ಕಾ, ಪೂರ್ವ ಸಿಂಗ್ಭೂಮ್, ಗರ್ವಾ, ಗಿರಿದಿಹ್, ಗುಮ್ಲಾ, ಹಜಾರಿಬಾಗ್, ಕುಂತಿ, ಲತೇಹರ್, ಲೋಹರ್ದಾಗಾ, ಪಲಾಮು, ರಾಂಚಿ, ಸರೈಕೆಲಾ-ಖರಸ್ವಾನ್, ಪಶ್ಚಿಮ ಸಿಂಗ್ಭೂಮ್.

  1.  

ಮಧ್ಯಪ್ರದೇಶ

03

ಬಾಲಾಘಾಟ್, ಮಾಂಡ್ಲಾ, ದಿಂಡೋರಿ.

  1.  

ಮಹಾರಾಷ್ಟ್ರ

02

ಗಡ್ಚಿರೋಲಿ, ಗೊಂಡಿಯಾ.

  1.  

ಒಡಿಶಾ

10

ಬರ್ಗರ್, ಬೋಲಂಗಿರ್, ಕಾಲಹಂಡಿ, ಕಂಧಮಾಲ್, ಕೋರಾಪುಟ್, ಮಲ್ಕನ್ ಗಿರಿ, ನಬರಂಗಪುರ, ನೌಪಾದಾ, ರಾಯಗಡ, ಸುಂದರ್ ಗಢ.

  1.  

ತೆಲಂಗಾಣ

06

ಅದಿಲಾಬಾದ್, ಭದ್ರಾದ್ರಿ-ಕೊಥಗುಡೆಮ್, ಜಯಶಂಕರ್-ಭೂಪಾಲ್ಪಲ್ಲಿ, ಕೋಮರಾಮ್-ಭೀಮ್, ಮಂಚೇರಿಯಲ್, ಮುಲುಗು.

  1.  

ಪಶ್ಚಿಮ ಬಂಗಾಳ

01

ಜಾರ್ಗ್ರಾಮ್ .

  1.  

ಕೇರಳ

03

ಮಲಪ್ಪುರಂ, ಪಾಲಕ್ಕಾಡ್, ವಯನಾಡ್.

 

ಮೊತ್ತ

70

 

(ಸಿ) ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ನೆಲೆಗಟ್ಟಿನಲ್ಲಿ, ಗೃಹ ವ್ಯವಹಾರಗಳ ಸಚಿವಾಲಯವು ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳಲ್ಲಿ ಆ ಸಚಿವಾಲಯಗಳ ಪ್ರಮುಖ ಯೋಜನೆಗಳ ಗರಿಷ್ಠ ಅನುಷ್ಠಾನಕ್ಕಾಗಿ ಇತರ ಸಚಿವಾಲಯಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತದೆ. ವಿವಿಧ ಸಚಿವಾಲಯಗಳ ಪ್ರಮುಖ ಯೋಜನೆಗಳ ಹೊರತಾಗಿ, ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳಲ್ಲಿ ನಿರ್ದಿಷ್ಟ ಯೋಜನೆಗಳನ್ನು ಸಹ ಜಾರಿಗೆ ತರಲಾಗಿದೆ, ಇದರಲ್ಲಿ ರಸ್ತೆ ಜಾಲದ ವಿಸ್ತರಣೆ, ದೂರಸಂಪರ್ಕ ಸುಧಾರಣೆ, ಶೈಕ್ಷಣಿಕ ಸಬಲೀಕರಣ ಮತ್ತು ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳಲ್ಲಿ ಆರ್ಥಿಕ ಸೇರ್ಪಡೆಗೆ ವಿಶೇಷ ಒತ್ತು ನೀಡಲಾಗಿದೆ.

ಎರಡು ನಿರ್ದಿಷ್ಟ ಯೋಜನೆಗಳ ಅಡಿಯಲ್ಲಿ ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳಲ್ಲಿ 11,600 ಕಿ.ಮೀ.ಗಿಂತ ಹೆಚ್ಚು ರಸ್ತೆಗಳನ್ನು ನಿರ್ಮಿಸಲಾಗಿದೆ.

ದೂರಸಂಪರ್ಕ ಸೌಲಭ್ಯವನ್ನು ಸುಧಾರಿಸಲು, 2,343 ಮೊಬೈಲ್ ಟವರ್ ಗಳನ್ನು ಸ್ಥಾಪಿಸಲಾಗಿದ್ದು, ಇನ್ನೂ 2,542 ಮೊಬೈಲ್ ಟವರ್ ಗಳಿಗೆ ಕಾರ್ಯಾದೇಶ ನೀಡಲಾಗಿದೆ. ಸಾರ್ವಜನಿಕ ಮೂಲಸೌಕರ್ಯ ಮತ್ತು ಸೇವೆಗಳಲ್ಲಿನ ಪ್ರಮುಖ ಅಂತರವನ್ನು ಕಡಿಮೆ ಮಾಡಲು 'ವಿಶೇಷ ಕೇಂದ್ರ ನೆರವು (ಎಸ್.ಸಿ.ಎ.)' ಯೋಜನೆಯಡಿ ಅತ್ಯಂತ ಎಡಪಂಥೀಯ ಉಗ್ರವಾದ ಬಾಧಿತ ಜಿಲ್ಲೆಗಳಿಗೆ 3105 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಯೋಜನೆಯಡಿ, ರಸ್ತೆ ದುರಸ್ತಿ, ಆರೋಗ್ಯ ಮೂಲಸೌಕರ್ಯಗಳ ಸುಧಾರಣೆ, ಶಿಕ್ಷಣಕ್ಕೆ ಸಂಬಂಧಿಸಿದ ಯೋಜನೆಗಳು, ಗ್ರಾಮೀಣ ಮೂಲಸೌಕರ್ಯ ಯೋಜನೆಗಳು ಮುಂತಾದ ವಿವಿಧ ರೀತಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಶೈಕ್ಷಣಿಕ ಸಬಲೀಕರಣಕ್ಕಾಗಿ, 47 ಕೈಗಾರಿಕಾ ತರಬೇತಿ ಸಂಸ್ಥೆಗಳು ಮತ್ತು 68 ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು "ಎಲ್.ಡಬ್ಲ್ಯೂ.ಇ. ಬಾಧಿತ 47 ಜಿಲ್ಲೆಗಳಲ್ಲಿ ಕೌಶಲ್ಯ ಅಭಿವೃದ್ಧಿ ಯೋಜನೆಯ" ಅಡಿಯಲ್ಲಿ ಅನುಮೋದಿಸಲಾಗಿದೆ.

ಆರ್ಥಿಕ ಅಭಿವೃದ್ಧಿಗಾಗಿ 1,258 ಬ್ಯಾಂಕ್ ಶಾಖೆಗಳು, 1,348 ಎಟಿಎಂಗಳು ಮತ್ತು 22,202 ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಗಳನ್ನು ಹೆಚ್ಚಿನ ಎಡಪಂಥೀಯ ಉಗ್ರವಾದ ಬಾಧಿತ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿದೆ ಮತ್ತು 90 ಎಡಪಂಥೀಯ ಉಗ್ರವಾದ ಬಾಧಿತ ಜಿಲ್ಲೆಗಳಲ್ಲಿ 4,903 ಅಂಚೆ ಕಚೇರಿಗಳನ್ನು ಕಳೆದ ಏಳು ವರ್ಷಗಳಲ್ಲಿ ತೆರೆಯಲಾಗಿದೆ.

ರಾಜ್ಯವಾರು ಯೋಜನೆಗಳ ವಿವರಗಳು ಈ ಕೆಳಗಿನಂತಿವೆ:-

1. ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳಲ್ಲಿ ರಸ್ತೆ ಅಗತ್ಯ ಯೋಜನೆ-1 (ಆರ್.ಆರ್.ಪಿ-I) : ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳಲ್ಲಿ ರಸ್ತೆ ಸಂಪರ್ಕವನ್ನು ಸುಧಾರಿಸಲು ಈ ಯೋಜನೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. 8,585 ಕೋಟಿ ರೂ. ಗಳ ಅಂದಾಜು ವೆಚ್ಚದಲ್ಲಿ 5,361 ಕಿ.ಮೀ ರಸ್ತೆಯನ್ನು ಮಂಜೂರು ಮಾಡಲಾಗಿದೆ. ಈ ಪೈಕಿ 5,065 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗಿದೆ. ರಾಜ್ಯವಾರು ವಿವರಗಳನ್ನು ಈ ಕೆಳಗೆ ನೀಡಲಾಗಿದೆ:-

ರಾಜ್ಯ

ಪೂರ್ಣಗೊಂಡ ಉದ್ದ  (ಕಿ.ಮೀ.ಗಳಲ್ಲಿ)

ಆಂಧ್ರ ಪ್ರದೇಶ/ತೆಲಂಗಾಣ

617

ಬಿಹಾರ

674

ಛತ್ತೀಸ್ ಗಢ

1,699

ಜಾರ್ಖಂಡ್

760

ಮಧ್ಯ ಪ್ರದೇಶ

191

ಮಹಾರಾಷ್ಟ್ರ

454

ಒಡಿಶಾ

603

ಉತ್ತರ ಪ್ರದೇಶ

67

ಮೊತ್ತ

5,065

2. ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳ ರಸ್ತೆ ಸಂಪರ್ಕ ಯೋಜನೆ (ಆರ್.ಸಿ.ಪಿ.ಎಲ್.ಡಬ್ಯೂ.ಇ.ಎ.):  ಈ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಅಂದಾಜು 12,021 ಕೋಟಿ ರೂ.ಗಳ ವೆಚ್ಚದಲ್ಲಿ 12,100 ಕಿ.ಮೀ ರಸ್ತೆಗಳನ್ನು ಮಂಜೂರು ಮಾಡಲಾಗಿದೆ. ಈ ಪೈಕಿ 6,561 ಕಿ.ಮೀ ರಸ್ತೆ ಪೂರ್ಣಗೊಂಡಿದೆ. ರಾಜ್ಯವಾರು ವಿವರಗಳನ್ನು ಈ ಕೆಳಗೆ ನೀಡಲಾಗಿದೆ:-

ರಾಜ್ಯ

ಪೂರ್ಣಗೊಂಡ ಉದ್ದ  (ಕಿ.ಮೀ.ಗಳಲ್ಲಿ)

ಆಂಧ್ರ ಪ್ರದೇಶ

925

ಬಿಹಾರ್

1425

ಛತ್ತೀಸ್ ಗಢ

1700

ಜಾರ್ಖಂಡ್

1178

ಮಧ್ಯ ಪ್ರದೇಶ

49

ಮಹಾರಾಷ್ಟ್ರ

247

ಒಡಿಶಾ

371

ತೆಲಂಗಾಣ

301

ಉತ್ತರ ಪ್ರದೇಶ

365

ಮೊತ್ತ

6,561

3. ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳ 47 ಜಿಲ್ಲೆಗಳಲ್ಲಿ ಕೌಶಲ್ಯ ಅಭಿವೃದ್ಧಿ ಯೋಜನೆ:- ಈ ಯೋಜನೆಯು ಎಡಪಂಥೀಯ ಉಗ್ರವಾದ ಬಾಧಿತ ಜಿಲ್ಲೆಗಳಲ್ಲಿ ಕೌಶಲ್ಯ ಅಭಿವೃದ್ಧಿ ಮೂಲಸೌಕರ್ಯವನ್ನು ಸೃಷ್ಟಿಸಲು ಉದ್ದೇಶಿಸಿ ಅಭಿವೃದ್ಧಿ ಪಡಿಸಲಾಗಿದೆ. ಆರಂಭದಲ್ಲಿ, 34 ಜಿಲ್ಲೆಗಳಲ್ಲಿ 34 ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐಗಳು) (ಪ್ರತಿ ಜಿಲ್ಲೆಗೆ ಒಂದು ಐಟಿಐನಂತೆ) ಮತ್ತು 68 ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು (ಎಸ್.ಡಿ.ಸಿ.ಗಳು) (ಪ್ರತಿ ಜಿಲ್ಲೆಗೆ 2 ಎಸ್.ಡಿ.ಸಿ.ಯಂತೆ) ಅಭಿವೃದ್ಧಿ ಪಡಿಸಲಾಗಿತ್ತು. 2016ರಲ್ಲಿ, 13 ಹೊಸ ಜಿಲ್ಲೆಗಳಲ್ಲಿ 13 ಹೊಸ ಐಟಿಐಗಳನ್ನು ಸೇರಿಸಲಾಗಿದ್ದು, 407.85 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ  ಒಟ್ಟು 47 ಐಟಿಐಗಳು ಮತ್ತು 68 ಎಸ್.ಡಿ.ಸಿ.ಗಳನ್ನು ತೆರೆಯಲಾಗಿದೆ. ಇವುಗಳಲ್ಲಿ 43 ಐಟಿಐಗಳು ಮತ್ತು 38 ಎಸ್.ಡಿ.ಸಿ.ಗಳು ಕಾರ್ಯನಿರ್ವಹಿಸುತ್ತಿವೆ.  ರಾಜ್ಯವಾರು ವಿವರಗಳನ್ನು ಈ ಕೆಳಗೆ ಕೊಡಲಾಗಿದೆ:-

ರಾಜ್ಯ

ಐಟಿಐಗಳು

ಎಸ್.ಡಿ.ಸಿ.ಗಳು

ಕಾರ್ಯನಿರ್ವಹಿಸುತ್ತಿರುವ

ಕಾರ್ಯನಿರ್ವಹಿಸುತ್ತಿರುವ

ಆಂಧ್ರ ಪ್ರದೇಶ

01

-

ಬಿಹಾರ್

09

-

ಛತ್ತೀಸ್ ಗಢ

09

14

ಜಾರ್ಖಂಡ್

16

09

ಮಧ್ಯ ಪ್ರದೇಶ

01

02

ಒಡಿಶಾ

05

10

ತೆಲಂಗಾಣ

-

02

ಉತ್ತರ ಪ್ರದೇಶ

01

01

ಪಶ್ಚಿಮ ಬಂಗಾಳ

01

-

ಮೊತ್ತ

43

38

4. ಏಕಲವ್ಯ ಮಾದರಿ ವಸತಿ ಶಾಲೆಗಳು (ಇ.ಎಂ.ಆರ್.ಎಸ್. ಗಳು):  ಈ ಯೋಜನೆಯನ್ನು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಮೂಲಕ ಜಾರಿಗೆ ತರಲಾಗುತ್ತಿದೆ. ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳಿಗೆ ಮಂಜೂರಾದ ಒಟ್ಟು 245 ಇ.ಎಂ.ಆರ್.ಎಸ್.ಗಳ ಪೈಕಿ, ಕಳೆದ 3 ವರ್ಷಗಳಲ್ಲಿಯೇ 103 ಇ.ಎಂ.ಆರ್.ಎಸ್.ಗಳನ್ನು ಮಂಜೂರು ಮಾಡಲಾಗಿದ್ದು, ಅದಕ್ಕೂ ಮುಂಚಿನ 21 ವರ್ಷಗಳ ಅವಧಿಯಲ್ಲಿ ಮಂಜೂರಾದ 142 ಇ.ಎಂ.ಆರ್.ಎಸ್.ಗಳಿಗೆ ಹೋಲಿಸಿದರೆ. ಇಲ್ಲಿಯವರೆಗೆ (ಜೂನ್ 2021), ಹಿಂದಿನ 90 ಎಡಪಂಥೀಯ ಉಗ್ರವಾದ ಬಾಧಿತ ಜಿಲ್ಲೆಗಳಲ್ಲಿ 245 ಇ.ಎಂ.ಆರ್.ಎಸ್.ಗಳನ್ನು ಮಂಜೂರು ಮಾಡಲಾಗಿದೆ. ರಾಜ್ಯವಾರು ವಿವರಗಳನ್ನು ಈ ಕೆಳಗಿನಂತೆ ನೀಡಲಾಗಿದೆ:-

ರಾಜ್ಯಗಳು

ಅನುಮೋದಿತ/ಮಂಜೂರಾದ ಶಾಲೆಗಳು

ಕಾರ್ಯನಿರ್ವಹಿಸುತ್ತಿರುವ ಶಾಲೆಗಳು

ಆಂಧ್ರ ಪ್ರದೇಶ

24

24

ಬಿಹಾರ್

03

-

ಛತ್ತೀಸ್ ಗಢ

44

44

ಜಾರ್ಖಂಡ್

78

05

ಕೇರಳ

02

02

ಮಧ್ಯ ಪ್ರದೇಶ

07

07

ಮಹಾರಾಷ್ಟ್ರ

09

08

ಒಡಿಶಾ

64

18

ತೆಲಂಗಾಣ

12

12

ಉತ್ತರ ಪ್ರದೇಶ

01

-

ಪಶ್ಚಿಮ ಬಂಗಾಳ

01

01

ಮೊತ್ತ

245

121

5. ಎಡಪಂಥೀಯ ಉಗ್ರವಾದ ಬಾಧಿತ ಜಿಲ್ಲೆಗಳಲ್ಲಿ ಮೊಬೈಲ್ ಸಂಪರ್ಕ ಯೋಜನೆ:  ಈ ಯೋಜನೆಯ ಮೊದಲ ಹಂತದಲ್ಲಿ 4080.78 ಕೋಟಿ ರೂ.ಗಳ ವೆಚ್ಚದಲ್ಲಿ 2,343 ಮೊಬೈಲ್ ಟವರ್ ಗಳನ್ನು ಅಳವಡಿಸಲಾಗಿದೆ. ಏಪ್ರಿಲ್ 2022ರಲ್ಲಿ, ಕೇಂದ್ರ ಸಚಿವ ಸಂಪುಟವು ಈ 2ಜಿ ನೆಟ್ ವರ್ಕ್ ಸೈಟ್ ಗಳನ್ನು 4ಜಿಗೆ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿತು. ನವಂಬರ್ 2022ರಲ್ಲಿ ಮೇಲ್ದರ್ಜೆಗೇರಿಸುವ ಈ ಕೆಲಸವನ್ನು ಹಂಚಲಾಗಿದೆ. ಈ ಯೋಜನೆಯ ಎರಡನೇ ಹಂತದಲ್ಲಿ, 2542 ಮೊಬೈಲ್ ಟವರ್ ಗಳ ಸ್ಥಾಪನೆಗೆ ಕಾರ್ಯಾದೇಶವನ್ನು ಸಹ ನೀಡಲಾಗಿದೆ. ರಾಜ್ಯವಾರು ವಿವರಗಳು ಈ ಕೆಳಗಿನಂತಿವೆ:-

ರಾಜ್ಯ

ಮೊದಲನೇ ಹಂತ

ಎರಡನೇ ಹಂತ

ಸ್ಥಾಪಿಸಲಾದ ಮೊಬೈಲ್ ಟವರ್ ಗಳು 

ಹೊರಡಿಸಲಾದ ಕೆಲಸದ ಆದೇಶ 

ಆಂಧ್ರ ಪ್ರದೇಶ

62

346

ಬಿಹಾರ್

250

16

ಛತ್ತೀಸ್ ಗಢ

525

971

ಜಾರ್ಖಂಡ್

816

450

ಮಧ್ಯ ಪ್ರದೇಶ

22

23

ಮಹಾರಾಷ್ಟ್ರ

65

125

ಒಡಿಶಾ

256

483

ತೆಲಂಗಾಣ

173

53

ಉತ್ತರ ಪ್ರದೇಶ

78

42

ಪಶ್ಚಿಮ ಬಂಗಾಳ

96

33

ಮೊತ್ತ

2343

2542

6. ಎಡಪಂಥೀಯ ಉಗ್ರವಾದ ಬಾಧಿತ ಜಿಲ್ಲೆಗಳಲ್ಲಿ ಬ್ಯಾಂಕಿಂಗ್ ಔಟ್ ಲೆಟ್ ಗಳು ಮತ್ತು ಅಂಚೆ ಕಚೇರಿ:  ಎಡಪಂಥೀಯ ಉಗ್ರವಾದ ಬಾಧಿತ ಜಿಲ್ಲೆಗಳಲ್ಲಿ ತೆರೆಯಲಾದ ಬ್ಯಾಂಕಿಂಗ್ ಔಟ್ ಲೆಟ್ ಗಳು ಮತ್ತು ಅಂಚೆ ಕಚೇರಿಗಳ ವಿವರಗಳು ಈ ಕೆಳಗಿನಂತಿವೆ:-

 

ರಾಜ್ಯಗಳು

30 ಹೆಚ್ಚು ಎಡಪಂಥೀಯ ಉಗ್ರವಾದ ಬಾಧಿತ ಜಿಲ್ಲೆಗಳಲ್ಲಿ ಬ್ಯಾಂಕ್ ಟಚ್ ಪಾಯಿಂಟ್ ಗಳು (01.04.2015 ರಿಂದ 30.04.2022 ರವರೆಗೆ)

ಬ್ಯಾಂಕ್ ಶಾಖೆಗಳು

ಎಟಿಎಂಗಳು

ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಗಳು

ಆಂಧ್ರ ಪ್ರದೇಶ

150

339

2099

ಬಿಹಾರ್

144

45

4011

ಛತ್ತೀಸ್ ಗಢ

260

231

3826

ಜಾರ್ಖಂಡ್

421

446

9716

ಮಹಾರಾಷ್ಟ್ರ

79

44

587

ಒಡಿಶಾ

49

95

1144

ತೆಲಂಗಾಣ

155

148

819

ಮೊತ್ತ

1258

1348

22202

32 ಎಡಪಂಥೀಯ ಉಗ್ರವಾದ ಬಾಧಿತ ಜಿಲ್ಲೆಗಳಲ್ಲಿ ಅಂಚೆ ಕಚೇರಿಗಳು

 

ರಾಜ್ಯಗಳು

ಮೊತ್ತ

ಮೊದಲನೇ ಹಂತ
(ಫೆಬ್ರವರಿ 2017 ರಿಂದ ಏಪ್ರಿಲ್ 2019 ರವರೆಗೆ)

ಎರಡನೇ ಹಂತ
(2021-22)

ಆಂಧ್ರ ಪ್ರದೇಶ

307

95

187

ಬಿಹಾರ್

230

50

180

ಛತ್ತೀಸ್ ಗಢ

1224

740

391

ಜಾರ್ಖಂಡ್

999

654

244

ಮಧ್ಯ ಪ್ರದೇಶ

511

0

511

ಮಹಾರಾಷ್ಟ್ರ

675

142

687

ಒಡಿಶಾ

247

40

272

ತೆಲಂಗಾಣ

486

68

418

ಉತ್ತರ ಪ್ರದೇಶ

224

0

224

ಮೊತ್ತ

4903

1789

3114

7. ವಿಶೇಷ ಕೇಂದ್ರ ನೆರವಿನ ಯೋಜನೆ. ರಾಜ್ಯಗಳಿಗೆ ಹಂಚಿಕೆ ಮಾಡಲಾದ ವಿಶೇಷ ಕೇಂದ್ರ ನೆರವಿನ ನಿಧಿಗಳ ವಿವರಗಳು ಈ ಕೆಳಗಿನಂತಿವೆ:-

ರಾಜ್ಯಗಳು

ಬಿಡುಗಡೆಯಾದ ಹಣ (ಕೋಟಿ ರೂ.))

ಆಂಧ್ರ ಪ್ರದೇಶ

92.58

ಬಿಹಾರ್

439.15

ಛತ್ತೀಸ್ ಗಢ

834.81

ಜಾರ್ಖಂಡ್

1308.12

ಮಹಾರಾಷ್ಟ್ರ

65.83

ಒಡಿಶಾ

234.33

ತೆಲಂಗಾಣ

105.92

ಮಧ್ಯ ಪ್ರದೇಶ

22.50

ಕೇರಳ

2.50

ಮೊತ್ತ

3105.74

*****



(Release ID: 1885384) Visitor Counter : 136


Read this release in: English , Urdu