ಗೃಹ ವ್ಯವಹಾರಗಳ ಸಚಿವಾಲಯ
ರಾಷ್ಟ್ರೀಯ ಮಹತ್ವದ ಸಂಸ್ಥೆಗಳಿಗೆ ಆಯವ್ಯಯದ ಹಂಚಿಕೆ
Posted On:
20 DEC 2022 5:37PM by PIB Bengaluru
ಗೃಹ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಅಜಯ್ ಕುಮಾರ್ ಮಿಶ್ರಾ ಅವರಿಂದು ಲೋಕಸಭೆಯಲ್ಲಿ 'ರಾಷ್ಟ್ರೀಯ ಮಹತ್ವದ ಸಂಸ್ಥೆಗಳಿಗೆ ಆಯವ್ಯಯ ಹಂಚಿಕೆ' ಕುರಿತು ಕೇಳಿದ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ, ಕಳೆದ ಮೂರು ವರ್ಷಗಳಲ್ಲಿ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯ (ಆರ್.ಆರ್.ಯು) ಮತ್ತು ರಾಷ್ಟ್ರೀಯ ವಿಧಿವಿಜ್ಞಾನಗಳ ವಿಶ್ವವಿದ್ಯಾಲಯ (ಎನ್.ಎಫ್.ಎಸ್.ಯು)ಕ್ಕೆ ಆಯವ್ಯಯದಲ್ಲಿ ಮೀಸಲಿಟ್ಟಿರುವ ವಿವರಗಳನ್ನು ನೀಡಿದ್ದಾರೆ.
ಆದಾಯ ಮತ್ತು ಬಂಡವಾಳದ ವಿಘಟನೆಯೊಂದಿಗಿನ ವಿವರಗಳು ಈ ಕೆಳಗಿನಂತಿವೆ:
(ರೂ.ಕೋಟಿಗಳಲ್ಲಿ)
ವರ್ಷ
|
ಶೀರ್ಷಿಕೆ
|
ಆರ್.ಆರ್.ಯು
|
ಎನ್.ಎಫ್.ಎಸ್.ಯು.
|
2019-20*
|
ಆದಾಯ
|
-
|
-
|
|
ಬಂಡವಾಳ
|
-
|
-
|
2020-21
|
ಆದಾಯ
|
14.09
|
Nil
|
|
ಬಂಡವಾಳ
|
28.15
|
Nil
|
2021-22
|
ಆದಾಯ
|
30.00
|
77.00
|
|
ಬಂಡವಾಳ
|
40.00
|
10.00
|
*ಸೂಚನೆ: ಆರ್.ಆರ್.ಯು. ಮತ್ತು ಎನ್ಎಫ್ಎಸ್.ಯು. ಅನ್ನು 2020 ರಲ್ಲಿ ಸ್ಥಾಪಿಸಲಾಯಿತು; ಎನ್ಎಫ್ಎಸ್.ಯು. 2020-2021 ರಲ್ಲಿ ಕೇಂದ್ರದ ನೆರವು ಪಡೆಯಲಿಲ್ಲ.
2022 ಡಿಸೆಂಬರ್ 1 ರವರೆಗೆ ಆರ್.ಆರ್.ಯು ಮತ್ತು ಎನ್ಎಫ್ಎಸ್.ಯುಗೆ ಮಾಡಲಾದ ಹಂಚಿಕೆ ಈ ಕೆಳಗಿನಂತಿದೆ:
ವರ್ಷ
|
ಶೀರ್ಷಿಕೆ
|
ಆರ್.ಆರ್.ಯು
|
ಎನ್.ಎಫ್.ಎಸ್.ಯು
|
2022-23
|
ಆದಾಯ
|
22.12 (55.30%)
|
60.00 (100%)
|
|
ಬಂಡವಾಳ
|
18.00 (60%)
|
10.00 (100%)
|
ಎನ್ಎಫ್ಎಸ್.ಯು.ಗೆ ಸಂಬಂಧಿಸಿದಂತೆ 2022-2023ರ ಹಣಕಾಸು ವರ್ಷದ ಬಜೆಟ್ ಅಂದಾಜುಗಳನ್ನು ಪರಿಷ್ಕರಿಸುವ ಯಾವುದೇ ಪ್ರಸ್ತಾಪವಿಲ್ಲ. ಆರ್.ಆರ್.ಯು.ಗೆ ಸಂಬಂಧಿಸಿದಂತೆ 2022-2023ರ ಆರ್ಥಿಕ ವರ್ಷದಲ್ಲಿ ಬಂಡವಾಳ ಶೀರ್ಷಿಕೆಯಡಿ ತಾತ್ಕಾಲಿಕ ಪರಿಷ್ಕೃತ ಅಂದಾಜುಗಳು 40.00 ಕೋಟಿ ರೂ. ಆಗಿದ್ದು, ಸಂಸ್ಥೆಯ ಬಳಕೆಯ ಆಧಾರದ ಮೇಲೆ ನಿಗದಿಪಡಿಸಿದ ಕಾರ್ಯವಿಧಾನದ ಪ್ರಕಾರ ಹಣವನ್ನು ವಿತರಿಸಲಾಗುತ್ತದೆ.
ಪ್ರಸ್ತುತ ಮೂಲಸೌಕರ್ಯವು ಸಾಕಷ್ಟಿದ್ದರೂ, ಅಗತ್ಯಕ್ಕೆ ಅನುಗುಣವಾಗಿ ಮೂಲಸೌಕರ್ಯವನ್ನು ಮತ್ತಷ್ಟು ಮೇಲ್ದರ್ಜೆಗೇರಿಸುವುದು ನಿರಂತರ ಪ್ರಯತ್ನವಾಗಿದೆ.
*****
(Release ID: 1885250)