ಕಲ್ಲಿದ್ದಲು ಸಚಿವಾಲಯ
ಬಿಸಿಸಿಎಲ್ ಗಣಿಗಳ ಕಾರ್ಯಾಚರಣೆಯನ್ನು ಕಲ್ಲಿದ್ದಲು ಕಾರ್ಯದರ್ಶಿ ಪರಿಶೀಲಿಸಿದರು
Posted On:
17 DEC 2022 8:56PM by PIB Bengaluru
ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮೃತ್ ಲಾಲ್ ಮೀನಾ ಮತ್ತು ಸಿಐಎಲ್ ಅಧ್ಯಕ್ಷ ಶ್ರೀ ಪ್ರಮೋದ್ ಅಗರವಾಲ್ ಮತ್ತು ಬಿಸಿಸಿಎಲ್ ನ ಸಿ.ಎಂ.ಡಿ ಶ್ರೀ ಸಮೀರನ್ ದತ್ತಾ ಅವರೊಂದಿಗೆ ಬಿಸಿಸಿಎಲ್ ನ ಕುಸುಂಡಾ ಪ್ರದೇಶದ ಎನಾ ಫೈರ್ ಪ್ರಾಜೆಕ್ಟ್ ಗೆ ಇಂದು ಭೇಟಿ ನೀಡಿದರು. ನಂತರ ಶ್ರೀ ಮೀನಾ ಅವರು ಡಿಸಿ, ಧನ್ ಬಾದ್ ಮತ್ತು ಸಿಎಂಡಿ, ಬಿಸಿಸಿಎಲ್ ಅವರೊಂದಿಗೆ ಝರಿಯಾ ಮಾಸ್ಟರ್ ಪ್ಲ್ಯಾನ್ ನ ಪ್ರಗತಿಯನ್ನು ಪರಿಶೀಲಿಸಿದರು.

ಶ್ರೀ ಮೀನಾ ಅವರು ಮೂನಿಡಿಹ್ ಅಂಡರ್ ಗ್ರೌಂಡ್ ಮೈನ್, ಡಬ್ಲ್ಯೂಜೆ ಏರಿಯಾ, ಬಿಸಿಸಿಎಲ್ ಗೆ ಭೇಟಿ ನೀಡಿ ಮೂನಿಡಿಹ್ ವಾಷರಿ, ಸೆಂಡ್ರಾ-ಬನ್ಸ್ಜೋರಾದಲ್ಲಿನ ತಗ್ಗುಪ್ರದೇಶಗಳು, ಕುಜಾಮಾ ಕೊಲಿಯರಿಯಲ್ಲಿ ಬೆಂಕಿ ಪೀಡಿತ ಸ್ಥಳ ಮತ್ತು ಬೆಲ್ಗೇರಿಯಾದ ಜೆಎಂಪಿ ಪುನರ್ವಸತಿ ತಾಣವನ್ನು ಪರಿಶೀಲಿಸಿದರು.

ಕಾರ್ಯದರ್ಶಿಯವರು ಯೋಜನೆಯ ಬಾಧಿತ ಪ್ರದೇಶದ ಜನರೊಂದಿಗೆ ಸಂವಾದ ನಡೆಸಿದರು. ಸಿಐಎಲ್ ನ ಅಧ್ಯಕ್ಷರಾದ ಶ್ರೀ ಪ್ರಮೋದ್ ಅಗರ್ ವಾಲ್ ಅವರಲ್ಲದೆ, ಕಲ್ಲಿದ್ದಲು ಕಾರ್ಯದರ್ಶಿ ಶ್ರೀ ಸಮೀರನ್ ದತ್ತಾ, ಬಿಸಿಸಿಎಲ್ ನ ಸಿ.ಎಂ.ಡಿ. ಶ್ರೀ ಎಸ್.ಕೆ.ಸಿಂಗ್, ಡಿಟಿ (ಒಪಿ), ಬಿಸಿಸಿಎಲ್ ಮತ್ತು ಶ್ರೀ ಉದಯ್ ಎ ಕಾವೋಲೆ ಮತ್ತು ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ವಿವಿಧ ಗಣಿಗಳು ಮತ್ತು ಯೋಜನೆಗಳಿಗೆ ಪರಿಶೀಲನೆ ಮತ್ತು ಭೇಟಿ ನೀಡಿದ ನಂತರ, ಶ್ರೀ ಮೀನಾ ಅವರು ಬಿಸಿಸಿಎಲ್ ಆಡಳಿತ ಮಂಡಳಿಯೊಂದಿಗೆ ಕಂಪನಿಯ ಕಲ್ಲಿದ್ದಲು ಉತ್ಪಾದನಾ ಸಾಧನೆಗಳ ಬಗ್ಗೆ ಸಂಕ್ಷಿಪ್ತ ಚರ್ಚೆ ನಡೆಸಿದರು. " ಬಿಸಿಸಿಎಲ್ ನ ನಿರ್ವಹಣೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಗತಿ ಅಸಾಧಾರಣವಾಗಿದೆ. ಬಿಸಿಸಿಎಲ್ ಶೀಘ್ರದಲ್ಲೇ ಮೂನಿಡಿಹ್ ನಲ್ಲಿ ಸೀಮ್ 17 ಅನ್ನು ಉತ್ಖನನ ಮಾಡಲು ಯೋಜಿಸಿದೆ. ಕಲ್ಲಿದ್ದಲು ಹೊರತೆಗೆಯುವಿಕೆ ಮತ್ತು ರವಾನೆಯ ನಡುವಿನ ಸಮಯದ ಅಂತರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ, ರೈಲ್ವೆ ಮತ್ತು ಬಿಸಿಸಿಎಲ್ ಒಟ್ಟಾಗಿ ಕೆಲಸ ಮಾಡುತ್ತಿವೆ. ಇದು ಪರಿಸರದ ಮೇಲಿನ ಪರಿಣಾಮವನ್ನು ಕಡಿಮೆ ಮಾಡುತ್ತದೆ" ಎಂದು ಅವರು ಹೇಳಿದರು.
ಬಿಸಿಸಿಎಲ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಕಲ್ಲಿದ್ದಲು ಕಾರ್ಯದರ್ಶಿಯವರು ಶ್ರೀ ಎ.ಪಿ. ಪಾಂಡಾ, , ಪೂರ್ವ ಕೋಲ್ ಫೀಲ್ಡ್ಸ್ ನ ಸಿಎಂಡಿ ಮತ್ತು ನಿರ್ವಹಣೆಯ ಇತರ ಉನ್ನತ ಅಧಿಕಾರಿಗಳೊಂದಿಗೆ ಸಂಕ್ಷಿಪ್ತ ಪರಿಶೀಲನಾ ಮಾತುಕತೆ ನಡೆಸಿದರು.
*****
(Release ID: 1884502)
Visitor Counter : 168