ಕಾನೂನು ಮತ್ತು ನ್ಯಾಯ ಸಚಿವಾಲಯ

ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ಗಣಕೀಕರಣಕ್ಕಾಗಿ ಸರ್ಕಾರವು ದೇಶದಲ್ಲಿ ಇ-ಕೋರ್ಟ್ ಗಳ ಆಂತರಿಕ ಮಿಷನ್ ವಿಧಾನ ಯೋಜನೆಯನ್ನು ಪ್ರಾರಂಭಿಸಿದೆ, ಇದು ತಂತ್ರಜ್ಞಾನವನ್ನು ಬಳಸಿಕೊಂಡು ನ್ಯಾಯ ಲಭ್ಯತೆಯನ್ನು ಸುಧಾರಿಸುವ ಉದ್ದೇಶದಿಂದ ಡಿಜಿಟಲೀಕರಣವನ್ನು ಸಹ ಒಳಗೊಂಡಿದೆ.

Posted On: 16 DEC 2022 4:58PM by PIB Bengaluru

ಇಂದು ಲೋಕಸಭೆ ಕಲಾಪದಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕಾನೂನು ಮತ್ತು ನ್ಯಾಯ ಸಚಿವ ಶ್ರೀ ಕಿರಣ್ ರಿಜಿಜು, ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ಗಣಕೀಕರಣಕ್ಕಾಗಿ ಸರ್ಕಾರವು ದೇಶದಲ್ಲಿ ಇ-ಕೋರ್ಟ್ ಗಳ ಆಂತರಿಕ ಮಿಷನ್ ವಿಧಾನ ಯೋಜನೆಯನ್ನು ಪ್ರಾರಂಭಿಸಿದೆ ಎಂದು ತಿಳಿಸಿದ್ದಾರೆ. ಇದರಲ್ಲಿ ಡಿಜಿಟಲೀಕರಣವೂ ಸೇರಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗೆ ನ್ಯಾಯದಾನವನ್ನು ಸುಧಾರಿಸುವುದು ಇದರ ಉದ್ದೇಶವಾಗಿದೆ. ಇ-ಕೋರ್ಟ್‌ಗಳ ಒಂದನೇ ಹಂತವನ್ನು 2015ರಲ್ಲಿ ಮುಕ್ತಾಯಗೊಳಿಸಲಾಯಿತು. ಯೋಜನೆಯ 2ನೇ ಹಂತವು 2015 ರಲ್ಲಿ ಪ್ರಾರಂಭವಾಗಿ ಅದರ ಅಡಿಯಲ್ಲಿ 18,735 ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳನ್ನು ಇದುವರೆಗೆ ಗಣಕೀಕರಣಗೊಳಿಸಲಾಗಿದೆ ಎಂದರು. 

2011-2015 ರ ಯೋಜನೆಯ ಒಂದನೇ ಹಂತದಲ್ಲಿ, ವೆಚ್ಚವಾದ ಒಟ್ಟು 935 ಕೋಟಿ ರೂಪಾಯಿಗಳಲ್ಲಿ ಸರ್ಕಾರವು 639.41 ಕೋಟಿ ರೂಪಾಯಿ ವೆಚ್ಚ ಭರಿಸಿದೆ. 2015 ರಲ್ಲಿ ಪ್ರಾರಂಭವಾದ ಎರಡನೇ ಹಂತದ ಯೋಜನೆಯಲ್ಲಿ, ಖರ್ಚಾದ 1,670 ಕೋಟಿ ರೂಪಾಯಿಗಳಲ್ಲಿ ಯೋಜನೆಯ ಅನುಷ್ಠಾನದಲ್ಲಿ ತೊಡಗಿರುವ ವಿವಿಧ ಅನುಷ್ಠಾನ ಏಜೆನ್ಸಿಗಳಿಗೆ ಕಳೆದ ಮಾರ್ಚ್ ತಿಂಗಳವರೆಗೆ 1,668.43 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಭಾರತದ ಸರ್ವೋಚ್ಚ ನ್ಯಾಯಾಲಯದ ಇ-ಸಮಿತಿಯು ಒದಗಿಸಿದ ಮಾಹಿತಿಯ ಪ್ರಕಾರ ಒಟ್ಟು 18,735 ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳನ್ನು ಇ-ಕೋರ್ಟ್ ಗಳ ಯೋಜನೆಯಡಿ ಡಿಜಿಟಲೀಕರಣಗೊಳಿಸಲಾಗಿದೆ. ನ್ಯಾಯಾಲಯಗಳ ಐಸಿಟಿ ವರ್ಧನೆಯ ಕಡೆಗೆ, ಸುಪ್ರೀಂ ಕೋರ್ಟ್‌ನ ಇ-ಸಮಿತಿ ಮತ್ತು ನ್ಯಾಯಾಂಗ ಇಲಾಖೆಯಿಂದ ಇ-ಕೋರ್ಟ್ ಯೋಜನೆಯಡಿ ಈ ಕೆಳಗಿನ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ:

1.ವಿಸ್ತಾರ ಪ್ರದೇಶ ಸಂಪರ್ಕಜಾಲ(Wide Area Network-WAN) ಯೋಜನೆಯಡಿಯಲ್ಲಿ, 2,973 ನ್ಯಾಯಾಲಯಗಳ ನಿವೇಶನಗಳನ್ನು 10 ಎಂಬಿಪಿಎಸ್ ನಿಂದ 100 ಎಂಬಿಪಿಎಸ್ ಬ್ಯಾಂಡ್‌ ವೇಗದೊಂದಿಗೆ ನಿಯೋಜಿಸಲಾಗಿದೆ.

2.ಇ-ಕೋರ್ಟ್ ಸೇವೆಗಳಿಗೆ ಆಧಾರವಾಗಿರುವ ಪ್ರಕರಣ ಮಾಹಿತಿ ಸಾಫ್ಟ್‌ವೇರ್ (CIS) ಕ್ರೋಢೀಕೃತ ಉಚಿತ ಮತ್ತು ಮುಕ್ತ-ಮೂಲ ಸಾಫ್ಟ್‌ವೇರ್ (FOSS)ನ್ನು ಆಧರಿಸಿದೆ, ಇದನ್ನು NIC ಅಭಿವೃದ್ಧಿಪಡಿಸಿದೆ. ಪ್ರಸ್ತುತ ಸಿಐಎಸ್ ರಾಷ್ಟ್ರೀಯ ಕೋರ್ ಆವೃತ್ತಿ 3.2ನ್ನು ಜಿಲ್ಲಾ ನ್ಯಾಯಾಲಯಗಳಲ್ಲಿ ಅಳವಡಿಸಲಾಗುತ್ತಿದೆ. ಸಿಐಎಸ್ ರಾಷ್ಟ್ರೀಯ ಕೋರ್ ಆವೃತ್ತಿ 1.0ನ್ನು ಹೈಕೋರ್ಟ್‌ಗಳಿಗೆ ಅಳವಡಿಸಲಾಗುತ್ತಿದೆ.

3.ಹೊಸ ಸಾಫ್ಟ್‌ವೇರ್ ಪ್ಯಾಚ್ ಮತ್ತು ಕೋವಿಡ್-19 ನಿರ್ವಹಣೆಗಾಗಿ ಬಳಕೆದಾರರ ಕೈಪಿಡಿಯನ್ನು ಸಹ ಅಭಿವೃದ್ಧಿಪಡಿಸಲಾಗಿದೆ, ಇದು ಪ್ರಕರಣಗಳ ತ್ವರಿತವಾಗಿ, ಪರಿಣಾಮಕಾರಿಯಾಗಿ ವಿಲೇವಾರಿ ಮಾಡಲು ಸಹಾಯ ಮಾಡುತ್ತದೆ.

4. ರಾಷ್ಟ್ರೀಯ ನ್ಯಾಯಾಂಗ ಡೇಟಾ ಗ್ರಿಡ್ (NJDG) ಆದೇಶಗಳು, ತೀರ್ಪುಗಳು ಮತ್ತು ಪ್ರಕರಣಗಳ ದತ್ತಾಂಶವಾಗಿದೆ. ಇ-ಕೋರ್ಟ್ಸ್ ಪ್ರಾಜೆಕ್ಟ್ ಅಡಿಯಲ್ಲಿ ಆನ್‌ಲೈನ್ ವೇದಿಕೆಯಾಗಿ ರಚಿಸಲಾಗಿದೆ. ಇದು ದೇಶದ ಎಲ್ಲಾ ಗಣಕೀಕೃತ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಂಗ ಪ್ರಕ್ರಿಯೆಗಳು/ನಿರ್ಧಾರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ. ದಾವೆದಾರರು 21.74 ಕೋಟಿಗೂ ಹೆಚ್ಚು ಪ್ರಕರಣಗಳು ಮತ್ತು 19.80 ಕೋಟಿಗೂ ಹೆಚ್ಚು ಆದೇಶಗಳು / ತೀರ್ಪುಗಳಿಗೆ ಪ್ರಕರಣದ ಸ್ಥಿತಿ ಮಾಹಿತಿಯನ್ನು ನೀಡುತ್ತದೆ. NJDG ದತ್ತಾಂಶವನ್ನು ಹೊಂದಲು ಸ್ಥಳೀಯ ಸಂಸ್ಥೆಗಳು ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಸಾಂಸ್ಥಿಕ ದಾವೆಗಳಿಗೆ ಅವಕಾಶ ನೀಡಲು 2020ರಲ್ಲಿ ಮುಕ್ತ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್(API)ಗಳನ್ನು ಪರಿಚಯಿಸಲಾಗಿದೆ.

5.ಇ-ಕೋರ್ಟ್ಸ್ ಯೋಜನೆಯ ಭಾಗವಾಗಿ, ಎಸ್‌ಎಂಎಸ್ ಪುಶ್ ಮತ್ತು ಪುಲ್ (ದಿನಕ್ಕೆ 2 ಲಕ್ಷ ಎಸ್‌ಎಂಎಸ್ ಕಳುಹಿಸಲಾಗಿದೆ), ಇಮೇಲ್ (2,50,000 ಕಳುಹಿಸಲಾಗಿದೆ) ಮೂಲಕ ವಕೀಲರು/ಕಕ್ಷಿದಾರರು ಪ್ರಕರಣದ ಸ್ಥಿತಿ, ಕಾರಣ ಪಟ್ಟಿಗಳು, ತೀರ್ಪುಗಳು ಇತ್ಯಾದಿಗಳ ನೈಜ ಸಮಯದ ಮಾಹಿತಿಯನ್ನು ಒದಗಿಸಲು 7 ವೇದಿಕೆಗಳನ್ನು ರಚಿಸಲಾಗಿದೆ. ಇ-ಕೋರ್ಟ್ ಗಳ ಸೇವೆಗಳ ಪೋರ್ಟಲ್ (35 ಲಕ್ಷ ಪ್ರತಿನಿತ್ಯ ಹಿಟ್ಸ್), ಜೆಎಸ್ ಸಿ (ನ್ಯಾಯಾಂಗ ಸೇವಾ ಕೇಂದ್ರಗಳು) ಮತ್ತು ಇನ್ಫೋ ಕಿಯೋಸ್ಕ್ ಗಳು. ಹೆಚ್ಚುವರಿಯಾಗಿ, ಎಲೆಕ್ಟ್ರಾನಿಕ್ ಕೇಸ್ ಮ್ಯಾನೇಜ್‌ಮೆಂಟ್ ಟೂಲ್‌ಗಳನ್ನು (ECMT) ವಕೀಲರಿಗಾಗಿ ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ರಚಿಸಲಾಗಿದೆ (31 ಅಕ್ಟೋಬರ್ 2022 ರವರೆಗೆ ಒಟ್ಟು 1.50 ಕೋಟಿ ಡೌನ್‌ಲೋಡ್‌ಗಳು) ಮತ್ತು ನ್ಯಾಯಾಧೀಶರಿಗಾಗಿ JustIS ಅಪ್ಲಿಕೇಶನ್ (31ನೇ ನವೆಂಬರ್ 2022 ರವರೆಗೆ 17,709 ಡೌನ್‌ಲೋಡ್‌ಗಳು). JustIS ಮೊಬೈಲ್ ಅಪ್ಲಿಕೇಶನ್ ಈಗ iOS ನಲ್ಲಿಯೂ ಲಭ್ಯವಿದೆ.

6. ಟ್ರಾಫಿಕ್ ಚಲನ್ ಪ್ರಕರಣಗಳನ್ನು ನಿರ್ವಹಿಸಲು 17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 21 ವರ್ಚುವಲ್ ಕೋರ್ಟ್‌ಗಳನ್ನು ಕಾರ್ಯಗತಗೊಳಿಸಲಾಗಿದೆ. 2.30 ಕೋಟಿಗೂ ಹೆಚ್ಚು ಪ್ರಕರಣಗಳನ್ನು 21 ವರ್ಚುವಲ್ ಕೋರ್ಟ್‌ಗಳು ನಿರ್ವಹಿಸಿವೆ. 31 ಲಕ್ಷಕ್ಕೂ ಹೆಚ್ಚು (31,67,080) ಪ್ರಕರಣಗಳಲ್ಲಿ ಮೊನ್ನೆ ಡಿಸೆಂಬರ್ 1ರವರೆಗೆ 337.42 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. 

7. ಭಾರತದ ಸರ್ವೋಚ್ಚ ನ್ಯಾಯಾಲಯವು 2,97,435 ವಿಚಾರಣೆಗಳನ್ನು ನಡೆಸುವ ಮೂಲಕ (ಲಾಕ್‌ಡೌನ್ ಅವಧಿಯ ಆರಂಭದಿಂದ ಕಳೆದ ಸೆಪ್ಟೆಂಬರ್ 3ರವರೆಗೆ) ಜಾಗತಿಕ ಮಟ್ಟದಲ್ಲಿ ನಾಯಕನಾಗಿ ಹೊರಹೊಮ್ಮಿದೆ. ಹೈಕೋರ್ಟ್‌ಗಳು (75,80,347 ಪ್ರಕರಣಗಳು ಮತ್ತು ಅಧೀನ ನ್ಯಾಯಾಲಯಗಳು 1,65,20,791 ಪ್ರಕರಣಗಳು) ಸೆಪ್ಟೆಂಬರ್ 3ರವರೆಗೆ 2.41 ಕೋಟಿ ವರ್ಚುವಲ್ ವಿಚಾರಣೆಗಳನ್ನು ನಡೆಸಿವೆ. ವಿಸಿ ಸೌಲಭ್ಯಗಳನ್ನು 3,240 ನ್ಯಾಯಾಲಯ ಸಂಕೀರ್ಣಗಳು ಮತ್ತು ಅನುಗುಣವಾದ 1,272 ಜೈಲುಗಳ ನಡುವೆ ಸಕ್ರಿಯಗೊಳಿಸಲಾಗಿದೆ. 2,506 ವಿಸಿ ಕ್ಯಾಬಿನ್‌ಗಳಿಗೆ ಮತ್ತು 14,443 ಕೋರ್ಟ್ ರೂಮ್‌ಗಳಿಗೆ ವಿಸಿ ಉಪಕರಣಗಳಿಗೆ ಹಣವನ್ನು ಬಿಡುಗಡೆ ಮಾಡಲಾಗಿದೆ. ವರ್ಚುವಲ್ ವಿಚಾರಣೆಗಳನ್ನು ಉತ್ತೇಜಿಸಲು 1,500 VC ಪರವಾನಗಿಗಳನ್ನು ಸಂಗ್ರಹಿಸಲಾಗಿದೆ. 2017-18ನೇ ಸಾಲಿನಲ್ಲಿ 2017-18ನೇ ಸಾಲಿನಲ್ಲಿ 1,732 ಡಾಕ್ಯುಮೆಂಟ್ ವಿಶುವಲೈಜರ್‌ಗಳ ಖರೀದಿಗೆ 7.60 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

8. ನವೀಕರಿಸಿದ ವೈಶಿಷ್ಟ್ಯಗಳೊಂದಿಗೆ ಕಾನೂನು ಪತ್ರಗಳ ಎಲೆಕ್ಟ್ರಾನಿಕ್ ಫೈಲಿಂಗ್‌ಗಾಗಿ ಹೊಸ ಇ-ಫೈಲಿಂಗ್ ವ್ಯವಸ್ಥೆಯನ್ನು (ಆವೃತ್ತಿ 3.0) ಹೊರತರಲಾಗಿದೆ. ಕರಡು ಇ-ಫೈಲಿಂಗ್ ನಿಯಮಗಳನ್ನು ರೂಪಿಸಲಾಗಿದೆ. ಅವುಗಳ ಅಳವಡಿಕೆಗಾಗಿ ಹೈಕೋರ್ಟ್‌ಗಳಿಗೆ ರವಾನಿಸಲಾಗಿದೆ. ಕಳೆದ ಅಕ್ಟೋಬರ್ 31ರಂತೆ 19 ಹೈಕೋರ್ಟ್‌ಗಳು ಇ-ಫೈಲಿಂಗ್‌ನ ಮಾದರಿ ನಿಯಮಗಳನ್ನು ಅಳವಡಿಸಿಕೊಂಡಿವೆ.

9.ಪ್ರಕರಣಗಳ ಇ-ಫೈಲಿಂಗ್‌ಗೆ ನ್ಯಾಯಾಲಯದ ಶುಲ್ಕಗಳು, ದಂಡಗಳನ್ನು ಒಳಗೊಂಡಿರುವ ಶುಲ್ಕಗಳ ಎಲೆಕ್ಟ್ರಾನಿಕ್ ಪಾವತಿಯ ಆಯ್ಕೆಯ ಅಗತ್ಯವಿರುತ್ತದೆ, ಇವುಗಳನ್ನು ಏಕೀಕೃತ ನಿಧಿಗೆ ನೇರವಾಗಿ ಪಾವತಿಸಲಾಗುತ್ತದೆ. ಒಟ್ಟು 16 ಹೈಕೋರ್ಟ್‌ಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಇ-ಪೇಮೆಂಟ್‌ಗಳನ್ನು ಜಾರಿಗೆ ತಂದಿವೆ. ಅಕ್ಟೋಬರ್ 31ರವರೆಗೆ 22 ಹೈಕೋರ್ಟ್‌ಗಳಲ್ಲಿ ಕೋರ್ಟ್ ಶುಲ್ಕ ಕಾಯಿದೆಯನ್ನು ತಿದ್ದುಪಡಿ ಮಾಡಲಾಗಿದೆ.

10. ರಾಷ್ಟ್ರೀಯ ಸೇವೆ ಮತ್ತು ಎಲೆಕ್ಟ್ರಾನಿಕ್ ಪ್ರಕ್ರಿಯೆಗಳ ಪತ್ತೆಹಚ್ಚುವಿಕೆಯನ್ನು(NSTEP) ತಂತ್ರಜ್ಞಾನ ಸಕ್ರಿಯಗೊಳಿಸಿದ ಪ್ರಕ್ರಿಯೆ ಸೇವೆ ಮತ್ತು ಸಮನ್ಸ್‌ಗಳನ್ನು ನೀಡುವುದಕ್ಕಾಗಿ ಪ್ರಾರಂಭಿಸಲಾಗಿದೆ. ಇದನ್ನು ಪ್ರಸ್ತುತ 28 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಳವಡಿಸಲಾಗಿದೆ.

11.ನ್ಯಾಯಪೀಠ, ಪ್ರಕರಣದ ಪ್ರಕಾರ, ಪ್ರಕರಣ ಸಂಖ್ಯೆ, ವರ್ಷ, ಅರ್ಜಿದಾರ/ಪ್ರತಿವಾದಿಯ ಹೆಸರು, ನ್ಯಾಯಾಧೀಶರ ಹೆಸರು, ಕಾಯಿದೆ, ವಿಭಾಗ, ನಿರ್ಧಾರ: ದಿನಾಂಕದಿಂದ ದಿನಾಂಕ ಮತ್ತು ಪೂರ್ಣ ಪಠ್ಯ ಹುಡುಕಾಟದಂತಹ ವೈಶಿಷ್ಟ್ಯಗಳೊಂದಿಗೆ ಹೊಸ “ತೀರ್ಪು ಹುಡುಕಾಟ” ಪೋರ್ಟಲ್ ನ್ನು ಪ್ರಾರಂಭಿಸಲಾಗಿದೆ. ಈ ಸೌಲಭ್ಯವನ್ನು ಎಲ್ಲರಿಗೂ ಉಚಿತವಾಗಿ ನೀಡಲಾಗುತ್ತಿದೆ.

12. ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ (NJDG) ಮೂಲಕ ರಚಿಸಲಾದ ಅಂಕಿಅಂಶವನ್ನು ಪರಿಣಾಮಕಾರಿಯಾಗಿ ಬಳಸಲು ಮತ್ತು ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವಂತೆ ಮಾಡಲು ನ್ಯಾಯ ಗಡಿಯಾರಗಳು ಎಂಬ 38 ಎಲ್ಇಡಿ ಪ್ರದರ್ಶನ ಸಂದೇಶ ಸೂಚನೆ ಬೋರ್ಡ್ ವ್ಯವಸ್ಥೆಯನ್ನು 24 ಉಚ್ಚ ನ್ಯಾಯಾಲಯಗಳಲ್ಲಿ ಸ್ಥಾಪಿಸಲಾಗಿದೆ.

13. ಇ-ಫೈಲಿಂಗ್ ಮತ್ತು ಇ-ಕೋರ್ಟ್ ಗಳ ಸೇವೆಗಳ ವ್ಯಾಪಕ ಅರಿವನ್ನು ಮೂಡಿಸಲು ಮತ್ತು ಕೌಶಲ್ಯ ವಿಭಜನೆಯನ್ನು ಪರಿಹರಿಸಲು, ಇ-ಫೈಲಿಂಗ್ ಕುರಿತು ಕೈಪಿಡಿ ಮತ್ತು ಇ-ಫೈಲಿಂಗ್ ಗೆ ನೋಂದಾಯಿಸುವುದು ಹೇಗೆ" ಎಂಬ ಕೈಪಿಡಿಯನ್ನು ಇಂಗ್ಲಿಷ್, ಹಿಂದಿ ಮತ್ತು 11 ಪ್ರಾದೇಶಿಕ ಭಾಷೆಗಳಲ್ಲಿ ವಕೀಲರಿಗೆ ಬಳಕೆಗಾಗಿ ಲಭ್ಯವಾಗುವಂತೆ ಮಾಡಲಾಗಿದೆ. ಇ-ಫೈಲಿಂಗ್ ಕುರಿತು ವೀಡಿಯೊ ಟ್ಯುಟೋರಿಯಲ್‌ಗಳೊಂದಿಗೆ e ಕೋರ್ಟ್ ಸೇವೆಗಳ ಹೆಸರಿನಲ್ಲಿ YouTube ಚಾನಲ್ ನ್ನು ರಚಿಸಲಾಗಿದೆ. ಭಾರತದ ಸರ್ವೋಚ್ಚ ನ್ಯಾಯಾಲಯದ ಇ-ಸಮಿತಿಯು ICT ಸೇವೆಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ. ಈ ಕಾರ್ಯಕ್ರಮಗಳು ಹೈಕೋರ್ಟ್ ನ್ಯಾಯಾಧೀಶರು, ಜಿಲ್ಲಾ ನ್ಯಾಯಾಂಗದ ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿ, ನ್ಯಾಯಾಧೀಶರು/ಡಿಎಸ್ ಎ ನಡುವೆ ಮುಖ್ಯ ತರಬೇತುದಾರರು, ಹೈಕೋರ್ಟ್‌ಗಳ ತಾಂತ್ರಿಕ ಸಿಬ್ಬಂದಿ ಮತ್ತು ವಕೀಲರು ಸೇರಿದಂತೆ ಸುಮಾರು 5,13,080 ಮಧ್ಯಸ್ಥಗಾರರನ್ನು ಒಳಗೊಂಡಿವೆ.

ಎಲೆಕ್ಟ್ರಾನಿಕ್ ವಹಿವಾಟು ಒಟ್ಟುಗೂಡಿಸುವಿಕೆ ಮತ್ತು ವಿಶ್ಲೇಷಣೆ ಪದರ (eTaal) ಪೋರ್ಟಲ್‌ನಲ್ಲಿ ಪ್ರಕಟವಾದ ಮಾಹಿತಿಯ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಒಟ್ಟು 639 ಕೋಟಿ ಇ-ವಹಿವಾಟುಗಳೊಂದಿಗೆ ಇ-ಕೋರ್ಟ್‌ಗಳು ಭಾರತದ ಟಾಪ್ 5 ಎಂಎಂಪಿಗಳಲ್ಲಿ ಮುಂಚೂಣಿಯಲ್ಲಿವೆ.

******



(Release ID: 1884327) Visitor Counter : 490


Read this release in: English , Urdu