ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

​​​​​​​ದೇಶದಲ್ಲಿ ಸಿ.ಎನ್. ಜಿ ಜಾಲ ಸೌಲಭ್ಯ

Posted On: 12 DEC 2022 6:42PM by PIB Bengaluru

ಸಿ.ಎನ್.ಜಿ ಸ್ಟೇಷನ್ ಗಳ  ಸ್ಥಾಪನೆಯು ನಗರ ಅನಿಲ ವಿತರಣಾ (ಸಿಜಿಡಿ) ಜಾಲ ಅಭಿವೃದ್ಧಿಯ ಭಾಗವಾಗಿದೆ ಮತ್ತು ಪೆಟ್ರೋಲಿಯಂ ಹಾಗು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (ಪಿ.ಎನ್.ಜಿ.ಆರ್.ಬಿ.)ಯಿಂದ ಅಧಿಕೃತಗೊಂಡ ಘಟಕಗಳು ಇದನ್ನು ನಿರ್ವಹಿಸುತ್ತಿವೆ. 11 ಎ ಸಿಜಿಡಿ ಹರಾಜು ಸುತ್ತು ಪೂರ್ಣಗೊಂಡ ನಂತರ, 295 ಭೌಗೋಳಿಕ ಪ್ರದೇಶಗಳ ಜನಸಂಖ್ಯೆಯ ಸುಮಾರು 98% ಮತ್ತು ದೇಶದ 28 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಸುಮಾರು ಸುಮಾರು 630 ಜಿಲ್ಲೆಗಳಲ್ಲಿ ಹರಡಿರುವ ಎಲ್ಲಾ ನಗರಗಳ ಸಹಿತ ದೇಶದ ಒಟ್ಟು ಭೌಗೋಳಿಕ ಪ್ರದೇಶದ 88% ಪ್ರದೇಶವು ಸಿಜಿಡಿ ಜಾಲದ ಅಡಿಯಲ್ಲಿ ಬರಲಿವೆ.

30.09.2022 ರವರೆಗೆ, ಸಿಎನ್ ಜಿ ಪೂರೈಕೆಗಾಗಿ 221 ಜಿಎಗಳನ್ನು(ಭೌಗೋಳಿಕ ಪ್ರದೇಶಗಳನ್ನು)  ಕಾರ್ಯಾನುಷ್ಠಾನಗೊಳಿಸಲಾಗಿದೆ.  ಈ 221 ಜಿಎಗಳಲ್ಲಿನ ನಗರಗಳಿಗೆ ಅನಿಲ ಪೂರೈಕೆಯನ್ನು ಪಿ.ಎನ್.ಜಿ.ಆರ್.ಬಿ ಕಡ್ಡಾಯಗೊಳಿಸಿದ ಕನಿಷ್ಠ ಕಾಮಗಾರಿ ಕಾರ್ಯಕ್ರಮ (ಎಂಡಬ್ಲ್ಯುಪಿ) ಗುರಿಗಳು ಮತ್ತು ತಾಂತ್ರಿಕ-ವಾಣಿಜ್ಯ ಕಾರ್ಯಸಾಧ್ಯತೆಯ ಪ್ರಕಾರ ಮಾಡಲಾಗುತ್ತಿದೆ.

ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ದ್ರವೀಕೃತ ನೈಸರ್ಗಿಕ ಅನಿಲ (ಎಲ್.ಎನ್.ಜಿ), ಹಸಿರು ಹೈಡ್ರೋಜನ್, ಸಂಕುಚಿತ ಜೈವಿಕ ಅನಿಲ (ಸಿಬಿಜಿ), ಎಥೆನಾಲ್ ಇತ್ಯಾದಿಗಳನ್ನು ಒಳಗೊಂಡ ಪರ್ಯಾಯ ಇಂಧನಗಳನ್ನು ಸರ್ಕಾರ ಉತ್ತೇಜಿಸುತ್ತಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಹಾಯಕ  ಸಚಿವರಾದ ಶ್ರೀ ರಾಮೇಶ್ವರ್ ತೇಲಿ ಅವರು ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ಒದಗಿಸಿದರು.

*****



(Release ID: 1882960) Visitor Counter : 99


Read this release in: English , Urdu