ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಪರಿಸರ ಸಮತೋಲನದೊಂದಿಗೆ ನಗರಾಭಿವೃದ್ಧಿ
Posted On:
12 DEC 2022 6:42PM by PIB Bengaluru
ನಗರಾಭಿವೃದ್ಧಿಯು ರಾಜ್ಯದ ವಿಷಯವಾಗಿದೆ. ಆದಾಗ್ಯೂ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ತನ್ನ ಅಭಿಯಾನಗಳ ಮೂಲಕ ಅಂದರೆ, ಅಟಲ್ ಮಿಷನ್ ಫಾರ್ ರಿಜುವೇನೇಷನ್ ಅಂಡ್ ಅರ್ಬನ್ ಟ್ರಾನ್ಸ್ ಫಾರ್ಮೇಷನ್ (ಅಮೃತ್) 2.0, ಸ್ಮಾರ್ಟ್ ಸಿಟಿ ಅಭಿಯಾನ (ಎಸ್.ಸಿಎಂ), ಸ್ವಚ್ಛ ಭಾರತ ಅಭಿಯಾನ ನಗರ (ಎಸ್.ಬಿಎಂ-ಯು) 2.0, ಪ್ರಧಾನ ಮಂತ್ರಿ ವಸತಿ ಯೋಜನೆ-ನಗರ (ಪಿಎಂಎವೈ-ಯು) ಮತ್ತು ನಗರ ಸಾರಿಗೆ ಅಡಿಯಲ್ಲಿ ಯೋಜನೆಗಳ ಮೂಲಕ ನಗರಾಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಬೆಂಬಲಿಸುತ್ತದೆ. ಈ ಯೋಜನೆಗಳ ಮೂಲಕ ಕೈಗೊಂಡ ವಿವಿಧ ಉಪಕ್ರಮಗಳು ಸುಸ್ಥಿರ ಅಭಿವೃದ್ಧಿಗಾಗಿ ಪರಿಸರ ಸಮತೋಲನವನ್ನು ಉತ್ತಮಗೊಳಿಸುವ ಮೂಲಕ ನಗರ ಮೂಲಸೌಕರ್ಯಗಳನ್ನು ಒದಗಿಸುವ, ಹಸಿರು ಪ್ರದೇಶ, ನೈರ್ಮಲ್ಯ ಇತ್ಯಾದಿಗಳನ್ನು ಅಭಿವೃದ್ಧಿಪಡಿಸುವುದೇ ಮೊದಲಾದವುಗಳ ಮೇಲೆ ಕೇಂದ್ರೀಕರಿಸುತ್ತದೆ.
ವಸತಿ ಮತ್ತು ನಗರ ವ್ಯವಹಾರಗಳ ಖಾತೆ ರಾಜ್ಯ ಸಚಿವರಾದ ಶ್ರೀ ಕೌಶಲ್ ಕಿಶೋರ್ ಅವರು ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.
*****
RKJ/M
(Release ID: 1882952)
Visitor Counter : 157