ಸಹಕಾರ ಸಚಿವಾಲಯ
azadi ka amrit mahotsav

ಗ್ರಾಮ ಮಟ್ಟದಲ್ಲಿ ಸಹಕಾರ ಸಂಘಗಳು

Posted On: 07 DEC 2022 5:11PM by PIB Bengaluru

ದೇಶದಲ್ಲಿ ಸುಮಾರು 95,000 ಪ್ರಾಥಮಿಕ ಕೃಷಿ ಸಾಲ ಸಂಘಗಳಿವೆ (ಪಿ.ಎ.ಸಿ.ಎಸ್.); 1,99,182 ಪ್ರಾಥಮಿಕ ಹಾಲು ಉತ್ಪಾದಕರ(ಡೈರಿ) ಸಹಕಾರ ಸಂಘಗಳು ಮತ್ತು 25,297 ಪ್ರಾಥಮಿಕ ಮೀನುಗಾರಿಕಾ ಸಹಕಾರ ಸಂಘಗಳು 2,55,643 ಪಂಚಾಯತ್‌ಗಳು ಮತ್ತು 6,62,750 ಗ್ರಾಮಗಳಿವೆ.  ವ್ಯಾಪಾರಗಳ ಹಂಚಿಕೆಯ ನಿಯಮ, 1961 ರ ಪ್ರಕಾರ, ಕೇಂದ್ರ ಸಹಕಾರ ಸಚಿವಾಲಯದ ಆದೇಶಗಳಲ್ಲಿ "ದೇಶದಲ್ಲಿ ಸಹಕಾರ ಚಳುವಳಿಯನ್ನು ಬಲಪಡಿಸುವುದು ಮತ್ತು ತಳಮಟ್ಟದವರೆಗೆ ಅದರ ವ್ಯಾಪ್ತಿಯನ್ನು ಆಳಗೊಳಿಸುವುದು" ಇದೂ ಕೂಡಾ ಒಂದಾಗಿದೆ.

ಹೊಸ ಸಹಕಾರಿ ಸಂಘಗಳಿಗೆ ತಮ್ಮ ದೈನಂದಿನ ವ್ಯವಹಾರವನ್ನು ನಿರ್ವಹಿಸಲು ಹೆಚ್ಚುವರಿ ಮಾನವಶಕ್ತಿಯ ಅಗತ್ಯವಿರುತ್ತದೆ, ಇದು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ಮೇಲಾಗಿ, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ತಮ್ಮ ರಾಜ್ಯ ಸಹಕಾರ ಸಂಘಗಳ ಕಾಯ್ದೆಗೆ ಅನುಗುಣವಾಗಿ ಅಳವಡಿಸಿಕೊಳ್ಳಲು ವಿವರವಾದ ಮಧ್ಯಸ್ಥಗಾರರ ಸಮಾಲೋಚನೆಗಳ ನಂತರ, ಪಿ.ಎ.ಸಿ.ಎಸ್.ಗಳಿಗಾಗಿ ಮಾದರಿ ಉಪನಿಯಮ(ಬೈಲಾ) ಕಾನೂನುಗಳನ್ನು ಕೇಂದ್ರ ಸಹಕಾರ ಸಚಿವಾಲಯವು ಸಿದ್ಧಪಡಿಸಿದೆ. ಪಿ.ಎ.ಸಿ.ಎಸ್.ಗಳ ಈ ಮಾದರಿ ಉಪನಿಯಮ(ಬೈಲಾ)ಗಳು ಡೈರಿ, ಮೀನುಗಾರಿಕೆ, ಹೂಗಾರಿಕೆ, ಗೋಡೌನ್‌ಗಳ ಸ್ಥಾಪನೆ, ಆಹಾರ ಧಾನ್ಯಗಳ ಸಂಗ್ರಹಣೆ, ರಸಗೊಬ್ಬರಗಳು, ಬೀಜಗಳು, ಅಡುಗೆ ಅನಿಲ  / ಪೆಟ್ರೋಲ್ / ಸಿ.ಎನ್.ಜಿ. ವಿತರಣಾ ಸಂಸ್ಥೆ, ಬ್ಯಾಂಕಿಂಗ್ ಕರೆಸ್ಪಾಂಡೆಂಟ್‌ಗಳು, ಸಾಮಾನ್ಯ ಸೇವಾ ಕೇಂದ್ರಗಳು ಮುಂತಾದ 25 ಕ್ಕೂ ಹೆಚ್ಚು ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಪಿ.ಎ.ಸಿ.ಎಸ್.ಗಳ ಇತ್ಯಾದಿ ಚಟುವಟಿಕೆಗಳ ಹೆಚ್ಚಳದೊಂದಿಗೆ, ಅವರು ದೇಶದಾದ್ಯಂತ ಪಂಚಾಯತ್/ಗ್ರಾಮ ಮಟ್ಟದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ.

ಇಂದು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಕೇಂದ್ರ ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇದನ್ನು ಹೇಳಿದ್ದಾರೆ.

*****


(Release ID: 1881618) Visitor Counter : 585
Read this release in: English , Urdu