ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
2023ರಲ್ಲಿ ಭಾರತದಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯ ಸಿದ್ಧತೆಗಳ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ ಶ್ರೀ ಧರ್ಮೇಂದ್ರ ಪ್ರಧಾನ್
ಭಾರತದ ಜಿ 2೦ ಅಧ್ಯಕ್ಷತೆಯು ಭಾರತದ ಶಿಕ್ಷಣದ ಮಾದರಿಯನ್ನು ಪ್ರಸ್ತುತಪಡಿಸಲು ಒಂದು ಅವಕಾಶವಾಗಿದ್ದು, ಇದು ಎಲ್ಲಾ ಉದಯೋನ್ಮುಖ ಆರ್ಥಿಕತೆಗಳಿಗೆ ಜಾಗತಿಕ ಮಾದರಿಯಾಗುತ್ತದೆ.
ಜಿ 20 ಶಿಕ್ಷಣ ಕಾರ್ಯ ಗುಂಪಿನ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು, ಶೈಕ್ಷಣಿಕ ಮತ್ತು ಕೌಶಲ್ಯ ಸಂಸ್ಥೆಗಳನ್ನು ತೊಡಗಿಸಿಕೊಳ್ಳಲು ಶ್ರೀ ಧರ್ಮೇಂದ್ರ ಪ್ರಧಾನ್ ಕರೆ
Posted On:
16 NOV 2022 6:52PM by PIB Bengaluru
2023ರಲ್ಲಿ ಭಾರತದಲ್ಲಿ ನಡೆಯಲಿರುವ ಮುಂಬರುವ ಜಿ 20 ಶೃಂಗಸಭೆಯ ಸಿದ್ಧತೆಗಳ ಬಗ್ಗೆ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಇಂದು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೌಶಲ್ಯ ಅಭಿವೃದ್ಧಿ ಮತ್ತು ಎಂಇಐಟಿವೈ ಖಾತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್; ಶಿಕ್ಷಣ ಖಾತೆ ರಾಜ್ಯ ಸಚಿವರುಗಳಾದ ಶ್ರೀಮತಿ ಅನ್ನಪೂರ್ಣ ದೇವಿ, ರಾಜ್ ಕುಮಾರ್ ರಂಜನ್ ಸಿಂಗ್ ಮತ್ತು ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ, ಶ್ರೀ ಪ್ರಧಾನ್ ಅವರು ಶಿಕ್ಷಣವು ಜಿ 20 ರ ಆದ್ಯತೆಯ ಕ್ಷೇತ್ರಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಜಿ 20 ಶೃಂಗಸಭೆಗೆ ಮುಂಚಿತವಾಗಿ ವ್ಯಾಪಕ ಸಿದ್ಧತೆಗಳಿಗೆ ಕರೆ ನೀಡಿದ ಅವರು, ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯು ವಿಶೇಷವಾಗಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪ್ರಾರಂಭದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಭಾರತ ಏನು ಸಾಧಿಸಿದೆ ಎಂಬುದನ್ನು ಹಂಚಿಕೊಳ್ಳಲು ಒಂದು ಅವಕಾಶವಾಗಿದೆ ಎಂದು ಹೇಳಿದರು. ಭಾರತವು ಶಿಕ್ಷಣದ ಹೊಸ ಮಾದರಿಯನ್ನು ಪ್ರಸ್ತುತಪಡಿಸಲಿದೆ, ಇದು ಎಲ್ಲಾ ಉದಯೋನ್ಮುಖ ಆರ್ಥಿಕತೆಗಳಿಗೆ ಜಾಗತಿಕ ಮಾದರಿಯಾಗಬಹುದು ಎಂದು ಅವರು ಹೇಳಿದರು. ಶೃಂಗಸಭೆಯನ್ನು ಯಶಸ್ವಿಗೊಳಿಸಲು ವಿದ್ಯಾರ್ಥಿಗಳು, ಶೈಕ್ಷಣಿಕ ಮತ್ತು ಕೌಶಲ್ಯ ಸಂಸ್ಥೆಗಳನ್ನು ಸೇರಿಸಿಳ್ಳುವಂತೆ ಅವರು ಕರೆ ನೀಡಿದರು. ಭಾರತೀಯ ಜ್ಞಾನ ವ್ಯವಸ್ಥೆಯ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸಲು ಮತ್ತು ವಿಶ್ವಕ್ಕೆ ಭಾರತದ ಕೊಡುಗೆಯ ಬಗ್ಗೆ ಪಾಲ್ಗೊಳ್ಳುವವರಿಗೆ ಅರಿವು ಮೂಡಿಸುವಂತೆಯೂ ಸಚಿವರು ಸಲಹೆ ನೀಡಿದರು.
ಶಿಕ್ಷಣ ಮತ್ತು ಟಿವಿಇಟಿಯಲ್ಲಿ ಡಿಜಿಟಲ್ ತಂತ್ರಜ್ಞಾನದ ಪಾತ್ರ ಮತ್ತು ಕಾರ್ಯದ ಭವಿಷ್ಯ ಕುರಿತಂತೆ ಶಿಕ್ಷಣ ಕಾರ್ಯ ಗುಂಪು 2023 ರ ಜೂನ್ 28 ರಂದು ಜಿ 20 ಶಿಕ್ಷಣ ಸಚಿವರ ಸಭೆಯನ್ನು ನಡೆಸಲಿದೆ. ಜಿ 20 ಇಡಿ.ಡಬ್ಲ್ಯು.ಜಿ.ವರದಿ, ಉತ್ತಮ ರೂಢಿಗಳ ಸಂಗ್ರಹ ಮತ್ತು ಜಿ 20 ಶಿಕ್ಷಣ ಸಚಿವರ ಘೋಷಣೆಗೆ ಕಾರಣವಾಗುವ ಎರಡು ವಿಚಾರ ಸಂಕಿರಣದ ವಿಷಯಗಳ ವರದಿಯನ್ನು ಹೊರತರಲಿದೆ. ಎನ್.ಸಿ.ಇ.ಆರ್.ಟಿ., ಐಐಎಸ್ಸಿ, ಎನ್ಎಸ್.ಡಿ.ಸಿ, ಐಐಟಿ ಮದ್ರಾಸ್, ಐಐಟಿ ಹೈದರಾಬಾದ್, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ, ಯುನೆಸ್ಕೋ, ಯುನಿಸೆಫ್, ಒಇಸಿಡಿ ಮುಂತಾದ ಸಂಸ್ಥೆಗಳು ವಿವಿಧ ಆದ್ಯತೆಯ ಕ್ಷೇತ್ರಗಳ ಅಡಿಯಲ್ಲಿ ಜ್ಞಾನದ ಪಾಲುದಾರರಾಗಿವೆ.
ಭಾರತವು 2022ರ ಡಿಸೆಂಬರ್ 1 ರಿಂದ ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ ಮತ್ತು ಈ ಕಾರ್ಯಕ್ರಮಗಳು ದೇಶಾದ್ಯಂತ ನಡೆಯಲಿವೆ ಎಂಬುದನ್ನು ಉಲ್ಲೇಖಾರ್ಹವಾಗಿದೆ. ಶಿಕ್ಷಣದ ಅಡಿಯಲ್ಲಿ ಬರುವ ನಾಲ್ಕು ಆದ್ಯತೆಯ ಕ್ಷೇತ್ರಗಳೆಂದರೆ:
1. ತಳಹದಿಯ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರವನ್ನು ವಿಶೇಷವಾಗಿ ಮಿಶ್ರಿತ ಕಲಿಕೆಯ ಸಂದರ್ಭದಲ್ಲಿ ಖಚಿತಪಡಿಸಿಕೊಳ್ಳುವುದು.
2. ಕೆಲಸದ ಭವಿಷ್ಯದ ಹಿನ್ನೆಲೆಯಲ್ಲಿ ಜೀವನಪರ್ಯಂತ ಕಲಿಕೆಯನ್ನು ಉತ್ತೇಜಿಸುವ ಸಾಮರ್ಥ್ಯಗಳನ್ನು ನಿರ್ಮಿಸುವುದು
3. ಪ್ರತಿಯೊಂದು ಹಂತದಲ್ಲೂ ಕಲಿಕೆಯನ್ನು ಹೆಚ್ಚು ಒಳಗೊಳ್ಳುವ, ಗುಣಾತ್ಮಕ ಮತ್ತು ಸಹಯೋಗದೊಂದಿಗೆ ತಂತ್ರಜ್ಞಾನವನ್ನು ಸಕ್ರಿಯಗೊಳಿಸುವುದು ಮತ್ತು
4. ಸಂಶೋಧನೆಯನ್ನು ಬಲಪಡಿಸುವುದು, ಶ್ರೀಮಂತ ಸಹಯೋಗದ ಮೂಲಕ ನಾವಿನ್ಯತೆಯನ್ನು ಉತ್ತೇಜಿಸುವುದು.
*****
(Release ID: 1876710)
Visitor Counter : 154