ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಸಾಂದ್ರೀಕೃತ ಜೈವಿಕ ಅನಿಲ (ಸಿಬಿಜಿ) ಇಂದಿನ ಅಗತ್ಯ, ಅದರ ಪರಿಸರ ವ್ಯವಸ್ಥೆ ಉತ್ತೇಜಿಸಲು ಸರ್ಕಾರವು ಎಲ್ಲಾ ಕ್ರಮ ಕೈಗೊಳ್ಳುತ್ತಿದೆ: ಶ್ರೀ ಹರ್ದೀಪ್ ಎಸ್. ಪುರಿ
ಸಿಬಿಜಿ ಸ್ಥಾವರಗಳು ರೈತರಿಗೆ ಮತ್ತು ಪರಿಸರಕ್ಕೆ ಗೆಲುವಿನ ಪರಿಸ್ಥಿತಿ ತಂದುಕೊಡಲಿವೆ: ಶ್ರೀ ಹರ್ದೀಪ್ ಎಸ್. ಪುರಿ
ಸಂಗ್ರೂರ್‌ನಲ್ಲಿ ಏಷ್ಯಾದ ಅತಿದೊಡ್ಡ ಸಾಂದ್ರೀಕೃತ ಜೈವಿಕ ಅನಿಲ ಘಟಕ ಉದ್ಘಾಟಿಸಿದ ಕೇಂದ್ರ ಸಚಿವ ಹರ್ದೀಪ್ ಎಸ್. ಪುರಿ
ಸಂಗ್ರೂರ್ ಸಿಬಿಜಿ ಸ್ಥಾವರವು 390 ಜನರಿಗೆ ನೇರ ಉದ್ಯೋಗ ಮತ್ತು 585 ಜನರಿಗೆ ಪರೋಕ್ಷ ಉದ್ಯೋಗಳನ್ನು ಸೃಷ್ಟಿಸುತ್ತದೆ: ಶ್ರೀ ಹರ್ದೀಪ್ ಎಸ್. ಪುರಿ
ಸಂಗ್ರೂರ್ ಸ್ಥಾವರವು 40,000 – 45,000 ಎಕರೆ ಹೊಲಗಳಲ್ಲಿ ಉರವಲು (ಹುಲ್ಲು) ಸುಡುವುದನ್ನು ಕಡಿಮೆ ಮಾಡುತ್ತದೆ. ಇದು ವಾರ್ಷಿಕ 1,50,000 ಟನ್ ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡುತ್ತದೆ
प्रविष्टि तिथि:
19 OCT 2022 4:15PM by PIB Bengaluru
ಪಂಜಾಬಿನ ಸಂಗ್ರೂರ್‌ನ ಲೆಹ್ರಗಾಗಾದಲ್ಲಿ ನಿನ್ನೆ ಏಷ್ಯಾದ ಅತಿದೊಡ್ಡ ಸಾಂದ್ರೀಕೃತ ಜೈವಿಕ ಅನಿಲ (ಸಿಬಿಜಿ) ಸ್ಥಾವರದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಹರ್ದೀಪ್ ಎಸ್. ಪುರಿ ಅವರು ಮಾತನಾಡಿದರು. ಸಂಗ್ರೂರ್‌ನ ಈ ಘಟಕವು ಸಿಬಿಜಿ ಆಧಾರಿತ ಗ್ರಾಮೀಣ ಆರ್ಥಿಕತೆ ಉತ್ತೇಜನದ ಭಾರತದ ಮಾಸ್ಟರ್ ಪ್ಲಾನ್ ಆರಂಭವಾಗಿದೆ. ಸಿಬಿಜಿ ಇಂದಿನ ಅಗತ್ಯವಾಗಿದೆ. ಅದರ ಪರಿಸರ ವ್ಯವಸ್ಥೆ ಉತ್ತೇಜಿಸಲು ಕೇಂದ್ರ ಸರ್ಕಾರವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಸಂಗ್ರೂರ್‌ನಲ್ಲಿ ಶ್ರೀ ಹರ್ದೀಪ್ ಎಸ್. ಪುರಿ ಅವರು ಉದ್ಘಾಟಿಸಿದ ಸಾಂದ್ರೀಕೃತ ಜೈವಿಕ ಅನಿಲ (ಸಿಬಿಜಿ) ಸ್ಥಾವರವು ಭಾರತ ಸರ್ಕಾರವು 2018 ಅಕ್ಟೋಬರ್ ನಲ್ಲಿ ಪರಿಸರಸ್ನೇಹಿ ಇಂಧನ ಪರಿಸರ ವ್ಯವಸ್ಥೆ ಸ್ಥಾಪಿಸಲು ಪ್ರಾರಂಭಿಸಿದ ಸುಸ್ಥಿರ ಪರ್ಯಾಯ ಕೈಗೆಟುಕುವ ಸಾರಿಗೆ (ಎಸ್ಎಟಿಎಟಿ) ಯೋಜನೆಯ ಉದ್ದೇಶಗಳನ್ನು ಸಾಧಿಸುವ ಒಂದು ಪ್ರಮುಖ ಹೆಜ್ಜೆಯಾಗಿದೆ. ದೇಶದ ವಿವಿಧ ತ್ಯಾಜ್ಯ, ಜೈವಿಕ ತ್ಯಾಜ್ಯ ಮೂಲಗಳಿಂದ ಸಾಂದ್ರೀಕೃತ ಜೈವಿಕ ಅನಿಲ (ಸಿಬಿಜಿ) ಉತ್ಪಾದನೆ ಮಾಡಲಾಗುತ್ತದೆ. ಈ ಯೋಜನೆಯು ರೈತರನ್ನು ಬೆಂಬಲಿಸುವ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಸಶಕ್ತಗೊಳಿಸಲು ಮತ್ತು ಸುಗಮ ಹಾದಿ ರೂಪಿಸಲು, ಭಾರತದ ದೇಶೀಯ ಇಂಧನ ಉತ್ಪಾದನೆ ಮತ್ತು ಸ್ವಾವಲಂಬನೆ ಹೆಚ್ಚಿಸಲು ಮತ್ತು ವಾಯುಮಾಲಿನ್ಯ ಕಡಿಮೆ ಮಾಡಲು ಮತ್ತು ಭಾರತವನ್ನು ಶುದ್ಧ ಇಂಧನ ಪರಿವರ್ತನೆಯತ್ತ ಮುನ್ನಡೆಸಲು ಸಹಾಯ ಮಾಡುವ ಉದಾತ್ತ ಗುರಿ ಹೊಂದಿದೆ. ಈ ಸ್ಥಾವರದ ಹೊರತಾಗಿ, ಎಸ್ಎಟಿಎಟಿ ಉಪಕ್ರಮದ ಅಡಿ, 38 ಸಿಬಿಜಿ ಜೈವಿಕ ಅನಿಲ ಸ್ಥಾವರಗಳನ್ನು ನಿಯುಕ್ತಿಗೊಳಿಸಲಾಗಿದೆ.
ಸಂಗ್ರೂರ್‌ನ ಸಿಬಿಜಿ ಸ್ಥಾವರಕ್ಕೆ ಜರ್ಮನಿಯ ಪ್ರಮುಖ ಜೈವಿಕ ಇಂಧನ ಕಂಪನಿಗಳಲ್ಲಿ ಒಂದಾದ ವರ್ಬಿಯೊ ಎಜಿ ಸಂಸ್ಥೆ 220 ಕೋಟಿ ರೂ. ವಿದೇಶಿ ನೇರ ಹೂಡಿಕೆ ಮಾಡಿದ್ದು, ಈ ಘಟಕವು ಅಂದಾಜು 20 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಸ್ಥಾವರದ ಪ್ರಸ್ತುತ ಉತ್ಪಾದನಾ ಸಾಮರ್ಥ್ಯ ಪ್ರತಿದಿನ ಸುಮಾರ್ 6 ಮೆಟ್ರಿಕ್ ಟನ್(ಟಿಪಿಡಿ-ಮೆಟ್ರಿಕ್ ಟನ್ ಪರ್ ಡೇ) ಸಿಬಿಜಿ ಆಗಿದೆ. ಆದರೆ ಈ ಸ್ಥಾವರವು ಶೀಘ್ರದಲ್ಲೇ ದಿನಕ್ಕೆ ಗರಿಷ್ಠ 300 ಟನ್ ಭತ್ತದ ಒಣಹುಲ್ಲನ್ನು ಸಂಸ್ಕರಿಸಲಿದೆ. ಇದು 10,000 ಘನ ಮೀಟರ್‌ಗಳ 8 ಡೈಜೆಸ್ಟರ್‌ಗಳನ್ನು ಬಳಸಿಕೊಂಡು ಪ್ರತಿದಿನ 33 ಮೆಟ್ರಿಕ್ ಟನ್ ಸಿಬಿಜಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಸಿಬಿಜಿ ಸ್ಥಾವರ ಉದ್ಘಾಟನಾ ದಿನದ ಪ್ರಾಮುಖ್ಯತೆ ಕುರಿತು ಮಾತನಾಡಿದ ಶ್ರೀ ಹರ್ದೀಪ್ ಎಸ್. ಪುರಿ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ರೈತ ಬಾಂಧವರಿಗೆ ಪ್ರಮುಖ ಯೋಜನೆಗಳು ಮತ್ತು ಪ್ರಯೋಜನಗಳನ್ನು ಘೋಷಿಸಿದ ಒಂದು ದಿನದ ನಂತರ ಈ ಸ್ಥಾವರ ಉದ್ಘಾಟಿಸುತ್ತಿರುವುದು ಕಾಕತಾಳೀಯವಾಗಿದೆ ಎಂದು ಹೇಳಿದರು. ಪ್ರಧಾನಿ ಅವರು ಸೋಮವಾರ ಪಿಎಂ-ಕಿಸಾನ್ ನೇರ ನಗದು ವರ್ಗಾವಣೆ ಯೋಜನೆಯ 12ನೇ ಕಂತನ್ನು ಬಿಡುಗಡೆ ಮಾಡಿದರು. ಅರ್ಹ ರೈತ ಫಲಾನುಭವಿಗಳಿಗೆ 16,000 ಕೋಟಿ ರೂ. ಧನಸಹಾಯವನ್ನು ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಪ್ರಧಾನಮಂತ್ರಿ ಅವರು ಪ್ರಧಾನ ಮಂತ್ರಿಗಳ 600 ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಉದ್ಘಾಟಿಸಿದರು. ಇದು ಕೇವಲ ರಸಗೊಬ್ಬರದ ಮಾರಾಟ ಕೇಂದ್ರಗಳಾಗದೆ, ದೇಶದ ರೈತರೊಂದಿಗೆ ಆಳವಾದ ಬಾಂಧವ್ಯ ಸ್ಥಾಪಿಸುವ ಕಾರ್ಯವಿಧಾನವಾಗಿದೆ. ಪ್ರಧಾನ ಮಂತ್ರಿಗಳ ಭಾರತೀಯ ಜನ ಉರ್ವರಕ್ ಪರಿಯೋಜನಾ - ಒಂದು ರಾಷ್ಟ್ರ ಒಂದು ರಸಗೊಬ್ಬರ, ರೈತರಿಗೆ ಭಾರತ್ ಬ್ರ್ಯಾಂಡ್ ಅಡಿ, ಕೈಗೆಟುಕುವ ಬೆಲೆಗೆ ಗುಣಮಟ್ಟದ ರಸಗೊಬ್ಬರ ಖಾತ್ರಿಪಡಿಸುವ ಯೋಜನೆಗೂ ಪ್ರಧಾನಿ ಅವರು ಚಾಲನೆ ನೀಡಿದರು ಎಂದರು.
ಸಿಬಿಜಿ ಸ್ಥಾವರಗಳಂತಹ ಉಪಕ್ರಮಗಳು ರೈತರಿಗೆ ಮತ್ತು ಪರಿಸರಕ್ಕೆ ಗೆಲುವಿನ ಪರಿಸ್ಥಿತಿ ತಂದುಕೊಡಲಿವೆ ಎಂದು ಸಚಿವರು ತಿಳಿಸಿದರು.
ಗ್ರಾಮೀಣ ಆರ್ಥಿಕತೆಗೆ ಸಂಗ್ರೂರ್ ಸಿಬಿಜಿ ಸ್ಥಾವರದ ಪ್ರಯೋಜನಗಳ ಕುರಿತು ಮಾತನಾಡಿದ ಸಚಿವರು, ಈ ಘಟಕವು 1,00,000 ಟನ್ ಭತ್ತದ ಹುಲ್ಲು ಬಳಸುತ್ತದೆ. ಇದನ್ನು ಸ್ಥಾವರದ 10 ಕಿಮೀ ವ್ಯಾಪ್ತಿಯಹೊರವಲಯದ 6-8 ಸ್ಥಳಗಳಿಂದ ಸಂಗ್ರಹಿಸಲಾಗುತ್ತದೆ. ಇದರಿಂದ ಪ್ರತಿದಿನ ಸುಮಾರು 600-650 ಟನ್ ಫರ್ಮೆಂಟೆಡ್ ಆರ್ಗ್ಯಾನಿಕ್ ರಸಗೊಬ್ಬರ) ಉತ್ಪಾದನೆಯಾಗುತ್ತದೆ, ಇದನ್ನು ಸಾವಯವ ಕೃಷಿಗೆ ಬಳಸಬಹುದು. ಸಿಬಿಜಿ ಸ್ಥಾವರಗಳು 390 ಜನರಿಗೆ ನೇರ ಉದ್ಯೋಗ ಮತ್ತು 585 ಜನರಿಗೆ ಪರೋಕ್ಷ ಉದ್ಯೋಗಗಳನ್ನು ಒದಗಿಸುತ್ತವೆ ಎಂದು ಅವರು ತಿಳಿಸಿದರು.
ಈ ಸ್ಥಾವರವು ಸಂಗ್ರೂರಿನ ರೈತರಿಗೆ ಹೆಚ್ಚುವರಿ ಆದಾಯ ನೀಡುವುದಲ್ಲದೆ, ಇದು ಹುಲ್ಲು ಸುಡುವುದನ್ನು ನಿಯಂತ್ರಿಸಲು ಹೆಚ್ಚು ಅಗತ್ಯವಿರುವ ಪರ್ಯಾಯಗಳನ್ನು ಒದಗಿಸುತ್ತದೆ ಎಂದು ಸಚಿವರು ಹೇಳಿದರು. ಈ ಸ್ಥಾವರವು 40,000-45,000 ಎಕರೆ ಹೊಲಗಳಲ್ಲಿನ ಕೂಳೆ ತ್ಯಾಜ್ಯ ಸುಡುವುದನ್ನು ಕಡಿಮೆ ಮಾಡುತ್ತದೆ, ಇದು ವಾರ್ಷಿಕ 150,000 ಟನ್ ಇಂಗಾಲ ಹೊರಸೂಸುವಿಕೆಯನ್ನು ನಿಯಂತ್ರಿಸುದೆ. ವಿಶೇಷವಾಗಿ, ಇದು ಸಂಗ್ರೂರ್ ನಾಗರಿಕರು ಶುದ್ಧ ಗಾಳಿ ಉಸಿರಾಡುವುದನ್ನು ಖಚಿತಪಡಿಸುತ್ತದೆ. ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆ(ಸಿಒಪಿ26)ಯ ನಿರ್ಣಯಕ್ಕೆ ಅನುಗುಣವಾಗಿ ಹವಾಮಾನ ಬದಲಾವಣೆಯ ಗುರಿಗೆ ಅನುಗುಣವಾಗಿ, ಭಾರತವು ಇಂದಿನಿಂದ 2030ರ ವರೆಗಿನ ಒಟ್ಟು ಯೋಜಿತ ಇಂಗಾಲ ಹೊರಸೂಸುವಿಕೆಯನ್ನು 1 ಶತಕೋಟಿ ಟನ್ ಗೆ ನಿಯಂತ್ರಿಸಲು ಮತ್ತು 2070ರ ವೇಳೆಗೆ ಇಂಗಾಲ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯ ಗುರಿ ಸಾಧಿಸಲು ಕೊಡುಗೆ ನೀಡಲಿದೆ.
ಕ್ಯಾಸ್ಕೇಡ್‌ಗಳು, ಕಂಪ್ರೆಸರ್‌ಗಳು ಮತ್ತು ಡಿಸ್ಪೆನ್ಸರ್‌ಗಳಂತಹ ಸಿಬಿಜಿ ಸ್ಥಾವರ ಉಪಕರಣಗಳ ದೇಶೀಯ ಉತ್ಪಾದನೆ ಉತ್ತೇಜಿಸಲು ಕೇಂದ್ರ ಸರ್ಕಾರ ಮಾಡುತ್ತಿರುವ ನಿರಂತರ ಪ್ರಯತ್ನಗಳನ್ನು ಉಲ್ಲೇಖಿಸಿದ ಶ್ರೀ ಹರ್ದೀಪ್ ಎಸ್. ಪುರಿ, ಇದು ಭಾರತದ ಉತ್ಪಾದನಾ ವಲಯದಾದ್ಯಂತ 'ಮೇಕ್ ಇನ್ ಇಂಡಿಯಾ' ಅವಕಾಶಗಳನ್ನು ಹೆಚ್ಚಿಸಲಿದೆ. ಸ್ಥಾವರಗಳ ಸ್ಥಾಪನೆಗೆ ಅಗ್ಗದ ಸಾಲ ಲಭ್ಯವಾಗುವಂತೆ ನಾವು ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವರು ಹೇಳಿದರು.
*******
(रिलीज़ आईडी: 1869349)
आगंतुक पटल : 179