ಕಲ್ಲಿದ್ದಲು ಸಚಿವಾಲಯ
ಭಾರತೀಯ ಕಲ್ಲಿದ್ದಲು ನಿಗಮದಿಂದ ಅನಿಲೀಕರಣ ಯೋಜನೆಗಳ ಸ್ಥಾಪನೆಗಾಗಿ ಬಿಎಚ್ಇಎಲ್, ಐಒಸಿಎಲ್ ಮತ್ತು ಗೇಲ್ (ಇಂಡಿಯಾ) ನಿಯಮಿತಗಳೊಂದಿಗೆ ತಿಳಿವಳಿಕಾ ಒಡಂಬಡಿಕೆಗಳಿಗೆ ಅಂಕಿತ
ಮುಂಬರುವ ತಿಂಗಳುಗಳಲ್ಲಿ ಶಾಖೋತ್ಪನ್ನ ಕಲ್ಲಿದ್ದಲು ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗುವ ನಿರೀಕ್ಷೆ - ಸಚಿವ ಶ್ರೀ ಪ್ರಲ್ಹಾದ್ ಜೋಶಿ ಹೇಳಿಕೆ
2030 ರ ವೇಳೆಗೆ 1೦೦ ದಶಲಕ್ಷ ಟನ್ ಕಲ್ಲಿದ್ದಲು ಅನಿಲೀಕರಣ ಸಾಧಿಸುವ ಗುರಿ ಹೊಂದಿರುವ ಕಲ್ಲಿದ್ದಲು ಸಚಿವಾಲಯ
Posted On:
12 OCT 2022 6:58PM by PIB Bengaluru
ಮುಂದಿನ ಕೆಲವು ತಿಂಗಳುಗಳಲ್ಲಿ ಶಾಖೋತ್ಪನ್ನ ಕಲ್ಲಿದ್ದಲು ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಶ್ರೀ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಕಲ್ಲಿದ್ದಲು ಅನಿಲೀಕರಣ ಯೋಜನೆಗಳಿಗಾಗಿ ಐದು ಪ್ರಮುಖ ಸಾರ್ವಜನಿಕ ವಲಯದ ಕಂಪನಿಗಳೊಂದಿಗೆ ತಿಳಿವಳಿಕಾ ಒಡಂಬಡಿಕೆಗಳಿಗೆ ಅಂಕಿತ ಹಾಕಲು ಕಲ್ಲಿದ್ದಲು ಸಚಿವಾಲಯದ ಭಾರತೀಯ ಕಲ್ಲಿದ್ದಲು ನಿಗಮ ಇಂದು ಇಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಮುಂದಿನ ವರ್ಷದ ಮಾರ್ಚ್ ವೇಳೆಗೆ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ನಲವತ್ತು ದಶಲಕ್ಷ ಟನ್ ಕಲ್ಲಿದ್ದಲು ದಾಸ್ತಾನು ಲಭ್ಯವಾಗಲಿದ್ದು, 2022ರ ಅಕ್ಟೋಬರ್ 1 ರಹೊತ್ತಿಗೆ ಶಾಖೋತ್ಪನ್ನ ಸ್ಥಾವರಗಳ ಸಂಗ್ರಹವು 24 ದಶಲಕ್ಷ ಟನ್ ತಲುಪುತ್ತದೆ ಎಂದರು.
ಮೇಲ್ಮೈ ಕಲ್ಲಿದ್ದಲು ಅನಿಲೀಕರಣ ಮಾರ್ಗದ ಮೂಲಕ ನಾಲ್ಕು ದೊಡ್ಡ ಪ್ರಮಾಣದ ಕಲ್ಲಿದ್ದಲು-ರಾಸಾಯನಿಕ ಯೋಜನೆಗಳನ್ನು ಸ್ಥಾಪಿಸಲು, ಭಾರತೀಯ ಕಲ್ಲಿದ್ದಲು ನಿಗಮ (ಸಿಐಎಲ್) ದೇಶದ ಮೂರು ಪ್ರಮುಖ ಸಾರ್ವಜನಿಕ ವಲಯದ ಉದ್ದಿಮೆಗಳಾದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್ಇಎಲ್), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಮತ್ತು ಗೇಲ್ (ಇಂಡಿಯಾ) ಲಿಮಿಟೆಡ್ ನೊಂದಿಗೆ ತಲಾ ಒಂದರಂತೆ ಮೂರು ಪ್ರತ್ಯೇಕ ತಿಳಿವಳಿಕಾ ಒಡಂಬಡಿಕೆಗಳಿಗೆ (ಎಂಒಯು) ಅಂಕಿತ ಹಾಕಲಾಯಿತು. ಇದಲ್ಲದೆ, ಎನ್ಎಲ್ಸಿ ಇಂಡಿಯಾ ಲಿಮಿಟೆಡ್ (ಎನ್ಎಲ್ಸಿಐಎಲ್) ಬಿಎಚ್ಇಎಲ್ ನೊಂದಿಗೆ ತಿಳಿವಳಿಕಾ ಒಡಂಬಡಿಕೆಗೆ ಸಹಿ ಹಾಕಲಾಯಿತು.
35,000 ಕೋಟಿ ರೂ.ಗಳ ಒಟ್ಟು ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೇಲ್ಮೈ ಕಲ್ಲಿದ್ದಲು ಅನಿಲೀಕರಣ (ಎಸ್.ಸಿ.ಜಿ.) ಯೋಜನೆಗಳನ್ನು ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್ ಗಢ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ.
ಈ ತಿಳಿವಳಿಕಾ ಒಡಂಬಡಿಕೆಗೆ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಶ್ರೀ ಪ್ರಲ್ಹಾದ್ ಜೋಶಿ, ಮತ್ತು ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಖಾತೆ ಸಚಿವ ಶ್ರೀ. ಮಹೇಂದ್ರನಾಥ್ ಪಾಂಡೆ ಅವರ ಸಮ್ಮುಖದಲ್ಲಿ ಅಂಕಿತ ಹಾಕಲಾಯಿತು.
ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಸಾರಸ್ವತ್, ಕಲ್ಲಿದ್ದಲು ಕಾರ್ಯದರ್ಶಿ ಡಾ. ಅನಿಲ್ ಕುಮಾರ್ ಜೈನ್, ಬೃಹತ್ ಕೈಗಾರಿಕೆಗಳ ಕಾರ್ಯದರ್ಶಿ ಶ್ರೀ ಅರುಣ್ ಗೋಯಲ್, ಕಾರ್ಯದರ್ಶಿ (ಎಂ.ಒ.ಪಿ.ಎನ್.ಜಿ.) ಶ್ರೀ ಪಂಕಜ್ ಜೈನ್, ಸಿಐಎಲ್ ಅಧ್ಯಕ್ಷ ಶ್ರೀ ಪ್ರಮೋದ್ ಅಗರ್ವಾಲ್, ಹೆಚ್ಚುವರಿ ಕಾರ್ಯದರ್ಶಿ ಮತ್ತು ನಾಮನಿರ್ದೇಶಿತ ಪ್ರಾಧಿಕಾರದ ಶ್ರೀ ಎಂ. ನಾಗರಾಜು, ಪಿಎಸ್ಯುಗಳ ಸಿಎಂಡಿಗಳು ಮತ್ತು ಕಲ್ಲಿದ್ದಲು, ಎಂಒಪಿಎನ್.ಜಿ. ಮತ್ತು ಬೃಹತ್ ಕೈಗಾರಿಕೆಗಳು ಹಾಗೂ ಪಿಎಸ್ಯುಗಳ ಸಚಿವಾಲಯಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಎಸ್.ಸಿ.ಜಿ. ಮಾರ್ಗದ ಮೂಲಕ ಕಲ್ಲಿದ್ದಲನ್ನು ಸಿಂಗ್ಯಾಸ್ ಆಗಿ ಪರಿವರ್ತಿಸಲಾಗುತ್ತದೆ. ಇದನ್ನು ನಂತರ ಅಪಾರ ವೆಚ್ಚದಲ್ಲಿ ಆಮದು ಮಾಡಿಕೊಂಡ ನೈಸರ್ಗಿಕ ಅನಿಲ ಅಥವಾ ಕಚ್ಚಾ ತೈಲದ ಮೂಲಕ ಉತ್ಪಾದಿಸಲಾಗುವ ಮೌಲ್ಯವರ್ಧಿತ ರಾಸಾಯನಿಕಗಳ ನಂತರದ ಉತ್ಪಾದನೆಗಾಗಿ ಸಂಸ್ಕರಿಸಬಹುದು.
ದೇಶದ ನಾಲ್ಕು ಪ್ರಮುಖ ಪಿಎಸ್ಯುಗಳು ಒಟ್ಟಿಗೆ ಸೇರುತ್ತಿರುವುದರಿಂದ, ವಿದೇಶೀ ವಿನಿಮಯವನ್ನು ಕಡಿಮೆ ಮಾಡಲು, ಸ್ವಾವಲಂಬನೆ ಮತ್ತು ಸ್ಥಳೀಯ ಸಂಪನ್ಮೂಲಗಳ ಬಂಡವಾಳೀಕರಣವನ್ನು ಉತ್ತೇಜಿಸುವ ಗುರಿಯನ್ನು ಈ ಕ್ರಮ ಒಳಗೊಂಡಿದೆ. ಮತ್ತೊಂದು ಮಜಲು ಉದ್ಯೋಗ ಸೃಷ್ಟಿಯಾಗಲಿದ್ದು, ಸುಮಾರು 1200 ಸಿಬ್ಬಂದಿಗೆ ನೇರ ಉದ್ಯೋಗ ಮತ್ತು 20,000 ಕ್ಕೂ ಹೆಚ್ಚು ಜನರಿಗೆ ಪರೋಕ್ಷ ಉದ್ಯೋಗ ಸಿಗಲಿದೆ.
ನವೀಕರಿಸಬಹುದಾದ ಮತ್ತು ಶುದ್ಧ ಇಂಧನ ಮೂಲಗಳೊಂದಿಗೆ, ಭವಿಷ್ಯದಲ್ಲಿ, ವೈವಿಧ್ಯೀಕರಣದ ಮೂಲಕ ಕಲ್ಲಿದ್ದಲಿನ ಪರ್ಯಾಯ ಬಳಕೆಯನ್ನು ಸ್ಥಿರವಾಗಿ ಪಡೆಯುವುದರಿಂದ, ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ದೇಶವು 344 ಶತಕೋಟಿ ಟನ್ (ಬಿಟಿ) ಕಲ್ಲಿದ್ದಲು ಸಂಪನ್ಮೂಲಗಳನ್ನು ಹೊಂದಿದ್ದು, 163 ಬಿಟಿಯೊಂದಿಗೆ, ಎಸ್ಸಿಜಿ ಮೂಲಕ ರಾಸಾಯನಿಕಗಳಿಗೆ ಕಲ್ಲಿದ್ದಲು ಎಂದು ಸಾಬೀತಾಗಿದೆ, ಇದು ವಾಣಿಜ್ಯ ಕಾರ್ಯಸಾಧ್ಯತೆಗೆ ಒಳಪಟ್ಟು ಸುರಕ್ಷಿತ ಬೆಟ್ ನಂತೆ ತೋರುತ್ತದೆ.
ಕಲ್ಲಿದ್ದಲು ಸಚಿವಾಲಯವು ಅಭಿಯಾನದೋಪಾದಿಯಲ್ಲಿ ಕಲ್ಲಿದ್ದಲಿನ ಬಳಕೆಯನ್ನು ತ್ವರಿತವಾಗಿ ಪತ್ತೆ ಮಾಡುತ್ತಿದೆ ಮತ್ತು 2030ರ ವೇಳೆಗೆ 100 ದಶಲಕ್ಷ ಟನ್ (ಎಂಟಿ) ಕಲ್ಲಿದ್ದಲು ಅನಿಲೀಕರಣವನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಕಲ್ಲಿದ್ದಲು ಸಚಿವಾಲಯವು ಐದು ಕಲ್ಲಿದ್ದಲು ಅನಿಲೀಕರಣ ಘಟಕಗಳ ಅನುಷ್ಠಾನವನ್ನು ಉತ್ತೇಜಿಸುವ ಮೂಲಕ ಸಿ.ಪಿ.ಎಸ್.ಇ.ಗಳನ್ನು ಬೆಂಬಲಿಸಲು 6,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಲು ಉಪಕ್ರಮಗಳನ್ನು ಕೈಗೊಂಡಿದೆ.
ದೇಶದ ಅತಿದೊಡ್ಡ ಇಂಧನ ಉತ್ಪಾದಕ ಸಿಐಎಲ್ ಎಸ್ಸಿಜಿಯನ್ನು ತನ್ನ ವ್ಯಾಪಾರ ವೈವಿಧ್ಯೀಕರಣ ಮಾರ್ಗಗಳಲ್ಲಿ ಒಂದಾಗಿ ಗುರುತಿಸಿದ್ದರೆ, ಐಒಸಿಎಲ್ ಮತ್ತು ಗೇಲ್ ದೊಡ್ಡ ಪ್ರಮಾಣದ ರಾಸಾಯನಿಕ ಮತ್ತು ಸಂಸ್ಕರಣಾ ಘಟಕಗಳನ್ನು ತೆಗೆದುಕೊಳ್ಳುವಲ್ಲಿ ತಮ್ಮ ದಶಕಗಳ ಅನುಭವವನ್ನು ವೇದಿಕೆಗೆ ತರುತ್ತವೆ.
ಬಿಎಚ್ಇಎಲ್ ತನ್ನ ಒತ್ತಡದ ದ್ರವೀಕರಿಸಿದ ಬೆಡ್ ದಹನ ತಂತ್ರಜ್ಞಾನದೊಂದಿಗೆ ಪ್ರಾಯೋಗಿಕ ಅಧ್ಯಯನಗಳನ್ನು ನಡೆಸಿದ್ದು, ಹೆಚ್ಚಿನ-ಬೂದಿಯ ಭಾರತೀಯ ಕಲ್ಲಿದ್ದಲಿನ ಅವಶ್ಯಕತೆಗಳಿಗೆ ಅನುಗುಣವಾಗಿ ಅದನ್ನು ಕಸ್ಟಮೈಸ್ ಮಾಡಿದೆ. ಸಿಐಎಲ್ ಮತ್ತು ಬಿಎಚ್ಇಎಲ್ ನ ಉಪಕ್ರಮವು ದೇಶೀಯವಾಗಿ ರೂಪಿಸಿದ ಕಲ್ಲಿದ್ದಲು ಅನಿಲೀಕರಣ ತಂತ್ರಜ್ಞಾನದ ವಾಣಿಜ್ಯೀಕರಣಕ್ಕೂ ಕಾರಣವಾಗುತ್ತದೆ.
ಎಲ್ಲಾ ನಾಲ್ಕು ಸಾಂಸ್ಥಿಕ ದೈತ್ಯರ ಒಮ್ಮತ ಮತ್ತು ಪಾಲುದಾರಿಕೆಯು ಸಂಕೀರ್ಣ ಎಸ್.ಸಿ.ಜಿ ಯೋಜನೆಗಳನ್ನು ಪರಿಪೂರ್ಣವಾಗಿ ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ.
ಸಿಐಎಲ್ ಪರವಾಗಿ ನಿರ್ದೇಶಕ (ವ್ಯವಹಾರ ಅಭಿವೃದ್ಧಿ) ಶ್ರೀ ದೇಬಾಶಿಶ್ ನಂದಾ ಒಪ್ಪಂದಕ್ಕೆ ಸಹಿ ಹಾಕಿದರು.
*******
(Release ID: 1867301)
Visitor Counter : 192