ಕಲ್ಲಿದ್ದಲು ಸಚಿವಾಲಯ
ಕೇಂದ್ರ ಕಲ್ಲಿದ್ದಲು ಸಚಿವಾಲಯವು ಜಾರ್ಖಂಡ್ ನ ಕಾರ್ಯಾಚರಣೆಯಲ್ಲಿಲ್ಲದ ಸ್ವಂತ ಬಳಕೆಗಾಗಿ ಸಂಸ್ಥೆಗಳ ಗಣಿಗಾರಿಕೆ (ಕ್ಯಾಪ್ಟಿವ್) ಮತ್ತು ವಾಣಿಜ್ಯ ಕಲ್ಲಿದ್ದಲು ಬ್ಲಾಕ್ ಗಳನ್ನು ಪರಿಶೀಲಿಸಿದರು.
ಜಾರ್ಖಂಡ್ ನ ಸ್ವಂತ ಬಳಕೆಗಾಗಿ ಸಂಸ್ಥೆಗಳ ಗಣಿಗಾರಿಕೆಗಳು (ಕ್ಯಾಪ್ಟಿವ್) ಮತ್ತು ವಾಣಿಜ್ಯ ಬ್ಲಾಕ್ ಗಳು 2022-23ರಲ್ಲಿ 37.3 ಮಿಲಿಯನ್ ಟನ್ ಕಲ್ಲಿದ್ದಲನ್ನು ಉತ್ಪಾದಿಸುವ ಸಾಧ್ಯತೆಯಿದೆ
प्रविष्टि तिथि:
06 SEP 2022 12:43PM by PIB Bengaluru
ಜಾರ್ಖಂಡ್ ರಾಜ್ಯದ 20 ಕಾರ್ಯಾಚರಣೆಯಲ್ಲಿಲ್ಲದ ಸ್ವಂತ ಬಳಕೆಗಾಗಿ ಗಣಿಗಾರಿಕೆಯ (ಕ್ಯಾಪ್ಟಿವ್) ಮತ್ತು ವಾಣಿಜ್ಯ ಕಲ್ಲಿದ್ದಲು ಬ್ಲಾಕ್ ಗಳನ್ನು ಕೇಂದ್ರ ಕಲ್ಲಿದ್ದಲು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ನಾಮನಿರ್ದೇಶಿತ ಪ್ರಾಧಿಕಾರವು ಇ.ಎಫ್. ಮತ್ತು ಸಿ.ಸಿ., ಪಿ.ಸಿ.ಸಿ.ಎಫ್., ಜಾರ್ಖಂಡ್ ಇದರ ಅಧಿಕಾರಿಗಳು ಹಾಗೂ ನಿರ್ದೇಶಕರು (ಗಣಿ ಮತ್ತು ಭೂವಿಜ್ಞಾನ), ಜಾರ್ಖಂಡ್ ನ ಮತ್ತು ಯೋಜನೆಯಲ್ಲಿ ಭಾಗವಹಿಸುವ ಉತ್ಸುಕ ಪ್ರತ್ಯಾಕ್ಷಿಗಳ ಉಪಸ್ಥಿತಿಯಲ್ಲಿ ಪರಿಶೀಲಿಸಿದರು.
ಕೇಂದ್ರ ಕಲ್ಲಿದ್ದಲು ಸಚಿವಾಲಯವು ಜಾರ್ಖಂಡ್ ನಲ್ಲಿ ಕಾರ್ಯಾಚರಣೆಯಲ್ಲಿಲ್ಲದ ಕಲ್ಲಿದ್ದಲು ಬ್ಲಾಕ್ ಗಳ ಒಟ್ಟಾರೆ ಸ್ಥಿತಿಯ ಸುಧಾರಣೆ ಹಾಗೂ ರಾಜ್ಯ ಗಣಿಗಾರಿಕೆ ಮತ್ತು ಅರಣ್ಯ ಇಲಾಖೆಯು ಸಹಾಯವನ್ನು ಶ್ಲಾಘಿಸಿದೆ. ಈ ಆರ್ಥಿಕ ವರ್ಷದಲ್ಲಿ ಸುಮಾರು 3 ರಿಂದ 4 ಕಲ್ಲಿದ್ದಲು ಬ್ಲಾಕ್ ಗಳಲ್ಲಿ ಗಣಿಗಾರಿಕೆಗೆ ಅನುಮತಿ ಸಿಗಲಿದೆ ಹಾಗೂ ನಾಲ್ಕು ಕಲ್ಲಿದ್ದಲು ಬ್ಲಾಕ್ ಗಳಿಂದ ಕಲ್ಲಿದ್ದಲು ಉತ್ಪಾದನೆ ಪ್ರಾರಂಭವಾಗಲಿದೆ. ಜಾರ್ಖಂಡ್ ನ ಸ್ವಂತ ಬಳಕೆಗಾಗಿ ಗಣಿಗಾರಿಕೆ (ಕ್ಯಾಪ್ಟಿವ್) ಮತ್ತು ವಾಣಿಜ್ಯ ಕಲ್ಲಿದ್ದಲು ಬ್ಲಾಕ್ ಗಳಿಂದ 2021-22 ರಲ್ಲಿ 17.72 ಮಿಲಿಯನ್ ಟನ್ ಉತ್ಪಾದನೆಯಾಗಿದ್ದು, 2022-23 ರಲ್ಲಿ ಸುಮಾರು 37.3 ಮಿಲಿಯನ್ ಟನ್ ಉತ್ಪಾದನೆಯಾಗುವ ಸಾಧ್ಯತೆಯಿದೆ ಹಾಗೂ ಕಲ್ಲಿದ್ದಲು ಉತ್ಪಾದನೆಯಲ್ಲಿ ಈ ವರ್ಷ 2021-22 ಕ್ಕಿಂತ 110.4% ಹೆಚ್ಚಳವಾಗಲಿದೆ.
ಯೋಜನೆಯಲ್ಲಿ ಪಾಲ್ಗೊಳ್ಳಲು ಉತ್ಸುಕರಾದ ಪ್ರತ್ಯಾಕ್ಷಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವುದಾಗಿ ಕೇಂದ್ರ ಕಲ್ಲಿದ್ದಲು ಸಚಿವಾಲಯ ಭರವಸೆ ನೀಡಿದೆ.
*****
(रिलीज़ आईडी: 1857138)
आगंतुक पटल : 175