ಜವಳಿ ಸಚಿವಾಲಯ
azadi ka amrit mahotsav

29.25 ಕೋಟಿ ರೂ.ಗಳ ಬಜೆಟ್ ಹಂಚಿಕೆಯೊಂದಿಗೆ 2021-22 ರಿಂದ 2025-26 ರವರೆಗೆ ಸಮಗ್ರ ಉಣ್ಣೆ ಅಭಿವೃದ್ಧಿ ಕಾರ್ಯಕ್ರಮದ (ಐಡಬ್ಲ್ಯುಡಿಪಿ) ಅಡಿಯಲ್ಲಿ ಪಶ್ಮಿನಾ ಉಣ್ಣೆ ಅಭಿವೃದ್ಧಿ ಯೋಜನೆಗೆ ಜವಳಿ ಸಚಿವಾಲಯವು ಅನುಮೋದನೆ ನೀಡಿದೆ

प्रविष्टि तिथि: 03 AUG 2022 4:05PM by PIB Bengaluru

ಭಾರತ ಸರ್ಕಾರವು 2017-18 ರಿಂದ 2021-22 ರ ಆರ್ಥಿಕ ವರ್ಷದಲ್ಲಿ ಜಮ್ಮು ಮತ್ತು ಕಾಶ್ಮೀರದ ಮತ್ತು ಲಡಾಖ್‌ ಕೇಂದ್ರಾಡಳಿತ ಪ್ರದೇಶ ಪುನರ್ನಿರ್ಮಾಣ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಪಶ್ಮಿನಾ ಅಭಿವೃದ್ಧಿಯಲ್ಲಿ ಮಾಡಿದ ಪ್ರಗತಿಯನ್ನು ಅನುಬಂಧದಲ್ಲಿ ನೀಡಲಾಗಿದೆ.

ಜವಳಿ ಸಚಿವಾಲಯವು 29.25 ಕೋಟಿ ರೂ.ಬಜೆಟ್ ಹಂಚಿಕೆಯೊಂದಿಗೆ 2021-22 ರಿಂದ 2025-26 ರ ಅವಧಿಯಲ್ಲಿ ಅನುಷ್ಠಾನಗೊಳಿಸಲು ಸಮಗ್ರ ಉಣ್ಣೆ ಅಭಿವೃದ್ಧಿ ಕಾರ್ಯಕ್ರಮದ (ಐಡಬ್ಲ್ಯುಡಿಪಿ) ಅಡಿಯಲ್ಲಿ ಪಶ್ಮಿನಾ ಉಣ್ಣೆ ಅಭಿವೃದ್ಧಿ ಯೋಜನೆಯನ್ನು ಅನುಮೋದಿಸಿದೆ. ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್‌ ಮತ್ತು ಜಮ್ಮ& ಕಾಶ್ಮೀರದಲ್ಲಿ ಪಶ್ಮಿನಾ ಉಣ್ಣೆಯ ಖರೀದಿ/ಮಾರುಕಟ್ಟೆಗೆ ಪರಿಕ್ರಮಣ ನಿಧಿ ರೂಪದಲ್ಲಿ ಹಣಕಾಸಿನ ನೆರವು ನೀಡಲು ಅವಕಾಶ ಕಲ್ಪಿಸಲಾಗಿದೆ. 19.75 ಕೋಟಿ ರೂ. ಯೋಜನಾ ವೆಚ್ಚದೊಂದಿಗೆ ಲಡಾಖ್‌ನ ಲೇಹ್‌ನಲ್ಲಿ ಸಹಾಯಕ ಯಂತ್ರಗಳೊಂದಿಗೆ ಡಿಹೈರಿಂಗ್ ಘಟಕವನ್ನು ಸ್ಥಾಪಿಸುವ ಯೋಜನೆಯನ್ನು ಮಂಜೂರು ಮಾಡಲಾಗಿದೆ ಮತ್ತು ಅದರಲ್ಲಿ 12.92 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಐಡಬ್ಲ್ಯುಡಿಪಿ ಯ ಹೆಚ್‌ ಆರ್‌ ಡಿ ಘಟಕದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಉಣ್ಣೆ ಉತ್ಪಾದಕರಿಗೆ ಮತ್ತು ಲಡಾಖ್ ಪ್ರದೇಶದ ಪಶ್ಮಿನಾ ಅಲೆಮಾರಿಗಳಿಗೆ ಜಾಗೃತಿ ಮತ್ತು ತರಬೇತಿಗೆ ಸಂಬಂಧಿಸಿದಂತೆ ಒಂದು ನಿಬಂಧನೆಯನ್ನು ಮಾಡಲಾಗಿದೆ.

15.00 ಲಕ್ಷ ರೂ.ವೆಚ್ಚದ ಭೌಗೋಳಿಕ ಸೂಚಕ (ಜಿಐ) ಕಾಯಿದೆಯಡಿ ಲಡಾಖ್ ಪ್ರದೇಶದ ಪಶ್ಮಿನಾ ಉಣ್ಣೆಯನ್ನು ನೋಂದಾಯಿಸುವ ಯೋಜನೆಯನ್ನು ಲೇಹ್ ನ ಲಡಾಖ್ ಸ್ವಾಯತ್ತ ಗುಡ್ಡಗಾಡು ಅಭಿವೃದ್ಧಿ ಮಂಡಳಿ (ಎಲ್‌ ಎ ಹೆಚ್‌ ಡಿ ಸಿ) ಪರವಾಗಿ ಮಂಜೂರು ಮಾಡಲಾಗಿದೆ. ಜಿಐ ಕಾಯ್ದೆಯಡಿ ಪಶ್ಮಿನಾ ಕಚ್ಚಾ ಉಣ್ಣೆಯನ್ನು ನೋಂದಾಯಿಸಲು ಈಗಾಗಲೇ ನವೆಂಬರ್, 2020 ರಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಪಶ್ಮಿನಾ ಡಿಹೈರಿಂಗ್ ಪ್ಲಾಂಟ್‌ನ ಖರೀದಿ ಆದೇಶವನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶದ ಪಶು/ಕುರಿ ಸಾಕಣಿಕೆ ಮತ್ತು ಮೀನುಗಾರಿಕೆ ಇಲಾಖೆಯು ಸಲ್ಲಿಸಿದೆ ಮತ್ತು ಸಹಾಯಕ ಯಂತ್ರಗಳನ್ನು ಖರೀದಿಸಲಾಗಿದೆ. ಸಾಗಣೆಗೆ ಮುನ್ನ ಯಂತ್ರಗಳ ಪೂರ್ವ-ರವಾನೆ ತಪಾಸಣೆಯನ್ನು ತ್ವರಿತಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

 

ಅನುಬಂಧ

ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ಪಶ್ಮಿನಾ ಅಭಿವೃದ್ಧಿಯ ಪ್ರಗತಿ

(ಲಕ್ಷ ರೂ.ಗಳಲ್ಲಿ)

ಕ್ರ.ಸಂ. ಘಟಕ ಮಂಜೂರಾದ ಹಣ ಬಿಡುಗಡೆಯಾದ ಹಣ (2017 ರಿಂದ 2022) I.A ಮೂಲಕ ಪ್ರಗತಿ

I. ಅನುಷ್ಠಾನ ಏಜೆನ್ಸಿಯ ಹೆಸರು: ಎಲ್‌ ಎ ಹೆಚ್‌ ಡಿ ಸಿ, ಲೇಹ್ (ಲಡಾಖ್‌ ಯುಟಿ)

1 ಚಾಂಗ್ರಾ ಮೇಕೆಯ ಪೌಷ್ಟಿಕಾಂಶದ ಸ್ಥಿತಿಯನ್ನು ಸುಧಾರಿಸುವುದು:-

 

(i) ಇಲಾಖೆಯ 10 ಹೆಕ್ಟೇರ್‌ಗಳ ಮೇವು ಸಾಕಣೆ ಕ್ಷೇತ್ರಗಳ ಅಭಿವೃದ್ಧಿ 50.00 50.00 2 ಕ್ಷೇತ್ರಗಳ ಅಭಿವೃದ್ಧಿ

2 (ii) ಇಲಾಖೆಯ 30 ಹೆಕ್ಟೇರ್‌ಗಳ ಮೇವು ಸಾಕಣೆ ಕ್ಷೇತ್ರಗಳ ಅಭಿವೃದ್ಧಿ 150.00 150.00 ಒಂದು ಕ್ಷೇತ್ರದ ಅಭಿವೃದ್ಧಿ

3 (iii) ಫೀಡ್ ಉಂಡೆಗಳು/ಮೇವು ತುಂಡುಗಳನ್ನು ಮಾಡುವ ಯಂತ್ರದ ರಚನೆ 293.00 246.50 ಫೀಡ್ ಉಂಡೆಗಳನ್ನು ಮಾಡುವ ಯಂತ್ರವನ್ನು ಖರೀದಿಸಿ ಸ್ಥಾಪಿಸಲಾಗಿದೆ

4 ಜಾನುವಾರು ಸಾಕಣೆದಾರರ ಸಾಮಾಜಿಕ ಆರ್ಥಿಕ ಉನ್ನತೀಕರಣ

(i) ಕಾವಲು ಕೊಠಡಿಯೊಂದಿಗೆ ಆಶ್ರಯ ಶೆಡ್‌ನ ನಿರ್ಮಾಣ 180.00 180.00 80 ಘಟಕಗಳು ಪೂರ್ಣಗೊಂಡಿವೆ

5 (ii) ಪೋರ್ಟಬಲ್ ಟೆಂಟ್‌ಗಳು ಮತ್ತು ಇತರ ಪ್ರೋತ್ಸಾಹಕಗಳನ್ನು ಒದಗಿಸುವುದು 150.00 100.00 600 ಘಟಕಗಳನ್ನು ಖರೀದಿಸಲಾಗಿದೆ ಮತ್ತು ವಿತರಿಸಲಾಗಿದೆ

6 (iii) ಎಲ್ಇಡಿ ಬೆಳಕಿನೊಂದಿಗೆ ಒಳ ನುಸುಳುಲಾಗದ ಕೊಟ್ಟಿಗೆ 75.00 50.00 75 ಘಟಕಗಳನ್ನು ಪೂರ್ಣಗೊಳಿಸಿ ಸಾಕಣೆದಾರರಿಗೆ ವಿತರಿಸಲಾಗಿದೆ

7 ಪಶುವೈದ್ಯಕೀಯ ಆರೋಗ್ಯ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವುದು 147.50 147.50 2 ಕುರಿ ವಿಸ್ತರಣಾ ಕೇಂದ್ರ ಪೂರ್ಣಗೊಂಡಿವೆ, ಲಸಿಕೆ ವ್ಯಾನ್ ಖರೀದಿಸಲಾಗಿದೆ

 

ಅಸ್ತಿತ್ವದಲ್ಲಿರುವ 3 ಕೇಂದ್ರಗಳು ದುರಸ್ತಿಯಾಗಿವೆ ಮತ್ತು ಕೆಲಸ ಮಾಡುತ್ತಿವೆ

8 ಅಸಾಂಪ್ರದಾಯಿಕ ಪ್ರದೇಶಗಳಲ್ಲಿ ಪಶ್ಮಿನಾ ಮೇಕೆ ಘಟಕಗಳ ಸ್ಥಾಪನೆ 200.00 200.00 ಫಲಾನುಭವಿಗಳಿಗೆ 100 ಘಟಕಗಳನ್ನು ವಿತರಿಸಲಾಗಿದೆ

9 ಪಶ್ಮಿನಾ ಮಾರುಕಟ್ಟೆಗಾಗಿ ಪರಿಕ್ರಮಣ ನಿಧಿ 200.00 200.00 ಲೇಹ್‌ನಲ್ಲಿರುವ ಚಾಂಗ್‌ಥಾಂಗ್ ಪ್ರದೇಶದ ಪಶ್ಮಿನಾ ತಳಿಗಾರರಿಗೆ ರಿವಾಲ್ವಿಂಗ್ ಫಂಡ್ ಮುಂದುವರಿಕೆ

10 ತಳಿಯ ಉತ್ಪಾದಕತೆಯನ್ನು ಹೆಚ್ಚಿಸಲು ಚಾಂಗ್ರಾ ಮೇಕೆಗಳ ಆಯ್ದ ತಳಿ ಮತ್ತು ಫಲಿತಾಂಶ ಆಧಾರಿತ ಅಧ್ಯಯನ 76.00 46.00 ಲಡಾಖ್‌ನ ಲೇಹ್‌ನಲ್ಲಿರುವ ಚಾಂಗ್ರಾ ಮೇಕೆಯ ಫಲಿತಾಂಶ ಆಧಾರಿತ ಅಧ್ಯಯನಕ್ಕಾಗಿ ಸಿ ಐ ಆರ್‌ ಜಿ, ಮಖ್ದೂಮ್ (ಯುಪಿ) ನೊಂದಿಗೆ ವಿಷಯವನ್ನು ಚರ್ಚಿಸಲಾಗಿದೆ. ವಿಜ್ಞಾನಿಗಳ ಗುಂಪು ಲೇಹ್‌ಗೆ ಭೇಟಿ ನೀಡಲಿದೆ. ತಜ್ಞರನ್ನು ಕಳುಹಿಸಲು ಸಿಎಸ್‌ಡಬ್ಲ್ಯುಆರ್‌ಐ ನಿರ್ದೇಶಕರೊಂದಿಗೆ ಚರ್ಚಿಸಲಾಗಿದೆ.

ಸಣ್ಣದಾಗಿ ಮೆಲುಕು ಹಾಕುವ ಪ್ರಾಣಿಗಳ ಕ್ಲಿನಿಕ್ ಅನ್ನು ಸ್ಥಾಪಿಸಲು ಸ್ಥಳವನ್ನು ಉಪ್ಶಿಯಲ್ಲಿ ಗುರುತಿಸಲಾಗಿದೆ ಮತ್ತು ನಿರ್ಮಾಣ ಹಂತದಲ್ಲಿದೆ.

ಪಶ್ಮಿನಾ ಮೇಕೆ ಸಾಕಣೆ ಕೇಂದ್ರದಿಂದ 50 ಪಶ್ಮಿನಾ ಹೆಣ್ಣು ಮೇಕೆಯನ್ನು ಅಧ್ಯಯನಕ್ಕಾಗಿ ಖರೀದಿಸಲಾಗಿದೆ.

2 ಪಶುವೈದ್ಯಕೀಯ ವೈದ್ಯರನ್ನು CSWRI & CIRG ಗೆ ಅಧ್ಯಯನ ಆಧಾರಿತ ತರಬೇತಿಗಾಗಿ ನಿಯೋಜಿಸಲಾಗಿದೆ.

11 ಲೇಹ್ ನಲ್ಲಿ ಪಶ್ಮಿನಾ ಡಿ-ಹೇರಿಂಗ್ ಘಟಕ ಸ್ಥಾಪನೆ 1,975.72 1,292.716 ಖರೀದಿ ಆದೇಶವನ್ನು ಸಲ್ಲಿಸಲಾಗಿದೆ. ಪೂರೈಕೆದಾರರೊಂದಿಗೆ ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಮತ್ತು ಬ್ಯಾಂಕ್ ಗ್ಯಾರಂಟಿಗಾಗಿ ಶೇ.20 ರಷ್ಟು ಪಾವತಿಯನ್ನು ಬಿಡುಗಡೆ ಮಾಡಲಾಗಿದೆ. ಪೂರಕ ಯಂತ್ರಗಳನ್ನು ಖರೀದಿಸಲಾಗಿದೆ

12 ಲಡಾಖ್ ಪ್ರದೇಶದ ಪಾಸ್ಮಿನಾ ಉಣ್ಣೆಯ ಜಿಐ ನೋಂದಣಿ 15.00 7.50 ಪೇಟೆಂಟ್ ಅರ್ಜಿ ಸಲ್ಲಿಸಲಾಗಿದೆ

ಒಟ್ಟು 3,512.22 2,670.216

ಅನುಷ್ಠಾನ ಏಜೆನ್ಸಿಯ ಹೆಸರು: ಎಲ್‌ ಎ ಹೆಚ್‌ ಡಿ ಸಿ, ಕಾರ್ಗಿಲ್ (ಲಡಾಖ್ ಯುಟಿ)

1 ಚಾಂಗ್ರಾ ಮೇಕೆಯ ಪೌಷ್ಟಿಕಾಂಶದ ಸ್ಥಿತಿಯನ್ನು ಸುಧಾರಿಸುವುದು- ಇಲಾಖೆಯ ಮೇವಿನ ಭೂಮಿಯ ಅಭಿವೃದ್ಧಿ 25.00 25.00 90ರಷ್ಟು ಭೂ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ.

ವಿದ್ಯುತ್ ಸೌಲಭ್ಯವನ್ನು ಅಳವಡಿಸಲಾಗಿದೆ.

ಏತ ನೀರಾವರಿ ಪಂಪ್‌ಗಾಗಿ ಬಾವಿಯನ್ನು ನಿರ್ಮಿಸಲಾಗಿದೆ

2 ಜಾನುವಾರುಗಳ ಸಾಮಾಜಿಕ ಆರ್ಥಿಕ ಉನ್ನತಿ- ಎಲ್ಇಡಿ ಬೆಳಕಿನೊಂದಿಗೆ ಪರಭಕ್ಷಕ ತಡೆ ಕೊಟ್ಟಿಗೆ 25.00 12.50 ಎಲ್‌ಇಡಿ ಲೈಟ್‌ನೊಂದಿಗೆ ಪರಭಕ್ಷಕ ತಡೆ ಕೊಟ್ಟಿಗೆಗಳಿಗಾಗಿ 25 ಘಟಕಗಳನ್ನು ಖರೀದಿಸಲಾಗಿದೆ

ಪರಭಕ್ಷಕ ತಡೆ ಕೊಟ್ಟಿಗೆಗಳಿಗಾಗಿ ಶೇ.20 ವಸ್ತುಗಳನ್ನು ಖರೀದಿಸಲಾಗಿದೆ.

3 ಪಶುವೈದ್ಯಕೀಯ ಆರೋಗ್ಯ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವುದು 117.50 117.50 ಡ್ರಾಸ್‌ನಲ್ಲಿರುವ ಕುರಿ ವಿಸ್ತರಣಾ ಕೇಂದ್ರವು ಪೂರ್ಣಗೊಂಡಿದೆ, ಝನ್ಸ್ಕರ್‌ನಲ್ಲಿ 2 ನೇ ಘಟಕವು ಪ್ರಗತಿಯಲ್ಲಿದೆ

ಲಸಿಕೆ ಸಂಗ್ರಹಾಗಾರಕ್ಕೆ ಸೌರ ವಿದ್ಯುತ್ ಬ್ಯಾಕಪ್ ಅನ್ನು ಸಂಪೂರ್ಣವಾಗಿ ಸ್ಥಾಪಿಸಲಾಗಿದೆ.

ಲಸಿಕೆ ವ್ಯಾನ್ ಅನ್ನು ಎಲ್ಲಾ ಬಿಡಿಭಾಗಗಳೊಂದಿಗೆ ಖರೀದಿಸಲಾಗಿದೆ.

4 ಅಸಾಂಪ್ರದಾಯಿಕ ಪ್ರದೇಶಗಳಲ್ಲಿ ಪಶ್ಮಿನಾ ಮೇಕೆ ಘಟಕಗಳ ಸ್ಥಾಪನೆ 192.00 170.00

ಆಶ್ರಯ ಶೆಡ್‌ಗಾಗಿ ವಸ್ತುಗಳನ್ನು ಖರೀದಿಸಲಾಗಿದೆ.

50 ಆಶ್ರಯ ಶೆಡ್‌ಗಳನ್ನು ನಿರ್ಮಿಸಲಾಗಿದೆ 50 ಅಡಿಪಾಯ ದಾಸ್ತಾನು ವಿತರಿಸಲಾಗಿದೆ.

5 ಖಂಗ್ರಾಲ್‌ನ ಪಶ್ಮಿನಾ ಮೇಕೆ ಫಾರ್ಮ್‌ನ ಉನ್ನತೀಕರಣ 165.00 165.00 100ರಷ್ಟು ಭೂ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ.

ಸಬ್ಮರ್ಸಿಬಲ್ ವಾಟರ್ ಪಂಪ್ ಅಳವಡಿಸಲಾಗಿದೆ.

2 ತೆರೆದ ಶೆಡ್‌ಗಳ ನಿರ್ಮಾಣ, ಮಕ್ಕಳಿಗಾಗಿ ಸ್ಥಳೀಯ ಮಾದರಿಯ ಶೆಡ್, ಮೇವು/ಔಷಧಿ ಅಂಗಡಿ ನಿರ್ಮಾಣ, 110 ಕನಾಲ್ ಜಮೀನಿಗೆ ಬೇಲಿ, ಒಂದು ಮೇಲ್ವಿಚಾರಣಾ ವಾಹನ ಮತ್ತು ಬಯಲು ದೊಡ್ಡಿ ನಿರ್ಮಾಣ ಪೂರ್ಣಗೊಂಡಿದೆ.

 

ಒಟ್ಟು 524.50 490.00

ಒಟ್ಟು (I + II) 4,036.72 3,160.216

 

ಈ ಮಾಹಿತಿಯನ್ನು ಜವಳಿ ಖಾತೆ ರಾಜ್ಯ ಸಚಿವೆ ಶ್ರೀಮತಿ ದರ್ಶನಾ ಜರ್ದೋಶ್ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದ ಮೂಲಕ ನೀಡಿದ್ದಾರೆ.

 

*********


(रिलीज़ आईडी: 1848031) आगंतुक पटल : 237
इस विज्ञप्ति को इन भाषाओं में पढ़ें: English , Urdu