ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ದೇಶಾದ್ಯಂತ 249 ಸ್ಥಳಗಳಲ್ಲಿ 111.125 ಲಕ್ಷ ಮೆಟ್ರಿಕ್ ಟನ್ ಮುಖ್ಯ ದಾಸ್ತಾನುಗಾರ  ಮತ್ತು ವಿತರಣಾಗಾರ ಮಾದರಿಯ  ಕಣಜ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.


ಯೋಜನೆಯಡಿ ಟೆಂಡರ್ ನೀಡಿದ 66 ಸ್ಥಳಗಳ ಪೈಕಿ 33 ಸ್ಥಳಗಳಲ್ಲಿ ಹೆಚ್ಚುವರಿ ಸರ್ಕಾರಿ ಭೂಮಿಯನ್ನು ಗುರುತಿಸಲಾಗಿದೆ

Posted On: 28 JUL 2022 3:02PM by PIB Bengaluru

ದೇಶಾದ್ಯಂತ ಗೋಧಿ ಕಣಜಗಳ  ಅಭಿವೃದ್ಧಿಗಾಗಿ 'ಹಬ್ ಮತ್ತು ಸ್ಪೋಕ್ ಮಾದರಿ'(ಮುಖ್ಯ ದಾಸ್ತಾನುಗಾರ ಮತ್ತು ವಿತರಣಾಗಾರ ಮಾದರಿ)ಯಲ್ಲಿ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ದೇಶಾದ್ಯಂತ 249 ಸ್ಥಳಗಳಲ್ಲಿ 111.125 ಲಕ್ಷ ಮೆಟ್ರಿಕ್ ಟನ್ ಕಣಜಗಳ  ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಪ್ರಸ್ತಾವನೆಯನ್ನು ಮಂಡಿಸಿದೆ. .

ಆಹಾರ ಧಾನ್ಯಗಳ ಸಂಗ್ರಹಣೆಯನ್ನು ಆಧುನೀಕರಿಸುವ ಮತ್ತು ಭಾರತದಲ್ಲಿ ಆಹಾರ ಧಾನ್ಯಗಳ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ, ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಹೊಸ ಮಾದರಿಯಾಗಿ  'ಹಬ್ & ಸ್ಪೋಕ್' ಮಾದರಿಯನ್ನು ಜಾರಿಗೆ ತರಲು ಪ್ರಸ್ತಾಪಿಸಲಾಗಿದೆ.

ಉದ್ದೇಶಿತ ದಾಸ್ತಾನುಗಾರಗಳು ವಿನ್ಯಾಸ, ನಿರ್ಮಾಣ, ಹಣಕಾಸು, ಸ್ವಂತ ಮಾಲಿಕತ್ವ ಮತ್ತು ವರ್ಗಾವಣೆ (ಡಿಬಿಎಫ್ಒಟಿ) (ಎಫ್.ಸಿ.ಐ. ಭೂಮಿ) ಹಾಗು ವಿನ್ಯಾಸ, ನಿರ್ಮಾಣ, ಹಣಕಾಸು, ಸ್ವಂತ ಮಾಲಕತ್ವ ಮತ್ತು ಕಾರ್ಯಾಚರಣೆ (ಡಿಬಿಎಫ್ಒಒ) (ರಿಯಾಯತಿದಾರ / ಇತರ ಏಜೆನ್ಸಿಗೆ ಸೇರಿದ ಭೂಮಿಯಾಗಿದ್ದಲ್ಲಿ) ಮಾದರಿಯಲ್ಲಿ ಅನುಷ್ಠಾನ ಏಜೆನ್ಸಿ , ಅಂದರೆ ಭಾರತೀಯ ಆಹಾರ ನಿಗಮ (ಎಫ್.ಸಿ.ಐ.)) ಮೂಲಕ ಕಾರ್ಯಾಚರಿಸುತ್ತವೆ.

26/04/2022 ರಂದು ಡಿಬಿಎಫ್ಒಟಿ ಮಾದರಿಯಲ್ಲಿ 14 ಸ್ಥಳಗಳಲ್ಲಿ (10.125 ಎಲ್ಎಂಟಿ) ಮತ್ತು 21/06/2022 ರಂದು ಡಿಬಿಎಫ್ಒಒ ಮಾದರಿಯಲ್ಲಿ 66 ಸ್ಥಳಗಳಲ್ಲಿ (24.75 ಎಲ್ಎಂಟಿ) ಮೊದಲನೇ ಹಂತದ ದಾಸ್ತಾನುಗಾರ/ಕಣಜಗಳನ್ನು (ಸೈಲೋಗಳನ್ನು) ನಿರ್ಮಿಸಲು ಟೆಂಡರ್ ಆಹ್ವಾನಿಸಲಾಗಿದೆ.

ಡಿ.ಬಿ.ಎಫ್.ಒ.ಒ. ಯೋಜನೆಯಲ್ಲಿ ಭೂ ಸ್ವಾಧೀನ ಅತ್ಯಂತ ನಿರ್ಣಾಯಕ ಭಾಗವಾಗಿರುವುದರಿಂದ, ರಿಯಾಯಿತಿದಾರರಿಗೆ ಭೂಮಿಯ ಲಭ್ಯತೆಯನ್ನು ಸುಗಮಗೊಳಿಸುವ ಸಲುವಾಗಿ, ಈ ಇಲಾಖೆಯು ಸೂಕ್ತವಾದ ಹೆಚ್ಚುವರಿ ಭೂಮಿ ಇದ್ದಲ್ಲಿ ಅದನ್ನು ಗುರುತಿಸುವುದಕ್ಕಾಗಿ ಸಂಬಂಧಪಟ್ಟ ರಾಜ್ಯ ಸರ್ಕಾರಗಳೊಂದಿಗೆ ವ್ಯವಹರಿಸುತ್ತಿದೆ.

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ನಿರಂತರ ಪ್ರಯತ್ನಗಳು, ರಾಜ್ಯ ಸರ್ಕಾರಗಳೊಂದಿಗಿನ ಹಲವಾರು  ಸಭೆಗಳ ಫಲವಾಗಿ  ಮತ್ತು ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ, ಅನ್ವಯವಾಗುವ ನಿಯಮಗಳ ಅಡಿಯಲ್ಲಿ ಆಯಾ ರಿಯಾಯಿತಿದಾರರಿಗೆ ಭೋಗ್ಯ / ವರ್ಗಾವಣೆಗಾಗಿ ಭೂಮಿಯನ್ನು ರಾಜ್ಯ ಸರ್ಕಾರಗಳು ಗುರುತಿಸಿವೆ.

ಇಲ್ಲಿಯವರೆಗೆ, ಪಂಜಾಬ್ ರಾಜ್ಯವು 26 ಸ್ಥಳಗಳಲ್ಲಿ ಸರ್ಕಾರಿ / ಪಂಚಾಯತ್ ಭೂಮಿಯ ಲಭ್ಯತೆಯನ್ನು ದೃಢಪಡಿಸಿದೆ, ಆ ಸ್ಥಳಗಳೆಂದರೆ ರಾಜ್ಪುರ, ಕಲನೌರ್ (ಉತ್ತರ), ಔಲಾಖ್, ಬಲಾದ್ ಕಲಾನ್, ಘರಾಂಚೋ, ನಾದಂಪುರ್, ಟ್ಯಾಂಗೋರಿ, ಸುಂದ್ರಾ, ಚಾವೋ ಮಜ್ರಾ, ಚಿಲ್ಲಾ, ರಾಯ್ಪುರ್ ಖುರ್ದ್, ಮೌಲಿ ಬೈದ್ವಾನ್ (ಜೈವಿಕ ತಂತ್ರಜ್ಞಾನ ಪಾರ್ಕ್), ರಾಡಿಯಾಲ, ಡೈರಿ, ದಹಾನಾಸು (ಹೈಟೆಕ್. ಸೈಕಲ್ ವ್ಯಾಲಿ), ಮಟ್ಟೆವಾರ, ನಸ್ರಾಲಿ, ಮನೇವಾಲ್, ಗೋರ್ಸಿಯಾನ್ ಖದಾರ್ ಬಕ್ಷಾ, ನಯಾ ನಂಗಲ್, ಮುಲೇಪುರ, ರಿಯೋನಾ ಉಚ್ಚ, ರಿಯೋನಾ ನಿವಾನ್, ಮೆಹಡಿಯನ್, ವಾಜಿರಾಬಾದ್, ಮತ್ತು ನಬೀಪುರ.  ರಾಜ್ಯ ಸರ್ಕಾರದ ಭೂ ಬ್ಯಾಂಕ್ ದತ್ತಾಂಶ, ಸಂಬಂಧಿತ ಗುತ್ತಿಗೆ ನೀತಿಗಳು ಮತ್ತು ಭೂಮಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇತ್ಯಾದಿಗಳನ್ನು http://investpunjab.gov.in/home -ಇಲ್ಲಿ ನೋಡಬಹುದು. ಭೂ ಬ್ಯಾಂಕ್ ದತ್ತಾಂಶವು ರಿಯಾಯಿತಿದಾರರ ಅಗತ್ಯವನ್ನು ಪೂರೈಸುವುದಿಲ್ಲ ಎಂದಿದ್ದರೆ, ಇತರ ಸ್ಥಳಗಳಲ್ಲಿಯೂ ಭೂಮಿಯನ್ನು ಗುರುತಿಸಲು ಸಿದ್ಧವಿರುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ.

ಯುಪಿ ರಾಜ್ಯದಲ್ಲಿ ಪ್ರಾಥಮಿಕ ಸಮೀಕ್ಷೆಯ ನಂತರ, ಔರೈಯಾ ಮತ್ತು ಬದೌನ್ ಎಂಬ ಎರಡು ಸ್ಥಳಗಳು ಸೂಕ್ತವೆಂದು ಕಂಡುಬಂದಿದೆ. ಗುಜರಾತ್ ರಾಜ್ಯವು ಬನಸ್ಕಥಾದಲ್ಲಿ ಕಣಜ/ದಾಸ್ತಾನುಗಾರ ನಿರ್ಮಾಣಕ್ಕಾಗಿ ಒಂದು ಸ್ಥಳವನ್ನು ಗುರುತಿಸಿದೆ. ಮಧ್ಯಪ್ರದೇಶ ರಾಜ್ಯವು ಉಜ್ಜಯಿನಿ, ಧಾರ್, ಗುಣ ಮತ್ತು ದಾಮೋಹ್ ಎಂಬ ನಾಲ್ಕು ಸ್ಥಳಗಳನ್ನು ಗುರುತಿಸಿದೆ.

ಹಬ್ & ಸ್ಪೋಕ್ (ದಾಸ್ತಾನುಗಾರ ಮತ್ತು ವಿತರಣಾಗಾರ) ಯೋಜನೆಗಳಿಗಾಗಿ ಹೆಚ್ಚುವರಿ ಸರ್ಕಾರಿ ಭೂಮಿಯನ್ನು ಗುರುತಿಸುವುದರಿಂದ ಸಂಭಾವ್ಯ ಬಿಡ್ಡರ್ ಗಳಿಗೆ ಅನುಕೂಲವಾಗಲಿದೆ, ಏಕೆಂದರೆ ಹೀಗೆ ಗುರುತಿಸಲಾದ ಭೂಭಾಗಗಳನ್ನು ಗುತ್ತಿಗೆಗೆ ತೆಗೆದುಕೊಳ್ಳುವ ಸಾಧ್ಯತೆಯನ್ನು ಅನ್ವೇಷಿಸಬಹುದಾಗಿರುತ್ತದೆ. ಇದರಿಂದ  ಖರೀದಿಯ ಮೂಲಕ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ  ಆಗುವ ವಿಳಂಬ ಮತ್ತು ತೊಂದರೆಗಳು ನಿವಾರಣೆಯಾದಂತಾಗುತ್ತವೆ.

ಹಬ್ ಮತ್ತು ಸ್ಪೋಕ್ ಮಾಡೆಲ್ ಎಂಬುದು ಒಂದು ಸಾರಿಗೆ ವ್ಯವಸ್ಥೆಯಾಗಿದ್ದು, ಇದು "ಸ್ಪೋಕ್" ಎಂದು ಕರೆಯಲ್ಪಡುವ ನಿರ್ದಿಷ್ಟ ಸ್ಥಳಗಳಿಂದ ದೂರದಲ್ಲಿರುವ “ಹಬ್” ಎಂದು ಕರೆಯಲ್ಪಡುವ ಕೇಂದ್ರೀಯ ಸ್ಥಳಕ್ಕೆ ಉತ್ಪನ್ನಗಳನ್ನು ಸಾಗಿಸುತ್ತದೆ. ಹಬ್ ಗಳು ಮೀಸಲಾದ ರೈಲ್ವೆ ಮಗ್ಗುಲು ಮತ್ತು ಕಂಟೇನರ್ ಡಿಪೋ ಸೌಲಭ್ಯವನ್ನು ಹೊಂದಿರುತ್ತವೆ ಮತ್ತು , ಸ್ಪೋಕ್ ನಿಂದ ಹಬ್ ಗೆ ಸಾಗಾಟವನ್ನು  ರಸ್ತೆಯ ಮೂಲಕ ಹಾಗು ಹಬ್ ನಿಂದ ಹಬ್ ಗೆ ರೈಲು ಮಾರ್ಗದ ಮೂಲಕ ಸಾಗಾಟ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈ ಮಾದರಿಯು ರೈಲ್ವೆ ಮಗ್ಗುಲಿನ (ಬದಿ) ದಕ್ಷತೆಯನ್ನು ಬಳಸಿಕೊಳ್ಳುವ ಮೂಲಕ, ಬೃಹತ್ ಸಂಗ್ರಹಣೆ ಮತ್ತು ರವಾನೆಯ ಮೂಲಕ ವೆಚ್ಚದ ದಕ್ಷತೆಯನ್ನು ಉತ್ತೇಜಿಸುತ್ತದೆ. ನಿರ್ವಹಣೆ ಮತ್ತು ಸಾರಿಗೆಯ ವೆಚ್ಚ ಕಡಿಮೆಯಾಗುತ್ತದೆ,  ಸಮಯವನ್ನೂ  ಉಳಿತಾಯ ಮಾಡುತ್ತದೆ ಮತ್ತು ದೇಶದಲ್ಲಿ ಆರ್ಥಿಕ ಅಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ ಹಾಗು ಉದ್ಯೋಗ ಸೃಷ್ಟಿಯ ಜೊತೆಗೆ ಕಾರ್ಯಾಚರಣೆಯ ಸಂಕೀರ್ಣತೆಗಳನ್ನು ಸರಳೀಕರಿಸುತ್ತದೆ.

********(Release ID: 1845891) Visitor Counter : 149


Read this release in: English , Urdu , Hindi , Odia