ಪರಿಸರ ಮತ್ತು ಅರಣ್ಯ ಸಚಿವಾಲಯ

ಯು.ಎನ್.ಸಿ.ಸಿ.ಡಿ.ಯ ಸದಸ್ಯ ರಾಷ್ಟ್ರಗಳ ಸಮಾವೇಶದ 15ನೇ ಅಧಿವೇಶನದಲ್ಲಿ ಕೇಂದ್ರ ಪರಿಸರ ಸಚಿವರ ರಾಷ್ಟ್ರೀಯ ಹೇಳಿಕೆ


ಭೂ ಸವಕಳಿ, ಮರುಭೂಮಿಯಾಗುವಿಕೆ ಮತ್ತು ಕ್ಷಾಮದ ವಿರುದ್ಧ ಸಂಘಟಿತ ಹೋರಾಟ ನಡೆಸಲು ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ಕೈಗೊಂಡ ಕ್ರಮಗಳನ್ನು ಪ್ರಸ್ತುತ ಪಡಿಸಿದ ಭಾರತ

ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯಲ್ಲಿ ಸಾರ್ವಜನಿಕ ಹಣಕಾಸಿನ ಹರಿವನ್ನು ಖಾತ್ರಿಪಡಿಸಿಕೊಳ್ಳುವುದು ನಿರ್ಣಾಯಕವಾಗಿದ್ದು, ಅವುಗಳನ್ನು ಬೆಂಬಲಿಸಲು ಅಗತ್ಯವಾದ ಅನುಷ್ಠಾನದ ವಿಧಾನಗಳಿಲ್ಲದೆ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು ಫಲಪ್ರದವಾಗುವುದಿಲ್ಲ: ಶ್ರೀ ಭೂಪೇಂದ್ರ ಯಾದವ್.

ಹವಾಮಾನ ಬದಲಾವಣೆ, ಜೀವವೈವಿಧ್ಯ ಮತ್ತು ಮರುಭೂಮಿಯಾಗುವಿಕೆ ಕುರಿತ ರಿಯೊ ಒಪ್ಪಂದಗಳ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿರುವ ದೇಶಗಳ ನಡುವೆ ಜಾಗತಿಕ ಅಲ್ಪಸಂಖ್ಯಾತ ರಾಷ್ಟ್ರಗಳ ಹೆಚ್ಚಿನ ಬಳಕೆಯ ಜೀವನಶೈಲಿಯಿಂದ ಪ್ರೇರಿತವಾದ ಅತಿಯಾದ ಹೊರಸೂಸುವಿಕೆಯನ್ನು ತುರ್ತಾಗಿ ತಗ್ಗಿಸಬೇಕು

ಕೋಟ್ ಡಿ' ಐವೊರೆ ಗಣರಾಜ್ಯಕ್ಕೆ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಿದ ಭಾರತ

Posted On: 11 MAY 2022 7:04PM by PIB Bengaluru

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ  ಬದಲಾವಣೆ ಖಾತೆ ಸಚಿವ ಶ್ರೀ ಭೂಪೇಂದ್ರ ಯಾದವ್ ಅವರಿಂದು ಯು.ಎನ್.ಸಿ.ಸಿ.ಡಿ.ಯ ಪಕ್ಷಕಾರರ ಸಮಾವೇಶದ 15ನೇ ಅಧಿವೇಶನದಲ್ಲಿ ರಾಷ್ಟ್ರೀಯ ಹೇಳಿಕೆ ನೀಡಿದರು. ಕೋಟ್ ಡಿ'ಐವೊರ್ ನಲ್ಲಿ ನಡೆದ ಮರುಭೂಮೀಕರಣ ನಿಗ್ರಹ ಕುರಿತ ವಿಶ್ವಸಂಸ್ಥೆಯ ಸಮಾವೇಶ (ಯು.ಎನ್.ಸಿಸಿಡಿ)ಯ ಪಕ್ಷಕಾರರ ಸಮಾವೇಶದ ಹದಿನೈದನೇ ಅಧಿವೇಶನದಲ್ಲಿ  ಅವರು  ಮಾತನಾಡುತ್ತಿದ್ದರು.

ಪರಿಸರ ವ್ಯವಸ್ಥೆಯ ಅವನತಿ ಮತ್ತು ಹಾನಿಯನ್ನು ತಡೆಯುವ ಮತ್ತು ಹಿಮ್ಮೆಟ್ಟಿಸುವ ಗುರಿಯನ್ನು ಹೊಂದಿರುವ ಪರಿಸರ ವ್ಯವಸ್ಥೆಯ ಪುನರ್ ಸ್ಥಾಪನೆ (2021-2030)ಯ ವಿಶ್ವಸಂಸ್ಥೆ ದಶಕ ಉಪಕ್ರಮದ ಪ್ರಾರಂಭದಂತಹ ಹಲವು ಜಾಗತಿಕ ಬೆಳವಣಿಗೆಗಳು ಯುಎನ್.ಸಿಸಿಡಿಯ ಉದ್ದೇಶಗಳಿಗೆ ನೇರ ಮತ್ತು ಪರೋಕ್ಷ ಬೆಂಬಲವನ್ನು ಒದಗಿಸುವ ನವೀಕೃತ ಮತ್ತು ಬಲವಾದ ಸಂಕಲ್ಪವನ್ನು ಸೂಚಿಸುತ್ತವೆ ಎಂದು ಸಚಿವರು ಹೇಳಿದರು. 2020ರ ನಂತರದ ಜಾಗತಿಕ ಜೀವವೈವಿಧ್ಯತೆಯ ಚೌಕಟ್ಟಿನಲ್ಲಿ ನೈಸರ್ಗಿಕ ಪರಿಸರ ವ್ಯವಸ್ಥೆಗಳ ಪ್ರದೇಶ, ಸಂಪರ್ಕ ಮತ್ತು ಸಮಗ್ರತೆಯನ್ನು ಹೆಚ್ಚಿಸಲು ಪ್ರಾಮುಖ್ಯತೆ ನೀಡಲಾಗಿದೆ. ಈ ಕಾಪ್ ನಲ್ಲಿ, ಭೂಮಿಯನ್ನು ಸುಸ್ಥಿರವಾಗಿ ನಿರ್ವಹಿಸಿ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಪ್ರಯೋಜನವನ್ನು ನೀಡುವುದನ್ನು ಖಾತ್ರಿಪಡಿಸಿಕೊಳ್ಳಲು ನಾವು ಕ್ರಮಕ್ಕೆ ಕರೆ ನೀಡಿದ್ದೇವೆ ಎಂದರು.

ಸುಸ್ಥಿರ ಅಭಿವೃದ್ಧಿ ಹಲವು ಗುರಿಗಳನ್ನು ಸಾಧಿಸುವಲ್ಲಿ ಭೂಮಿ ಮೂಲಭೂತ ಮತ್ತು ಒಗ್ಗೂಡಿಸುವ ಪಾತ್ರವನ್ನು ವಹಿಸುತ್ತದೆ ಎಂದು ಒತ್ತಿಹೇಳಿದರು. ಎಸ್.ಡಿಜಿಗಳ ಗುರಿಗಳನ್ನು ಪೂರೈಸುವುದು ವೃಕ್ಷ ವ್ಯಾಪ್ತಿ, ಮಣ್ಣಿನ ಸಂರಕ್ಷಣೆ ಮತ್ತು ಸುಸ್ಥಿರ ಕೃಷಿ ಉತ್ಪಾದನೆಯತ್ತ ಪರಿವರ್ತನೆಯನ್ನು ತ್ವರಿತಗೊಳಿಸಲು ಇದು ಸಹಾಯ ಮಾಡುತ್ತದೆ. ಭೂಮಿಯ ಮರುಸ್ಥಾಪನೆಯು ಹಸಿರು ಚೇತರಿಕೆಯ ಹಾದಿಯಲ್ಲಿ ನಮ್ಮನ್ನು ಇಡಬಲ್ಲುದೆಂದು ಸಾಬೀತುಪಡಿಸಿದ ಕಾರ್ಯತಂತ್ರಗಳಲ್ಲಿ ಒಂದಾಗಿದೆ. ಇದು ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಗ್ರಾಮೀಣ ಸಮುದಾಯಗಳ ಉದ್ಧಾರ ಮತ್ತು ಮಾನವ ಆರೋಗ್ಯ, ಜೀವವೈವಿಧ್ಯತೆ ಮತ್ತು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು ಗಮನಾರ್ಹ ಪೂರಕ-ಪ್ರಯೋಜನಗಳನ್ನೂ ನೀಡುತ್ತದೆ.

"ಭೂರಮೆಯ ಪುನರ್ ಸ್ಥಾಪನೆ ಮತ್ತು ಅದರ ಉತ್ಪಾದಕತೆಗೆ ಕೊಡುಗೆ ನೀಡುವ ನಮ್ಮ ನೀತಿಗಳು ಮತ್ತು ಸಂಸ್ಥೆಗಳನ್ನು ನಾವು ಸೂಕ್ತವಾಗಿ ಹೊಂದಿಸಬೇಕಾಗಿದೆ.  ಹದಗೆಡುತ್ತಿರುವ ಸ್ಥಿತಿಯಲ್ಲಿರುವ ಪರಿಸರ ತಡೆಯಲು ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯಲ್ಲಿ ಸಾರ್ವಜನಿಕ ಹಣಕಾಸಿನ ಹರಿವನ್ನು ಖಾತ್ರಿಪಡಿಸಿಕೊಳ್ಳುವುದು ನಿರ್ಣಾಯಕವಾಗಿದೆ. ನಮ್ಮ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು ಅವುಗಳನ್ನು ಬೆಂಬಲಿಸಲು ಅಗತ್ಯವಾದ ಅನುಷ್ಠಾನದ ಮಾರ್ಗಗಳಿಲ್ಲದೆ ಫಲಪ್ರದವಾಗುವುದಿಲ್ಲ" ಎಂದು ಶ್ರೀ ಯಾದವ್ ಹೇಳಿದರು.

ನಮ್ಮ ಚೇತರಿಕೆ ಪ್ರಕ್ರಿಯೆಯು ನಮ್ಮ ಬಳಕೆಯ ರೂಢಿಗಳನ್ನು ಬದಲಾಯಿಸುವ ಮೂಲಕ ವೈಯಕ್ತಿಕ ಮಟ್ಟದಲ್ಲಿ ಬದಲಾವಣೆಯನ್ನು ಜಾಗೃತಗೊಳಿಸುವ ಅಗತ್ಯವಿದೆ ಎಂದು ಸಚಿವರು ಒತ್ತಿ ಹೇಳಿದರು, ಅದು ಆಗದಿದ್ದರೆ ನಾವು ಭೂಮಿಯ ಮೇಲೆ ಭಾರಿ ಒತ್ತಡಗಳನ್ನು ಹಾಕುವುದನ್ನು ಮುಂದುವರಿಸುತ್ತೇವೆ.
ಹವಾಮಾನ ಬದಲಾವಣೆ, ಜೀವವೈವಿಧ್ಯತೆ ಮತ್ತು ಮರುಭೂಮಿಕರಣದ ವಿರುದ್ಧ ಹೋರಾಡುವ ಮೂರು ಸಮಾವೇಶಗಳು ಎಲ್ಲಾ ದೇಶಗಳ ನಡುವೆ ಜಾಗತಿಕ ಅಲ್ಪಸಂಖ್ಯಾತರ ಹೆಚ್ಚಿನ ಬಳಕೆಯ ಜೀವನಶೈಲಿಯೊಂದಿಗೆ ನಂಟು ಹೊಂದಿವೆ. ಮತ್ತು ತುರ್ತಾಗಿ ಅವುಗಳ ಅತಿಯಾದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ಈ ಮೂರು ಸಮಾವೇಶಗಳ ಯಶಸ್ಸಿಗೆ ಪ್ರಮುಖವಾಗಿದೆ ಎಂದರು.
ಭಾರತದ ಅಧ್ಯಕ್ಷತೆಯ ಅವಧಿಯಲ್ಲಿ,  ಬ್ಯೂರೋ ಏಳು ಉನ್ನತ ಮಟ್ಟದ ಸಭೆಗಳನ್ನು ಯಶಸ್ವಿಯಾಗಿ ಕರೆದಿತ್ತು ಎಂಬ ವರದಿಯನ್ನು ಸಚಿವರು ಸಂತೋಷದಿಂದ ಹಂಚಿಕೊಂಡರು, ಅದು ರೋಮಾಂಚಕ ಚರ್ಚೆಗಳಿಗೆ ಸಾಕ್ಷಿಯಾಯಿತು ಮತ್ತು ಈ ಕೆಳಗಿನ ನಿರ್ಧಾರಗಳಿಗೂ ಕಾರಣವಾಗಿತ್ತು: 
ರಿಯೊ + 30 ರ ಹಾದಿಯಲ್ಲಿ ಬಹುಪಕ್ಷೀಯ ವೇದಿಕೆಗಳನ್ನು ಬಳಸಿಕೊಳ್ಳುವುದು.
ಮೇ 2022ರಲ್ಲಿ ಕೋಟ್ ಡಿ'ಐವೊರ್ ನಲ್ಲಿ   (ಕಾಪ್ -15) ಸಮ್ಮೇಳನದ ಹದಿನೈದನೇ ಅಧಿವೇಶನದ ನಿಗದಿ.
ಕ್ಷಾಮದ ಬಗ್ಗೆ ಅಂತರ ಸರ್ಕಾರೀಯ ಕಾರ್ಯ ಗುಂಪಿನಲ್ಲಿ (ಐಡಬ್ಲ್ಯೂಜಿ) ಚರ್ಚೆಗಳು,
ಸಭೆಯ ನಿರ್ಣಯ ಅನುಷ್ಠಾನದ ಪರಾಮರ್ಶೆಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಯ (ಸಿಎಸ್.ಟಿ) ವರದಿ (ಸಿಆರ್.ಐಸಿ-19). 2022 ರ ಮಧ್ಯಂತರ ಬಜೆಟ್ ಬಗ್ಗೆ ಚರ್ಚಿಸಲು ಮತ್ತು ಯುಎನ್.ಸಿ.ಸಿ.ಡಿಯ ಕಾರ್ಯನಿರ್ವಾಹಕ ಕಾರ್ಯದರ್ಶಿಯ ಅವಧಿಯನ್ನು  ವಿಸ್ತರಿಸಲು ಶಿಫಾರಸು ಮಾಡಲು ಎರಡು ವಿಶೇಷ ಅಧಿವೇಶನಗಳು.
ಈ ಅವಧಿಯಲ್ಲಿ ಭೂ ಸವಕಳಿಯನ್ನು ಎದುರಿಸುವ ಮತ್ತು 1 ಟ್ರಿಲಿಯನ್ ಮರಗಳನ್ನು ಸಾಮೂಹಿಕವಾಗಿ ನೆಡುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ ಹೊಸ ಕಾರ್ಬನ್ ಸಿಂಕ್  ಗಳನ್ನು ಸೃಷ್ಟಿಸುವ ಮಹತ್ವವನ್ನು   ಜಿ-20 ನಾಯಕರು      ಗುರುತಿಸಿದ್ದಾರೆ, 2030 ರ ವೇಳೆಗೆ ಈ ಜಾಗತಿಕ ಗುರಿಯನ್ನು ತಲುಪಲು ಜಿ 20 ರಾಷ್ಟ್ರಗಳ ಜೊತೆಗೆ ಕೈಜೋಡಿಸುವಂತೆ ಇತರ ದೇಶಗಳನ್ನು ಒತ್ತಾಯಿಸಿದ್ದಾರೆ.   ಮರುಭೂಮಿಯಾಗುವಿಕೆ, ಭೂ ಸವಕಳಿ ಮತ್ತು ಬರ ಕುರಿತು ವಿಶ್ವಸಂಸ್ಥೆಯ ಸರ್ವ ಸದಸ್ಯರ ಸಭೆಯ ಉನ್ನತ ಮಟ್ಟದ ಸಂವಾದ ನಡೆಯಿತು, ಅಲ್ಲಿ ಭಾರತದ ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೂ ಸವಕಳಿಯನ್ನು ಎದುರಿಸಲು ಭಾರತ ಕೈಗೊಂಡಿರುವ ಉಪಕ್ರಮಗಳು ಮತ್ತು ಯಶೋಗಾಥೆಯ ಬಗ್ಗೆ ಬೆಳಕು ಚೆಲ್ಲಿದರು ಎಂದು ಅವರು ಹೇಳಿದರು.
ಇದೇ ಮೊದಲ ಬಾರಿಗೆ, ವಿಶ್ವಸಂಸ್ಥೆಯ ಮರುಭೂಮಿಕರಣ ನಿಗ್ರಹ ಕುರಿತ ಸಮಾವೇಶದ (ಯುಎನ್ ಸಿಸಿಡಿ) ಅಡಿಯಲ್ಲಿ ಕ್ಷಾಮವನ್ನು ಎದುರಿಸಲು ಪರಿಣಾಮಕಾರಿ ನೀತಿ ಮತ್ತು ಅನುಷ್ಠಾನ ಕ್ರಮಗಳ ಕುರಿತು ಅಂತರ ಸರ್ಕಾರೀಯ ಕಾರ್ಯ ಗುಂಪು (ಐಡಬ್ಲ್ಯೂಜಿ)ನ್ನು 23/ಕಾಪ್.14ರ ನಿರ್ಧಾರದಂತೆ ಸ್ಥಾಪಿಸಲಾಗಿದೆ ಎಂದು ಶ್ರೀ ಯಾದವ್ ತಿಳಿಸಿದರು. ಕರಡು ವರದಿಯನ್ನು ಸಿದ್ಧಪಡಿಸಲಾಗಿದ್ದು, ಕಾಪ್-15 ರ ಸಮಯದಲ್ಲಿ ಚರ್ಚಿಸಲಾಗುವುದು ಎಂದರು.
ಜಾಗತಿಕ ಸಮುದಾಯಕ್ಕೆ ತನ್ನ ಬದ್ಧತೆ ಮತ್ತು ಈ ಸಮಾವೇಶದ ಮೂಲಭೂತ ಉದ್ದೇಶಗಳಿಗೆ ನಮ್ಮ ಬದ್ಧತೆಯ ಭಾಗವಾಗಿ ಭಾರತವು 2019ರಲ್ಲಿ ದೆಹಲಿಯಲ್ಲಿ 14ನೇ ಕಾಪ್ ಅನ್ನು ನಡೆಸಿತು ಎಂದು ಹೇಳಿ ಶ್ರೀ ಯಾದವ್ ತಮ್ಮ ಹೇಳಿಕೆ ಮುಕ್ತಾಯಗೊಳಿಸಿದರು. ಕಠಿಣ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲೂ ಅಧ್ಯಕ್ಷ ಸ್ಥಾನವನ್ನು ಭಾರತ ಹೊಂದಿತ್ತು ಎಂದು ಅವರು ಹೇಳಿದರು.
"ನಮ್ಮ ಪ್ರಯಾಣದ ಮುಂದಿನ ಹಂತವನ್ನು ಪ್ರಾರಂಭಿಸಲು, ಈ ಪ್ರಮುಖ ಕಾರ್ಯವನ್ನು ಮುಂದುವರಿಸಲು ಜಗತ್ತು ಈಗ ಅಬಿದ್ಜನ್ ಅನ್ನು ಆಯ್ಕೆ ಮಾಡಿದೆ. ಈ ಜವಾಬ್ದಾರಿಯನ್ನು ನಾವು ನಮ್ಮ ಅತಿಥೇಯರಾದ ಕೋಟ್ ಡಿ'ಐವೊರ್ ಗಣರಾಜ್ಯಕ್ಕೆ ವರ್ಗಾಯಿಸುತ್ತೇವೆ, ನೀವು ಈ ಕೆಲಸವನ್ನು ಚಾಣಾಕ್ಷ ಮತ್ತು ಉತ್ಸಾಹದಿಂದ ಕೈಗೊಳ್ಳುತ್ತೀರಿ ಎಂದು ಭಾವಿಸಿದ್ದೇವೆ. ಭೂತಾಯಿಯ ಬಗ್ಗೆ ಕಾಳಜಿ ಮತ್ತು ಗೌರವದಿಂದ ಸುಸ್ಥಿರತೆಯ ಹಾದಿಯಲ್ಲಿ ಸಾಗಲು ಜಾಗತಿಕ ಸಮುದಾಯಕ್ಕೆ ಮಾರ್ಗದರ್ಶನ ನೀಡಲು ನಾವು ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇವೆ" ಎಂದು ಶ್ರೀ ಭೂಪೇಂದ್ರ ಯಾದವ್ ತಿಳಿಸಿದರು.
* ಬಗ್ಗೆ ಚರ್ಚಿಸಲು ಮತ್ತು ಯುಎನ್.ಸಿ.ಸಿಡಿಯ ಕಾರ್ಯನಿರ್ವಾಹಕ ಕಾರ್ಯದರ್ಶಿಯ ಅವಧಿಯನ್ನು ಸರ್ವಾನುಮತದಿಂದ ಒಪ್ಪಿದ ಅವಧಿಯನ್ನು ವಿಸ್ತರಿಸಲು ಶಿಫಾರಸು ಮಾಡಲು ಎರಡು ವಿಶೇಷ ಅಧಿವೇಶನಗಳು.
ಈ ಅವಧಿಯಲ್ಲಿ ಜಿ-20 ನಾಯಕರು ಭೂ ಸವಕಳಿಯನ್ನು ಎದುರಿಸುವ ಮತ್ತು 1 ಟ್ರಿಲಿಯನ್ ಮರಗಳನ್ನು ಸಾಮೂಹಿಕವಾಗಿ ನೆಡುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ ಹೊಸ ಕಾರ್ಬನ್ ಸಿಂಕ್  ಗಳನ್ನು ಸೃಷ್ಟಿಸುವ ಪ್ರಾಮುಖ್ಯತೆಯನ್ನು ಗುರುತಿಸಿದ್ದಾರೆ, 2030 ರ ವೇಳೆಗೆ ಈ ಜಾಗತಿಕ ಗುರಿಯನ್ನು ತಲುಪಲು ಜಿ 20 ಜೊತೆಗೆ ಕೈಜೋಡಿಸುವಂತೆ ಇತರ ದೇಶಗಳನ್ನು ಒತ್ತಾಯಿಸಿದ್ದಾರೆ.   ಮರುಭೂಮೀಕರಣ, ಭೂ ಸವಕಳಿ ಮತ್ತು ಬರ ಕುರಿತು ವಿಶ್ವಸಂಸ್ಥೆಯ ಸರ್ವ ಸದಸ್ಯರ ಸಭೆಯ ಉನ್ನತ ಮಟ್ಟದ ಸಂವಾದ  2021 ರ ಜೂನ್ 14 ರಂದು    ನಡೆಯಿತು, ಅಲ್ಲಿ ಭಾರತದ ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೂ ಸವಕಳಿಯನ್ನು ಎದುರಿಸಲು ಭಾರತ ಕೈಗೊಂಡಿರುವ ಉಪಕ್ರಮಗಳು ಮತ್ತು ಯಶೋಗಾಥೆಯ ಬಗ್ಗೆ ಬೆಳಕು ಚೆಲ್ಲಿದರು ಎಂದು ಅವರು ಹೇಳಿದರು.
 ಮರುಭೂಮಿಯಾಗುವುದನ್ನು ತಡೆಯುವುದರ ಕುರಿತ ವಿಶ್ವಸಂಸ್ಥೆಯ ಸಮಾವೇಶದ (ಯುಎನ್ ಸಿಸಿಡಿ) ಅಡಿಯಲ್ಲಿ ಕ್ಷಾಮವನ್ನು ಎದುರಿಸಲು ಪರಿಣಾಮಕಾರಿ ನೀತಿ ಮತ್ತು ಅನುಷ್ಠಾನ ಕ್ರಮಗಳ ಕುರಿತು ಅಂತರ ಸರ್ಕಾರೀಯ ಕಾರ್ಯ ಗುಂಪು (ಐಡಬ್ಲ್ಯೂಜಿ)ನ್ನು 23/ಕಾಪ್.14ರ ನಿರ್ಧಾರದಂತೆ ಸ್ಥಾಪಿಸಲಾಗಿದೆ ಎಂದು ಶ್ರೀ ಯಾದವ್ ತಿಳಿಸಿದರು. ಕರಡು ವರದಿಯನ್ನು ಸಿದ್ಧಪಡಿಸಲಾಗಿದ್ದು, ಕಾಪ್-15 ರ ಸಮಯದಲ್ಲಿ ಚರ್ಚಿಸಲಾಗುವುದು ಎಂದರು.
ಜಾಗತಿಕ ಸಮುದಾಯಕ್ಕೆ ತನ್ನ ಬದ್ಧತೆ ಮತ್ತು ಈ ಸಮಾವೇಶದ ಮೂಲಭೂತ ಉದ್ದೇಶಗಳಿಗೆ ನಮ್ಮ ಬದ್ಧತೆಯ ಭಾಗವಾಗಿ ಭಾರತವು 2019ರಲ್ಲಿ ದೆಹಲಿಯಲ್ಲಿ 14ನೇ ಕಾಪ್ ಅನ್ನು ನಡೆಸಿತು ಎಂದು ಹೇಳಿ ಶ್ರೀ ಯಾದವ್ ತಮ್ಮ ಹೇಳಿಕೆ ಮುಕ್ತಾಯಗೊಳಿಸಿದರು. ಕಠಿಣ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲೂ ಅಧ್ಯಕ್ಷ ಸ್ಥಾನವನ್ನು ಭಾರತ ಹೊಂದಿತ್ತು ಎಂದು ಅವರು ಹೇಳಿದರು.
"ನಮ್ಮ ಪ್ರಯಾಣದ ಮುಂದಿನ ಹಂತವನ್ನು ಪ್ರಾರಂಭಿಸಲು, ಈ ಪ್ರಮುಖ ಕಾರ್ಯವನ್ನು ಮುಂದುವರಿಸಲು ಜಗತ್ತು ಈಗ ಅಬಿದ್ಜನ್ ಅನ್ನು ಆಯ್ಕೆ ಮಾಡಿದೆ. ಈ ಜವಾಬ್ದಾರಿಯನ್ನು ನಾವು ನಮ್ಮ ಅತಿಥೇಯರಾದ ಕೋಟ್ ಡಿ'ಐವೊರ್ ಗಣರಾಜ್ಯಕ್ಕೆ ವರ್ಗಾಯಿಸುತ್ತೇವೆ, ನೀವು ಈ ಕೆಲಸವನ್ನು ಚಾಣಾಕ್ಷ ಮತ್ತು ಉತ್ಸಾಹದಿಂದ ಕೈಗೊಳ್ಳುತ್ತೀರಿ ಎಂದು ಭಾವಿಸಿದ್ದೇವೆ. ಭೂತಾಯಿಯ ಬಗ್ಗೆ ಕಾಳಜಿ ಮತ್ತು ಗೌರವದಿಂದ ಸುಸ್ಥಿರತೆಯ ಹಾದಿಯಲ್ಲಿ ಸಾಗಲು ಜಾಗತಿಕ ಸಮುದಾಯಕ್ಕೆ ಮಾರ್ಗದರ್ಶನ ನೀಡಲು ನಾವು ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇವೆ" ಎಂದು ಶ್ರೀ ಭೂಪೇಂದ್ರ ಯಾದವ್ ತಿಳಿಸಿದರು.

***



(Release ID: 1824753) Visitor Counter : 181


Read this release in: English , Urdu , Hindi , Odia