ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದ ಚಾಂಪಿಯನ್ ಶಿಪ್ ಗೆದ್ದ ಜೈನ್ ವಿಶ್ವವಿದ್ಯಾಲಯ, ಪ್ರಭುತ್ವ ಸಾಧಿಸಿದ ಶಿವ ಶ್ರೀಧರ್
Posted On:
03 MAY 2022 7:38PM by PIB Bengaluru
ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ -2021 ಇಂದು ಪುರುಷರು ಮತ್ತು ಮಹಿಳೆಯರ ಕಬಡ್ಡಿ ಫೈನಲ್ ಪಂದ್ಯಗಳೊಂದಿಗೆ ಮುಕ್ತಾಯಗೊಂಡಿದ್ದು, 10 ದಿನಗಳ ಮಹಾನ್ ಕ್ರೀಡಾ ಕೂಟಕ್ಕೆ ತೆರೆ ಬಿದ್ದಿತು.
ಆತಿಥೇಯ ಜೈನ್ ವಿಶ್ವವಿದ್ಯಾಲಯವು ಪ್ರಶಸ್ತಿಯ ಮೇಲೆ ತನ್ನ ಪ್ರಾಬಲ್ಯಕ್ಕೆ ಯಾವುದೇ ತೊಡಕಿಲ್ಲ ಎಂಬುದನ್ನು ಖಚಿತಪಡಿಸಿತು, ಟ್ರ್ಯಾಕ್ ನಲ್ಲಿ ಪ್ರಿಯಾ ಮೋಹನ್ ಅವರ ಸಾಧನೆ ಮತ್ತು ಕರಾಟೆಯಲ್ಲಿ (55 ಕೆಜಿ ಪ್ರವರ್ಗದಲ್ಲಿ ಸೈಯದ್ ಬಾಬಾ ಮತ್ತು ಟೀಮ್ ಮೆನ್ ಕುಮೈಟೆಯಲ್ಲಿ ಮತ್ತೊಂದು) ಎರಡು ಚಿನ್ನ ಗೆದ್ದಿತು. ಜೈನ್ ವಿವಿ ಒಟ್ಟು 20 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿತು. ಇದರ ಹತ್ತಿರದ ಪ್ರತಿಸ್ಪರ್ಧಿ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯ (ಎಲ್.ಪಿ.ಯು.) (17 ಚಿನ್ನ, 15 ಬೆಳ್ಳಿ, 19 ಕಂಚು) ಪಡೆಯಿತು. ಎಲ್.ಪಿ.ಯು ಕ್ರೀಡಾಕೂಟದಲ್ಲಿ ಪಾಲ್ಗೊಂಡ ಯಾವುದೇ ವಿಶ್ವವಿದ್ಯಾಲಯಕ್ಕಿಂತ ಅತಿ ಹೆಚ್ಚು ಪದಕಗಳನ್ನು ಪಡೆದರೂ, ಅದು ಆತಿಥೇಯ ವಿವಿಗಿಂತ ಕಡಿಮೆ ಚಿನ್ನದ ಪದಕ ಪಡೆದ ಕಾರಣ ಆತಿಥೇಯರೆದುರು ಪ್ರಶಸ್ತಿಯನ್ನು ಕಳೆದುಕೊಳ್ಳುವಂತೆ ಮಾಡಿತು. ಹಾಲಿ ಚಾಂಪಿಯನ್ ಪಂಜಾಬ್ ವಿಶ್ವವಿದ್ಯಾಲಯ (15 ಚಿನ್ನ, 9 ಬೆಳ್ಳಿ, 24 ಕಂಚು) ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು
ಕಳೆದ ಆವೃತ್ತಿಯಿಂದೀಚೆಗೆ ಈ ಮಟ್ಟದ ಸ್ಪರ್ಧಾತ್ಮಕತೆಯ ಬೆಳವಣಿಗೆ ಮತ್ತು ಸುಧಾರಣೆಗೆ ಈ ಕ್ರೀಡಾಕೂಟ ಉತ್ತಮ ಉದಾಹರಣೆಯಾಗಿತ್ತು. ಕೆಐಯುಜಿ -2021ರಲ್ಲಿ ಒಟ್ಟು 97 ಕೆಐಯುಜಿ ದಾಖಲೆಗಳನ್ನು ಮುರಿಯಲಾಯಿತು ಅಥವಾ ಸರಿಸಮವಾಯಿತು. ವೇಟ್ ಲಿಫ್ಟಿಂಗ್ ನಲ್ಲಿ 42, ಈಜುಕೊಳದಲ್ಲಿ 28, ಅಥ್ಲೆಟಿಕ್ಸ್ ನಲ್ಲಿ 23 ದಾಖಲೆಗಳು ಬಂದವು. ಪುರುಷರ 200 ಮೀಟರ್ ವೈಯಕ್ತಿಕ ಮೆಡ್ಲೆಯಲ್ಲಿ ಶಿವ ಶ್ರೀಧರ್ ಹೊಸ ಛಾಪು ಮೂಡಿಸಿದರೆ, ಎಂ.ಟಿ. ಆನ್ ಮರಿಯಾ ಮಹಿಳೆಯರ ವೇಟ್ ಲಿಫ್ಟಿಂಗ್ +87 ಕೆಜಿ ವಿಭಾಗದಲ್ಲಿ ಕ್ಲೀನ್ ಮತ್ತು ಜರ್ಕ್ ದಾಖಲೆಯನ್ನು ಮುರಿದರು.
ಶ್ರೀಧರ್ ಅವರು ಕ್ರೀಡಾಕೂಟದಲ್ಲಿ 7 ಚಿನ್ನ ಮತ್ತು 2 ಬೆಳ್ಳಿ ಪದಕಗಳನ್ನು ಗೆದ್ದು ಯಶಸ್ವೀ ಅಥ್ಲೀಟ್ ಆದರು. ಈಜುಪಟು ಕೊಳದಲ್ಲಿ ಗೆದ್ದ ಪ್ರತಿ ಚಿನ್ನದೊಂದಿಗೆ ಹೊಸ ಕೆಐಯುಜಿ ಹೆಗ್ಗುರುತು ಮೂಡಿಸಿದರು. ಈಜುಪಟು ಶ್ರುಂಗಿ ಬಾಂದೇಕರ್ ನಾಲ್ಕು ಚಿನ್ನ ಮತ್ತು ಒಂದು ಬೆಳ್ಳಿ ಗೆದ್ದು, ಕ್ರೀಡಾಕೂಟದಲ್ಲಿ ಅತ್ಯಂತ ಯಶಸ್ವಿ ಮಹಿಳಾ ಅಥ್ಲೀಟ್ ಆದರು. ಪ್ರಿಯಾ ಮೋಹನ್ ಅವರ 2೦೦ ಮೀ, 4೦೦ ಮೀ ಡಬಲ್ ಪದಕ ಟ್ರ್ಯಾಕ್ ನಲ್ಲಿ ಅತ್ಯಂತ ಪ್ರಬಲ ಅಥ್ಲೀಟ್ ಆಗಿ ಅವರ ಸ್ಥಾನವನ್ನು ಭದ್ರಪಡಿಸಿತು.
ಫಲಿತಾಂಶಗಳು (ಎಲ್ಲಾ ಫೈನಲ್ ಗಳು)
ಕಬಡ್ಡಿ
ಪುರುಷರು: ಫೈನಲ್: ಕೋಟಾ ವಿಶ್ವವಿದ್ಯಾಲಯವು ಭಿವಾನಿಯ ಸಿಎಚ್ ಬನ್ಸಿ ಲಾಲ್ ವಿಶ್ವವಿದ್ಯಾಲಯವನ್ನು 52-37 ಮಣಿಸಿತು; ಕಂಚಿನ ಪದಕ: ಡಾ.ಸಿ.ವಿ.ರಾಮನ್ ವಿಶ್ವವಿದ್ಯಾಲಯ, ಗುರುನಾನಕ್ ದೇವ್ ವಿಶ್ವವಿದ್ಯಾಲಯ ಪಾಲಾಯ್ತು.
ಮಹಿಳಾ: ಫೈನಲ್: ಕುರುಕ್ಷೇತ್ರ ವಿಶ್ವವಿದ್ಯಾಲಯವು ಮಹರ್ಷಿ ದಯಾನಂದ ವಿಶ್ವವಿದ್ಯಾಲಯವನ್ನು 46-19ರಲ್ಲಿ ಮಣಿಸಿತು; ಕಂಚಿನ ಪದಕ: ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯ, ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಪಾಲಾಯ್ತು.
ಫುಟ್ಬಾಲ್
ಪುರುಷರು
ಫೈನಲ್: ಎಂಜಿ ಯೂನಿವರ್ಸಿಟಿ 2 (ಹರಿ ಶಂಕರ್ ಕೆಎಸ್ 2ನೇ ನಿಮಿಷ, ಅರ್ಜುನ್ ವಿ 89ನೇ ನಿಮಿಷ) ಕೇರಳ ವಿಶ್ವವಿದ್ಯಾಲಯವನ್ನು 0 ಮಣಿಸಿತು; ಕಂಚಿನ ಪದಕ: ಕ್ಯಾಲಿಕಟ್ ವಿಶ್ವವಿದ್ಯಾಲಯ, ಪಂಜಾಬ್ ವಿಶ್ವವಿದ್ಯಾಲಯ ಪಾಲಾಯ್ತು.
*****
(Release ID: 1822455)
Visitor Counter : 159