ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಸೆಮಿಕಾನ್‌ ಇಂಡಿಯಾ ಕಾನ್ಫರೆನ್ಸ್ -2022 ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ವೇಗವರ್ಧನೆಗೊಳಿಸುವ ಮುನ್ನೋಟವನ್ನು ನೀಡುತ್ತದೆ


ಭಾರತವನ್ನು ಅಭಿವೃದ್ಧಿ ಹೊಂದುತ್ತಿರುವ ಸೆಮಿಕಂಡಕ್ಟರ್ ಹಬ್ ಆಗಿ ಪರಿವರ್ತಿಸುವ ಪ್ರಧಾನ ಮಂತ್ರಿಯವರ ದೃಷ್ಟಿಕೋನವನ್ನು ವಾಸ್ತವವಾಗಿಸಲು ಹಲವು ತಿಳುವಳಿಕೆ ಒಪ್ಪಂದಗಳಿಗೆ ಸಹಿ

ಭಾರತದ ಮೈಕ್ರೊಪ್ರೊಸೆಸರ್‌ ಪರಿಸರ ವ್ಯವಸ್ಥೆಯಲ್ಲಿ ಒಂದು ದೊಡ್ಡ ಹೆಜ್ಜೆ; ಭಾರತದ ಡಿಜಿಟಲ್ ಇಂಡಿಯಾ RISC-V ಪ್ರೋಗ್ರಾಂ (ಡಿಐಆರ್-ವಿ) ವಿವಿಧ ಅಪ್ಲಿಕೇಶನ್‌ಗಳು ಮತ್ತು ವಿನ್ಯಾಸಗಳಿಗಾಗಿ – ಸೋನಿ, ಬಿಇಎಲ್‌, ಇಸ್ರೋ, ಪರಮಾಣು ಶಕ್ತಿಯೊಂದಿಗೆ ತಿಳುವಳಿಕೆ ಒಪ್ಪಂದಗಳಿಗೆ ಸಹಿ

ಡಿಐಆರ್-ವಿ ಪ್ರೊಸೆಸರ್‌ಗಳಾದ ಶಕ್ತಿ ಮತ್ತು ವೇಗಾ ನೇತೃತ್ವದಲ್ಲಿ ಭಾರತ ಪ್ರೊಸೆಸರ್ ಮತ್ತು ಚಿಪ್ ವಿನ್ಯಾಸ ಒಪ್ಪಂದಗಳಿಗೆ ಸಹಿ

Posted On: 30 APR 2022 6:11PM by PIB Bengaluru

 ಭಾರತವನ್ನು ಅಭಿವೃದ್ಧಿ ಹೊಂದುತ್ತಿರುವ ಸೆಮಿಕಂಡಕ್ಟರ್ ಹಬ್ ಆಗಿ ಪರಿವರ್ತಿಸುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನವವನ್ನು ವಾಸ್ತವಗೊಳಿಸುವ ಪ್ರಯತ್ನವು ಸರ್ಕಾರ, ಪ್ರಮುಖ ಸೆಮಿಕಂಡಕ್ಟರ್ ಉದ್ಯಮಗಳು ಮತ್ತು ಉದ್ಯಮ ಸಂಘಗಳ ನಡುವೆ ಹಲವು ತಿಳುವಳಿಕೆ ಒಪ್ಪಂದ (ಎಂಒಯು) ಗಳಿಗೆ ಸಹಿ ಹಾಕುವುದರೊಂದಿಗೆ ಆರಂಭವಾಗಿದೆ.

ಸೆಮಿಕಾನ್‌ ಇಂಡಿಯಾ 2022 ರಲ್ಲಿ ಇಂದು ವಿನ್ಯಾಸ ಮತ್ತು ಸಹ-ಅಭಿವೃದ್ಧಿ ಒಪ್ಪಂದಗಳನ್ನು ಘೋಷಿಸುವ ಮೂಲಕ ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ವೇಗವರ್ಧನೆಗೊಳಿಸಲು ಸಿದ್ಧತೆ ಮಾಡಲಾಗಿದೆ. ಇತ್ತೀಚೆಗೆ ಭಾರತವು ಶಕ್ತಿ ಮತ್ತು ವೇಗಾ ಆರ್‌ ಐ ಎಸ್‌ ಸಿ -ವಿ ಪ್ರೊಸೆಸರ್‌ಗಳ ಸುತ್ತಲೂ ಸಿಲಿಕಾನೈಸ್ ಅನ್ನು ಅಭಿವೃದ್ಧಿಪಡಿಸಲು ಮತ್ತು ವಿನ್ಯಾಸವನ್ನು ರಚಿಸಲು ಡಿಐಆರ್-ವಿ ಕಾರ್ಯಕ್ರಮವನ್ನು ಘೋಷಿಸಿದೆ. 
ಡಿಐಆರ್-ವಿ ಕಾರ್ಯಕ್ರಮವು ಐಐಟಿ ಮದ್ರಾಸ್ ನಿರ್ದೇಶಕ ಪ್ರೊ. ಕಾಮಕೋಟಿಯವರನ್ನು ಮುಖ್ಯ ಶಿಲ್ಪಿಯಾಗಿ ಮತ್ತು ಶ್ರೀ ಕೃಷ್ಣ ಕುಮಾರ್ ರಾವ್ ಕಾರ್ಯಕ್ರಮ ನಿರ್ವಾಹಕರನ್ನಾಗಿ ಹೊಂದಿದೆ. ಭಾರತವನ್ನು ವಿಶ್ವದ ಆರ್‌ ಐ ಎಸ್‌ ಸಿ ಪ್ರತಿಭಾ ಕೇಂದ್ರವಾಗಿ ಮಾಡುವುದು ಮಾತ್ರವಲ್ಲದೆ, ಪ್ರಪಂಚದಾದ್ಯಂತ ಡಿಐಆರ್-ವಿಯ ಸರ್ವರ್‌ಗಳು, ಮೊಬೈಲ್ ಸಾಧನಗಳು, ಆಟೋಮೋಟಿವ್, ಐಒಟಿ ಮತ್ತು ಮೈಕ್ರೋಕಂಟ್ರೋಲರ್‌ಗಳಿಗೆ ಪೂರೈಕೆದಾರರನ್ನಾಗಿ ಮಾಡುವ ದೃಷ್ಟಿಕೋನದೊಂದಿಗೆ ಇದನ್ನು ಪ್ರಾರಂಭಿಸಲಾಗಿದೆ. 
ಡಿಐಆರ್-ವಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಆರ್‌ ಐ ಎಸ್‌ ಸಿ -ವಿ ಪ್ರೊಸೆಸರ್‌ಗಳಾದ ಶಕ್ತಿ ಮತ್ತು ವೇಗಾ ಬಳಕೆಗಾಗಿ ಐದು ಒಪ್ಪಂದಗಳನ್ನು ಪ್ರಕಟಿಸಿದೆ.
1.     SONY ಅಭಿವೃದ್ಧಿಪಡಿಸಿದ ಸಿಸ್ಟಂಗಳು/ಉತ್ಪನ್ನಗಳಿಗಾಗಿ SONY ಇಂಡಿಯಾ ಮತ್ತು DIR-V ಶಕ್ತಿ ಪ್ರೊಸೆಸರ್ (ಐಐಟಿ ಮದ್ರಾಸ್) ನಡುವೆ ತಿಳುವಳಿಕೆ ಒಪ್ಪಂದ.
2.     ಹೆಚ್ಚಿನ ಕಾರ್ಯಕ್ಷಮತೆಯ SoC ಗಳ (ಸಿಸ್ಟಮ್ ಆನ್ ಚಿಪ್) ಮತ್ತು ದೋಷ ಸಹಿಷ್ಣು ಕಂಪ್ಯೂಟರ್ ಸಿಸ್ಟಮ್‌ಗಳ ಅಭಿವೃದ್ಧಿಗಾಗಿ ISRO ಇನರ್ಷಿಯಲ್ ಸಿಸ್ಟಮ್ಸ್ ಯುನಿಟ್ (ಐ ಐ ಎಸ್‌ ಯು) ತಿರುವನಂತಪುರ ಮತ್ತು DIR-V ಶಕ್ತಿ ಪ್ರೊಸೆಸರ್ (ಐಐಟಿ ಮದ್ರಾಸ್) ನಡುವೆ ಒಪ್ಪಂದ.
3.     IGCAR ಅಭಿವೃದ್ಧಿಪಡಿಸಿದ ವ್ಯವಸ್ಥೆಗಳು/ಉತ್ಪನ್ನಗಳಿಗಾಗಿ ಇಂದಿರಾ ಗಾಂಧಿ ಪರಮಾಣು ಸಂಶೋಧನಾ ಕೇಂದ್ರ (ಐಜಿಸಿಎಆರ್), ಪರಮಾಣು ಶಕ್ತಿ ಇಲಾಖೆ ಮತ್ತು DIR-V ಶಕ್ತಿ ಪ್ರೊಸೆಸರ್ (ಐಐಟಿ ಮದ್ರಾಸ್) ನಡುವೆ ತಿಳುವಳಿಕೆ ಒಪ್ಪಂದ.
4.     ರುದ್ರ ಸರ್ವರ್ ಬೋರ್ಡ್, ಸೈಬರ್ ಭದ್ರತೆ ಮತ್ತು ಭಾಷಾ ಪರಿಹಾರಗಳಿಗಾಗಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಮತ್ತು DIR-V VEGA ಪ್ರೊಸೆಸರ್ (C-DAC) ನಡುವೆ ತಿಳುವಳಿಕೆ ಒಪ್ಪಂದ.
5.     ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (ಸಿ-ಡಾಟ್) ಮತ್ತು DIR-V VEGA ಪ್ರೊಸೆಸರ್ (C-DAC) ನಡುವೆ 4ಜಿ/5ಜಿ, ಬ್ರಾಡ್‌ಬ್ಯಾಂಡ್, ಐಒಟಿ/ ಎಂ2ಎಂ ಪರಿಹಾರಗಳಿಗಾಗಿ ಒಪ್ಪಂದ.
ಇದಲ್ಲದೆ, ಮಲ್ಟಿ-ಕ್ವಿಟ್ ಸೂಪರ್ ಕಂಡಕ್ಟಿಂಗ್ ಕ್ವಾಂಟಮ್ ಪ್ರೊಸೆಸರ್‌ಗಳು, ಫೋಟೊನಿಕ್ ಪ್ರೊಸೆಸರ್‌ಗಳು, ವಜ್ರ-ಆಧಾರಿತ ಮ್ಯಾಗ್ನೆಟೋಮೀಟರ್‌ಗಳು, ಲ್ಯಾಬ್-ಲೆವೆಲ್ ಕ್ವಾಂಟಮ್-ಸುರಕ್ಷಿತ ಸಂವಹನ ಜಾಲ ಇತ್ಯಾದಿ ಕ್ವಾಂಟಮ್ ತಂತ್ರಜ್ಞಾನಗಳ ಪ್ರಮುಖ ಸಾಮರ್ಥ್ಯವನ್ನು ನಿರ್ಮಿಸಲು ಐಐಎಸ್‌ಸಿ ಬೆಂಗಳೂರು ಮತ್ತು ಅಮೆರಿಕಾದ ಎಸ್‌ ಇ ಎಂ ಐ ನಡುವೆ ತಿಳಿವಳಿಕೆ ಒಪ್ಪಂದದ ಉದ್ದೇಶವನ್ನು ಘೋಷಿಸಲಾಯಿತು.
ಅಮೆರಿಕಾದ ಎಸ್‌ ಇ ಎಂ ಐ ಮತ್ತು ಐ ಇ ಎಸ್‌ ಎ ಸಹ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆಯ ಸಾಮರ್ಥ್ಯವನ್ನು ಅನ್ವೇಷಿಸಲು ತಿಳುವಳಿಕೆ ಒಪ್ಪಂದವನ್ನು ಘೋಷಿಸಿದವು. ಆ ಮೂಲಕ ಭಾರತದಲ್ಲಿ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ವೇಗವರ್ಧಿಸುವ ಅವಕಾಶಗಳನ್ನು ಬಳಸಿಕೊಳ್ಳಲು ಸೆಮಿಕಂಡಕ್ಟರ್‌ನಲ್ಲಿ ಜಾಗತಿಕ ಪ್ರಮುಖ ಉದ್ಯಮಗಳಿಗೆ ಅವಕಾಶ ನೀಡಲಾಗುತ್ತದೆ. ಐ ಇ ಎಸ್‌ ಎ ಉದ್ಯಮ ವರದಿ - ಭಾರತ ಸೆಮಿಕಂಡಕ್ಟರ್ ಮಾರುಕಟ್ಟೆ ಬೇಡಿಕೆ- ಯನ್ನು ಸಹ ಬಿಡುಗಡೆ ಮಾಡಿತು, 
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಸಹಾಯಕ ಸಚಿವರಾದ ಶ್ರೀ ರಾಜೀವ್ ಚಂದ್ರಶೇಖರ್, "ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಸ್ಫೋಟಕ ಬೆಳವಣಿಗೆ ಕಂಡುಬಂದಿದೆ. ದೇಶೀಯ ಬೇಡಿಕೆಯನ್ನು ಪೂರೈಸಲು ಮತ್ತು ಜಾಗತಿಕವಾಗಿ ರಫ್ತು ಮಾಡಲು ಈ ವಲಯವು ಬೆಳೆದಿದೆ. ಇದು ಮೈಕ್ರೋಪ್ರೊಸೆಸರ್‌ಗಳು ಮತ್ತು ಚಿಪ್‌ಗಳಿಗೆ ಬೇಡಿಕೆಯನ್ನು ಹೆಚ್ಚಿಸುತ್ತಿದೆ. ಭಾರತವು ಈ ಸವಾಲನ್ನು ಎದುರಿಸಲು ಸಮಯ ಪಕ್ವವಾಗಿದೆ” ಎಂದು ಹೇಳಿದರು.
ನಮ್ಮ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯು ತಂತ್ರಜ್ಞಾನದಲ್ಲಿನ ಕೆಲವು ಅತ್ಯುತ್ತಮ ಪ್ರತಿಭೆಗಳಿಂದ ತುಂಬಿದೆ ಮತ್ತು ನಮ್ಮ ಸ್ಟಾರ್ಟ್‌ಅಪ್‌ಗಳು ಭಾರತದ ಡಿಜಿಟಲ್ ಆರ್ಥಿಕತೆಯನ್ನು ಮುನ್ನಡೆಸುವ ಮುಂದಿನ ನಾವೀನ್ಯತೆಯ ಅಲೆಯನ್ನು ಚಾಲನೆ ಮಾಡುತ್ತವೆ ಎಂದು ನನಗೆ ವಿಶ್ವಾಸವಿದೆ. ನಮ್ಮ ವಿನ್ಯಾಸ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯು ದೃಢವಾಗಿದೆ ಮತ್ತು ಅಭಿವೃದ್ಧಿ ಹೊಂದುತ್ತಿದೆ ಮತ್ತು ನಮ್ಮ ಮುಂದಿನ ಯುನಿಕಾರ್ನ್‌ಗಳು ಈ ವಲಯದಿಂದ ಬರಲಿವೆ ಎಂದು ನನಗೆ ಖಾತ್ರಿಯಿದೆ ಎಂದು ಅವರು ಹೇಳಿದರು.
ಸಮ್ಮೇಳನದ ಎರಡನೇ ದಿನವೂ ಜಾಗತಿಕ ಮತ್ತು ಭಾರತೀಯ ತಂತ್ರಜ್ಞರೊಂದಿಗೆ
ಉತ್ತೇಜಕ ಅಧಿವೇಶನಗಳು ಮತ್ತು ಚರ್ಚೆಗಳನ್ನು ನಡೆದವು. ವೆಸ್ಟರ್ನ್ ಡಿಜಿಟಲ್ ಅಧ್ಯಕ್ಷ ಶ್ರೀ ಶಿವ ಶಿವರಾಮ್ ಸೆಮಿಕಂಡಕ್ಟರ್ ಪೂರೈಕೆ ಸರಪಳಿಗೆ ಭಾರತದ ಸ್ಥಿತಿಸ್ಥಾಪಕತ್ವದ ಕುರಿತು ಮಾತನಾಡಿದರು. ಇಂಟೆಲ್‌ನ ಐಎಜಿಎಸ್ ವಿಭಾಗದ ಚೀಫ್‌ ಆರ್ಕಿಟೆಕ್ಟ್‌ ಮತ್ತು ಹಿರಿಯ ಉಪಾಧ್ಯಕ್ಷ ಶ್ರೀ ರಾಜಾ ಕೊಡೂರಿ ಅವರು "ಆಂಗ್‌ಸ್ಟ್ರಾಮ್‌ಗಳಿಂದ ಜೆಟ್ಟಾ-ಸ್ಕೇಲ್‌ಗೆ: ಸಿಲಿಕಾನ್, ಸಿಸ್ಟಮ್ಸ್ ಅಂಡ್ ಸಾಫ್ಟ್‌ವೇರ್ ಇನ್ ಇಂಡಿಯಾ" ಕುರಿತು ಭಾಷಣ ಮಾಡಿದರು. ಭಾರತೀಯ ಸ್ಟಾರ್ಟ್‌ಅಪ್‌ಗಳಿಗಾಗಿ ಕೃತಕ ಬುದ್ಧಿಮತ್ತೆ, ಸಿಸ್ಟಮ್ ವಿನ್ಯಾಸ ಮತ್ತು ಮಿಡಲ್‌ವೇರ್‌ನಲ್ಲಿನ ನೈಜ ಸಾಮರ್ಥ್ಯವನ್ನು ಈ ಅಧಿವೇಶನವು ಒಳಗೊಂಡಿತ್ತು. Avanstrate ವ್ಯವಸ್ಥಾಪಕ ನಿರ್ದೇಶಕ ಶ್ರೀ ಆಕರ್ಷ್ ಹೆಬ್ಬಾರ್ ಅವರು ಇಂಟಿಗ್ರೇಟೆಡ್ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇನಲ್ಲಿ ಭಾರತೀಯ ಅವಕಾಶಗಳ ಕುರಿತು ಮಾತನಾಡಿದರು. ಇದು ಬೇಡಿಕೆಯ ಹೆಚ್ಚಳ ಮತ್ತು ಮುಂಬರುವ ವರ್ಷಗಳಲ್ಲಿ ವಲಯದ ಯೋಜಿತ ಬೆಳವಣಿಗೆಯನ್ನು ನೀಡುವ ಸೆಮಿಕಂಡಕ್ಟರ್ ವಲಯದ ಪಾತ್ರವನ್ನು ಅವರು ಒತ್ತಿಹೇಳಿದರು. 5ಜಿ ಯಂತಹ ಮುಂಬರುವ ತಂತ್ರಜ್ಞಾನಗಳು ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಮತ್ತು ಇದು ಸ್ಥಳೀಯ ಬೇಡಿಕೆಯನ್ನು ಪೂರೈಸುವ ಮತ್ತು ಜಗತ್ತಿನಾದ್ಯಂತ ಭಾರತೀಯ ಚಿಪ್‌ಗಳು ಮತ್ತು ಮೈಕ್ರೊಪ್ರೊಸೆಸರ್‌ಗಳನ್ನು ತಲುಪಿಸುವ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಭಾರತವನ್ನು ಸಿದ್ಧಗೊಳಿಸುತ್ತದೆ.

***



(Release ID: 1821665) Visitor Counter : 247


Read this release in: English , Urdu , Hindi