ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಧಾನ್ಯವನ್ನು ಆಮದು ಮಾಡಿಕೊಳ್ಳಲು ಈಜಿಪ್ಟ್ ಒಪ್ಪುವುದರೊಂದಿಗೆ ಭಾರತದ ಗೋಧಿ ರಫ್ತು ನಿರೀಕ್ಷೆಗಳು ಉತ್ತೇಜನಗೊಳ್ಳುತ್ತವೆ.


ಭಾರತವು 2022-23ರಲ್ಲಿಈಜಿಪ್ಟ್ಗೆ 3 ದಶಲಕ್ಷ ಟನ್ ಗೋಧಿಯನ್ನು ರಫ್ತು ಮಾಡುವ ಗುರಿ ಹೊಂದಿದೆ.

ಭಾರತವು 2022-23ರಲ್ಲಿ10 ದಶಲಕ್ಷ ಟನ್ ಗೋಧಿ ರಫ್ತು ಮಾಡುವ ಗುರಿಯನ್ನು ಹೊಂದಿದೆ.

ಎಪಿಇಡಿಎ ಗೋಧಿ ರಫ್ತು ಸಾಮರ್ಥ್ಯವನ್ನು ಬಳಸಿಕೊಳ್ಳಲು ಹಲವಾರು ದೇಶಗಳಿಗೆ ವ್ಯಾಪಾರ ನಿಯೋಗವನ್ನು ಕಳುಹಿಸಲಿದೆ

Posted On: 15 APR 2022 7:46PM by PIB Bengaluru

ದೇಶದ ಗೋಧಿ ರಫ್ತು ನಿರೀಕ್ಷೆಗಳಿಗೆ ಪ್ರಮುಖ ಉತ್ತೇಜನದಲ್ಲಿ, ವಿಶ್ವದ ಅತಿದೊಡ್ಡ ಗೋಧಿ ಆಮದುದಾರರಲ್ಲಿಒಂದಾದ ಈಜಿಪ್ಟ್‌, ಭಾರತದಿಂದ ಗೋಧಿ ಮೂಲಕ್ಕೆ ಒಪ್ಪಿಗೆ ನೀಡಿದೆ.

ಈಜಿಪ್ಟ್‌ನ ಅಧಿಕಾರಿಗಳು ಭಾರತವನ್ನು ಈ ಆಯಕಟ್ಟಿನ ಸರಕುಗಳ ಮೂಲಗಳಲ್ಲಿಒಂದಾಗಿ ಇರಿಸಿದ್ದಾರೆ. ಏತನ್ಮಧ್ಯೆ, ಈಜಿಪ್ಟ್‌ನ ಕೃಷಿ ಕ್ವಾರಂಟೈನ್‌ ಮತ್ತು ಕೀಟ ಅಪಾಯದ ವಿಶ್ಲೇಷಣೆಯ ಅಧಿಕಾರಿಗಳು ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಪಂಜಾಬ್‌ನಲ್ಲಿವಿವಿಧ ಸಂಸ್ಕರಣಾ ಘಟಕಗಳು, ಬಂದರು ಸೌಲಭ್ಯಗಳು ಮತ್ತು ಫಾರ್ಮ್‌ಗಳಿಗೆ ಭೇಟಿ ನೀಡಿದರು. ಭಾರತಕ್ಕೆ ಈಜಿಪ್ಟ್‌ ನಿಯೋಗದ ಭೇಟಿಯು ವಿವಿಧ ಗೋಧಿ ಆಮದು ಮಾಡಿಕೊಳ್ಳುವ ದೇಶಗಳೊಂದಿಗೆ ಹಲವಾರು ವ್ಯಾಪಾರ ಮಾತುಕತೆಗಳು ಮತ್ತು ಸಭೆಗಳನ್ನು ಅನುಸರಿಸುತ್ತದೆ. ಇದು ರಷ್ಯಾ ಮತ್ತು ಉಕ್ರೇನ್‌ ಸಂಘರ್ಷದ ಕಾರಣದಿಂದಾಗಿ ಪೂರೈಕೆಯು ಅಡ್ಡಿಪಡಿಸಿರುವುದರಿಂದ ಪರ್ಯಾಯ ಮೂಲಗಳಿಂದ ಧಾನ್ಯವನ್ನು ಪಡೆಯುವ ಸಾಧ್ಯತೆಗಳನ್ನು ಅನ್ವೇಷಿಸುತ್ತಿದೆ.

ಕಳೆದ ತಿಂಗಳು ದುಬೈಗೆ ಭೇಟಿ ನೀಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್‌ ಗೋಯಲ್‌ ಅವರು ಈಜಿಪ್ಟ್‌ನ ಯೋಜನೆ ಮತ್ತು ಆರ್ಥಿಕ ಅಭಿವೃದ್ಧಿ ಸಚಿವ ಡಾ. ಹಾಲಾ ಎಲ್‌-ಸೈದ್‌ ಅವರನ್ನು ಭೇಟಿ ಮಾಡಿದರು ಮತ್ತು ಈಜಿಪ್ಟ್‌ನ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿಉತ್ತಮ ಗುಣಮಟ್ಟದ ಗೋಧಿಯನ್ನು ಪೂರೈಸಲು ಭಾರತದ ಸನ್ನದ್ಧತೆಯ ಬಗ್ಗೆ ಚರ್ಚಿಸಿದ್ದರು.

ಈಜಿಪ್ಟ್‌ 2021 ರಲ್ಲಿ6.1 ದಶಲಕ್ಷ  ಟನ್‌( ಮೆಟ್ರಿಕ್‌ ಟನ್‌) ಗೋಧಿಯನ್ನು ಆಮದು ಮಾಡಿಕೊಂಡಿತು ಮತ್ತು ಭಾರತವು ಈಜಿಪ್ಟ್‌ಗೆ ಗೋಧಿಯನ್ನು ರಫ್ತು ಮಾಡಬಹುದಾದ ಮಾನ್ಯತೆ ಪಡೆದ ದೇಶಗಳ ಪಟ್ಟಿಯ ಭಾಗವಾಗಿರಲಿಲ್ಲ. ಈಜಿಪ್ಟ್‌ನ ಶೇಕಡ 80 ಕ್ಕಿಂತ ಹೆಚ್ಚು ಗೋಧಿ ಆಮದುಗಳು 2021 ರಲ್ಲಿರಷ್ಯಾ ಮತ್ತು ಉಕ್ರೇನ್ನಿಂದ 2 ಶತಕೋಟಿ ಅಮೆರಿಕ ಡಾಲರ್‌ಗೆ ಹತ್ತಿರದಲ್ಲಿದೆ ಎಂದು ಅಂದಾಜಿಸಲಾಗಿದೆ.

ನಾವು ಈ ವರ್ಷ ಈಜಿಪ್ಟ್‌ಗೆ 3 ದಶಲಕ್ಷ  ಟನ್‌ ಗೋಧಿಯನ್ನು ರಫ್ತು ಮಾಡುವ ಗುರಿ ಹೊಂದಿದ್ದೇವೆ ಎಂದು ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಪಿಇಡಿಎ) ಅಧ್ಯಕ್ಷ  ಎಂ. ಅಂಗಮುತ್ತು ಹೇಳಿದ್ದಾರೆ.

ಉತ್ತರ ಆಫ್ರಿಕಾದ ದೇಶಕ್ಕೆ ಗೋಧಿ ಮತ್ತು ಸಕ್ಕರೆ ಆಮದುಗಳನ್ನು ನಿರ್ವಹಿಸುವ ಈಜಿಪ್ಟ್‌ನ ಸಾರ್ವಜನಿಕ ಸಂಗ್ರಹಣೆ ಏಜೆನ್ಸಿ - ಜನರಲ್‌ ಅಥಾರಿಟಿ ಆಫ್‌ ಸಪ್ಲೈಸ್‌ ಅಂಡ್‌ ಕಮೊಡಿಟೀಸ್‌ನಲ್ಲಿನೋಂದಾಯಿಸಲು ಎಪಿಇಡಿಎ ಈ ಹಿಂದೆ ಭಾರತದ ರಫ್ತುದಾರರಿಗೆ ತಿಳಿಸಿತ್ತು.

ಭಾರತದಿಂದ ಗೋಧಿ ರಫ್ತು ಹೆಚ್ಚಿಸುವ ಸಾಧ್ಯತೆಗಳನ್ನು ಅನ್ವೇಷಿಸಲು ಎಪಿಇಡಿಎ ಮೊರಾಕೊ, ಟುನೀಷಿಯಾ, ಇಂಡೋನೇಷ್ಯಾ, ಫಿಲಿಪೈನ್ಸ್‌, ಥಾಯ್ಲೆಂಡ್‌, ವಿಯೆಟ್ನಾಂ, ಟರ್ಕಿ, ಅಲ್ಜೇರಿಯಾ ಮತ್ತು ಲೆಬನಾನ್‌ಗೆ ವ್ಯಾಪಾರ ನಿಯೋಗಗಳನ್ನು ಕಳುಹಿಸಲಿದೆ.

ರಷ್ಯಾ-ಉಕ್ರೇನ್‌ ಸಂಘರ್ಷದಿಂದಾಗಿ ಧಾನ್ಯದ ಜಾಗತಿಕ ಬೇಡಿಕೆ ಹೆಚ್ಚುತ್ತಿರುವ ಮಧ್ಯೆ, ಭಾರತವು 2022-23ರಲ್ಲಿದಾಖಲೆಯ 10 ದಶಲಕ್ಷ  ಟನ್‌ ಗೋಧಿಯ ಗುರಿಯನ್ನು ಹೊಂದಿದೆ.

ವಿದೇಶಿ ವ್ಯಾಪಾರ ಪ್ರಧಾನ ನಿರ್ದೇಶಕರ ಅಂದಾಜಿನ ಪ್ರಕಾರ, ಭಾರತವು 2021-22ರಲ್ಲಿದಾಖಲೆಯ 7 ದಶಲಕ್ಷ  ಟನ್‌ ಗೋಧಿಯನ್ನು ರಫ್ತು ಮಾಡಿದೆ. ಇದರ ಮೌಲ್ಯ  2.05 ಶತಕೋಟಿ. ಕಳೆದ ಹಣಕಾಸು ವರ್ಷದಲ್ಲಿಒಟ್ಟು ಸಾಗಣೆಯಲ್ಲಿಸುಮಾರು ಶೇಕಡ 50 ರಷ್ಟು ಗೋಧಿಯನ್ನು ಬಾಂಗ್ಲಾದೇಶಕ್ಕೆ ರಫ್ತು ಮಾಡಲಾಗಿದೆ.

ಗೋಧಿ ರಫ್ತಿನ ಬೆಳವಣಿಗೆಯು ಬಾಂಗ್ಲಾದೇಶ, ಯುನೈಟೆಡ್‌ ಅರಬ್‌ ಎಮಿರೇಟ್ಸ…, ಕತಾರ್‌, ಶ್ರೀಲಂಕಾ, ಓಮನ್‌ ಮತ್ತು ಮಲೇಷ್ಯಾದಂತಹ ದೇಶಗಳ ಬೇಡಿಕೆಯಿಂದ ಹೆಚ್ಚಾಗಿ ನಡೆಸಲ್ಪಡುತ್ತದೆ. ಆದಾಗ್ಯೂ, ಯೆಮೆನ್‌, ಅಫ್ಘಾನಿಸ್ತಾನ ಮತ್ತು ಇಂಡೋನೇಷ್ಯಾ ಸೇರಿದಂತೆ ಇತರ ದೇಶಗಳಿಗೆ ಗೋಧಿ ರಫ್ತುಗಳನ್ನು ಹೆಚ್ಚಿಸಲು ಎಪಿಇಡಿಎ ಪ್ರಯತ್ನಗಳನ್ನು ಮಾಡುತ್ತಿದೆ. 2020-21ರವರೆಗೆ ಜಾಗತಿಕ ಗೋಧಿ ವ್ಯಾಪಾರದಲ್ಲಿಭಾರತವು ತುಲನಾತ್ಮಕವಾಗಿ ಕನಿಷ್ಠ ಸದಸ್ಯನಾಗಿತ್ತು. ಭಾರತವು 2019-20 ಮತ್ತು 2020-21 ರಲ್ಲಿಕ್ರಮವಾಗಿ ಸುಮಾರು 0.2 ಮೆಟ್ರಿಕ್‌  ಟನ್‌ ಮತ್ತು 2 ಮೆಟ್ರಿಕ್‌ ಟನ್‌ ಗೋಧಿಯನ್ನು ಮಾತ್ರ ರಫ್ತು ಮಾಡಬಹುದಾಗಿದೆ.

ವಾಣಿಜ್ಯ ಸಚಿವಾಲಯವು ಗೋಧಿ ರಫ್ತಿನ ಕಾರ್ಯಪಡೆಯನ್ನು ವಾಣಿಜ್ಯ, ಹಡಗು ಮತ್ತು ರೈಲ್ವೇ ಸೇರಿದಂತೆ ವಿವಿಧ ಸಚಿವಾಲಯಗಳ ಪ್ರತಿನಿಧಿಗಳೊಂದಿಗೆ ಎಪಿಇಡಿಎ ಯ ಅಡಿಯಲ್ಲಿರಫ್ತುದಾರರನ್ನು ಸ್ಥಾಪಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿನಮ್ಮ ಗೋಧಿ ರಫ್ತುಗಳನ್ನು ಗಣನೀಯವಾಗಿ ಹೆಚ್ಚಿಸಲು ಕೃಷಿ, ರೈಲ್ವೆ, ಹಡಗು, ರಫ್ತುದಾರರು ಮತ್ತು ರಾಜ್ಯ ಸರ್ಕಾರಗಳೊಂದಿಗೆ ನಾವು ಹಲವಾರು ಇತರ ಸಚಿವಾಲಯಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌ ಇತ್ತೀಚೆಗೆ ಹೇಳಿದ್ದಾರೆ.

ಹೆಚ್ಚಾಗಿ ಅಕ್ಕಿ ರಫ್ತಿಗೆ ಬಳಸಲಾಗುವ ಕಾಕಿನಾಡ ಆಂಕಾರೇಜ್‌ ಬಂದರನ್ನು ನಿರ್ವಹಿಸುವ ಆಂಧ್ರಪ್ರದೇಶದ ಕಡಲ ಮಂಡಳಿಯು ತಮ್ಮ ಸೌಲಭ್ಯವನ್ನು ಗೋಧಿ ರಫ್ತಿಗೆ ಬಳಸಿಕೊಳ್ಳಬಹುದು ಎಂದು ತಿಳಿಸಿದೆ.

ಭಾರತದ ಗೋಧಿ ರಫ್ತು (ದಶಲಕ್ಷ  ಟನ್‌ /ಶತಕೋಟಿ ಅಮೆರಿಕನ್‌ ಡಾಲರ್‌)

 

ದಶಲಕ್ಷ  ಟನ್‌

ಶತಕೋಟಿ ಅಮೆರಿಕನ್‌ ಡಾಲರ್‌

2019-20

0.21

.0061

2020-21

2.08

.55

2021-22

7

2

2022-23*

10

 

 

***



(Release ID: 1817208) Visitor Counter : 275


Read this release in: English , Marathi