ಭಾರೀ ಕೈಗಾರಿಕೆಗಳ ಸಚಿವಾಲಯ

ಗೌರವಾನ್ವಿತ ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವರಾದ ಶ್ರೀ ಮಹೇಂದ್ರನಾಥ್ ಪಾಂಡೆಯವರಿಂದ ಎಚ್ಎಮ್ ಟಿ- ಹಿಂದುಸ್ತಾನ್ ಮೆಷಿನ್ ಟೂಲ್ಸ್ ಲಿಮಿಟೆಡ್, ಬೆಂಗಳೂರು ಕಾಂಪ್ಲೆಕ್ಸ್ ಗೆ ಭೇಟಿ

Posted On: 11 APR 2022 6:51PM by PIB Bengaluru

ಏಪ್ರಿಲ್ 11, 2022ರಂದು ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವರಾದ ಶ್ರೀ ಮಹೇಂದ್ರನಾಥ್ ಪಾಂಡೆಯವರು ಎಚ್‍ಎಮ್‍ಟಿ ಲಿಮಿಟೆಡ್, ಬೆಂಗಳೂರು ಕಾಂಪ್ಲೆಕ್ಸ್ ಗೆ ಭೇಟಿ  ನೀಡಿದರು ಮತ್ತು ಎಚ್‍ಎಮ್‍ಟಿ ಲಿಮಿಟೆಡ್ ವಿನ್ಯಾಸಗೊಳಿಸಿದ ಮತ್ತು ತಯಾರಿಸಿದ ಎಚ್‍ಎಮ್‍ಟಿ ಸಿಎನ್‍ಸಿ ಪ್ರೊಫೈಲ್ ಸರ್ಫೇಸ್ ಗ್ರೈಂಡಿಂಗ್ ಯಂತ್ರವನ್ನು ಉದ್ಘಾಟಿಸಿದರು.  ಪ್ರಧಾನಮಂತ್ರಿಯವರು ಆತ್ಮನಿರ್ಭರ ಭಾರತ ಕಾರ್ಯಕ್ರಮದಡಿಯಲ್ಲಿ ಆಮದು ಮಾಡಿಕೊಳ್ಳುವ ಯಂತ್ರಗಳ ಬದಲಿಗೆ ನಮ್ಮಲ್ಲೆ ಯಂತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಂಸ್ಥೆಯ ನುರಿತ ಕಾರ್ಯಪಡೆಯ ತಾಂತ್ರಿಕ ಸಾಮರ್ಥ್ಯಗಳು ಮತ್ತು ಪರಿಣತಿಯನ್ನು ಸಚಿವರು ಶ್ಲಾಘಿಸಿದರು ಮತ್ತು ಉದ್ಯೋಗಿಗಳಿಗೆ ಉತ್ಸಾಹ ಮತ್ತು ಚೈತನ್ಯದಿಂದ ಸವಾಲುಗಳನ್ನು ಎದುರಿಸಲು ಸಲಹೆ ನೀಡಿದರು.

ಆನಲೈನ್ ಫ್ಲಿಪ್‍ಕಾರ್ಟ್ ಪ್ಲಾಟ್‍ಫಾರ್ಮ್‍ನಲ್ಲಿ ಎಚ್‍ಎಮ್‍ಟಿ ಕೈಗಡಿಯಾರಗಳ ಮಾರಾಟಕ್ಕೆ ಚಾಲನೆ ನೀಡಿದರು ಮತ್ತು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಿರ್ವಹಿಸಿ ಇ ಕಾಮರ್ಸ್ ಪ್ಲಾಟ್‍ಫಾರ್ಮನ್ನು ಪರಿಣಾಮಕಾರಿಯಾಗಿ ಬಳಸುತ್ತಿರುವುದಕ್ಕಾಗಿ ಆಡಳಿತ ಮಂಡಳಿಯನ್ನು ಶ್ಲಾಘಿಸಿದರು.

ಇದಕ್ಕೂ ಮುನ್ನ ಎಚ್‍ಎಮ್‍ಟಿ ಹೆರಿಟೇಜ್ ಸೆಂಟರ್‍ಗೆ ಭೇಟಿ ನೀಡಿದ ಸಚಿವರು ಎಚ್‍ಎಮ್‍ಟಿ ಲಿಮಿಟೆಡ್‍ನ ವೈಭವದ ಪಯಣದ ಪ್ರದರ್ಶನವನ್ನು ವೀಕ್ಷಿಸಿದರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಎಚ್‍ಎಮ್‍ಟಿಯ ಅಪಾರ ಕೊಡುಗೆಯಿಂದ ಪ್ರಭಾವಿತರಾದರು.

ಉತ್ಪಾದನೆಗೆ ಅಗತ್ಯವಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ರಾಷ್ಟ್ರದ ಯುವಜನರಿಗೆ ತರಬೇತಿ ನೀಡಲು ಉತ್ಕೃಷ್ಟ ಕೇಂದ್ರಳನ್ನು ಸ್ಥಾಪಿಸುವ ಸಾಧ್ಯತೆಯನ್ನು ಅನ್ವೇಷಿಸಲು ಸಚಿವರು ಆಡಳಿತ ಮಂಡಳಿಗೆ ಸಲಹೆ ನೀಡಿದರು.  ಆತ್ಮನಿರ್ಭರ ಭಾರತದ ಗುರಿಯನ್ನು ಸಾಧಿಸುವ ಗೌರವಾನ್ವಿತ ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನು ಎಚ್‍ಎಮ್‍ಟಿಯಂತಹ ಇಂಜಿನಿಯರಿಂಗ್ ಸಂಸ್ಥೆಗಳು ಸಾಧಿಸಬಹುದು ಎಂದು ಅವರು ಹೇಳಿದರು.

*****



(Release ID: 1815800) Visitor Counter : 92


Read this release in: English