ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಬೆಂಗಳೂರಿನ ಐಬಿಎಂ ಸೈಬರ್ ರೇಂಜ್ ಮತ್ತು ಕ್ಯಾಂಪಸ್‌ಗೆ ಭೇಟಿ ನೀಡಿದ ಕೇಂದ್ರ ಸಚಿವ ಶ್ರೀ ರಾಜೀವ್ ಚಂದ್ರಶೇಖರ್
"ತ್ವರಿತವಾಗಿ ಡಿಜಿಟಲೀಕರಣಗೊಳ್ಳುತ್ತಿರುವ ಜಗತ್ತಿನಲ್ಲಿ, ಸೈಬರ್ ಭದ್ರತೆ, ಹೈಬ್ರಿಡ್ ಕ್ಲೌಡ್ ಮತ್ತು ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳಲ್ಲಿ ಭಾರತಕ್ಕೆ ಅಗಾಧ ಅವಕಾಶವಿದೆ": ರಾಜೀವ್ ಚಂದ್ರಶೇಖರ್
Posted On:
11 APR 2022 6:23PM by PIB Bengaluru
"ತ್ವರಿತವಾಗಿ ಡಿಜಿಟಲೀಕರಣಗೊಳ್ಳುತ್ತಿರುವ ಜಗತ್ತಿನಲ್ಲಿ, ಸೈಬರ್ ಭದ್ರತೆ, ಹೈಬ್ರಿಡ್ ಕ್ಲೌಡ್ ಮತ್ತು ಕೃತಕ ಬುದ್ದಿಮತ್ತೆಯಂತಹ ಪ್ರಮುಖ ತಂತ್ರಜ್ಞಾನಗಳಲ್ಲಿ ಭಾರತಕ್ಕೆ ಅಗಾಧವಾದ ಅವಕಾಶವಿದೆ” ಎಂದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಇಂದು ಬೆಂಗಳೂರಿನ ಐಬಿಎಂ ಇಂಡಿಯಾ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತವನ್ನು ನಾವೀನ್ಯತೆ ಮತ್ತು ಬೆಳವಣಿಗೆಯ ಕೇಂದ್ರವನ್ನಾಗಿ ಮಾಡುವ ನಮ್ಮ ಪ್ರಧಾನಿಯವರ ದೃಷ್ಟಿಕೋನವನ್ನು ಸಾಧಿಸಲು ನಮಗೆ ಈ ತಂತ್ರಜ್ಞಾನಗಳಲ್ಲಿ ಹೂಡಿಕೆಯ ಅಗತ್ಯವಿದೆ. ಬೆಂಗಳೂರಿನ (ಕರ್ನಾಟಕ) ಐಬಿಎಂ ಸೈಬರ್ ಸೆಕ್ಯುರಿಟಿ ಹಬ್ ಮತ್ತು ಕ್ಲೈಂಟ್ ಇನ್ನೋವೇಶನ್ ಸೆಂಟರ್‌ಗೆ ಇದೊಂದು ಉತ್ತಮ ಭೇಟಿಯಾಗಿದೆ ಮತ್ತು ಐಬಿಎಂನಂತಹ ಕಂಪನಿಗಳು ತಮ್ಮ ಡಿಜಿಟಲ್ ಪರಿವರ್ತನೆಯನ್ನು ವೇಗಗೊಳಿಸಲು ವಿವಿಧ ಸಂಸ್ಥೆಗಳಿಗೆ ಒದಗಿಸುವ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡೆ ಎಂದು ಅವರು ಹೇಳಿದರು.
ಶ್ರೀ ರಾಜೀವ್ ಚಂದ್ರಶೇಖರ್ ಅವರು ಏಷ್ಯಾ ಪೆಸಿಫಿಕ್ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಪಟೇಲ್ ನೇತೃತ್ವದ ಐಬಿಎಂ ತಂಡವನ್ನು ಭೇಟಿ ಮಾಡಿದರು ಮತ್ತು ಅವರು 2022 ರ ಆರಂಭದಲ್ಲಿ ಉದ್ಘಾಟಿಸಿದ್ದ ಸೈಬರ್ ರೇಂಜ್ ಕಾರ್ಯಾಚರಣೆಗಳಲ್ಲಿ ತೊಡಗಿರುವ ಹಿರಿಯ ವೃತ್ತಿಪರರೊಂದಿಗೆ ಸಂವಾದ ನಡೆಸಿದರು. ದೇಶದ ನಾಗರಿಕರಿಗೆ ಸುಧಾರಣೆಗಳು, ಸಮರ್ಥ ವ್ಯವಸ್ಥೆಗಳನ್ನು ತಲುಪಿಸಲು ಹಲವಾರು ಸರ್ಕಾರಿ ಕ್ರಮಗಳು ಮತ್ತು ಅವಕಾಶಗಳನ್ನು ಕುರಿತು ಪ್ತಾತ್ಯಕ್ಷಿಕೆ ನೀಡಿದ ಐಬಿಎಂ ಇಂಡಿಯಾದ ನಾಯಕತ್ವ ಮತ್ತು ಸಲಹಾ ತಂಡಗಳೊಂದಿಗೂ ಸಚಿವರು ಸಂವಾದ ನಡೆಸಿದರು. ಶ್ರೀ ರಾಜೀವ್ ಚಂದ್ರಶೇಖರ್ ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ಸ್ವತಃ ತಂತ್ರಜ್ಞರಾಗಿದ್ದಾರೆ. ಒಬ್ಬ ವಾಣಿಜ್ಯೋದ್ಯಮಿಯಾಗಿ, ಅವರು 1990 ರ ದಶಕದಲ್ಲಿ ಭಾರತದಲ್ಲಿ ಸೆಲ್ಯುಲಾರ್ ನೆಟ್‌ವರ್ಕ್ ಅನ್ನು ಯಶಸ್ವಿಯಾಗಿ ನಿರ್ಮಿಸಿದರು. ಈ ಕ್ಷೇತ್ರದ ಬಗ್ಗೆ ಗಾಢವಾದ ಮತ್ತು ಆಳವಾದ ತಿಳುವಳಿಕೆಗಾಗಿ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಾರ್ವಜನಿಕ ನೀತಿಗಳನ್ನು ಮುನ್ನಡೆಸುವುದಕ್ಕಾಗಿ ಅವರು ತಂತ್ರಜ್ಞಾನ ವೃತ್ತಿಪರರಲ್ಲಿ ವ್ಯಾಪಕವಾಗಿ ಗೌರವಿಸಲ್ಪಟ್ಟಿದ್ದಾರೆ.
ಹೊಸ ಸೈಬರ್ ರೇಂಜ್ ಸೌಲಭ್ಯದ ಪಕ್ಕದಲ್ಲಿ, ಐಬಿಎಂನ ಹೊಸ ಭದ್ರತಾ ಕಾರ್ಯಾಚರಣೆ ಕೇಂದ್ರ (ಎಸ್ ಒ ಸಿ) ವು 600 ಭದ್ರತಾ ಪ್ರತಿಕ್ರಿಯೆ ನಿರ್ವಾಹಕರ ಸಾಮರ್ಥ್ಯದೊಂದಿಗೆ ಜಗತ್ತಿನಾದ್ಯಂತ ಗ್ರಾಹಕರಿಗೆ ಭದ್ರತಾ ಸೇವೆಗಳನ್ನು (ಎಂ ಎಸ್ ಎಸ್) ಒದಗಿಸುತ್ತದೆ. ಇದು ಬೆಂಗಳೂರಿನಲ್ಲಿ ಎರಡನೇ ಐಬಿಎಂ ಎಸ್ ಒ ಸಿ ಆಗಿದೆ, ಮತ್ತೊಂದು ಎಸ್ ಒ ಸಿ ನಿರ್ದಿಷ್ಟವಾಗಿ ಪ್ರಾದೇಶಿಕ ಭಾರತೀಯ ಗ್ರಾಹಕರಿಗೆ ಸೇವೆ ಸಲ್ಲಿಸುತ್ತರಿದೆ. ಹೊಸ ಎಸ್ ಒ ಸಿ ಐಬಿಎಂನ ವಿಶಾಲವಾದ ಜಾಗತಿಕ ನೆಟ್‌ವರ್ಕ್‌ನ ಎಸ್ ಒ ಸಿ ಗಳ ಭಾಗವಾಗಿದೆ, ಇದು ಪ್ರಪಂಚದಾದ್ಯಂತ 2,000 ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸುತ್ತದೆ. ಇದು ದಿನಕ್ಕೆ ಎರಡು ಮಿಲಿಯನ್‌ಗಿಂತಲೂ ಹೆಚ್ಚು ಎಂಡ್ ಪಾಯಿಂಟ್ ಮತ್ತು 150 ಶತಕೋಟಿ ಸಂಭಾವ್ಯ ಭದ್ರತಾ ಘಟನೆಗಳನ್ನು ನಿರ್ವಹಿಸುತ್ತದೆ.
ಐಬಿಎಂ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಪಟೇಲ್ ಅವರು ಸಚಿವರನ್ನು ಬೆಂಗಳೂರಿನ ಐಬಿಎಂ ಕಚೇರಿಗೆ ಸ್ವಾಗತಿಸಿದರು. “ಇಂದು ಬೆಂಗಳೂರಿನ ಐಬಿಎಂ ಕಚೇರಿಗೆ ಶ್ರೀ ರಾಜೀವ್ ಚಂದ್ರಶೇಖರ್ ಅವರನ್ನು ಸ್ವಾಗತಿಸುತ್ತಿರುವುದು ಒಂದು ದೊಡ್ಡ ಗೌರವವಾಗಿದೆ. ನಾವು IBM #Cybersecurity Hub ಮತ್ತು ಕ್ಲೈಂಟ್ ಇನ್ನೋವೇಶನ್ ಸೆಂಟರ್‌ನ ತಲ್ಲೀನಗೊಳಿಸುವ ಅನುಭವವನ್ನು ಒದಗಿಸಿದ್ದೇವೆ. ಇದು ಭಾರತ ಮತ್ತು ಜಗತ್ತಿಗಾಗಿ ಮೇಕ್ ಇನ್ ಇಂಡಿಯಾದ ಬಗೆಗಿನ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತದೆ.” ಎಂದು ಅವರು ಹೇಳಿದರು.
ಸಚಿವರು ಮುಕ್ತ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಹಾಗೂ ಜವಾಬ್ದಾರಿಯುತ ಇಂಟರ್ನೆಟ್‌ನ ಅಗತ್ಯತೆಯ ಪ್ರತಿಪಾದಕರಾಗಿದ್ದಾರೆ.
***
(Release ID: 1815797)
Visitor Counter : 192