ಗೃಹ ವ್ಯವಹಾರಗಳ ಸಚಿವಾಲಯ

ಕರ್ನಾಟಕದ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಇಂದು ಡಾ. ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮಿಯವರ 115 ನೇ ಜಯಂತಿ ಮತ್ತು ಗುರುವಂದನಾ ಮಹೋತ್ಸವವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಉದ್ಘಾಟಿಸಿದರು


ಡಾ. ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮಿಯವರು 88 ವರ್ಷ ಈ ಮಠದ ಪೀಠಾಧಿಪತಿಯಾಗಿ ಮತ್ತು ತಮ್ಮ 112 ನೇ ವಯಸ್ಸಿನವರೆಗೆ ಸೃಷ್ಟಿಸಿದ ತೇಜಸ್ಸು ನಾಡಿನ ಜನರಿಗೆ ಹೇಗೆ ಬದುಕಬೇಕು ಎಂಬುದರ ಕುರಿತು ಇಂದಿಗೆ ಮಾತ್ರವಲ್ಲದೆ ಅನೇಕ ಯುಗಗಳವರೆಗೆ ಪ್ರೇರಣೆಯಾಗಿರುತ್ತದೆ.

ಕೆಲವರು ಮಾತಿನ ಮೂಲಕ ಸಂದೇಶ ನೀಡುತ್ತಾರೆ, ಕೆಲವರು ಜ್ಞಾನದ ಮೂಲಕ ಸಂದೇಶ ನೀಡುತ್ತಾರೆ, ಆದರೆ ಡಾ.ಶಿವಕುಮಾರಸ್ವಾಮಿಯವರು ತಮ್ಮ ಕೆಲಸಗಳ ಮೂಲಕ ಸಂದೇಶವನ್ನು ನೀಡಿದ್ದಾರೆ, ಅದು ಯುಗಯುಗಗಳವರೆಗೂ ನೆನಪಿನಲ್ಲಿ ಉಳಿಯುತ್ತದೆ, ಅನ್ನ, ಅಕ್ಷರ ಮತ್ತು ವಸತಿ ಮೂರನ್ನೂ ಒದಗಿಸುವ ಕೆಲಸವನ್ನು ಅವರು ಮಾಡಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು, ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮಿಯವರ ಅನ್ನ, ಅಕ್ಷರ ಮತ್ತು ವಸತಿ ಎಂಬ ಮೂರು ತತ್ವಗಳನ್ನು ಸಾಕಾರಗೊಳಿಸಿದೆ.

ಕೊರೊನಾ ಅವಧಿಯಲ್ಲಿ, ಶ್ರೀ ನರೇಂದ್ರ ಮೋದಿ ಸರ್ಕಾರವು ಸುಮಾರು 80 ಕೋಟಿ ಜನರಿಗೆ ಪ್ರತಿ ವ್ಯಕ್ತಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಎರಡು ವರ್ಷಗಳವರೆಗೆ ಉಚಿತವಾಗಿ ನೀಡಿತು.

ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ, ಶ್ರೀ ನರೇಂದ್ರ ಮೋದಿ ಅವರು ದೇಶದ ಹಲವು ಭಾಷೆಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳನ್ನು ಮಾಡಿದ್ದಾರೆ ಮತ್ತು ಆ ಮೂಲಕ ಮಕ್ಕಳು ತಾಂತ್ರಿಕ ಅಥವಾ ವೈದ್ಯಕೀಯ ಶಿಕ್ಷಣವನ್ನು ಅವರ ಮಾತೃಭಾಷೆಯಲ್ಲಿಯೇ ಪಡೆಯುವಂತಾಗಿದೆ.

ಸುಮಾರು ಮೂರು ಕೋಟಿ ಜನರಿಗೆ ವಾಸಿಸಲು ಮನೆ ಇರಲಿಲ್ಲ, ಆದರೆ ಮೋದಿಯವರು ಕೇವಲ 7 ವರ್ಷಗಳಲ್ಲಿ ಮೂರು ಕೋಟಿ ಜನರಿಗೆ ಮನೆಗಳನ್ನು ಒದಗಿಸಿದ್ದಾರೆ.

ನಾನು ಸಿದ್ದಗಂಗಾ ಮಠಕ್ಕೆ ಮೂರನೇ ಬಾರಿಗೆ ಬಂದಿದ್ದೇನೆ ಮತ್ತು ಪ್ರತಿ ಬಾರಿ ನನ್ನೊಂದಿಗೆ ಅಂತಃಸಾಕ್ಷಿ, ಉತ್ಸಾಹ ಮತ್ತು ಶಕ್ತಿಯನ್ನು ಪಡೆದು ಮರಳುತ್ತೇನೆ.

ಬಸವಣ್ಣನವರ ಚಿಂತನೆಯನ್ನು ಸಾಕಾರಗೊಳಿಸಲು ಸಮಾನತೆ, ಶಿಕ್ಷಣ ಮತ್ತು ಜನರನ್ನು ಆಧ್ಯಾತ್ಮಿಕವಾಗಿ ಶ್ರೀಮಂತರನ್ನಾಗಿಸಲು ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮಿಯವರು 88 ವರ್ಷಗಳ ಕಾಲ ಶ್ರಮಿಸಿದ ಸಿದ್ದಗಂಗಾ ಮಠವು ಒಂದು ತೀರ್ಥಕ್ಷೇತ್ರವಾಗಿದೆ.

ಒಬ್ಬ ವ್ಯಕ್ತಿಯು ತನ್ನ ಬದಲು ಜನರು, ಸಮಾಜ, ದೇಶ ಮತ್ತು ಧರ್ಮದ ಬಗ್ಗೆ ಯೋಚಿಸಿದಾಗ ಆ ವ್ಯಕ್ತಿಯ ತೇಜಸ್ಸು ವೃದ್ಧಿಸುತ್ತದೆ.

ಅಟಲ್ ಜೀ ಇಲ್ಲಿಗೆ ಬಂದಾಗ ಉತ್ತರದಲ್ಲಿ ಗಂಗಾ, ದಕ್ಷಿಣದಲ್ಲಿ ಸಿದ್ದಗಂಗಾ ಎಂದು ಹೇಳಿದ್ದರು.

ಸಿದ್ದಗಂಗಾ ತೀರ್ಥಕ್ಷೇತ್ರವಾಗಿದ್ದು, ಇಂದು 80,000 ಚದರ ಅಡಿ ವಿಸ್ತೀರ್ಣದಲ್ಲಿ ಫಾರ್ಮಸಿ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆಯಾಗಿದೆ.

ಸುಮಾರು 600 ವರ್ಷಗಳಷ್ಟು ಹಳೆಯದಾದ ಈ ಸ್ಥಳವು ಅನೇಕ ಜನರ ಜೀವನದಲ್ಲಿ ಸಮೃದ್ಧಿಗೆ ಕಾರಣವಾಗಿದೆ, ಅದಕ್ಕಾಗಿಯೇ ಶಿವಕುಮಾರಸ್ವಾಮೀಜಿ ಅವರನ್ನು ಆಧುನಿಕ ಬಸವಣ್ಣ ಎಂದೂ ಕರೆಯುತ್ತಾರೆ.

ಪಕ್ಷಾತೀತ ಸಮಾನತೆಯ ಚಿಂತನೆಯಿಂದ ಬಸವಣ್ಣನವರ ಸಿದ್ಧಾಂತಗಳನ್ನು ಸಾಕಾರಗೊಳಿಸಲು ಡಾ.ಶಿವಕುಮಾರಸ್ವಾಮೀಜಿ ಪ್ರಾಮಾಣಿಕ ಪ್ರಯತ್ನ ಮಾಡಿದರು.

ಈ ಮಠಕ್ಕೆ ಬಂದವರು ಎಂದಿಗೂ ಹಸಿವಿನಿಂದ ಮರಳುವುದಿಲ್ಲ, ಈ ಮಠದ ಆಶ್ರಯದಲ್ಲಿ ಸಮಾಜದ ಪ್ರತಿಯೊಂದು ವರ್ಗದ 10,000 ಕ್ಕೂ ಹೆಚ್ಚು ಬಡ ಮಕ್ಕಳಿಗೆ ಶಿಕ್ಷಣ ಮತ್ತು ಜೀವನದ ವ್ಯವಸ್ಥೆ ಇದೆ, ಅವರು ತಮ್ಮ ಜೀವನವನ್ನು ಜ್ಞಾನದಿಂದ ಬೆಳಗುತ್ತಿದ್ದಾರೆ.

Posted On: 01 APR 2022 4:42PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಕರ್ನಾಟಕದ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಯವರ 115 ನೇ ಜಯಂತಿ ಮತ್ತು ಗುರುವಂದನಾ ಮಹೋತ್ಸವವನ್ನು ಉದ್ಘಾಟಿಸಿದರು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀ ಪ್ರಲ್ಹಾದ ಜೋಶಿ, ಕೇಂದ್ರ ರಾಜ್ಯ ಸಚಿವ ಶ್ರೀ ಭಗವಂತ ಖೂಬಾ, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ ಅವರು, ಇಂದು ನಾವೆಲ್ಲರೂ ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮಿಯವರ 115 ನೇ ಜಯಂತಿಯಂದು ಅವರ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇವೆ ಎಂದರು. ನಾನು ಮೂರನೇ ಬಾರಿಗೆ ಸಿದ್ದಗಂಗಾ ಮಠಕ್ಕೆ ಬಂದಿದ್ದೇನೆ ಮತ್ತು ಪ್ರತಿ ಬಾರಿ ಅಂತಃಸಾಕ್ಷಿ, ಉತ್ಸಾಹ ಮತ್ತು ಶಕ್ತಿಯನ್ನು ಪಡೆದು ಹೋಗುತ್ತೇನೆ ಎಂದು ಅವರು ಹೇಳಿದರು. ನಮ್ಮದು ಅತ್ಯಂತ ಪುರಾತನ ದೇಶವಾಗಿದೆ ಮತ್ತು ಅನೇಕ ತೀರ್ಥಕ್ಷೇತ್ರಗಳು, ಜ್ಯೋತಿರ್ಲಿಂಗಗಳು ಮತ್ತು ಶಕ್ತಿಪೀಠಗಳು ಇವೆ. ಆದರೆ, ಮಹಾನುಭಾವರ ಕೆಲಸಗಳ ಆಧಾರದಲ್ಲಿ ಕೆಲವು ತೀರ್ಥಕ್ಷೇತ್ರಗಳು ರೂಪುಗೊಳ್ಳುತ್ತವೆ. ಬಸವಣ್ಣನವರ ಚಿಂತನೆಯನ್ನು ಸಾಕಾರಗೊಳಿಸಲು ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮಿಯವರು 88 ವರ್ಷಗಳ ಕಾಲ ಶ್ರಮಿಸಿ ಸಮಾನತೆ, ಶಿಕ್ಷಣ ಮತ್ತು ಆಧ್ಯಾತ್ಮಿಕವಾಗಿ ಶ್ರೀಮಂತಗೊಳ್ಳಲು ಜನಮಾನಸಕ್ಕೆ ದಾರಿ ಮಾಡಿಕೊಟ್ಟ ಸಿದ್ದಗಂಗಾ ಮಠವು ಅಂತಹ ಒಂದು ತೀರ್ಥಕ್ಷೇತ್ರವಾಗಿದೆ.  ಒಬ್ಬ ವ್ಯಕ್ತಿಯು ತನ್ನ ಬಗ್ಗೆ ಯೋಚಿಸುವ ಬದಲು ಜನರು, ಸಮಾಜ, ದೇಶ ಮತ್ತು ಧರ್ಮದ ಬಗ್ಗೆ ಯೋಚಿಸಿದಾಗ, ಆ ವ್ಯಕ್ತಿಯ ಸುತ್ತಲೂ ಪ್ರಭೆ  ಉಂಟಾಗುತ್ತದೆ. ಆ ಪ್ರಭೆಯು ಅನೇಕ ಜನರ ಜೀವನದಲ್ಲಿ ಹೊಸ ಬೆಳಕನ್ನು ತರಲು, ಶಿಕ್ಷಣದ ಬೆಳಕನ್ನು ತರಲು, ಅವರ ಜೀವನವನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಲು ಮತ್ತು ಅವರನ್ನು ಧಾರ್ಮಿಕರನ್ನಾಗಿ ಮಾಡಲು ಕೆಲಸ ಮಾಡುತ್ತದೆ.

ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮಿಗಳು ಈ ಮಠದ ಪೀಠಾಧಿಪತಿಯಾಗಿ 88 ವರ್ಷಗಳು ಮತ್ತು ತಮ್ಮ 112 ನೇ ವಯಸ್ಸಿನವರೆಗೆ ಸೃಷ್ಟಿಸಿದ ಪ್ರಭೆಯು ಇಂದು ಮಾತ್ರವಲ್ಲದೆ ಅನೇಕ ಯುಗಗಳವರೆಗೂ ನಾಡಿನ ಜನರಿಗೆ ಅವರು ಹೇಗೆ ಬದುಕಬೇಕು ಎಂಬುದರ ಕುರಿತು ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಅಟಲ್ ಜೀ ಯವರು ಇಲ್ಲಿಗೆ ಬಂದಾಗ ಉತ್ತರದಲ್ಲಿ ಗಂಗಾ ಮತ್ತು ದಕ್ಷಿಣದಲ್ಲಿ ಸಿದ್ದಗಂಗಾ ಇದೆ ಎಂದು ಹೇಳಿದ್ದರು. ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಅನೇಕರ ಪಾಪಗಳು ಸಂಪೂರ್ಣವಾಗಿ ತೊಲಗುತ್ತವೆ ಮತ್ತು ಸಿದ್ದಗಂಗಾ ಮಠಕ್ಕೆ ಬರುವುದರಿಂದ ಅನೇಕ ಜನ್ಮಗಳ ಪುಣ್ಯವು ಜಾಗೃತಗೊಳ್ಳುತ್ತದೆ ಎಂದು ನಂಬಲಾಗಿದೆ. ಸಿದ್ದಗಂಗಾ ಮಠವು ಅತ್ಯಂತ ದೊಡ್ಡ ತೀರ್ಥಕ್ಷೇತ್ರವಾಗಿದ್ದು, ಇಂದು 80 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಫಾರ್ಮಸಿ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ ಎಂದರು.

ತಪಸ್ವಿಯ ದೃಢತೆ, ಕರ್ಮಯೋಗಿಯ ಕೆಲಸಗಳು ಮತ್ತು ಧಾರ್ಮಿಕ ಜೀವನವನ್ನು ನಡೆಸಿದ ಸಂತನ ಕಾರ್ಯಗಳಿಂದಾಗಿ ಇದೊಂದು ಪವಿತ್ರ ಅಧ್ಯಾತ್ಮಿಕ ಸ್ಥಳವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸುಮಾರು 600 ವರ್ಷಗಳಷ್ಟು ಹಳೆಯದಾದ ಈ ಸ್ಥಳವು ಅನೇಕ ಜನರ ಜೀವನದಲ್ಲಿ ಸಮೃದ್ಧಿಗೆ ಕಾರಣವಾಗಿದೆ, ಅದಕ್ಕಾಗಿಯೇ ಶಿವಕುಮಾರಸ್ವಾಮೀಜಿ ಅವರನ್ನು ಆಧುನಿಕ ಬಸವಣ್ಣ ಎಂದೂ ಕರೆಯುತ್ತಾರೆ. ಅವರು ಪಕ್ಷಾತೀತ ಸಮಾನತೆಯ ಚಿಂತನೆಯನ್ನು ಮುಂದಿಟ್ಟುಕೊಂಡು ಬಸವಣ್ಣನವರ ಸಿದ್ಧಾಂತವನ್ನು ಸಾಕಾರಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ಕೆಲವರು ಮಾತಿನ ಮೂಲಕ ಸಂದೇಶ ನೀಡುತ್ತಾರೆ, ಕೆಲವರು ಜ್ಞಾನದ ಮೂಲಕ ನೀಡುತ್ತಾರೆ, ಆದರೆ ಶಿವಕುಮಾರಸ್ವಾಮೀಜಿಯವರು ತಮ್ಮ ಕಾರ್ಯಗಳ ಮೂಲಕ ಸಂದೇಶವನ್ನು ನೀಡಿದ್ದಾರೆ, ಅದು ಯುಗಯುಗಗಳವರೆಗೂ ನೆನಪಿನಲ್ಲಿ ಉಳಿಯುತ್ತದೆ, ಅನ್ನ, ಅಕ್ಷರ ಮತ್ತು ವಸತಿ ಮೂರನ್ನೂ ಅವರು ಒದಗಿಸುವ ಕೆಲಸವನ್ನು ಮಾಡಿದ್ದಾರೆ. ಈ ಮಠಕ್ಕೆ ಬಂದವರು ಎಂದಿಗೂ ಹಸಿವಿನಿಂದ ಹಿಂತಿರುಗುವುದಿಲ್ಲ, ಈ ಮಠದ ಆಶ್ರಯದಲ್ಲಿ ಸಮಾಜದ ಪ್ರತಿಯೊಂದು ವರ್ಗದ 10,000 ಕ್ಕೂ ಹೆಚ್ಚು ಬಡ ಮಕ್ಕಳಿಗೆ ಶಿಕ್ಷಣ ಮತ್ತು ಜೀವನದ ವ್ಯವಸ್ಥೆ ಇದೆ, ಅವರು ತಮ್ಮ ಜೀವನವನ್ನು ಜ್ಞಾನದಿಂದ ಬೆಳಗುತ್ತಿದ್ದಾರೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಡಾ.ಶಿವಕುಮಾರಸ್ವಾಮಿ ಅವರ ಅನ್ನ, ಅಕ್ಷರ ಮತ್ತು ವಸತಿ ಎಂಬ ಮೂರು ತತ್ವಗಳನ್ನು ಸಾಕಾರಗೊಳಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಕೊರೊನಾ ಅವಧಿಯಲ್ಲಿ, ಶ್ರೀ ನರೇಂದ್ರ ಮೋದಿಯವರ ಸರ್ಕಾರವು ಸುಮಾರು 80 ಕೋಟಿ ಜನರಿಗೆ ಎರಡು ವರ್ಷಗಳವರೆಗೆ ಪ್ರತಿ ವ್ಯಕ್ತಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಿತು. ಹೊಸ ಶಿಕ್ಷಣ ನೀತಿಯಡಿಯಲ್ಲಿ, ಶ್ರೀ ನರೇಂದ್ರ ಮೋದಿ ಅವರು ದೇಶದ ಹಲವು ಭಾಷೆಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳನ್ನು ಮಾಡಿದ್ದಾರೆ ಮತ್ತು ಈ ಮೂಲಕ ಮಕ್ಕಳು ತಾಂತ್ರಿಕ ಅಥವಾ ವೈದ್ಯಕೀಯ ಶಿಕ್ಷಣವನ್ನು ಅವರ ಭಾಷೆಯಲ್ಲಿ ಪಡೆಯಲು ಪ್ರಯತ್ನಿಸಿದ್ದಾರೆ. ಸುಮಾರು ಮೂರು ಕೋಟಿ ಜನರಿಗೆ ವಾಸಿಸಲು ಮನೆ ಇರಲಿಲ್ಲ, ಆದರೆ ಮೋದಿಯವರು ಕೇವಲ 7 ವರ್ಷಗಳಲ್ಲಿ ಮೂರು ಕೋಟಿ ಜನರಿಗೆ ಮನೆಗಳನ್ನು ಒದಗಿಸಿದ್ದಾರೆ ಎಂದು ಅವರು ಹೇಳಿದರು.

ಡಾ.ಶಿವಕುಮಾರಸ್ವಾಮಿಯವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳು ಸಮಾನತೆಯನ್ನು ಹೊಂದಿದ್ದು, ಪ್ರತಿಯೊಂದು ಸಮಾಜದ, ಜಾತಿಯ ಮಕ್ಕಳು ಇಲ್ಲಿ ಓದಿ ಮುನ್ನಡೆಯಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಡಾ.ಶಿವಕುಮಾರಸ್ವಾಮಿಯವರ ನಂತರವೂ ಸಿದ್ದಗಂಗಾ ಮಠ ಅವರ ತತ್ವಾದರ್ಶಗಳನ್ನು ಮುಂದುವರಿಸಿಕೊಂಡು ಹೋಗುವ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ. ಕೆಲವರು ಡಾ. ಶಿವಕುಮಾರಸ್ವಾಮಿ ಅವರನ್ನು ದೇವರು ಎನ್ನುತ್ತಾರೆ, ಕೆಲವರು ಬಸವಣ್ಣನ ಅವತಾರವೆಂದೂ, ಕೆಲವರು ಶಿವಯೋಗಿ ಎಂದೂ ಕರೆಯುತ್ತಾರೆ. ಆದರೆ 88 ವರ್ಷಗಳ ಕಾಲ ಈ ಮಠದ ಮುಖ್ಯಸ್ಥರಾಗಿ ಅವರು ನೀಡಿದ ಕರ್ಮ ಸಂದೇಶದ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯಬೇಕು ಮತ್ತು ಇಡೀ ಸಮಾಜದಲ್ಲಿ ಸಂತೋಷ, ಸಮೃದ್ಧಿ, ಶಿಕ್ಷಣ ಮತ್ತು ಪಾಲನೆಯನ್ನು ಉತ್ತೇಜಿಸಬೇಕು ಎಂದು ಬಯಸುತ್ತೇನೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

****



(Release ID: 1812426) Visitor Counter : 250


Read this release in: English , Urdu , Hindi