ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಭಾರತವನ್ನು ಪ್ರಪಂಚದ ವಿಷಯವಸ್ತುಗಳ ಉಪಖಂಡವನ್ನಾಗಿ ಮಾಡುವ ಗುರಿ - ಶ್ರೀ ಅನುರಾಗ್ ಠಾಕೂರ್


ಭಾರತೀಯ ವಿಷಯವಸ್ತುವು ಜಾಗತಿಕವಾಗಿ ಹರಡಲಿದೆ: ಶ್ರೀ ರಣವೀರ್ ಸಿಂಗ್

ಎಕ್ಸ್‌ಪೋದಲ್ಲಿ ಹೆಚ್ಚಿನ ಲವಲವಿಕೆ ಮತ್ತು ಚಲನಶೀಲವಾಗಿರುವ ಪೆವಿಲಿಯನ್ ಭಾರತದ ಪೆವಿಲಿಯನ್: ಶ್ರೀ ರಣವೀರ್ ಸಿಂಗ್

ಸಾಂಕ್ರಾಮಿಕ ಸಮಯಗಳಲ್ಲಿ ಭಾರತೀಯರು ಪಶ್ಚಿಮ ದೇಶಗಳ ರಾಜಧಾನಿಗಳ ಬದಲು ದುಬೈಗೆ ಹೋಗಲು ಬಯಸುತ್ತಾರೆ: ಶ್ರೀ ಅನುರಾಗ್ ಠಾಕೂರ್

ಭಾರತವು ಪ್ರವಾಸೋದ್ಯಮದಲ್ಲಿ ಉತ್ತಮ ಸಾಮರ್ಥ್ಯವನ್ನು ಹೊಂದಿದೆ, ಮಾಹಿತಿ ತಂತ್ರಜ್ಞಾನದ ಪ್ರತಿಭೆ ಜಾಗತಿಕ ಉದ್ಯಮಗಳಿಗೆ ಪ್ರಯೋಜನವನ್ನು ನೀಡುತ್ತದೆ: ಶ್ರೀ ಇಸಾಮ್ ಕಾಜಿಮ್, ಸಿಇಒ, ದುಬೈ ಕಾರ್ಪೊರೇಷನ್ ಫಾರ್ ಟೂರಿಸಂ ಮತ್ತು ಕಾಮರ್ಸ್ ಮಾರ್ಕೆಟಿಂಗ್

Posted On: 28 MAR 2022 7:59PM by PIB Bengaluru

ದುಬೈಗೆ ಭೇಟಿ ನೀಡಿದ  ಮೂರನೇ ದಿನದಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಇಂದು ದುಬೈ ಎಕ್ಸ್‌ಪೋ 2020 ರಲ್ಲಿ ಇಂಡಿಯಾ ಪೆವಿಲಿಯನ್‌-ನಲ್ಲಿ 'ಭಾರತೀಯ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಜಾಗತಿಕ  ಪ್ರಸರಣ' ಕುರಿತು ಶ್ರೀ ರಣವೀರ್ ಸಿಂಗ್ ಅವರೊಂದಿಗೆ ಸಂವಾದ ನಡೆಸಿದರು.

PHOTO-2022-03-28-19-17-10.jpgPHOTO-2022-03-28-19-17-10(2).jpg

ದುಬೈನಲ್ಲಿರುವ ಭಾರತೀಯರೇ ಭಾರತದ ನಿಜವಾದ ಬ್ರಾಂಡ್ ರಾಯಭಾರಿಗಳು ಎಂದು ಸಚಿವರು ಹೇಳಿದರು. ಇಂಡಿಯಾ ಪೆವಿಲಿಯನ್ 1.7 ದಶಲಕ್ಷ ಸಂದರ್ಶಕರನ್ನು ಹೊಂದಿರುವ ದೊಡ್ಡ ಜನಾಕರ್ಷಕ ಕೇಂದ್ರವಾಗಿದೆ. ಭಾರತವು ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿದೆ ಮತ್ತು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಆಚರಣೆಗಳು ನಡೆಯುತ್ತಿವೆ ಎಂದು ಸಚಿವರು ಹೇಳಿದರು.

ಭಾರತದ ಸಾಫ್ಟ್ ಪವರ್ ಪ್ರೊಜೆಕ್ಷನ್‌ನಲ್ಲಿ ಚಲನಚಿತ್ರಗಳ ಕೊಡುಗೆಯನ್ನು ಶ್ಲಾಘಿಸಿದ ಸಚಿವರು, ಭಾರತವು ಕಥೆ ಹೇಳುವ ಭೂಮಿಯಾಗಿದೆ ಮತ್ತು ಚಲನಚಿತ್ರೋದ್ಯಮವು ತನ್ನ ಚಲನಚಿತ್ರಗಳಿಗಾಗಿ ಭಾರತವನ್ನು ಗುರುತಿಸುವ ವಿದೇಶಗಳ ಜನರ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ ಎಂದು ಹೇಳಿದರು. ಭಾರತವನ್ನು ವಿಶ್ವದ ವಿಷಯ ವಸ್ತುವಿನ ಉಪಖಂಡವನ್ನಾಗಿ ಮಾಡುವುದು ತಮ್ಮ  ಗುರಿಯಾಗಿದೆ ಎಂದು ಸಚಿವರು ಹೇಳಿದರು. ಇದು ಭಾರತದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಇಡೀ ಜಗತ್ತಿಗೆ ವಿಷಯವಸ್ತುವನ್ನು ರಚಿಸಲು ಸಹಾಯ ಮಾಡುತ್ತದೆ.  ವಿವಿಧ ಚಲನಚಿತ್ರಗಳಲ್ಲಿನ ಶ್ರೀ ರಣವೀರ್ ಸಿಂಗ್ ಅವರ ನಟನೆಯನ್ನು ನೆನೆದು ಅವರ  ಪ್ರತಿಭೆಯನ್ನು ಸಚಿವರು  ಹೊಗಳಿದರು.

ಭಾರತೀಯ ವಿಷಯವಸ್ತುವು ವಿಶ್ವ ವೇದಿಕೆಯಲ್ಲಿ ಉತ್ತುಂಗದಲ್ಲಿದೆ ಎಂದು ಶ್ರೀ ರಣವೀರ್ ಸಿಂಗ್ ಹೇಳಿದರು. ಭಾರತೀಯ ಮನರಂಜನೆಯು ಜಾಗತಿಕವಾಗಿ ಹರಡಲಿದೆ, ನಮ್ಮ ಕಥೆಗಳು ಜನರೊಂದಿಗೆ ಅನುರಣಿಸುತ್ತವೆ ಮತ್ತು ಸಾಂಸ್ಕೃತಿಕ ಗಡಿಗಳನ್ನು ಮೀರಿವೆ ಮತ್ತು ವಿದೇಶದಲ್ಲಿರುವ ಭಾರತೀಯರು ಚಲನಚಿತ್ರಗಳ ಮೂಲಕ ಭಾರತದೊಂದಿಗೆ ಸಂಪರ್ಕ ಸಾಧಿಸುತ್ತಾರೆ ಎಂದು ಅವರು ಹೇಳಿದರು.

ಉತ್ಸಾಹಭರಿತ ಚರ್ಚೆಯ ಮೊದಲು ಸಚಿವರು ಶ್ರೀ ರಣವೀರ್ ಸಿಂಗ್ ಅವರೊಂದಿಗೆ ದುಬೈ ಎಕ್ಸ್‌ಪೋ 2020 ರಲ್ಲಿ ಇಂಡಿಯಾ ಪೆವಿಲಿಯನ್‌–ನಲ್ಲಿ ಸುತ್ತಾಡಿದರು.

 

ಇದಕ್ಕೂ ಮುನ್ನ ಸಚಿವರು. ದುಬೈ ಕಾರ್ಪೊರೇಷನ್ ಫಾರ್ ಟೂರಿಸಂ ಅಂಡ್ ಕಾಮರ್ಸ್ ಮಾರ್ಕೆಟಿಂಗ್‌ನ ಸಿಇಒ ಶ್ರೀ ಇಸಾಮ್ ಕಾಜಿಮ್ ರೊಂದಿಗೆ ಚರ್ಚೆ ನಡೆಸಿದರು.  ದುಬೈ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದುಬೈ ಅಳವಡಿಸಿಕೊಂಡ ವಿವಿಧ ಕಾರ್ಯತಂತ್ರಗಳಿಂದ ವಿಶ್ವಕ್ಕೆ ಆದ್ಯತೆಯ ಪ್ರವಾಸೋದ್ಯಮ ತಾಣವನ್ನಾಗಿ ಮಾಡಿದ ಬಗ್ಗೆ ಚರ್ಚಿಸಿದರು. ಸಾಂಕ್ರಾಮಿಕ ರೋಗದ ನಡುವೆಯೂ ಉತ್ತಮ ಯಶಸ್ಸನ್ನು ಸಾಧಿಸಿರುವ ಎಕ್ಸ್‌ಪೋವನ್ನು ಆಯೋಜಿಸಿದ್ದಕ್ಕಾಗಿ ಸಚಿವರು ದುಬೈಯನ್ನು ಶ್ಲಾಘಿಸಿದರು. ಪ್ರಪಂಚದ ಪ್ರವಾಸೋದ್ಯಮ ನಕ್ಷೆಯಲ್ಲಿ ದುಬೈನ ಪ್ರಾಮುಖ್ಯವನ್ನು ಎತ್ತಿ ತೋರಿಸುತ್ತಾ, ಈ ಸಾಂಕ್ರಾಮಿಕ ಸಮಯಗಳಲ್ಲಿ ಭಾರತೀಯರು ಲಂಡನ್‌ನಂತಹ ಪಶ್ಚಿಮ ರಾಜಧಾನಿಗಳ ಬದಲು ದುಬೈಗೆ ಹೋಗಲು ಬಯಸುತ್ತಾರೆ ಎಂದು ಸಚಿವರು ಹೇಳಿದರು.

ಕೇಂದ್ರೀಕೃತ ಗುರಿಯೊಂದಿಗೆ ನಿರ್ಣಾಯಕ ನಾಯಕತ್ವದಿಂದ  ದುಬೈನ ಯಶಸ್ಸು ಸಾಧ್ಯವಾಗಿದೆ ಎಂದು ಶ್ರೀ ಇಸಾಮ್ ಕಾಜಿಮ್  ಹೇಳಿದರು. ಮಾರ್ಚ್ 2020 ರಲ್ಲಿ ಕೋವಿಡ್ ಸಮಯದಲ್ಲಿ ನಗರವನ್ನು ಲಾಕ್ ಡೌನ್ ಮಾಡಿದಾಗ  ದುಬೈ ಪ್ರಾಧಿಕಾರದ ಕಾರ್ಯತಂತ್ರದ ಕುರಿತು ಅವರು ಮಾತನಾಡಿದರು. ಅಧಿಕಾರಿಗಳು ಸಂಪೂರ್ಣವಾಗಿ ಹೊಸ ತಂತ್ರವನ್ನು ಅಳವಡಿಸಿಕೊಂಡರು ಮತ್ತು ನಿರ್ಬಂಧಗಳು ಮತ್ತು ಶಿಷ್ಟಾಚಾರಗಳನ್ನು ಖಾತ್ರಿಪಡಿಸಿದರು. ಲಸಿಕೆಗಳು ಮತ್ತು ಪಿಸಿಆರ್ ಪರೀಕ್ಷೆಗಳನ್ನು ಪ್ರಯಾಣಿಕರಿಗೆ ಕಡ್ಡಾಯಗೊಳಿಸಲಾಯಿತು , ಹೀಗಾಗಿ ದುಬೈ ಪ್ರವಾಸಿಗರಿಗೆ ತೆರೆದ ಮೊದಲ ನಗರವಾಯಿತು ಎಂದರು.

2025 ರ ವೇಳೆಗೆ ದುಬೈ 25 ದಶಲಕ್ಷ  ಪ್ರವಾಸಿಗರನ್ನು ಪಡೆಯುವ ಗುರಿಯನ್ನು ಹೊಂದಿದೆ ಮತ್ತು ವಿಶ್ವದ ಅತಿ ಹೆಚ್ಚು ಭೇಟಿ ನೀಡುವ ನಗರವಾಗಿ ಹೊರಹೊಮ್ಮುತ್ತದೆ ಎಂದು ಶ್ರೀ ಕಾಜಿಮ್ ತಿಳಿಸಿದರು. ನಗರವು ಜನರು ಬರಲು ಆರಾಮದಾಯಕವಾಗಿರುವುದು, ವ್ಯವಹಾರಗಳನ್ನು ಸ್ಥಾಪಿಸಲು ಸುಲಭವಾಗುವಂತೆ ಮಾಡುವುದು, ದುಬೈಯನ್ನು ವಾಸಿಸಲು ಉತ್ತಮ ನಗರವೆಂದು ಪ್ರಚಾರ ಮಾಡುವುದು, ವಿದೇಶೀ ಹೂಡಿಕೆಯನ್ನು ಉತ್ತೇಜಿಸುವುದು, ಟೆಕ್ ಕಂಪನಿಗಳನ್ನು ಆಹ್ವಾನಿಸುವುದು, ಎಮಿರೇಟ್ ಏರ್‌ಲೈನ್‌ಗಳ ಮೂಲಕ ಸಂಪರ್ಕವನ್ನು ಸುಧಾರಿಸುವುದು ಮತ್ತು ಮೂಲಸೌಕರ್ಯ ಅಭಿವೃದ್ಧಿ ಮುಂತಾದ  ಅಂಶಗಳ ಮೇಲೆ ಕೇಂದ್ರೀಕರಿಸಿ ದುಬೈಯ ಬಗ್ಗೆ ಪ್ರಚಾರ ಮಾಡುವುದು. ಅಪಾಯಕಾರಿ ಮತ್ತು ಅನಿಯಂತ್ರಿತವಾಗಿದ್ದರೂ ಕೂಡ ದುಬೈ ಕ್ರಿಪ್ಟೋ ಕರೆನ್ಸಿಗೆ  ಅವಕಾಶವನ್ನು ಅನ್ವೇಷಿಸುತ್ತಿದೆ ಎಂದು ಅವರು ತಿಳಿಸಿದರು. 

ಪ್ರವಾಸೋದ್ಯಮದಲ್ಲಿ ಭಾರತವು ಉತ್ತಮ ಅವಕಾಶಗಳನ್ನು ಹೊಂದಿದೆ ಎಂದು ಶ್ರೀ ಕಾಜಿಮ್  ಹೇಳಿದರು. ಭಾರತವು ಪ್ರಮುಖ ನಗರಗಳು/ರಾಜ್ಯಗಳ ವಿಶಿಷ್ಟ ಅಂಶಗಳನ್ನು ಬಳಸಿಕೊಳ್ಳಬಹುದು ಮತ್ತು ಅವುಗಳ ಸಾಮರ್ಥ್ಯದ ಮೇಲೆ ಕೇಂದ್ರೀಕರಿಸಬಹುದು. ಅಲ್ಲದೆ, ಭಾರತದ ಐಟಿ ಪ್ರತಿಭೆಯು ಜಾಗತಿಕ ಉದ್ಯಮಕ್ಕೆ ಪ್ರಯೋಜನವನ್ನು ನೀಡುತ್ತದೆ, ಅದನ್ನು ಶಕ್ತಿಯಾಗಿ ಉತ್ತೇಜಿಸಬಹುದು  ಎಂದು ಹೇಳಿದರು.

ಶ್ರೀ ಅನುರಾಗ್ ಠಾಕೂರ್ ಅವರು ಶ್ರೀಕಾಜಿಮ್ ಅವರಿಗೆ ಪ್ರವಾಸೋದ್ಯಮ ಮತ್ತು ಮಾಧ್ಯಮ ಮತ್ತು ಮನರಂಜನಾ ವಲಯದಲ್ಲಿ ಸಹಯೋಗದ ಅವಕಾಶಗಳ ಕುರಿತು ಮತ್ತಷ್ಟು ಚರ್ಚಿಸಲು ಭಾರತಕ್ಕೆ ಆತ್ಮೀಯ ಆಹ್ವಾನವನ್ನು ನೀಡಿದರು.

***



(Release ID: 1810754) Visitor Counter : 208


Read this release in: English , Urdu , Hindi