ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದ ಜನಸಂಖ್ಯೆಯ ಶೇ 40ಕ್ಕಿಂತ ಹೆಚ್ಚಿನ ಜನ ತಮ್ಮ ದೇಹದಲ್ಲಿ ಕ್ಷಯರೋಗದ ಸೋಂಕು ಹೊಂದಿದ್ದಾರೆ. ಆದರೆ ಶೇ 10 ರಷ್ಟು ಜನ ಮಾತ್ರ ಟಿಬಿ ರೋಗಕ್ಕೆ ಒಳಗಾಗುತ್ತಿದ್ದಾರೆ : ರಾಷ್ಟ್ರೀಯ ಕ್ಷಯರೋಗ ಸಂಸ್ಥೆಯ ಮುಖ್ಯ ವೈದ್ಯಕೀಯ ಅಧಿಕಾರಿ,


ನಮ್ಮ ದೇಶದಲ್ಲಿ ಬಂಜೆತನಕ್ಕೆ ಸಾಮಾನ್ಯ ಕಾರಣವೆಂದರೆ ಕ್ಷಯರೋಗ: ನಿರ್ದೇಶಕರು, ರಾಷ್ಟ್ರೀಯ ಕ್ಷಯರೋಗ ಸಂಸ್ಥೆ

ಟಿಬಿ ಹೆಚ್ಚು ಸಂಕ್ರಾಮಿಕ ರೋಗವಾಗಿದೆ: ಸಕಾಲಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಅದು ಸಾವಿಗೆ ಕಾರಣವಾಗಬಹುದು

ವಿಶ್ವ ಕ್ಷಯರೋಗ ದಿನಾಚರಣೆ ಹಿನ್ನೆಲೆಯಯಲ್ಲಿ ಪಿಐಬಿ ಪಶ್ಚಿಮ ವಲಯದಿಂದ ವೆಬಿನಾರ್ ಆಯೋಜನೆ

Posted On: 22 MAR 2022 1:04PM by PIB Bengaluru

“ಟಿಬಿಯನ್ನು ಕೊನೆಗೊಳಿಸಲು ಹೂಡಿಕೆ ಮಾಡಿ” ಎಂಬ ವಿಷಯ ಕುರಿತು ಭಾರತ ಸರ್ಕಾರದ ವಾರ್ತಾ ಶಾಖೆ ವೆಬಿನಾರ್ ಆಯೋಜಿಸಿತ್ತು. 2022 ರ ಮಾರ್ಚ್ 24 ರಂದು ವಿಶ್ವ ಕ್ಷಯರೋಗ ದಿನದ ಹಿನ್ನೆಲೆಯಲ್ಲಿ ಕ್ಷಯರೋಗದಿಂದ “ಜೀವಗಳನ್ನು ರಕ್ಷಿಸಿ” ಎಂಬ ವಿಷಯ ಕುರಿತು  ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವೆಬಿನಾರ್ ಆಯೋಜಿಸಲಾಗಿತ್ತು. ರಾಷ್ಟ್ರೀಯ ಕ್ಷಯರೋಗ ಸಂಸ್ಥೆಯ ನಿರ್ದೇಶಕ [ಎನ್.ಟಿ.ಐ] ಡಾ. ಸೋಮಶೇಖರ್ ಎನ್ ಮತ್ತು ಬೆಂಗಳೂರಿನ ಎನ್.ಟಿ.ಐನ ಮುಖ್ಯ ವೈದ್ಯಾಧಿಕಾರಿ [ಎಸ್.ಎ.ಜಿ] ಡಾ. ರವಿಚಂದ್ರ ಸಿ ಅವರು ತಜ್ಞರಾಗಿ ಪಾಲ್ಗೊಂಡು ರೋಗದ ವಿವಿಧ ಆಯಾಮಗಳ ಕುರಿತು ಮಾಹಿತಿ ನೀಡಿ, ಈ ಬಗ್ಗೆ ನಾವೆಲ್ಲರೂ ಎಚ್ಚರಿಕೆಯಿಂದಿರಬೇಕು ಎಂದರು.     

   

 ಸಂವಾದದ ಒಳನೋಟಗಳು:

ಕ್ಷಯರೋಗ ಮೈಕೋಬ್ಯಾಕ್ಟೀರಿಯಮ್‌ ಟ್ಯುಬರ್ಕ್ಯುಲೋಸಿಸ್ ಎಂದು ಕರೆಯಲಾಗುವ ಬ್ಯಾಕ್ಟಿರಿಯಾದಿಂದ ಉಂಟಾಗುತ್ತದೆ. ಹೆಚ್ಚಾಗಿ ಇದು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ರೋಗವಿರುವ ವ್ಯಕ್ತಿ ಕೆಮ್ಮಿದಾಗ ಹೊರ ಹೊಮ್ಮುವ ಹನಿಗಳಿಂದ ಇದು ಹರಡುತ್ತದೆ. ಇದು ಸುಲಭವಾಗಿ ಹರಡುವ ರೋಗವಾಗಿದ್ದು, ಸಕಾಲಕ್ಕೆ ಚಿಕಿತ್ಸೆ ನೀಡದಿದ್ದರೆ ಸಾವಿಗೆ ಕಾರಣವಾಗಬಹುದು. ಜಗತ್ತಿನಾದ್ಯಂತ ಟಿಬಿ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿದ್ದು, ಇದು ಹತ್ತು ಲಕ್ಷ ಜನರ ಮೇಲೆ ಪರಿಣಾಮ ಬೀರುತ್ತಿದೆ. ಒಟ್ಟಾರೆ ಪ್ರಕರಣಗಳಲ್ಲಿ ಶೇ 26 ಕ್ಕೂ ಹೆಚ್ಚು ಜನ ಭಾರತಕ್ಕೆ ಸೇರಿದವರು. ಇದು ಬಹು ಔಷಧ ನಿರೋಧಕ ಟಿಬಿ ಮತ್ತು ಎಚ್.ಐ.ವಿ ಟಿಬಿ ಪ್ರಕರಣಗಳನ್ನು ಸಹ ಒಳಗೊಂಡಿದೆ.   

 

ಟಿಬಿ ಸೋಂಕು ಮತ್ತು ಟಿಬಿ ರೋಗ

ಟಿಬಿ ಸೋಂಕು ಎಂದರೆ ಅದು ಟಿಬಿ ಕಾಯಿಲೆಯಲ್ಲ ಎಂದು ಹೇಳುತ್ತಾರೆ ಡಾ. ರವಿಚಂದ್ರ ಸಿ. “ಜಗತ್ತಿನ ಜನಸಂಖ್ಯೆಯಲ್ಲಿ ಮೂರನೇ ಒಂದರಷ್ಟು ಟಿಬಿ ಸೋಂಕಿತರು ನಮ್ಮಲ್ಲಿದ್ದಾರೆ: ಹಾಗೆಂದ ಮಾತ್ರಕ್ಕೆ ಅವರೆಲ್ಲರೂ ಟಿಬಿಯಿಂದ ಬಳಲುತ್ತಿದ್ದಾರೆ ಎಂದಲ್ಲ. ಭಾರತದಲ್ಲಿ ಶೇ 40 ಕ್ಕೂ ಹೆಚ್ಚು ಜನ ತಮ್ಮ ದೇಹದಲ್ಲಿ ಟಿಬಿ ಬ್ಯಾಕ್ಟಿರಿಯಾ ಹೊಂದಿರುತ್ತಾರೆ. ಆದರೆ ಇವರಲ್ಲಿ ಶೇ 10 ರಷ್ಟು ಜನ ಟಿಬಿ ರೋಗಕ್ಕೆ ಒಳಗಾಗುವ ಸಾಧ್ಯತೆಯಿದೆ.”

ಡಾ. ರವಿಚಂದ್ರ ಸಿ, ಮುಖ್ಯ ವೈದ್ಯಕೀಯ ಅಧಿಕಾರಿ, ಎನ್.ಟಿ.ಐ

ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರು ಟಿಬಿ ಕಾಯಿಲೆಗೆ ಒಳಗಾಗುತ್ತಿದ್ದು, ಇದು ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಎಚ್.ಐ.ವಿ, ಒತ್ತಡದ ಬದುಕು, ಮಧುಮೇಹ, ಶ್ವಾಸಕೋಶ ಹಾನಿಗೊಳಗಾಗಿರುವವರು, ಮದ್ಯಪಾನ ಮತ್ತು ಧೂಮಪಾನ ಮಾಡುವವರ ಆರೋಗ್ಯ ಪರಿಸ್ಥಿತಿ ದುರ್ಬಲವಾಗಿರುತ್ತದೆ. ಹೀಗಾಗಿ  ಇವರಿಗೆ ರೋಗ ಹರಡುವ ಸಾಧ್ಯತೆ ಹೆಚ್ಚು. ಈ ಹಂತದಲ್ಲಿ ಅವರು ರೋಗ ಲಕ್ಷಣಗಳನ್ನು ತೋರ್ಪಡಿಸಲು ಆರಂಭಿಸುತ್ತಾರೆ. 

ಎಚ್.ಐ.ವಿ. ಸೋಂಕಿತರು ಟಿಬಿ ರೋಗಕ್ಕೆ ಒಳಗಾಗಿ ಸಾವನ್ನಪ್ಪುವುದು ಸಹ ಅಷ್ಟೇ ಸಾಮಾನ್ಯವಾಗಿದೆ. ಹೆಚ್ಚಾಗಿ ಎಚ್.ಐ.ವಿ ಸೋಂಕಿತರು ಟಿಬಿ ರೋಗಕ್ಕೆ ಒಳಗಾಗುತ್ತಾರೆ. ಒಂದು ವೇಳೆ ರೋಗಿ ಯಾವುದೇ ರೀತಿಯ ಚಿಕಿತ್ಸೆ ಪಡೆಯದಿದ್ದರೆ ಆಗ ಅಂತಹವರಿಗೆ ಟಿಬಿ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಟಿಬಿ ಉಗುರು ಮತ್ತು ಕೂದಲಿಗೆ ಅಷ್ಟೇ ಹಾನಿ ಮಾಡುವುದಿಲ್ಲ, ಇದು ದೇಹದ ಯಾವುದೇ ಅಂಗದ ಮೇಲೆ ಪರಿಣಾಮ ಬೀರಬಹುದು. ರಕ್ತ ಸಂಚಲನವಾಗುವ ದೇಹದ ಪ್ರತಿಯೊಂದು ಅಂಗಗಳಿಗೂ ಇದು ಹಾನಿ ಉಂಟು ಮಾಡುತ್ತವೆ.

ಡಾ. ಸೋಮಶೇಖರ್ ಎನ್, ನಿರ್ದೇಶಕರು, ಎನ್.ಟಿ.ಐ

 

ಕ್ಷಯ ರೋಗಗಳ ವಿಧಾನಗಳು

ವಿಶಾಲವಾಗಿ ನೋಡುವುದಾದರೆ ಟಿಬಿಯಲ್ಲಿ ಎರಡು ವಿಭಾಗಗಳಿವೆ. ಪಲ್ಮನರಿ ಟಿಬಿ [ಇದು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ] ಮತ್ತು ಎಕ್ಸ್ಟ್ರಾ ಪಲ್ಮನರಿ ಟಿಬಿ [ಇದು ಶ್ವಾಸಕೋಶ ಮತ್ತು ಇತರೆ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ].

 

ಟಿಬಿಯಲ್ಲಿ ಎರಡು ಗಂಭೀರ ರೂಪಗಳಿವೆ: ಮಿಲಿಯರಿ ಟಿಬಿ ಮತ್ತು  ಮೆನಿಂಜೈಟಿಸ್ ಟಿಬಿ.

ಮಿಲಿನರಿ ಟ್ಯುಬೋರ್ಕುಲೋಸಿಸ್ – ಇಡೀ ದೇಹಕ್ಕೆ ತೊಂದರೆ ಉಂಟು ಮಾಡುತ್ತದೆ

ಟಿಬಿ ಮೆನಿಂಜೈಟಿಸ್ – ಇದು ಕೇಂದ್ರೀಯ ನರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ: ಇದರಿಂದ ತಲೆ ನೋವು, ಕಡಿಮೆ ಜಾಗರೂಕತೆ, ಪ್ರಜ್ಞೆ ತಪ್ಪುವ ಸಮಸ್ಯೆಗಳು ಉಂಟಾಗುತ್ತವೆ.  

ದುಗ್ದರಸ ಗ್ರಂಥಿ ಕ್ಷಯರೋಗ [ಎಲ್.ಎನ್.ಟಿ.ಬಿ]: ಇದು ಎಕ್ಸ್ಟ್ರಾ ಪಲ್ಮನರಿ ಟಿಬಿ ರೋಗ ಹರಡುವ ಸಾಮಾನ್ಯ ವಿಧಾನವಾಗಿದೆ. ಇದು ಕತ್ತಿನ ಊತವನ್ನು ಉಂಟು ಮಾಡುತ್ತದೆ ಮತ್ತು ಹದಿಹರೆಯದ ಹುಡುಗಿಯರಲ್ಲಿ ಇದು ಕಂಡು ಬರುತ್ತದೆ.  

ಕ್ಷಯರೋಗ [ಟಿಬಿ] ಪ್ಲೆರಲ್ ಎಪ್ಯೂಷನ್: ಈ ಪರಿಸ್ಥಿತಿಯಲ್ಲಿ ಶ್ವಾಸಕೋಶದ ಹೊರಗಿನ ಪ್ಲುರಾ [ಶ್ವಾಸಕೋಶವನ್ನು ಆವರಿಸುವ ಅಂಗಾಂಶದ ತೆಳುವಾದ ಪದರ] ಪದರಗಳ ನಡುವೆ ಹೆಚ್ಚುವರಿ ದ್ರವ ಕೆಮ್ಮು ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಿದೆ.  

ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಾಮಾನ್ಯವಾಗಿ ಕಂಡು ಬರುವ ಟಿಬಿ ಎಂದರೆ ಅದು ಚರ್ಮದ ಟಿಬಿ ಮತ್ತು ಕಣ್ಣಿನ ಟಿಬಿ. ಪೆರಿಕಾರ್ಡಿಯಮ್ [ಹೃದಯವನ್ನು ಸುತ್ತುವರೆದಿರುವ ಪೊರೆ], ಕರಳು ಮತ್ತು ಮೂಳೆಗಳ ಮೇಲೆ ಪರಿಣಾಮ ಬೀರುವ ಇತರೆ ರೀತಿಯ ಟಿಬಿ ರೋಗಗಳಿವೆ.  

ರೋಗ ಲಕ್ಷಣಗಳು

ಟಿಬಿ ಗುಣಲಕ್ಷಣಗಳನ್ನು ಸಾಮಾನ್ಯ ಲಕ್ಷಣಗಳು ಮತ್ತು ಅಂಗಾಂಗಳ ಮೇಲೆ ನಿರ್ದಿಷ್ಟ  ಪರಿಣಾಮ ಬೀರುವ ಲಕ್ಷಣಗಳಾಗಿ ನೋಡಬಹುದು.  

ಹೆಚ್ಚಿನ ಸಾಮಾನ್ಯ ಲಕ್ಷಣವೆಂದರೆ ಕೆಮ್ಮು, ಎರಡು ವಾರಗಳಿಂದ ಸತತ ಕೆಮ್ಮು ಇದ್ದರೆ, ತೂಕು ಕಡಿಮೆಯಾಗುವುದು, ರಾತ್ರಿ ಸಮಯದಲ್ಲಿ ಹಸಿವು ಆಗದಿರುವುದು ಮತ್ತು ಜ್ವರ ಎಲ್ಲಾ ರೀತಿಯ ಟಿಬಿ ಹರಡಲು ಕಾರಣವಾಗಿದೆ. ಇದರೆ ಲಕ್ಷಣಗಳೆಂದರೆ ಎದೆನೋವು, ಆಯಾಸ, ಗಣನೀಯವಾಗಿ ತೂಕ ಇಳಿಕೆ, ರಾತ್ರಿವೇಳೆಯಲ್ಲಿ ಬೆವರುವುದು ಮತ್ತು ಕಫದಲ್ಲಿ ಹೆಚ್ಚಾಗಿ ರಕ್ತ ಬರುವುದನ್ನು ಎಕ್ಸ್ಟ್ರಾ ಪಲ್ಮನರಿ ಟಿಬಿಯಿಂದ ಬಳಲುತ್ತಿರುವವರು ಅನುಭವಿಸುತ್ತಾರೆ.

 

ದೇಶದಲ್ಲಿ ಬಂಜೆತನಕ್ಕೆ ಸಾಮಾನ್ಯ ಕಾರಣವೆಂದರೆ ಅದು ಟ್ಯುಬೆರ್ಕುಲೊಸಿಸ್ ಆಗಿದೆ.

ಡಾ. ಸೋಮಶೇಖರ್ ಎನ್, ನಿರ್ದೇಶಕರು, ಎನ್.ಟಿ.ಐ

ವಾರ್ತಾ ಮತ್ತು ಪ್ರಸಾರ ಸಚಿವಾಲಯ [ಪಶ್ಚಿಮ ವಲಯ]ದ ಮಹಾ ನಿರ್ದೇಶಕ ಶ್ರೀ ಮನೀಶ್ ದೇಸಾಯಿ ಅವರು ಆರೋಗ್ಯ ವಲಯದ ಸಂವಹನ ಮತ್ತು ವಿಶೇಷವಾಗಿ ಕೋವಿಡ್ – 19 ನಂತರ ಇದು ನಮ್ಮ ಸಚಿವಾಲಯಕ್ಕೆ ಪ್ರಮುಖ ಆದೇಶವಾಗಿದೆ ಎಂದು  ಪ್ರಸ್ತಾವಿಕವಾಗಿ ಮಾತನಾಡಿ ಹೇಳಿದರು. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮತ್ತು ಮುನ್ನೆಚ್ಚೆರಿಕೆ ವಹಿಸಲು ಕೋವಿಡ್ 19 ವಿಷಯದಲ್ಲಿ ನಿರಂತರ ಮಾಧ್ಯಮ ಗೋಷ್ಠಿ ಆಯೋಜಿಸಲಾಗುತ್ತಿದೆ. ಇದರ ಜತೆಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವಿವಿಧ ವಿಭಾಗಗಳಿಂದ ವೆಬಿನಾರ್ ಮತ್ತು ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತಿದೆ. ವಿಷಯ ತಜ್ಞರೊಂದಿಗಿನ ಇಂತಹ ಸಂವಾದದ ಮೂಲಕ ಸಾರ್ವಜನಿಕ ಅರಿವು ಹೆಚ್ಚಿಸಲು ಮತ್ತು ಉತ್ತಮ ಸಂವಹನ ಹಾಗೂ ಪ್ರಭಾವದ ತಂತ್ರಗಳನ್ನು ವಿನ್ಯಾಸಗೊಳಿಸಲು ಹೇಗೆ ಸಹಾಯ ಮಾಡಿದೆ ಎಂಬ ಬಗ್ಗೆ ಡಿಜಿ ಅವರು ಮಾಹಿತಿ ನೀಡಿದರು.

ಪರಿಣಾಮಕಾರಿ ಟಿ.ಬಿ. ನಿಯಂತ್ರಣಕ್ಕಾಗಿ ಭಾರತ ಸರ್ಕಾರ ಅಳವಡಿಸಿಕೊಂಡಿರುವ ಸಮೂಹ ಮಾಧ್ಯಮ ಮತ್ತು ಪರಸ್ಪರ ಸಂವಹನದ ವಿಧಾನ, ಸಂವಹನ ವಾಹನಗಳ ಕುರಿತು ಮಾಹಿತಿ ನೀಡಿದರು. “ಅಮಿತಾಬ್ ಬಚ್ಚನ್ ಒಳಗೊಂಡಂತೆ ಬಾಲಿವುಡ್ ನೆರವಿಂದ ಸವಾಲುಗಳನ್ನು ಸಾಕಷ್ಟು ಪರಿಣಾಮಕಾರಿಯಾಗಿ ಎದುರಿಸಲು ಪ್ರಯತ್ನಿಸಲಾಗಿದೆ. ಇಂತಹ ರೋಗಗಳ ವಿರುದ್ಧ ಹೋರಾಟ ಮಾಡಲು ಸರ್ಕಾರದ ಸ್ವಚ್ಛ ಭಾರತ್ ಅಭಿಯಾನದಿಂದ ಸಾಕಷ್ಟು ಅನುಕೂಲವಾಗಿದೆ.  

ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಮಹತ್ವದ ಕುರಿತು ಮಾತನಾಡಿದ ಅವರು, ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಭಾರತದ ಪರಿಷ್ಕೃತ ಕಾರ್ಯತಂತ್ರ ಮತ್ತು 2025 ರ ವೇಳೆಗೆ ದೇಶವನ್ನು ಟಿಬಿ ಮುಕ್ತಗೊಳಿಸುವ ಕುರಿತು ಬೆಳಕು ಚೆಲ್ಲಿದರು.  ಬರುವ 2030 ರ ವೇಳೆಗೆ ಟಿಬಿ ಮುಕ್ತ ಜಗತ್ತು ನಿರ್ಮಿಸುವ ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಭಾರತ ಕೂಡ ಸಹಿ ಮಾಡಿದೆ. ಇದನ್ನು ಭಾರತ 2025 ರ ವೇಳೆಗೆ ಸಾಧಿಸುವ ಗುರಿ ಹಾಕಿಕೊಂಡಿದೆ” ಎಂದರು.

“ಈ ಗುರಿಗಳನ್ನು ಸಾಧಿಸಬೇಕಾದರೆ ನಾವು ಟಿಬಿ ಮುಕ್ತಗೊಳಿಸಲು ಸಮಗ್ರ ಧೋರಣೆಯನ್ನು ಅಳವಡಿಸಿಕೊಳ್ಳಬೇಕಾಗಿದೆ”, ರೋಗದ ವಿರುದ್ಧ ಹೋರಾಡುವ ಸಂವಹನ ತಂತ್ರಗಳ ಮಹತ್ವ ಮತ್ತು ಅದರ ಸುತ್ತಲಿನ ಕಳಂಕವನ್ನು ನಿವಾರಿಸಲು ಶ್ರಮಿಸುವಂತೆ ಅವರು ಸೂಚಿಸಿದರು.  

ಗೋವಾದ ಪಿಐಬಿ ಜಂಟಿ ನಿರ್ದೇಶಕರಾದ ಶ್ರೀ ವಿನೋದ್ ಕುಮಾರ್ ವೆಬಿನಾರ್ ನಲ್ಲಿ ನಿರೂಪಣೆ ಮಾಡಿದರು. ವೆಬಿನಾರ್ ನಲ್ಲಿ ವೀಕ್ಷಕರು ಕೇಳಿದ ಪ್ರಶ್ನೆಗಳಿಗೆ ತಜ್ಞರು ಉತ್ತರ ನೀಡಿದರು.

ವೆಬಿನಾರ್ ಅನ್ನು ನೀವು ಇಲ್ಲಿಂದ ಪ್ರವೇಶಿಸಬಹುದು.

***



(Release ID: 1808308) Visitor Counter : 869


Read this release in: English , Marathi