ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಟಚ್-ಲೆಸ್ ಟಚ್ ಸ್ಕ್ರೀನ್ ತಂತ್ರಜ್ಞಾನ ಅಭಿವೃದ್ಧಿ ಸಂಪರ್ಕದ ಮೂಲಕ ಹರಡುವ ವೈರಾಣುಗಳನ್ನು ತಡೆಯಬಲ್ಲದು

Posted On: 14 MAR 2022 5:25PM by PIB Bengaluru

ಮುದ್ರಣ ತಂತ್ರದ ಮೂಲಕ ಟಚ್‌ ಲೆಸ್ ಟಚ್ ಸೆನ್ಸಾರ್ ಎಂದು ಕರೆಯಲಾಗುವ ಜನಪ್ರಿಯವಾದ ಅಗ್ಗದ ಸ್ಪರ್ಶ ಸಹಿತ ಸಾಮೀಪ್ಯದ ಸಂವೇದಕವನ್ನು ಅಭಿವೃದ್ಧಿಪಡಿಸಲು ಭಾರತೀಯ ವಿಜ್ಞಾನಿಗಳು ಕೈಗೆಟುಕುವಂತಹ ಪರಿಹಾರವನ್ನು ಒದಗಿಸಿದ್ದಾರೆ.

ಕರೋನಾ ವೈರಾಣು ಸಾಂಕ್ರಾಮಿಕವು ನಮ್ಮ ಜೀವನಶೈಲಿಯನ್ನು ಸಾಂಕ್ರಾಮಿಕ ಸನ್ನಿವೇಶಗಳಿಗೆ ಹೆಚ್ಚು ಹೊಂದಿಕೊಳ್ಳುವಂತೆ ಮಾಡುವ ಪ್ರಯತ್ನಗಳನ್ನು ಪ್ರಚೋದಿಸಿದೆ. ಸ್ವಯಂ ಸೇವಾ ಕಿಯೋಸ್ಕ್‌ ಗಳು, ಎಟಿಎಂಗಳು ಮತ್ತು ವಿತರಣಾ ಯಂತ್ರಗಳಲ್ಲಿ ಟಚ್‌ ಸ್ಕ್ರೀನ್‌ ಗಳು ಬಹುತೇಕ ಅನಿವಾರ್ಯವಾಗಿರುವ ಸಾರ್ವಜನಿಕ ಸ್ಥಳಗಳಲ್ಲಿ ವೈರಾಣು ಹರಡುವ ಅಪಾಯವನ್ನು ತಗ್ಗಿಸಲು ಕ್ರಮಗಳು ಸ್ವಾಭಾವಿಕವಾಗಿ ಕಾರ್ಯತಂತ್ರಗಳಿಗೆ ಚಾಲನೆ ನೀಡುತ್ತವೆ.

ಇತ್ತೀಚೆಗೆ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿ.ಎಸ್.ಟಿ.) ಸ್ವಾಯತ್ತ ಸಂಸ್ಥೆಗಳಾದ ನ್ಯಾನೋ ಮತ್ತು ಮೃದು ವಿಚಾರಗಳ ವಿಜ್ಞಾನಗಳ ಕೇಂದ್ರ (ಸಿಇಎನ್.ಎಸ್.), ಮತ್ತು ಜವಾಹರಲಾಲ್ ನೆಹರೂ ಮುಂದುವರಿದ ಮತ್ತು ವೈಜ್ಞಾನಿಕ ಸಂಶೋಧನೆಗಳ ಕುರಿತ  ಕೇಂದ್ರ (ಜೆ.ಎನ್.ಎ.ಎಸ್.ಆರ್.)ಗಳ ಬೆಂಗಳೂರು ಮೂಲದ ವಿಜ್ಞಾನಿಗಳು, ಮುಂದುವರಿದ ಸ್ಪರ್ಶರಹಿತ ಪರದೆಯ ತಂತ್ರಜ್ಞಾನಗಳಲ್ಲಿ ಬಳಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಮುದ್ರಣ ಬೆಂಬಲಿತ ವಿನ್ಯಾಸದ (ಸುಮಾರು 300 µm ರೆಸಲ್ಯೂಷನ್) ಪಾರದರ್ಶಕ ಎಲೆಕ್ಟ್ರೋಡ್ ಗಳ ಉತ್ಪಾದನೆಗಾಗಿ  ಅರೆ ಸ್ವಯಂ ಚಾಲಿತ (ಸೆಮಿ ಆಟೋಮೇಟೆಡ್) ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದಾರೆ.

ಪ್ರೊ. ಜಿ. ಯು, ಕುಲಕರ್ಣಿ ನೇತೃತ್ವದಲ್ಲಿ  ಸಹ ಕಾರ್ಮಿಕರ ತಂಡ ಡಿಎಸ್.ಟಿ. – ನ್ಯಾನೋ ಅಭಿಯಾನದದ ಸಿ.ಇ.ಎನ್‌.ಎಸ್‌.ನ ಹಣಕಾಸು ನೆರವಿನೊಂದಿಗೆ ಈ ಕಾರ್ಯ ಮಾಡಿದ್ದು, ಇತ್ತೀಚೆಗೆ 'ಮೆಟೀರಿಯಲ್ಸ್ ಲೆಟರ್ಸ್' ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿ ಡಾ. ಅಶುತೋಷ್ ಕೆ ಸಿಂಗ್, "ನಾವು ಟಚ್ ಸೆನ್ಸರ್ ಅನ್ನು ತಯಾರಿಸಿದ್ದು, ಇದು ಸಾಧನದಿಂದ 9 ಸೆಂ.ಮೀ ದೂರದಿಂದಲೂ ಪ್ರಾಕ್ಸಿಮಲ್ ಅಥವಾ ಹೋವರ್ ಸ್ಪರ್ಶವನ್ನು ಗ್ರಹಿಸುತ್ತದೆ" ಎಂದು ತಿಳಿಸಿದ್ದಾರೆ.

"ನಾವು ಸ್ಮಾರ್ಟ್ ಎಲೆಕ್ಟ್ರಾನಿಕ್ ಆನ್ವಯಿಕಗಳ ಕಾರ್ಯಸಾಧ್ಯತೆಯನ್ನು ಸಾಬೀತುಪಡಿಸಲು, ನಮ್ಮ ವಿನ್ಯಾಸಿತ ಎಲೆಕ್ಟ್ರೋಡ್ ಗಳನ್ನು  ಬಳಸಿಕೊಂಡು ಇನ್ನೂ ಹಲವು ಮೂಲಮಾದರಿಗಳನ್ನು ರೂಪಿಸಿದ್ದೇವೆ. ಈ ಮೂಲಮಾದರಿಯ ಎಲೆಕ್ಟ್ರೋಡ್‌ ಗಳನ್ನು ಆಸಕ್ತ ಕೈಗಾರಿಕೆಗಳು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳಿಗೆ ಅವುಗಳ ಮನವಿಯ ಮೇರೆಗೆ ಸಹಯೋಗಿ ಯೋಜನೆಗಳನ್ನು ಅನ್ವೇಷಿಸಲು ಲಭ್ಯವಾಗುವಂತೆ ಮಾಡಲಾಗುವುದು” ಎಂದು ಸಂಶೋಧನೆಯ ಮತ್ತೊಬ್ಬ ಸಹ-ಲೇಖಕ ಡಾ. ಇಂದ್ರಜಿತ್ ಮಂಡಲ್ ತಿಳಿಸಿದ್ದಾರೆ.

ಈ ಅಪೂರ್ವವಾದ ಮತ್ತು ಕಡಿಮೆ-ವೆಚ್ಚದ ವಿನ್ಯಾಸಿತ ಪಾರದರ್ಶಕ ಎಲೆಕ್ಟ್ರೋಡ್ ಗಳು ಟಚ್‌ ಲೆಸ್ ಪರದೆಗಳು ಮತ್ತು ಸಂವೇದಕಗಳಂತಹ ಸುಧಾರಿತ ಸ್ಮಾರ್ಟ್ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಸಬಹುದಾದ ಪ್ರಚಂಡ ಸಾಮರ್ಥ್ಯವನ್ನು ಹೊಂದಿವೆ. ಈ ಟಚ್‌ ಲೆಸ್ ಟಚ್ ಸೆನ್ಸರ್ ತಂತ್ರಜ್ಞಾನವು ಸಂಪರ್ಕದ ಮೂಲಕ ಹರಡುವ ವೈರಾಣುಗಳ ಹರಡುವಿಕೆಯನ್ನು ತಡೆಯಲು ನೆರವಾಗುತ್ತದೆ.

ಚಿತ್ರ: ಟಚ್‌ ಲೆಸ್ ಟಚ್ ಸೆನ್ಸಾರ್‌ ನ ಸ್ಕೀಮ್ಯಾಟಿಕ್ ಪ್ರದರ್ಶನ

ಪ್ರಕಟಣೆಯ ವಿವರಗಳು: DOI:10.1016/j.matlet.2022.131724

 ಹೆಚ್ಚಿನ ತಾಂತ್ರಿಕ ವಿವರಗಳಿಗೆ:ಡಾ. ಅಶುತೋಷ್ ಕೆ ಸಿಂಗ್ (aksingh@cens.res.in)ಅವರನ್ನು ಸಂಪರ್ಕಿಸಬಹುದು.

***


(Release ID: 1805975) Visitor Counter : 297


Read this release in: English , Hindi