ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಅವರು ರಷ್ಯಾ ಒಕ್ಕೂಟದ ಅಧ್ಯಕ್ಷ ರಾದ ಗೌರವಾನ್ವಿತ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ಮಾತನಾಡಿದರು

Posted On: 07 MAR 2022 4:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಷ್ಯಾ ಒಕ್ಕೂಟದ ಅಧ್ಯಕ್ಷ ರಾದ ಗೌರವಾನ್ವಿತ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು.
ಈ ವೇಳೆ ಉಕ್ರೇನ್‌ನಲ್ಲಿಆಗುತ್ತಿರುವ ಪರಿಸ್ಥಿತಿಯ ಕುರಿತು ಉಭಯ ನಾಯಕರು ಪರಸ್ಪರ ಚರ್ಚಿಸಿದರು. ಅಧ್ಯಕ್ಷ  ಪುಟಿನ್‌ ಅವರು, ಉಕ್ರೇನ್‌ ಮತ್ತು ರಷ್ಯಾ ತಂಡಗಳ ನಡುವಿನ ಮಾತುಕತೆಗಳ ಸ್ಥಿತಿಗತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಿದರು. ರಷ್ಯಾ ಮತ್ತು ಉಕ್ರೇನ್‌ ನಡುವೆ ನಡೆಯುತ್ತಿರುವ ಮಾತುಕತೆಗಳನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು ಮತ್ತು ಅವು ಸಂಘರ್ಷವನ್ನು ನಿಲ್ಲಿಸಲು ಕಾರಣವಾಗುತ್ತವೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಅಧ್ಯಕ್ಷ  ಪುಟಿನ್‌ ಮತ್ತು ಅಧ್ಯಕ್ಷ  ಝಲೆನ್ಸ್ಕಿ ನಡುವಿನ ನೇರ ಸಂಭಾಷಣೆಯು ನಡೆಯುತ್ತಿರುವ ಶಾಂತಿ ಪ್ರಯತ್ನಗಳಿಗೆ ಹೆಚ್ಚು ಸಹಾಯ ಮಾಡುತ್ತದೆ ಎಂದು ಅವರು ಸಲಹೆ ನೀಡಿದರು.

ಸುಮಿಯಲ್ಲಿಇನ್ನೂ ಉಳಿದಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷ ತೆಯ ಕುರಿತು ತಮ್ಮ ಆಳವಾದ ಕಾಳಜಿಯನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದರು. ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ಮಾನವೀಯ ಕಾರಿಡಾರ್‌ಗಳಿಗೆ (ವಾಯು ಮಾರ್ಗ) ಸಂಬಂಧಿಸಿದಂತೆ ನಡೆಯುತ್ತಿರುವ ಕ್ರಮಗಳ ಬಗ್ಗೆ ಅಧ್ಯಕ್ಷ  ಪುಟಿನ್‌ ಪ್ರಧಾನಿ ಅವರಿಗೆ ವಿವರಿಸಿದರು.

***



(Release ID: 1803837) Visitor Counter : 170