ಜಲ ಶಕ್ತಿ ಸಚಿವಾಲಯ
ಬೆಂಗಳೂರಿನಲ್ಲಿ ಜೆಜೆಎಂ ಮತ್ತು ಎಸ್.ಬಿ.ಎಂ(ಜಿ) ಕುರಿತಂತೆ 6 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಸಚಿವರುಗಳ ಒಂದು ದಿನದ ಪ್ರಾದೇಶಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಜಲಶಕ್ತಿ ಸಚಿವರು
ಭಾಗವಹಿಸಿದ್ದ 6 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ಅನುದಾನವಾಗಿ 21,842 ಕೋಟಿ ರೂ. ಹಂಚಿಕೆ; ಈ 6 ರಾಜ್ಯಗಳಿಗೆ 2021-22 ರಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕಾಗಿ 15ನೇ ಹಣಕಾಸು ಆಯೋಗದ ಅಡಿಯಲ್ಲಿ ನೈರ್ಮಲ್ಯ ಅನುದಾನವಾಗಿ 7,498 ಕೋಟಿ ರೂ. ಹಂಚಿಕೆ
ಜಲ ಜೀವನ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು 2022-23ನೇ ಸಾಲಿಗಾಗಿ 7,000 ಕೋಟಿ ರೂ. ಹಂಚಿಕೆ ಮಾಡಿದೆ: ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ
Posted On:
05 MAR 2022 5:29PM by PIB Bengaluru
“ಭಾರತ ಸರ್ಕಾರ ಜಲ ಜೀವನ ಅಭಿಯಾನ(ಜೆಜೆಎಂ) ಮತ್ತು ಸ್ವಚ್ಛ ಭಾರತ ಅಭಿಯಾನ (ಗ್ರಾಮೀಣ)ಕ್ಕೆ ಉನ್ನತ ಆದ್ಯತೆ ನೀಡಿದ್ದು, ಇದು ಕೇಂದ್ರ ಸರ್ಕಾರ ಈ ಎರಡು ಮಹತ್ವಾಕಾಂಕ್ಷೆಯ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಿರುವ ನಿಧಿಯಿಂದಲೇ ಸಾಬೀತಾಗುತ್ತದೆ. 15ನೇ ಹಣಕಾಸು ಆಯೋಗದ ಅಡಿಯಲ್ಲಿ ಜೆಜೆಎಂ ಅಡಿಯಲ್ಲಿ 20,487.58 ಕೋಟಿ ರೂ.ನಷ್ಟು ನಿಧಿಯನ್ನು ಹಂಚಿಕೆ ಮಾಡಿದ್ದರೆ, 1,355.13 ಕೋಟಿ ರೂ.ಗಳನ್ನು ಎಸ್.ಬಿ.ಎಂ(ಜಿ) ಅಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಪಾಲ್ಗೊಂಡಿರುವ 6 ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ಹಂಚಿಕೆ ಮಾಡಲಾಗಿದ್ದು, ಪಾಲ್ಗೊಂಡಿರುವ 6 ರಾಜ್ಯಗಳಿಗೆ ನೈರ್ಮಲ್ಯ ಮತ್ತು ಬಯಲು ಶೌಚಮುಕ್ತ (ಟೈಯ್ಡ್ ಗ್ರಾಂಟ್) ಅನುದಾನವಾಗಿ 7,498 ಕೋಟಿ ರೂ. ಹಂಚಿಕೆ ಮಾಡಲಾಗಿದೆ.,” ಎಂದು ಬೆಂಗಳೂರಿನ ವಿಧಾನಸೌಧದಲ್ಲಿ ಪ್ರಾದೇಶಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ.
6 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳು (ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ತಮಿಳುನಾಡು, ತೆಲಂಗಾಣ, ಪುದುಚೇರಿ ಮತ್ತು ಲಕ್ಷದ್ವೀಪ) ಪ್ರಾದೇಶಿಕ ಸಮ್ಮೇಳನದ ಭಾಗವಾಗಿವೆ. ಬೆಂಗಳೂರಿನಲ್ಲಿ ನಡೆದ ಸಮ್ಮೇಳನಕ್ಕೆ ಆಗಮಿಸಿದ ಪ್ರತಿನಿಧಿಗಳನ್ನು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಸ್ವಾಗತಿಸಿದರು. ಆಂಧ್ರಪ್ರದೇಶದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ, ಮಧ್ಯಪ್ರದೇಶ ಸರ್ಕಾರದ ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ಖಾತೆ ರಾಜ್ಯ ಸಚಿವ ಶ್ರೀ ಬ್ರಿಜೇಂದ್ರ ಸಿಂಗ್ ಯಾದವ್, ಕರ್ನಾಟಕ ಸರ್ಕಾರದ ಐಟಿ, ಬಿಟಿ, ಎಸ್. ಮತ್ತು ಟಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಶ್ರೀ ಗೋವಿಂದ ಕಾರಜೋಳ ಮತ್ತು ಪುದುಚೇರಿ ಸರ್ಕಾರದ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಶ್ರೀ ಎ.ಕೆ. ಸಾಯಿ ಜೆ ಸರವಣನ್ ಕುಮಾರ್ ಅವರೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಸಿಎಸ್, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಮಾತನಾಡಿ, “ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀರಿನ ಸಮಸ್ಯೆಯನ್ನು ಕೈಗೆತ್ತಿಕೊಂಡ ಮೊದಲ ನಾಯಕರಾಗಿದ್ದು, ಆಗಸ್ಟ್, 2019 ರಲ್ಲಿ ‘ಜಲ ಜೀವನ ಅಭಿಯಾನ’ ಘೋಷಿಸಿದರು ಎಂದರು. ನಮ್ಮ ರಾಜ್ಯ ಕೂಡ ನೀರು ಸರಬರಾಜು ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದ್ದು, ನಾವು 2022-23ರಲ್ಲಿ ಕುಡಿಯುವ ನೀರು ವಲಯಕ್ಕೆ 7,000 ಕೋಟಿ ರೂ. ಹಂಚಿಕೆ ಮಾಡಿದ್ದೇವೆ. ನೀರು ಸ್ಥಳೀಯ ಸಮಸ್ಯೆಯಷ್ಟೇ ಅಲ್ಲ, ಅದು ಜಾಗತಿಕ ಸಮಸ್ಯೆಯೂ ಆಗಿದೆ. ನೀರು ಸರಬರಾಜು ಮೂಲಸೌಕರ್ಯವನ್ನು ರೂಪಿಸುವುದರಿಂದ ಮಾತ್ರವೇ ಇದನ್ನು ಪರಿಹರಿಸಲಾಗುವುದಿಲ್ಲ, ಜೊತೆಗೆ ಇದಕ್ಕೆ ಉತ್ತಮ ಯೋಜನೆ, ನಿರಂತರ ಮೇಲ್ವಿಚಾರಣೆ, ಒ ಮತ್ತು ಎಂ, ಮೂಲ ಸುಸ್ಥಿರತೆ, ವಿವಿಧ ಬಾಧ್ಯಸ್ಥರುಗಳ ನಡುವಿನ ಸಮನ್ವಯ, ನದಿ ಜಲಾನಯನ ನಿರ್ವಹಣೆ ಮತ್ತು ನೀರಾವರಿಗಾಗಿ ನೀರನ್ನು ಬಳಸುವಲ್ಲಿ ದಕ್ಷತೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ನಮ್ಮ ರಾಜ್ಯ, ಎಲ್ಲ ಗ್ರಾಮೀಣ ವಸತಿಗೂ 2024ರೊಳಗೆ ಕೊಳವೆಯ ಮೂಲಕ ಶುದ್ಧ ನೀರು ಪೂರೈಸಬೇಕು ಎಂದು ಮಾನ್ಯ ಪ್ರಧಾನಮಂತ್ರಿಯವರು ನಿಗದಿ ಮಾಡಿರುವ ಗುರಿಯನ್ನು ಸಾಧಿಸಲು ಪೂರ್ಣ ಪ್ರಮಾಣ ಮತ್ತು ವೇಗದೊಂದಿಗೆ ಶ್ರಮಿಸಲಿದೆ ಎಂದರು.
ಉದ್ಘಾಟನಾ ಭಾಷಣದಲ್ಲಿ ಕೇಂದ್ರ ಸಚಿವರು ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಾ, “ನಾವು ಗ್ರಾಮೀಣ ಮತ್ತು ನಗರಗಳ ನಡುವಿನ ಅಂತರವನ್ನು ಕಡಿಮೆ ಮಾಡಬೇಕಾಗಿದೆ. ಮಾನ್ಯ ಪ್ರಧಾನಮಂತ್ರಿಗಳ ನೀತಿಯ ಪ್ರಕಾರ ‘ಯಾರೊಬ್ಬರೂ ಬಿಟ್ಟು ಹೋಗಬಾರದು, ನಾವು ದೇಶದ ಎಲ್ಲಾ ಗ್ರಾಮೀಣ ವಸತಿಗಳಿಗೆ ಶೇ.100ರಷ್ಟು ಕೊಳಾಯಿ ನೀರಿನ ಸಂಪರ್ಕವನ್ನು ಸಾಧಿಸಲು ಮುನ್ನಡೆಯುತ್ತಿದ್ದೇವೆ. ಜೆಜೆಎಂ ಮತ್ತು ಎಸ್ಬಿ.ಎಂ.(ಜಿ) ಎರಡೂ ಅರ್ಧ ದಾರಿ ಕ್ರಮಿಸಿದ್ದು, ಈ ಕಾರ್ಯಕ್ರಮಗಳನ್ನು ಮುಂದೆ ತೆಗೆದುಕೊಂಡು ಹೋಗುವ ಮಹತ್ವವನ್ನು ಜನರು ಅರ್ಥಮಾಡಿಕೊಳ್ಳಬೇಕು. ಜಲ ಜೀವನ ಅಭಿಯಾನ ವಿಶ್ವದ ಅತಿದೊಡ್ಡ ಕುಡಿಯುವ ನೀರಿನ ಯೋಜನೆಯಾಗಿದೆ. ಕಾರ್ಯಕ್ರಮವನ್ನು ಪ್ರಾರಂಭಿಸಿದಾಗ, ನಾವು ಶೇ.17 ರಷ್ಟು ಕೊಳಾಯಿ ನೀರು ಸಂಪರ್ಕ ಹೊಂದಿದ್ದೆವು, ಇಂದು ನಾವು ಕಳೆದ ಎರಡೂವರೆ ವರ್ಷಗಳಲ್ಲಿ ಕೋವಿಡ್ -19ರ ಸವಾಲುಗಳ ನಡುವೆಯೂ ಸುಮಾರು 6 ಕೋಟಿ ಕೊಳಾಯಿ ನೀರು ಸಂಪರ್ಕಗಳನ್ನು ಒದಗಿಸಿದ್ದು, ಶೇ.47ಕ್ಕೆ ಬಂದಿದ್ದೇವೆ ಎಂದರು. ಯೋಜನೆ ರೂಪಿಸುವುದು, ಕಾರ್ಯಾದೇಶ ನೀಡುವುದು ಮತ್ತು ಕಾಮಗಾರಿ ಪ್ರಾರಂಭವಾಗುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ, ವಿಶೇಷವಾಗಿ ಬಹು-ಗ್ರಾಮ ಯೋಜನೆಗಳನ್ನು ಪ್ರಸ್ತಾಪಿಸಿದಾಗ ಅದು ಪೂರ್ಣಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಶೇ.100ರಷ್ಟು ಕೊಳಾಯಿ ನೀರು ವ್ಯಾಪ್ತಿಗಾಗಿ ನಿಗದಿಪಡಿಸಲಾದ ಗುರಿಯ ಗಡುವು ಕೈತಪ್ಪದಂತೆ ನೋಡಿಕೊಳ್ಳಬೇಕು.' ಎಂದೂ ಹೇಳಿದರು. "ಜೆಜೆಎಂ ಕೇವಲ ನೀರು ಸರಬರಾಜು ಮೂಲಸೌಕರ್ಯವನ್ನು ಮಾಡುವ ಕಾರ್ಯಕ್ರಮವಲ್ಲ, ನಾವು ನೀರಿನ ಮೂಲವನ್ನು ಬಲಪಡಿಸುವ. ಕೊಳಚೆ ನೀರು ನಿರ್ವಹಣೆ, ಸಮುದಾಯ ಭಾಗವಹಿಸುವಿಕೆ, ಸಬಲೀಕರಣ ಇತ್ಯಾದಿ ಮೂಲಕ ದೀರ್ಘಾವಧಿಯ ಸುಸ್ಥಿರತೆ ಮತ್ತು ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಬೇಕು. ಇದರಿಂದ ನೀರು ಸರಬರಾಜು ಯೋಜನೆಯ ವಿನ್ಯಾಸದ ಪ್ರಕಾರ ಮುಂದಿನ 30 ವರ್ಷಗಳವರೆಗೆ ನೀರು ಲಭ್ಯವಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶೇಖಾವತ್, “ಪ್ರತಿ ಗ್ರಾಮೀಣ ಮನೆಗಳಿಗೆ ನಿಗದಿತ ಗುಣಮಟ್ಟದ ಕುಡಿಯುವ ನೀರನ್ನು ಒದಗಿಸಲು ಸಚಿವಾಲಯವು ಬದ್ಧವಾಗಿದೆ. ಆಂಧ್ರಪ್ರದೇಶದಲ್ಲಿ 86 ಮತ್ತು ಮಧ್ಯಪ್ರದೇಶದಲ್ಲಿ 52 ಫ್ಲೋರೈಡ್ ಪೀಡಿತ ಜನ ವಸತಿಗಳು ತಕ್ಷಣದ ಪರಿಹಾರ ಕ್ರಮಕ್ಕೆ ಅರ್ಹವಾಗಿವೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಅದೇ ರೀತಿ ಕರ್ನಾಟಕದ ಪೂರ್ವ ಜಿಲ್ಲೆಗಳಲ್ಲಿ ಯುರೇನಿಯಂನಿಂದಾಗಿ ನೀರು ಕಲುಷಿತವಾಗುತ್ತಿದೆ ಎಂಬ ಮಾಹಿತಿ ಇದೆ. ಈ ಸಮಸ್ಯೆಗಳನ್ನು ಪರಿಹರಿಸಲು ತಮ್ಮ ಸಚಿವಾಲಯವು ಹಣ ಮತ್ತು ತಾಂತ್ರಿಕ ನೆರವು ಎಲ್ಲವನ್ನೂ ಒದಗಿಸುತ್ತದೆ ಎಂದರು.
“ನಾವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ನಮ್ಮ ಕಾರ್ಯವನ್ನು ಯೋಜಿಸಿದಂತೆಯೇ, ಮಹತ್ವಾಕಾಂಕ್ಷೆಯ ಜಿಲ್ಲೆಗಳು, ಜೆಇ/ಎಇಎಸ್ ಪೀಡಿತ ಜಿಲ್ಲೆಗಳು, ಸಂಸದರ ಆದರ್ಶ ಗ್ರಾಮ ಯೋಜನೆ (ಎಸ್‌ಎಜಿವೈ) ಗ್ರಾಮಗಳು ಮತ್ತು ಎಸ್.ಸಿ/ಎಸ್.ಟಿ ಬಹು ಸಂಖ್ಯೆಯಲ್ಲಿರುವ ಗ್ರಾಮಗಳಿಗೆ ಇತರ ಯೋಜನೆಗಳು ಅಂದರೆ ಮನ್ರೇಗಾ, ಚಂಪಾ, ಇತ್ಯಾದಿಯ ಹೊಂದಿಕೆಯ ನಿಧಿಯೊಂದಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ ಎಂದು ಹೇಳುವ ಅಗತ್ಯವಿಲ್ಲ ಎಂದರು. ಗುಣಮಟ್ಟ ಬಾಧಿತ ಜನ ವಸತಿಗಳಿಗೆ ತಕ್ಷಣವೇ ಶುದ್ಧ ಕೊಳವೆ ನೀರನ್ನು ಒದಗಿಸಲಾಗದಿದ್ದರೆ, ನಂತರ ಸಂಪೂರ್ಣವಾಗಿ ಮಧ್ಯಂತರ ಕ್ರಮವಾಗಿ, ಅಂತಹ ಗ್ರಾಮಗಳಲ್ಲಿ ವಾಸಿಸುವ ಪ್ರತಿ ಮನೆಯ ಕುಡಿಯುವ ಮತ್ತು ಅಡುಗೆ ಅಗತ್ಯಗಳನ್ನು ಪೂರೈಸಲು 8-10 ಐಪಿಸಿಡಿ ಕುಡಿಯುವ ನೀರು ಒದಗಿಸಲು ಸಮುದಾಯ ನೀರು ಶುದ್ಧೀಕರಣ ಘಟಕಗಳನ್ನು (ಸಿಡಬ್ಲ್ಯುಪಿಪಿಗಳು) ಕೈಗೊಳ್ಳಬಹುದು.”ಎಂದು ಕೇಂದ್ರ ಸಚಿವರು ಹೇಳಿದರು.
ತೆಲಂಗಾಣ ಮತ್ತು ಪುದುಚೇರಿ ತನ್ನ ಎಲ್ಲಾ ಗ್ರಾಮೀಣ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಿದ್ದಕ್ಕಾಗಿ ಕೇಂದ್ರ ಸಚಿವರು ಅಭಿನಂದಿಸಿದರು. ಮಧ್ಯಪ್ರದೇಶವು 2023ರ ವೇಳೆಗೆ, ನಂತರ ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು 2024ರ ಹೊತ್ತಿಗೆ ತಮ್ಮ ಎಲ್ಲಾ ಗ್ರಾಮೀಣ ಮನೆಗಳಿಗೆ ಕೊಳಾಯಿ ನೀರಿನ ಸಂಪರ್ಕವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು 'ವೇಗ ಮತ್ತು ಪ್ರಮಾಣದಲ್ಲಿ' ಕೆಲಸ ಮಾಡುತ್ತದೆ ಎಂದು ತಾವು ಆಶಿಸುವುದಾಗಿ, ಕೇಂದ್ರ ಸಚಿವರು ಹೇಳಿದರು. 2024ರ ರಾಷ್ಟ್ರೀಯ ಗಡುವಿನೊಳಗೆ 'ಹರ್ ಘರ್ ಜಲ್' ಅನ್ನು ಕಾರ್ಯಸಾಧ್ಯವಾಗಿಸಲು ಜಲ ಜೀವನ ಅಭಿಯಾನದ ಮೂಲಕ ಲಕ್ಷದ್ವೀಪಕ್ಕೆ ಸರ್ವ ಬೆಂಬಲ ಒದಗಿಸಲಾಗುತ್ತದೆ ಎಂದರು.
ಸ್ವಚ್ಛ ಭಾರತ ಅಭಿಯಾನ ಕುರಿತು ಮಾತನಾಡಿದ ಕೇಂದ್ರ ಸಚಿವರು, “ಎಸ್.ಬಿ.ಎಂ. (ಜಿ) ಐದು ವರ್ಷಗಳಲ್ಲಿ ಅಸಾಧ್ಯವೆನ್ನಲಾಗುತ್ತಿದ್ದ ಗುರಿಯನ್ನು ಸಾಧಿಸಿದ್ದು, 2014ರಲ್ಲಿ ಶೇ.39ರಷ್ಟಿದ್ದ ನೈರ್ಮಲ್ಯ ವ್ಯಾಪ್ತಿ 2019ರ ವೇಳೆಗೆ ಶೇ.100ಕ್ಕೆ ತಲುಪಿತು ಎಂದರು. ಕಾರ್ಯಕ್ರಮದ ಅಡಿಯಲ್ಲಿ 10.28 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ದೇಶದಲ್ಲಿ ಮತ್ತು ಎಲ್ಲಾ ಜಿಲ್ಲೆಗಳು ತಮ್ಮನ್ನು ತಾವು ಬಯಲು ಶೌಚ ಮುಕ್ತ (ಒಡಿಎಫ್) ಎಂದು ಘೋಷಿಸಿಕೊಂಡಿವೆ. ಇದು ವಿಶ್ವದ ಅತಿದೊಡ್ಡ ನಡವಳಿಕೆಯ ಬದಲಾವಣೆ ಕಾರ್ಯಕ್ರಮವಾಗಿದೆ. ಓಡಿಎಫ್ ಕೇವಲ ಲ್ಯಾಂಡಿಂಗ್ ಪ್ಲಾಟ್ ಫಾರಂ ಆಗಿರುವುದರಿಂದ, ಎಸ್.ಬಿ.ಎಂ.(ಜಿ) ಹಂತ-II ಅಡಿಯಲ್ಲಿ ನಾವು ಹಳ್ಳಿಗಳನ್ನು ಓಡಿಎಫ್ ಪ್ಲಸ್ ಮಾಡುವ ಗುರಿಯನ್ನು ಹೊಂದಿದ್ದೇವೆ, ಆ ಮೂಲಕ ಓಡಿಎಫ್ ಸ್ಥಿತಿಯನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುತ್ತೇವೆ. ಜಿಪಿಗಳು ಗ್ರಾಮ ಕ್ರಿಯಾ ಯೋಜನೆಯಡಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯನ್ನು ಕೈಗೊಳ್ಳುತ್ತಿವೆ.
ಕಾರ್ಯಸೂಚಿಯನ್ನು ನಿಗದಿಪಡಿಸುವಾಗ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ (ಡಿಡಿಡಬ್ಲ್ಯೂಎಸ್) ಕಾರ್ಯದರ್ಶಿ ಶ್ರೀಮತಿ.ವಿನಿ ಮಹಾಜನ್ ಮಾತನಾಡಿ, ಭಾರತ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಾದ ಜೆಜೆಎಂ ಮತ್ತು ಎಸ್.ಬಿಎಂ (ಜಿ) ಎರಡರ ಪ್ರಗತಿಯ ಕುರಿತು ಮಾನ್ಯ ಕೇಂದ್ರ ಸಚಿವರು ಪ್ರಾದೇಶಿಕವಾರು ಚರ್ಚೆಯನ್ನು ನಡೆಸುತ್ತಿದ್ದಾರೆ. ನಾವು ಮುಂದಿನ ಆರ್ಥಿಕ ವರ್ಷವನ್ನು ಪ್ರವೇಶಿಸುತ್ತಿರುವಾಗ, ನಮ್ಮ ಸಾಧನೆಗಳು ನಮ್ಮ ವಾರ್ಷಿಕ ಗುರಿಗಳನ್ನು ಪೂರೈಸಲು ವಾರ್ಷಿಕ ಕ್ರಿಯಾ ಯೋಜನೆಗಳನ್ನು ನಿಖರವಾಗಿ ಸಿದ್ಧಪಡಿಸುವುದು ಅತ್ಯಗತ್ಯ. ಈ ಸಮ್ಮೇಳನವು ಅನುಷ್ಠಾನದ ಸವಾಲುಗಳ ಮೇಲಿನ ಚರ್ಚೆಯ ಜೊತೆಗೆ 2022-23ರ ನಮ್ಮ ವಾರ್ಷಿಕ ಯೋಜನೆಗಳನ್ನು ದೃಢೀಕರಿಸಲು ಒಂದು ಅವಕಾಶ ನೀಡಿದೆ. ಎಸ್.ಬಿ.ಎಂ(ಜಿ) ಮತ್ತು ಜೆಜೆಎಂ ಎರಡು ಪರಿವರ್ತನಾತ್ಮಕ ಕಾರ್ಯಾಚರಣೆಗಳಾಗಿದ್ದು, ಇದು ವಿಶೇಷವಾಗಿ ಮಹಿಳೆಯರು ಮತ್ತು ಯುವತಿಯರಿಗೆ 'ಸುಗಮ ಜೀವನವನ್ನು' ಒದಗಿಸುತ್ತದೆ. 2022-23ರ ರಾಜ್ಯಗಳ ಬಜೆಟ್ ನಲ್ಲಿ ಜೆಜೆಎಂ ಅಡಿಯಲ್ಲಿ ಸಾಕಷ್ಟು ರಾಜ್ಯದ ಪಾಲನ್ನು ಒದಗಿಸಲಾಗಿದೆ ಎಂಬುದನ್ನು ರಾಜ್ಯಗಳು ಖಚಿತಪಡಿಸಿಕೊಳ್ಳಬೇಕು ಎಂದರು.
ಜೆಜೆಎಂ ಮತ್ತು ಎಸ್.ಬಿ.ಎಂ.(ಜಿ)ಯ ಎ.ಎಸ್. ಮತ್ತು ಎಂ.ಡಿ. ಶ್ರೀ ಅರುಣ್ ಬರೋಕಾ, ಸಮ್ಮೇಳನದಲ್ಲಿ ಜೆಜೆಎಂ ಮತ್ತು ಎಸ್.ಬಿ.ಎಂ.(ಜಿ) ಎರಡರ ವಿವರವಾದ ಪ್ರಾತ್ಯಕ್ಷಿಕೆಯನ್ನು ನೀಡುವಾಗ ರಾಜ್ಯಗಳು/ಕೇಂದ್ರಾಂಡಳಿತ ಪ್ರದೇಶಗಳ ವ್ಯಾಪ್ತಿಯನ್ನು ತ್ವರಿತಗೊಳಿಸಬೇಕು ಮತ್ತು ಹಳ್ಳಿಗಳಲ್ಲಿ ಕೊಳಚೆ ನೀರಿನ ನಿರ್ವಹಣೆಯ ಮೇಲೆ ಕೇಂದ್ರೀಕರಿಸಬೇಕು ಎಂದು ಒತ್ತಿ ಹೇಳಿದರು. ಗ್ರಾಮೀಣ ಜನರಿಗೆ ಶೇ.100ರಷ್ಟು ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಿದೆ. ಎಲ್ಲ ಗ್ರಾಮಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ (ಎಸ್.ಎಲ್.ಡಬ್ಲ್ಯು.ಎಂ) ಕಾಮಗಾರಿಗಳಿಗೆ ಆದ್ಯತೆ ನೀಡಬೇಕಿದೆ. ಕಾರ್ಯಕ್ರಮವು ಮಹತ್ವಾಕಾಂಕ್ಷೆಯ ಓ.ಡಿ.ಎಫ್. ಪ್ಲಸ್ ಗ್ರಾಮಗಳನ್ನು ಮಾದರಿ ಒಡಿಎಫ್ ಪ್ಲಸ್ ಗ್ರಾಮಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ನೀರು ಮತ್ತು ನೈರ್ಮಲ್ಯ ಚಟುವಟಿಕೆಗಳಿಗೆ ಕಾರ್ಯಕ್ರಮದಡಿಯಲ್ಲಿ ಬಿಡುಗಡೆಯಾದ ಹಣವನ್ನು ಸಮಯೋಚಿತವಾಗಿ ಬಳಸಿಕೊಳ್ಳಬೇಕು ಎಂದು ರಾಜ್ಯಗಳು ಖಚಿತಪಡಿಸಿಕೊಳ್ಳಬೇಕು, ಇದರಿಂದಾಗಿ ಮುಂದಿನ ಕಂತು ಬಿಡುಗಡೆಯಾಗುತ್ತದೆ ಮತ್ತು ಕಾರ್ಯಕ್ರಮದ ಅನುಷ್ಠಾನದ ವೇಗ ಮತ್ತು ಪ್ರಮಾಣವು ನಿಗದಿತ ಗುರಿಯಂತೆಯೇ ಇರುತ್ತದೆ ಎಂದರು.
(ಲಕ್ಷ ಗಳಲ್ಲಿ)
|
ರಾಜ್ಯ/ಕೇಂದ್ರಾಡಳಿತ ಪ್ರದೇಶ
|
ಒಟ್ಟು ಗ್ರಾಮೀಣ ವಸತಿಗಳು
|
ಅಭಿಯಾನದ ಆರಂಭದಲ್ಲಿನ ಸ್ಥಿತಿ
|
ಅಭಿಯಾನ ಆರಂಭವಾದಾಗಿನಿಂದ ಒದಗಿಸಿದ ಎಫ್.ಎಚ್.ಟಿ.ಸಿ.
|
ಈ ದಿನಾಂಕದವರೆಗಿನ ಎಫ್.ಎಚ್.ಟಿ.ಸಿ.
|
ಆಂಧ್ರಪ್ರದೇಶ
|
95.17
|
30.74 (32%)
|
19.84 (21%)
|
50.59 (53%)
|
ಕರ್ನಾಟಕ
|
97.92
|
24.51 (25%)
|
21.66 (22%)
|
46.17 (47%)
|
ಕೇರಳ
|
70.69
|
16.64 (23%)
|
10.80 (15%)
|
27.44 (39%)
|
ಮಧ್ಯಪ್ರದೇಶ
|
122.28
|
13.53 (11%)
|
33.67 (28%)
|
47.21 (39%)
|
ಪುದುಚೇರಿ
|
1.15
|
0.93 (81%)
|
0.21 (19%)
|
1.15 (100%)
|
ತಮಿಳುನಾಡು
|
126.89
|
21.76 (17%)
|
30.21 (24%)
|
51.97 (41%)
|
ತೆಲಂಗಾಣ
|
54.06
|
15.68 (29%)
|
38.38 (71%)
|
54.06 (100%)
|
ಭಾರತ
|
1931.99
|
323.63(17%)
|
590.12(31%)
|
913.75(47%)
|
ಪಾಲ್ಗೊಂಡ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿನ ರಾಜ್ಯವಾರು ಮನೆಗಳ ಕೊಳಾಯಿ ನೀರು ಸಂಪರ್ಕದ ವಿವರವನ್ನು ಮೇಲಿನ ಕೋಷ್ಠಕದಲ್ಲಿ ನೀಡಲಾಗಿದೆ.
ಪ್ರತಿ ಶಾಲೆ, ಅಂಗನವಾಡಿ ಕೇಂದ್ರಗಳು ಮತ್ತು ಆಶ್ರಮ ಶಾಲೆಗಳಲ್ಲಿ (ಗ್ರಾಮಗಳಲ್ಲಿ ಸ್ಥಾಪಿಸಲಾದ ಎಸ್.ಸಿ/ಎಸ್.ಟಿ ವಸತಿ ನಿಲಯಗಳಿಗೆ) ನಲ್ಲಿ ನೀರಿನ ಸಂಪರ್ಕವನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಜಲ ಶಕ್ತಿ ಸಚಿವ, ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು 2020ರ ಅಕ್ಟೋಬರ್ 2ರಂದು 100 ದಿನಗಳ ಅಭಿಯಾನವನ್ನು ಪ್ರಾರಂಭಿಸಿದ್ದರು. ಇಂದಿನವರೆಗೆ, ಭಾಗವಹಿಸುವ ರಾಜ್ಯಗಳು ಮತ್ತು ಪುದುಚೇರಿಯ ಕೇಂದ್ರಾಡಳಿತ ಪ್ರದೇಶದಲ್ಲಿ, 2.25 ಲಕ್ಷ ಶಾಲೆಗಳು ಮತ್ತು 2.31 ಲಕ್ಷ ಅಂಗನವಾಡಿ ಕೇಂದ್ರಗಳಿಗೆ ಕುಡಿಯಲು, ಮಧ್ಯಾಹ್ನದ ಊಟಕ್ಕೆ, ಕೈ ತೊಳೆಯಲು ಮತ್ತು ಶೌಚಾಲಯಗಳಲ್ಲಿ ಬಳಸಲು ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ. ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ ಮತ್ತು ತೆಲಂಗಾಣ ತನ್ನ ಎಲ್ಲಾ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಶುದ್ಧ ನಲ್ಲಿ ನೀರನ್ನು ಖಾತ್ರಿಪಡಿಸಿದೆ. ಮಧ್ಯಪ್ರದೇಶವು ಶೇ.74ರಷ್ಟು ಶಾಲೆಗಳು ಮತ್ತು ಶೇ.60ರಷ್ಟು ಅಂಗನವಾಡಿ ಕೇಂದ್ರಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಿದೆ.
ದೇಶದಲ್ಲಿ ಒಟ್ಟು 117 ಮಹತ್ವಾಕಾಂಕ್ಷೆಯ ಜಿಲ್ಲೆಗಳಿದ್ದು, ಇವುಗಳಲ್ಲಿ 19 ಜಿಲ್ಲೆಗಳು ಭಾಗವಹಿಸುವ ರಾಜ್ಯಗಳಲ್ಲಿ ಸೇರಿವೆ. ಇಲ್ಲಿಯವರೆಗೆ, ಕಾರ್ಯಕ್ರಮದ ಅಡಿಯಲ್ಲಿ, ತೆಲಂಗಾಣವು ತನ್ನ ಎಲ್ಲಾ ಮೂರು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಕೊಳಾಯಿ ನೀರು ಸಂಪರ್ಕವನ್ನು ಒದಗಿಸಿದ್ದರೆ ಇತರ ರಾಜ್ಯಗಳಲ್ಲಿನ ವ್ಯಾಪ್ತಿ ಶೇ. 19 ರಿಂದ ಶೇ. 52ರ ನಡುವೆ ಇದೆ. ಈ ಪ್ರದೇಶದಲ್ಲಿ ವಾಸಿಸುವ ಜನರಿಗೆ ಶೀಘ್ರವೆ ಶುದ್ಧ ಕುಡಿಯುವ ನೀರು ಸಿಗುವಂತೆ ವೇಗವನ್ನು ಹೆಚ್ಚಿಸುವ ಅಗತ್ಯವಿದೆ.
ಕಾರ್ಯಕ್ರಮದ ಅಡಿಯಲ್ಲಿ ಇದುವರೆಗೆ, 92,366 ಗ್ರಾಮಗಳಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿಗಳನ್ನು ರಚಿಸಲಾಗಿದೆ ಮತ್ತು 82,646 ಗ್ರಾಮ ಕ್ರಿಯಾ ಯೋಜನೆಗಳನ್ನು ಭಾಗವಹಿಸುವ ರಾಜ್ಯಗಳು ಮತ್ತು ಪುದುಚೇರಿಯ ಕೇಂದ್ರಾಡಳಿತ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಒಟ್ಟು 588 ನೀರಿನ ಪರೀಕ್ಷಾ ಪ್ರಯೋಗಾಲಯಗಳಿದ್ದು ಅವುಗಳಲ್ಲಿ 136 ಎನ್.ಎ.ಬಿ.ಎಲ್. ಮಾನ್ಯತೆ ಪಡೆದಿವೆ. ಈ ನೀರಿನ ಪರೀಕ್ಷಾ ಪ್ರಯೋಗಾಲಯಗಳನ್ನು ಸಾರ್ವಜನಿಕರಿಗಾಗಿ ತೆರೆಯಲಾಗಿದ್ದು, ಅಲ್ಲಿಗೆ ಅವರು ನೀರಿನ ಮಾದರಿಯನ್ನು ತೆಗೆದುಕೊಂಡು ಹೋಗಬಹುದು ಮತ್ತು ಅದನ್ನು ಅತ್ಯಲ್ಪ ದರದಲ್ಲಿ ಪರೀಕ್ಷಿಸಬಹುದು.
ಇಲ್ಲಿಯವರೆಗೆ, ಭಾಗವಹಿಸುವ 6 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ, 2.40 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಕ್ಷೇತ್ರ ಪರೀಕ್ಷಾ ಕಿಟ್ ಗಳನ್ನು ಬಳಸಿಕೊಂಡು ನೀರಿನ ಗುಣಮಟ್ಟ ಪರೀಕ್ಷೆಯನ್ನು ಹೇಗೆ ಮಾಡಬೇಕೆಂಬ ತರಬೇತಿ ನೀಡಲಾಗಿದೆ. ಈ ಮಹಿಳೆಯರು 5-ಮಹಿಳೆಯರ ಕಣ್ಗಾವಲು ಸಮಿತಿಯ ಭಾಗವಾಗಿರುತ್ತಾರೆ, ಇವರನ್ನು ಮೂಲಗಳು ಮತ್ತು ವಿತರಣಾ ಸ್ಥಳಗಳಲ್ಲಿ ಆಗಾಗ್ಗೆ ಪರಿಶೀಲಿಸಿ, ಯಾವುದೇ ಮಾಲಿನ್ಯ ಕಂಡುಬಂದಲ್ಲಿ ವರದಿ ಮಾಡುವ ಕಾರ್ಯಕ್ಕೆ ನಿಯೋಜಿಸಲಾಗಿದೆ ಆದ್ದರಿಂದ ತಕ್ಷಣದ ಪರಿಹಾರ ಕ್ರಮವನ್ನು ಪ್ರಾರಂಭಿಸಬಹುದು.
ಜಲ ಜೀವನ್ ಅಭಿಯಾನ ಯೋಜನೆ ಅಡಿಯಲ್ಲಿ ರಚಿಸಲಾದ ನೀರು ಸರಬರಾಜು ಮೂಲಸೌಕರ್ಯಗಳ ನಿರ್ಮಾಣ, ದುರಸ್ತಿ ಮತ್ತು ನಿರ್ವಹಣೆಗಾಗಿ ಗಾರೆಯವರು, ಕೊಳಾಯಿ ಕೆಲಸ ಮಾಡುವವರು, ಪಂಪ್ ನಿರ್ವಹಣೆ ಮಾಡುವವರು, ಫಿಟ್ಟರ್, ಟೆಕ್ನಿಷಿಯನ್, ಎಲೆಕ್ಟ್ರಿಷಿಯನ್ ಆಗಿ ಗ್ರಾಮಸ್ಥರ ಕೌಶಲ್ಯವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಇದು ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇಲ್ಲಿಯವರೆಗೆ 9.13 ಕೋಟಿ ಗ್ರಾಮೀಣ ಕುಟುಂಬಗಳು ನಲ್ಲಿಗಳ ಮೂಲಕ ನೀರು ಪಡೆಯುತ್ತಿದ್ದು, 101 ಜಿಲ್ಲೆಗಳು, 1,159 ವಿಭಾಗಗಳು, 67,547 ಗ್ರಾಮ ಪಂಚಾಯಿತಿಗಳು ಮತ್ತು 1,39,579 ಗ್ರಾಮಗಳು ದೇಶದಲ್ಲಿ ‘ಹರ್ ಘರ್ ಜಲ್’ ಆಗಿವೆ. ಮೂರು ರಾಜ್ಯಗಳು - ಗೋವಾ, ತೆಲಂಗಾಣ ಮತ್ತು ಹರಿಯಾಣ ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳು – ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಡಮನ್ ಮತ್ತು ನಗರ್ ಹವೇಲಿ ಮತ್ತು ಡಮನ್ ಹಾಗೂ ಡಿಯು ಮತ್ತು ಪುದುಚೇರಿ ಶೇ.100ರಷ್ಟು ನಲ್ಲಿ ನೀರಿನ ವ್ಯಾಪ್ತಿಯನ್ನು ಒದಗಿಸಿವೆ.
ಐಸಿಟಿ ಮಹಾ ಸವಾಲನ್ನು ಜಲ ಶಕ್ತಿ ಸಚಿವಾಲಯ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಹಭಾಗಿತ್ವದಲ್ಲಿ ನಡೆಸಲಾಯಿತು. ಸ್ಪರ್ಧೆಯ ವಿಜೇತರು ಗುಜರಾತ್ ನ ಮೆ. ರೇ ಡಾಟ್ ಇನ್ಫೋಟೆಕ್ ಪ್ರೈ. ಲಿಮಿಟೆಡ್. ನಂತರದ ಮೂರು ರನ್ನರ್ಸ್ ಅಪ್ ಮೇ. ಗ್ರೀನ್ವಿರಾನ್ಮೆಂಟ್ ಇನ್ನೋವೇಶನ್ ಮಾರ್ಕೆಟಿಂಗ್ ಇಂಡಿಯಾ ಪ್ರೈ. ಲಿಮಿಟೆಡ್ ಮತ್ತು ಮೇ.ಗ್ಲೋಬಲ್ ಎಂ ಪ್ರೈ. ಲಿಮಿಟೆಡ್, ಐನೆಟ್ ಆಕ್ವಾ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್. ಲಿಮಿಟೆಡ್ ಮತ್ತು ಇಲೋನಟಿ ಇನ್ನೋವೇಶನ್ಸ್ ಪ್ರೈ. ಲಿಮಿಟೆಡ್. ಐಸಿಟಿ ಮಹಾ ಸವಾಲು ಭಾರತೀಯ ನವೋದ್ಯಮಗಳಿಗೆ ಗ್ರಾಮೀಣ ನೀರು ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ವೆಚ್ಚ ಪರಿಣಾಮಕಾರಿ ಪರಿಹಾರಗಳೊಂದಿಗೆ ಹೊರಬರಲು ಸಹಾಯ ಮಾಡುವುದಾಗಿತ್ತು. ಕೈಗಾರಿಕೆಗಳು ಮತ್ತು ಶಿಕ್ಷಣ ತಜ್ಞರಿಂದ ತಾಂತ್ರಿಕ ಬೆಂಬಲಕ್ಕಾಗಿ ಪ್ರಾರಂಭಕ್ಕೆ ಮಾರ್ಗದರ್ಶನ ನೀಡಲಾಯಿತು. 'ಆತ್ಮ ನಿರ್ಭರ ಭಾರತ' ಕಲ್ಪನೆಗೆ ಆಂತರಿಕ ಸ್ಮಾರ್ಟ್ ನಿಗಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ತಾಂತ್ರಿಕ ಸವಾಲಾಗಿತ್ತು. ನವೋದ್ಯಮಗಳು ವಿವಿಧ ಕೃಷಿ-ಹವಾಮಾನ ವಲಯಗಳಲ್ಲಿ ದೇಶದಾದ್ಯಂತ 100 ಸ್ಥಳಗಳಲ್ಲಿ ಪ್ರಾಯೋಗಿಕವಾಗಿ ನಡೆಸಲಾಯಿತು. ಈ ಗ್ರಾಮಗಳಲ್ಲಿ ನೀರಿನ ಪೂರೈಕೆಯ ಮೇಲ್ವಿಚಾರಣೆ ಜೆಜೆಎಂ ಡ್ಯಾಶ್ ಬೋರ್ಡ್ ಮೂಲಕ ಲಭ್ಯವಿದೆ. ಮಹಾ ಸವಾಲಿನ ನಾಲ್ಕು ಪ್ರಶಸ್ತಿ ಪುರಸ್ಕೃತರನ್ನು ಸಮ್ಮೇಳನದಲ್ಲಿ ಗೌರವಾನ್ವಿತ ಕೇಂದ್ರ ಜಲಶಕ್ತಿ ಸಚಿವರು ಮತ್ತು ಇತರ ಸಚಿವರು ಸನ್ಮಾನಿಸಿದರು.
ಓಡಿಎಫ್ ನ ಸುಸ್ಥಿತರತೆ ಮತ್ತು ಘನ ಹಾಗೂ ದ್ರವ ತ್ಯಾಜ್ಯ ನಿರ್ವಹಣೆ ಮೇಲೆ ಗಮನ ಹರಿಸಿ ಎಸ್.ಬಿ.ಎಂ.(ಜಿ)ಹಂತ-II ಕ್ಕೆ ಫೆಬ್ರವರಿ, 2020ರಲ್ಲಿ 1,40,881 ಕೋಟಿ ರೂ. ಹಣ ಹಂಚಿಕೆಯೊಂದಿಗೆ ಅನುಮೋದಿಸಲಾಗಿದೆ. ಇದು ಹಣಕಾಸು ಒದಗಿಸುವ ವಿವಿಧ ವಿಧಾನಗಳನ್ನು ಕ್ರೋಡೀಕರಿಸಿದ ಮಾದರಿ ವ್ಯವಸ್ಥೆಯಾಗಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಅನುಗುಣವಾದ ರಾಜ್ಯದ ಪಾಲಿನ ಬಜೆಟ್ ಹಂಚಿಕೆಗಳ ಹೊರತಾಗಿ, ಉಳಿದ ಹಣವನ್ನು 15ನೇ ಹಣಕಾಸು ಆಯೋಗದಿಂದ ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ಮನ್ರೇಗಾ, ಸಿಎಸ್.ಆರ್. ನಿಧಿಗಳು ಮತ್ತು ಆದಾಯ ಸೃಷ್ಟಿಯ ಮಾದರಿಗಳು, ಇತ್ಯಾದಿಗಳಿಗೆ ನಿರ್ದಿಷ್ಟವಾಗಿ ಎಸ್.ಎಲ್.ಡಬ್ಲ್ಯು.ಎಂ. ಗೆ ಪಾವತಿಸಲಾಗುತ್ತಿದೆ.
ಎಸ್.ಬಿ.ಎಂ.(ಜಿ)ಯ II ನೇ ಹಂತದ ಅಡಿಯಲ್ಲಿ 66 ಲಕ್ಷ ವೈಯಕ್ತಿಕ ಗೃಹ ಶೌಚಾಲಯಗಳು ಮತ್ತು 1.2 ಲಕ್ಷ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 44,575ಕ್ಕೂ ಹೆಚ್ಚು ಗ್ರಾಮಗಳು ಒಡಿಎಫ್ ಪ್ಲಸ್ ಎಂದು ಘೋಷಿಸಿಕೊಂಡಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ, 5.61 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ಗೃಹ ಶೌಚಾಲಯಗಳು ಮತ್ತು ಸುಮಾರು 11,000 ಸಮುದಾಯ ನೈರ್ಮಲ್ಯ ಸಂಕೀರ್ಣಗಳನ್ನು ಭಾಗವಹಿಸುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಗಳಲ್ಲಿ ಮಾಡಲಾಗಿದೆ. ಈ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ 31,000 ಕ್ಕೂ ಹೆಚ್ಚು ಗ್ರಾಮಗಳು ಬಯಲು ಶೌಚಮುಕ್ತ ಪ್ಲಸ್ ಆಗಿ ಮಾರ್ಪಟ್ಟಿವೆ, 35,739 ಕ್ಕೂ ಹೆಚ್ಚು ಹಳ್ಳಿಗಳು ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳನ್ನು ಒಳಗೊಂಡಿವೆ ಮತ್ತು 9,386 ಕ್ಕೂ ಹೆಚ್ಚು ಹಳ್ಳಿಗಳು ದ್ರವ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಗಳನ್ನೂ ಸಾಧಿಸಿವೆ.
ಎಸ್.ಬಿ.ಎಂ. ಅಡಿಯಲ್ಲಿ, ಬಯಲು ಶೌಚಮುಕ್ತ ಪ್ಲಸ್ ಗ್ರಾಮಗಳಲ್ಲಿ ವೇಗ ಹೆಚ್ಚಿಸಲು ಕೊಳಚೆ ನೀರು ನಿರ್ವಹಣಾ ಆಸ್ತಿಗಳ ರಚನೆಯ ಮೇಲೆ ಕೇಂದ್ರೀಕರಿಸುವ ಸುಜಲಾಂ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಅಭಿಯಾನವು ಕೊಳಚೆ ನೀರಿನ ನಿರ್ವಹಣೆ, ಜಲಮೂಲಗಳನ್ನು ಸಂರಕ್ಷಿಸುವುದು ಮತ್ತು ಸ್ವಚ್ಛಗೊಳಿಸುವುದು ಮತ್ತು ಏಕ ಗುಂಡಿ ಶೌಚಾಲಯಗಳನ್ನು ಜೋಡಿ-ಗುಂಡಿ ಶೌಚಾಲಯಗಳಿಗೆ ಮಾರ್ಪಡಿಸಲು ಆದ್ಯತೆಯನ್ನು ನಿಗದಿಪಡಿಸುತ್ತದೆ. 6 ಭಾಗವಹಿಸುವ ರಾಜ್ಯಗಳಲ್ಲಿ 5.03 ಲಕ್ಷಕ್ಕೂ ಹೆಚ್ಚು ಮನೆಗಳ ಮಟ್ಟದಲ್ಲಿ ಹಿಂಗು ಗುಂಡಿಗಳು (ಸೋಕ್ ಪಿಟ್) ಮತ್ತು 78,000 ಕ್ಕೂ ಹೆಚ್ಚು ಸಮುದಾಯ ಹಿಂಗು ಗುಂಡಿಗಳು / ಲೀಚ್ ಪಿಟ್ ಗಳು / ಮ್ಯಾಜಿಕ್ ಪಿಟ್ ಗಳನ್ನು ನಿರ್ಮಿಸಲಾಗಿದೆ.
ಎಸ್.ಬಿ.ಎಂ. (ಜಿ), ವಿಶ್ವದ ಅತಿ ದೊಡ್ಡ ನೈರ್ಮಲ್ಯ ಅಭಿಯಾನವಾಗಿದೆ, ಇದು 100ದಶಲಕ್ಷ ಐ.ಎಚ್.ಎಚ್. ನಿರ್ಮಾಣಕ್ಕೆ ಕಾರಣವಾಗಿದ್ದು, 2014 ರಲ್ಲಿ ಶೇ. 39ಇದ್ದ ಮೈರ್ಮಲ್ಯದ ವ್ಯಾಪ್ತಿಯನ್ನು 2019 ರಲ್ಲಿ ಶೇ. 100ಕ್ಕೆ ತೆಗೆದುಕೊಂಡು ಹೋಗಿದೆ. 6 ಲಕ್ಷಕ್ಕೂ ಹೆಚ್ಚು ಹಳ್ಳಿಗಳು ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿಯಂದು ಗೌರವ ಸೂಚಕವಾಗಿ 2ನೇ ಅಕ್ಟೋಬರ್ 2019 ರಂದು ಬಯಲು ಶೌಚಮುಕ್ತ ಎಂದು ಘೋಷಿಸಿಕೊಂಡಿವೆ.
********
(Release ID: 1803265)
Visitor Counter : 351