ಉಕ್ಕು ಸಚಿವಾಲಯ
ಕಬ್ಬಿಣ ಮತ್ತು ಉಕ್ಕು ತಯಾರಿಕೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ಬಳಕೆಗೆ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಸಲು ಕರೆ ನೀಡಿದ ಕೇಂದ್ರ ಉಕ್ಕು ಸಚಿವರು
ಉಕ್ಕು ವಲಯದಿಂದ ಪ್ಲಾಸ್ಟಿಕ್ ತ್ಯಾಜ್ಯದ ಬಳಕೆಯ ಮಾರ್ಗಸೂಚಿಯನ್ನು ʻಎಸ್‌ಆರ್‌ಟಿಎಂಐʼ ಒಂದು ತಿಂಗಳೊಳಗೆ ಸಿದ್ಧಪಡಿಸಲಿದೆ: ಶ್ರೀ ರಾಮ್ ಚಂದ್ರ ಪ್ರಸಾದ್ ಸಿಂಗ್
Posted On:
07 FEB 2022 6:48PM by PIB Bengaluru
ಕೇಂದ್ರ ಉಕ್ಕು ಸಚಿವ ಶ್ರೀ ರಾಮ್ ಚಂದ್ರ ಪ್ರಸಾದ್ ಸಿಂಗ್ ಅವರು ಸಚಿವಾಲಯದ ಹಿರಿಯ ಅಧಿಕಾರಿಗಳು, ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಸದಸ್ಯ ಮತ್ತು ಭಾರತೀಯ ಉಕ್ಕು ಸಂಶೋಧನೆ ಮತ್ತು ತಂತ್ರಜ್ಞಾನ ಮಿಷನ್ (ಎಸ್‌ಆರ್‌ಟಿಎಂಐ) ನಿರ್ದೇಶಕ ಶ್ರೀ ಅನ್ಶುಮನ್ ತ್ರಿಪಾಠಿ ಅವರೊಂದಿಗೆ ಇಂದು ಸಭೆ ನಡೆಸಿ, ಕಬ್ಬಿಣ ಮತ್ತು ಉಕ್ಕು ತಯಾರಿಕೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ಬಳಕೆಯ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು. ಪ್ಲಾಸ್ಟಿಕ್ ತ್ಯಾಜ್ಯಗಳ ಬಳಕೆ/ವಿಲೇವಾರಿಯು ಒಂದು ಪ್ರಮುಖ ಪರಿಸರ ಸಮಸ್ಯೆಯಾಗಿದೆ ಮತ್ತು ಅದನ್ನು ಪರಿಹರಿಸುವುದು ಅತ್ಯಗತ್ಯವಾಗಿದೆ. ಪ್ರಪಂಚದಾದ್ಯಂತದ ಹೆಚ್ಚಿನ ದೇಶಗಳು ಪ್ಲಾಸ್ಟಿಕ್ ತ್ಯಾಜ್ಯಗಳ ಪರಿಣಾಮಕಾರಿ ಬಳಕೆಗಾಗಿ ಆಯ್ಕೆಗಳನ್ನು ಅನ್ವೇಷಿಸುತ್ತಿವೆ ಮತ್ತು ಕೆಲವು ದೇಶಗಳು ಈ ತ್ಯಾಜ್ಯಗಳನ್ನು ಕಬ್ಬಿಣ ಮತ್ತು ಉಕ್ಕು ಉದ್ಯಮದಲ್ಲಿ ಬಳಸುತ್ತಿವೆ.
ಅದರಂತೆ, ಕಲ್ಲಿದ್ದಲ ಒಲೆಗಳು, ಬ್ಲಾಸ್ಟ್ ಫರ್ನೇಸ್‌ಗಳು ಮತ್ತು ಎಲೆಕ್ಟ್ರಿಕ್ ಆರ್ಕ್ ಫರ್ನೇಸ್ ಗಳಂತಹ ಕಡೆ ಪ್ಲಾಸ್ಟಿಕ್ ತ್ಯಾಜ್ಯಗಳ ಬಳಕೆಯ ಸೂಕ್ತತೆ ಮತ್ತು ಸಾಧಕ ಬಾಧಕಗಳ ಬಗ್ಗೆ ಚರ್ಚೆಗಳು ನಡೆದವು. ಉಕ್ಕು ಉದ್ಯಮದ ಪ್ರಸ್ತುತ ಕಾರ್ಯ ವಿಧಾನಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ಬಳಕೆಯ ಪ್ರಮಾಣ, ಅದರ ಬೇರ್ಪಡಿಸುವಿಕೆ ಸೇರಿದಂತೆ ಪೂರ್ವ ಸಂಸ್ಕರಣಾ ಪ್ರಕ್ರಿಯೆ; ತಂತ್ರಜ್ಞಾನ ವೆಚ್ಚ, ಮತ್ತು ಉಕ್ಕು ತಯಾರಿಕೆ ಪ್ರಕ್ರಿಯೆಗಳಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಮಾಲಿನ್ಯ ಹೊರಸೂಸುವಿಕೆಯ ಮೇಲೆ ಆಗುವ ಪರಿಣಾಮ ಇತ್ಯಾದಿಗಳ ಬಗ್ಗೆಯೂ ಚರ್ಚೆಗಳು ನಡೆದವು. ಈ ನಿಟ್ಟಿನಲ್ಲಿ ಗೃಹ ವ್ಯವಹಾರಗಳ ಸಚಿವಾಲಯ ಹಾಗೂ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧಿಕಾರಿಗಳೊಂದಿಗೆ ಸಂವಾದ ನಡೆಸಲು ಉಕ್ಕು ಸಚಿವರು ಕಾರ್ಯದರ್ಶಿಗಳಾದ (ಉಕ್ಕು) ಶ್ರೀ ಸಂಜಯ್ ಕುಮಾರ್ ಸಿಂಗ್ ಅವರಿಗೆ ನಿರ್ದೇಶನ ನೀಡಿದರು. ಉಕ್ಕು ವಲಯವು ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿಕೊಳ್ಳಲು ಒಂದು ತಿಂಗಳೊಳಗೆ ʻಎಸ್‌ಆರ್‌ಟಿಎಂಐʼನಿಂದ ಮಾರ್ಗಸೂಚಿಯನ್ನು ತಯಾರಿಸಬೇಕು ಎಂದು ಉಕ್ಕು ಸಚಿವರು ನಿರ್ದೇಶನ ನೀಡಿದರು.
***
(Release ID: 1796460)
Visitor Counter : 137