ಹಣಕಾಸು ಸಚಿವಾಲಯ

ಆಯವ್ಯಯ 2022-23: ಫಲಾನುಭವಿ ರಾಜ್ಯಗಳ ಒಮ್ಮತದ ನಂತರ ಕಾರ್ಡ್‌ಗಳಲ್ಲಿಐದು ನದಿಗಳನ್ನು ಜೋಡಿಸುವ ಯೋಜನೆಗಳು


ಐದು ನದಿಗಳನ್ನು ಜೋಡಿಸುವ ಯೋಜನೆಗಳಿಗೆ ರಾಜ್ಯಗಳ ನಡುವೆ ಒಮ್ಮತವನ್ನು ನಿರೀಕ್ಷಿಸಲಾಗಿದೆ

Posted On: 01 FEB 2022 3:53PM by PIB Bengaluru

ದೇಶದಲ್ಲಿ ಪ್ರಸ್ತಾವಿತ ಐದು ನದಿಗಳನ್ನು ಜೋಡಿಸುವ ಯೋಜನೆಗಳ ಸ್ಥಿತಿಯನ್ನು ಪ್ರಸ್ತಾಪಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಮುಂಗಡ ಪತ್ರದ ಭಾಷಣದಲ್ಲಿಈ ನದಿ ಸಂಪರ್ಕಗಳ ವಿವರವಾದ ಯೋಜನಾ ವರದಿಗಳನ್ನು (ಡಿಪಿಆರ್‌) ಅಂತಿಮಗೊಳಿಸಲಾಗಿದೆ ಮತ್ತು ಫಲಾನುಭವಿ ರಾಜ್ಯಗಳ ನಡುವೆ ಒಮ್ಮತವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದರು.

ಇಲ್ಲಿಉಲ್ಲೇಖಿಸಲಾದ ನದಿಗಳನ್ನು ಜೋಡಿಸುವ ಯೋಜನೆಗಳೆಂದರೆ ದಮಗಂಗಾ-ಪಿಂಜಾಲ್‌, ಪರ್‌-ತಾಪಿ-ನರ್ಮದಾ, ಗೋದಾವರಿ-ಕೃಷ್ಣ, ಕೃಷ್ಣ-ಪೆನ್ನಾರ್‌ ಮತ್ತು ಪೆನ್ನಾರ್‌-ಕಾವೇರಿ.

ಈ ಯೋಜನೆಗಳಿಗೆ ಸಂಬಂಧಿಸಿದ ರಾಜ್ಯಗಳ ನಡುವೆ ಒಮ್ಮತವನ್ನು ಮೂಡಿಸಿದ ನಂತರ ಕೇಂದ್ರದಿಂದ ಬೆಂಬಲವನ್ನು ನೀಡಲಾಗುವುದು ಎಂದು ಅವರು ಹೇಳಿದರು.

ಫಲಾನುಭವಿ ರಾಜ್ಯಗಳ ನಡುವೆ ಒಮ್ಮತ ಮೂಡಿದ  ನಂತರ ಕೇಂದ್ರವು ಅನುಷ್ಠಾನಕ್ಕೆ ಬೆಂಬಲವನ್ನು ನೀಡುತ್ತದೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.

2022-23ರ ಮುಂಗಡ ಪತ್ರದಲ್ಲಿನದಿ ಜೋಡಣೆ ಘೋಷಣೆಗೆ ಪ್ರತಿಕ್ರಿಯಿಸಿದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರು ಟ್ವೀಟ್‌ ಮಾಡಿದ್ದಾರೆ.

ದಮನ್‌ ಗಂಗಾ-ಪಿಂಜಾಲ್‌, ಪರ್‌ ತಾಪಿ-ನರ್ಮದಾ, ಗೋದಾವರಿ-ಕೃಷ್ಣ, ಕೃಷ್ಣಾ-ಪೆನ್ನಾರ್‌ ಮತ್ತು ಪೆನ್ನಾರ್‌-ಕಾವೇರಿ ಎಂಬ ಐದು ನದಿಗಳ ಸಂಪರ್ಕದ ಘೋಷಣೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದರು.

ಇದು ದೇಶದ ದೂರದ ಮತ್ತು ಶುಷ್ಕ ಭಾಗಗಳಲ್ಲಿನೀರಿನ ಕೊರತೆಯ ಸಮಸ್ಯೆಯನ್ನು ಸರಾಗಗೊಳಿಸುವಲ್ಲಿಬಹಳ ದೂರ ಹೋಗುತ್ತದೆ.”

***



(Release ID: 1794434) Visitor Counter : 317


Read this release in: English