ಉಕ್ಕು ಸಚಿವಾಲಯ

ಕೇಂದ್ರ ಉಕ್ಕು ಸಚಿವ ಶ್ರೀ ರಾಮಚಂದ್ರ ಪ್ರಸಾದ್ ಸಿಂಗ್ ಅವರು ಕರ್ನಾಟಕದ ಜೆಎಸ್‌ಡಬ್ಲ್ಯು ಸ್ಟೀಲ್ ವಿಜಯನಗರ ವರ್ಕ್ಸ್‌ನಲ್ಲಿ ನೂತನ ವಾರ್ಷಿಕ 5 ಮಿಲಿಯನ್ ಟನ್ ಸಾಮರ್ಥ್ಯದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು


ಹೊಸ ಯೋಜನೆಯು ಜೆಎಸ್‌ಡಬ್ಲ್ಯು ಸ್ಟೀಲ್‌ 2024 ನೇ ಆರ್ಥಿಕ ವರ್ಷದೊಳಗೆ ತನ್ನ ವಿಜಯನಗರ ಘಟಕದಲ್ಲಿ ವಾರ್ಷಿಕ 18 ಮಿಲಿಯನ್ ಟನ್ ಸಾಮರ್ಥ್ಯವನ್ನು ಸಾಧಿಸುವ ಮುನ್ನೋಟದ ಭಾಗವಾಗಿದೆ

Posted On: 07 JAN 2022 4:31PM by PIB Bengaluru

ಕೇಂದ್ರ ಉಕ್ಕು ಸಚಿವರಾದ ಶ್ರೀ ರಾಮಚಂದ್ರ ಪ್ರಸಾದ್ ಸಿಂಗ್ ಅವರು ಇಂದು ಕರ್ನಾಟಕದ ಬಳ್ಳಾರಿಯಲ್ಲಿರುವ ಜೆಎಸ್‌ಡಬ್ಲ್ಯು ಸ್ಟೀಲ್ ವಿಜಯನಗರ ವರ್ಕ್ಸ್ ಇಂಟಿಗ್ರೇಟೆಡ್ ಸ್ಟೀಲ್ ಘಟಕದಲ್ಲಿ ನೂತನ 5 ವಾರ್ಷಿಕ ಮಿಲಿಯನ್ ಟನ್ (ಎಂಟಿಪಿಎ) ಸಾಮರ್ಥ್ಯದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಬ್ರೌನ್-ಫೀಲ್ಡ್ ವಿಸ್ತರಣಾ ಯೋಜನೆಯನ್ನು ಜೆ ಜೆಎಸ್‌ಡಬ್ಲ್ಯು ವಿಜಯನಗರ ಮೆಟಾಲಿಕ್ಸ್ ಲಿಮಿಟೆಡ್ ಮೂಲಕ ಕೈಗೊಳ್ಳಲಾಗುತ್ತಿದೆ, ಇದು ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ (13 ಶತಕೋಟಿ ಡಾಲರ್  ಜೆಎಸ್‌ಡಬ್ಲ್ಯು ಗ್ರೂಪ್‌ನ ಪ್ರಮುಖ ವ್ಯವಹಾರ). ವಿಸ್ತರಣೆಗಾಗಿ ಕಂಪನಿಯು 15,000 ಕೋಟಿ ರೂಪಾಯಿಗಳ ಕ್ಯಾಪೆಕ್ಸ್ ಹೂಡಿಕೆಯನ್ನು ಮೀಸಲಿಟ್ಟಿದೆ ಮತ್ತು 2024 ನೇ ಆರ್ಥಿಕ ವರ್ಷದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಜೆಎಸ್‌ಡಬ್ಲ್ಯು ಸ್ಟೀಲ್ ಅಧ್ಯಕ್ಷ ಶ್ರೀ ಸಜ್ಜನ್ ಜಿಂದಾಲ್ ಮತ್ತು ಇತರ ಸರ್ಕಾರಿ ಹಾಗೂ ಕಂಪನಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು.

ಯೋಜನೆಗೆ ಪರಿಸರ ಅನುಮತಿ (ಇಸಿ) ಈಗಾಗಲೇ ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ 'ಏಕ ಗವಾಕ್ಷಿ ಉನ್ನತ ಮಟ್ಟದ ಅನುಮತಿ ಸಮಿತಿ' ಯಿಂದ ಪ್ರಾಥಮಿಕ ಅನುಮತಿಯನ್ನು ಪಡೆಯಲಾಗಿದೆ. ವಿಜಯನಗರ ವರ್ಕ್ಸ್ ಸ್ಟೀಲ್ ಸೌಲಭ್ಯದ 18 ಎಂಟಿಪಿಎ ಸಾಮರ್ಥ್ಯ ಸಾಧನೆಯ ಮುನ್ನೋಟದ ಭಾಗವಾಗಿ, ಜೆಎಸ್‌ಡಬ್ಲ್ಯು ಸ್ಟೀಲ್ ಮುಂದಿನ 12 ತಿಂಗಳೊಳಗೆ 13 ಎಂಟಿಪಿಎ ಸಾಮರ್ಥ್ಯವನ್ನು ಸಾಧಿಸಲು ಪ್ರಸ್ತುತ ಘಟಕವನ್ನು ಉನ್ನತೀಕರಿಸುವ ಮೂಲಕ ಹೆಚ್ಚುವರಿ 1 ಎಂಟಿಪಿಎ ವಿಸ್ತರಣೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.

ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಉಕ್ಕು ಸಚಿವ ಶ್ರೀ ರಾಮಚಂದ್ರ ಪ್ರಸಾದ್ ಸಿಂಗ್ ಅವರು, ಬಲಿಷ್ಠ ಭಾರತವನ್ನು ನಿರ್ಮಿಸುವಲ್ಲಿ ಜೆಎಸ್‌ಡಬ್ಲ್ಯು ಸ್ಟೀಲ್ ಕೊಡುಗೆಯನ್ನು ಶ್ಲಾಘಿಸಿದರು. ಉಕ್ಕಿನ ವಲಯದ ಬೆಳೆಯುತ್ತಿರುವ ಸಾಮರ್ಥ್ಯದ ಬಗ್ಗೆ ಮಾತನಾಡಿದ  ಸಚಿವರು, ವಿಸ್ತರಣಾ ಯೋಜನೆಗಳು ವಿಶ್ವ ದರ್ಜೆಯ ಉಕ್ಕಿನ ಲಭ್ಯತೆ ಮತ್ತು ಭಾರತ ಸರ್ಕಾರದ ಉಕ್ಕು ಸಚಿವಾಲಯದ ಪ್ರಗತಿಪರ ಯೋಜನೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದು ತಿಳಿಸಿದರು.

ಸಂದರ್ಭದಲ್ಲಿ ಮಾತನಾಡಿದ ಜೆಎಸ್‌ಡಬ್ಲ್ಯು ಸ್ಟೀಲ್‌ನ ಅಧ್ಯಕ್ಷರಾದ ಶ್ರೀ ಸಜ್ಜನ್ ಜಿಂದಾಲ್, “ ಸ್ಮರಣೀಯ ದಿನದಂದು ನಮ್ಮೊಂದಿಗೆ ಜೊತೆಯಾಗಿ ನಮ್ಮ ವಿಜಯನಗರದ ಉಕ್ಕು ಘಟಕದಲ್ಲಿ ಹೊಸ ಬ್ರೌನ್‌ಫೀಲ್ಡ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಕ್ಕಾಗಿ ಗೌರವಾನ್ವಿತ ಕೇಂದ್ರ ಉಕ್ಕು ಸಚಿವರಿಗೆ ನಾನು ಕೃತಜ್ಞನಾಗಿದ್ದೇನೆ ಎಂದರು. ವಿಸ್ತರಣೆಯು ಸುಸ್ಥಿರ ವಿಧಾನಗಳ ಮೂಲಕ ಬಲಿಷ್ಠ ಭಾರತವನ್ನು ನಿರ್ಮಿಸುವಲ್ಲಿ ಮಹತ್ವದ ಪಾಲುದಾರರಾಗುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ವಿಜಯನಗರದಲ್ಲಿನ ಹೊಸ 5 ಎಂಟಿಪಿಎ ಯೋಜನೆಯು ನಮ್ಮ ಸುಸ್ಥಿರತೆಯ ಗುರಿಗಳೊಂದಿಗೆ ಸಂಪರ್ಕ ಹೊಂದಿದೆ ಮತ್ತು ನಮ್ಮ ನೀರು, ತ್ಯಾಜ್ಯ, ಇಂಗಾಲ ಮತ್ತು ಇಂಧನದ  ಬಳಕೆಯನ್ನು ಉತ್ತಮಗೊಳಿಸುವ ಮೂಲಕ ಮರುಬಳಕೆ ಆರ್ಥಿಕತೆಯ ಮೇಲೆ ಕೇಂದ್ರೀಕರಿಸಿದೆ. ನಮ್ಮ ಬಲವಾದ ಯೋಜನಾ ಸಾಮರ್ಥ್ಯಗಳು ಮತ್ತು ಅನುಭವದ ಮೂಲಕ ನಾವು ಬ್ರೌನ್‌ಫೀಲ್ಡ್ ವಿಸ್ತರಣೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುತ್ತೇವೆ. ಇಲ್ಲಿ ಯೋಜಿಸಲಾದ ಹೊಸ ಹೂಡಿಕೆಗಳ ಮೂಲಕ, ನಾವು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತೇವೆ ಮತ್ತು ನಮ್ಮ ಎಲ್ಲಾ ಪಾಲುದಾರರಿಗೆ ಅಪಾರ ಮೌಲ್ಯವನ್ನು ಸೃಷ್ಟಿಸುತ್ತೇವೆ. ಸೌಲಭ್ಯದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಉದ್ಯಮದ ಇತರ 4.0 ಕ್ರಮಗಳ ಪರಿಚಯದ ಮೂಲಕ, ಇದು ಭಾರತದಲ್ಲಿನ ಡಿಜಿಟಲ್ ಸಂಪರ್ಕಿತ ಸ್ಮಾರ್ಟ್ ಸ್ಟೀಲ್ ಫ್ಯಾಕ್ಟರಿಗಳ ನೆಟ್‌ವರ್ಕ್‌ನ ಅವಿಭಾಜ್ಯ ಅಂಗವಾಗುತ್ತದೆ ಎಂದು ಅವರು ಹೇಳಿದರು.

ಕರ್ನಾಟಕದ ವಿಜಯನಗರದಲ್ಲಿರುವ ಜೆಎಸ್‌ಡಬ್ಲ್ಯು ಸ್ಟೀಲ್‌ನ ಉತ್ಪಾದನಾ ಘಟಕವು ಪ್ರಸ್ತುತ 12 MTPA ಸಾಮರ್ಥ್ಯದೊಂದಿಗೆ ಭಾರತದಲ್ಲಿಯೇ ಒಂದೇ ಸ್ಥಳದ ಅತಿ ದೊಡ್ಡ ಸಂಯೋಜಿತ ಉಕ್ಕು ತಯಾರಿಕೆ ಸೌಲಭ್ಯವಾಗಿದೆ. ಹೊಸ ಬ್ರೌನ್‌ಫೀಲ್ಡ್ ವಿಸ್ತರಣೆಯು 600 ಎಕರೆಗಳಲ್ಲಿ ವ್ಯಾಪಿಸಿರುತ್ತದೆ ಮತ್ತು 4.5 ಎಂಟಿಪಿಎ ಬ್ಲಾಸ್ಟ್ ಫರ್ನೇಸ್, ಎರಡು ಸ್ಟೀಲ್ ಮೆಲ್ಟ್ ಶಾಪ್‌ಗಳು ತಲಾ 350 ಟನ್ ಮತ್ತು 5 ಎಂಟಿಪಿಎ ಹಾಟ್ ಸ್ಟ್ರಿಪ್ ಮಿಲ್ ಜೊತೆಗೆ ಇತರ ಸಹಾಯಕ ಸೌಲಭ್ಯಗಳನ್ನು ಹೊಂದಿರುತ್ತದೆ.

ಜೆಎಸ್‌ಡಬ್ಲ್ಯು ಸ್ಟೀಲ್, ತನ್ನ ಮುಂದಿನ ಹಂತದ ಬೆಳವಣಿಗೆಯ ಭಾಗವಾಗಿ, 2025 ವೇಳೆಗೆ ಭಾರತ ಮತ್ತು ಅಮೆರಿಕಾದಲ್ಲಿ 37.5 ಎಂಟಿಪಿಎಯ ಒಟ್ಟಾರೆ ಸಾಮರ್ಥ್ಯವನ್ನು ಗುರಿಯಾಗಿಸಿಕೊಂಡಿದೆ. ಜೆಎಸ್‌ಡಬ್ಲ್ಯು ಸ್ಟೀಲ್ ವಿಜಯನಗರ ವರ್ಕ್ಸ್‌ನಲ್ಲಿ ಬ್ರೌನ್‌ಫೀಲ್ಡ್ ವಿಸ್ತರಣೆಯು ಗುರಿಯ ಭಾಗವಾಗಿದೆ.

ಜೆಎಸ್‌ಡಬ್ಲ್ಯು ಸ್ಟೀಲ್ ಕುರಿತು: ಜೆಎಸ್‌ಡಬ್ಲ್ಯು ಸ್ಟೀಲ್ 13 ಶತಕೋಟಿ ಡಾಲರ್ ಜೆಎಸ್‌ಡಬ್ಲ್ಯು ಗ್ರೂಪ್‌ನ ಪ್ರಮುಖ ವ್ಯವಹಾರವಾಗಿದೆ. ಭಾರತದ ಪ್ರಮುಖ ವ್ಯಾಪಾರ ಸಂಸ್ಥೆಗಳಲ್ಲಿ ಒಂದಾಗಿರುವ ಜೆಎಸ್‌ಡಬ್ಲ್ಯು ಗ್ರೂಪ್ ಇಂಧನ, ಮೂಲಸೌಕರ್ಯ, ಸಿಮೆಂಟ್, ಬಣ್ಣ, ಕ್ರೀಡೆ ಮತ್ತು ವೆಂಚರ್ ಕ್ಯಾಪಿಟಲ್ ನಂತಹ ಕ್ಷೇತ್ರಗಳಲ್ಲಿಯೂ ವ್ಯಾಪಾರ ಆಸಕ್ತಿಗಳನ್ನು ಹೊಂದಿದೆ. ಜೆಎಸ್‌ಡಬ್ಲ್ಯು ಸ್ಟೀಲ್, 2021 ರಲ್ಲಿ ಕೆಲಸ ಮಾಡಲು ಉತ್ತಮ ಸ್ಥಳ ಎಂದು ಪ್ರಮಾಣೀಕರಿಸಲ್ಪಟ್ಟಿದೆ, ಬಲವಾದ ಸಾಂಸ್ಕೃತಿಕ ಅಡಿಪಾಯ ಮತ್ತು ಟಾಪ್ 100 ಕಂಪನಿಗಳಲ್ಲಿ ಸೇರಲು ಉತ್ತಮ ಸಾಮರ್ಥ್ಯವನ್ನು ಹೊಂದಿರುವ ಸಂಸ್ಥೆಯಾಗಿ ಜೆಎಸ್‌ಡಬ್ಲ್ಯು ಹೊರಹೊಮ್ಮಿದೆ. ಕಳೆದ ಮೂರು ದಶಕಗಳಲ್ಲಿ, ಇದು ಒಂದೇ ಉತ್ಪಾದನಾ ಘಟಕದಿಂದ ಭಾರತ ಮತ್ತು ಅಮೆರಿಕಾ (ಜಂಟಿ ನಿಯಂತ್ರಣದಲ್ಲಿರುವ ಸಾಮರ್ಥ್ಯಗಳನ್ನು ಒಳಗೊಂಡಂತೆ) 28 ಎಂಟಿಪಿಎ ಸಾಮರ್ಥ್ಯದೊಂದಿಗೆ ಭಾರತದ ಪ್ರಮುಖ ಸಮಗ್ರ ಉಕ್ಕಿನ ಕಂಪನಿಯಾಗಿ ಬೆಳೆದಿದೆ. ಮುಂದಿನ ಹಂತದ ಬೆಳವಣಿಗೆಯ ಮುನ್ನೋಟವು 2025 ವೇಳೆಗೆ 37.5 MTPA ಉಕ್ಕಿನ ಸಾಮರ್ಥ್ಯವನ್ನು ಸಾಧಿಸುವ ಗುರಿಯನ್ನು ಒಳಗೊಂಡಿದೆ. ಕರ್ನಾಟಕದ ವಿಜಯನಗರದಲ್ಲಿರುವ ಕಂಪನಿಯ ಉತ್ಪಾದನಾ ಘಟಕವು 12 ಎಂಟಿಪಿಎ ಸಾಮರ್ಥ್ಯದೊಂದಿಗೆ ಭಾರತದಲ್ಲಿ ಅತಿ ದೊಡ್ಡ ಒಂದೇ ಸ್ಥಳದ ಉಕ್ಕಿನ ಉತ್ಪಾದನಾ ಘಟಕವಾಗಿದೆ. ಜೆಎಸ್‌ಡಬ್ಲ್ಯು ಸ್ಟೀಲ್ ಸಂಶೋಧನೆ ಮತ್ತು ನಾವೀನ್ಯತೆಗಳಲ್ಲಿ ಯಾವಾಗಲೂ ಮುಂಚೂಣಿಯಲ್ಲಿದೆ. ಇದು ಜಪಾನ್‌ನ ಜಾಗತಿಕ ಉಕ್ಕು ನಾಯಕನಾದ ಜೆಇಇ ಸ್ಟೀಲ್‌ನೊಂದಿಗೆ ಕಾರ್ಯತಂತ್ರದ ಸಹಯೋಗವನ್ನು ಹೊಂದಿದೆ. ಜೆಎಸ್‌ಡಬ್ಲ್ಯು ತನ್ನ ಗ್ರಾಹಕರಿಗಾಗಿ ಹೆಚ್ಚಿನ ಮೌಲ್ಯದ ವಿಶೇಷ ಉಕ್ಕಿನ ಉತ್ಪನ್ನಗಳನ್ನು ಉತ್ಪಾದಿಸಲು ಮತ್ತು ಒದಗಿಸಲು ಹೊಸ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ನಿರ್ಮಾಣ, ಮೂಲಸೌಕರ್ಯ, ಆಟೋಮೊಬೈಲ್, ಎಲೆಕ್ಟ್ರಿಕಲ್ ಅಪ್ಲಿಕೇಶನ್‌ಗಳು, ಉಪಕರಣಗಳು ಇತ್ಯಾದಿ ಸೇರಿದಂತೆ ಕೈಗಾರಿಕೆಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ಉತ್ಪನ್ನಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ವ್ಯಾಪಾರ ಮತ್ತು ಸುಸ್ಥಿರತೆಯ ಅಭ್ಯಾಸಗಳಲ್ಲಿ ಶ್ರೇಷ್ಠತೆಗಾಗಿ ಜೆಎಸ್‌ಡಬ್ಲ್ಯು ಸ್ಟೀಲ್ ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ. ವರ್ಲ್ಡ್ ಸ್ಟೀಲ್ ಅಸೋಸಿಯೇಶನ್‌ನ ಸ್ಟೀಲ್ ಸಸ್ಟೈನಬಿಲಿಟಿ ಚಾಂಪಿಯನ್ (ಸತತವಾಗಿ 2019 ರಿಂದ 2021), ಲೀಡರ್‌ಶಿಪ್ ರೇಟಿಂಗ್ (A-) ಸಿಡಿಪಿ (2020), TQM ಗೆ ಡೆಮಿಂಗ್ ಪ್ರಶಸ್ತಿಯು ವಿಜಯನಗರ (2018) ಮತ್ತು ಸೇಲಂ (2019) ಸೌಲಭ್ಯಗಳಿಗೆ ಸಂದಿವೆ. ಇದು ಉದಯೋನ್ಮುಖ ಮಾರುಕಟ್ಟೆಗಳಿಗಾಗಿ (2021) ಡೌ ಜೋನ್ಸ್ ಸಸ್ಟೈನಬಿಲಿಟಿ ಇಂಡೆಕ್ಸ್ (DJSI) ಮತ್ತು S&P ಗ್ಲೋಬಲ್‌ನ ಸಸ್ಟೈನಬಿಲಿಟಿ ಇಯರ್‌ಬುಕ್ (ಸತತವಾಗಿ 2020 ಮತ್ತು 2021 ರಲ್ಲಿ) ಭಾಗವಾಗಿದೆ. ಜೆಎಸ್‌ಡಬ್ಲ್ಯು ಸ್ಟೀಲ್ 2008 ರಿಂದ ಸತತ 13 ವರ್ಷಗಳವರೆಗೆ ವರ್ಲ್ಡ್ ಸ್ಟೀಲ್ ಡೈನಾಮಿಕ್ಸ್‌ನಿಂದ ಅಗ್ರ 15 ಜಾಗತಿಕ ಉಕ್ಕು ಉತ್ಪಾದಕರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಕಂಪನಿಯಾಗಿದೆ. ಜವಾಬ್ದಾರಿಯುತ ಕಾರ್ಪೊರೇಟ್ ಸಂಸ್ಥೆಯಾಗಿ, ಜೆಎಸ್‌ಡಬ್ಲ್ಯು ಸ್ಟೀಲ್‌ನ ಇಂಗಾಲ ಕಡಿತದ ಗುರಿಗಳು ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಭಾರತದ ಹವಾಮಾನ ಬದಲಾವಣೆಯ ಬದ್ಧತೆಗಳಿಗೆ ಅನುಗುಣವಾಗಿವೆ.

***



(Release ID: 1788388) Visitor Counter : 77


Read this release in: English