ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಗುಜರಾತ್ ನಲ್ಲಿ 5ಜಿ ಪರೀಕ್ಷೆಗಾಗಿ ವೊಡಾಫೋನ್ ಐಡಿಯಾ ಲಿಮಿಟೆಡ್ ಮತ್ತು ರಿಲಾಯನ್ಸ್ ಜಿಯೋ ಇನ್ಫೋಕಾಮ್‌ಗೆ ಪರವಾನಗಿ ಮತ್ತು ತರಂಗಗುಚ್ಛ (ಸ್ಪೆಕ್ಟ್ರಮ್‌) ಹಂಚಿಕೆ ಮಾಡಿದ ಟೆಲಿಕಾಂ ಇಲಾಖೆ

Posted On: 11 NOV 2021 5:29PM by PIB Bengaluru

ಗುಜರಾತ್‌ನಲ್ಲಿ 5ಜಿ ಪರೀಕ್ಷೆಗಾಗಿ ದೂರಸಂಪರ್ಕ ಇಲಾಖೆ (ಡಿಒಟಿ) 2021ರ ಅ.27ರಂದು ಕೆಳಕಂಡ ಸಂಸ್ಥೆಗಳಿಗೆ ಪರವಾನಗಿ ಮತ್ತು ತರಂಗಗುಚ್ಛವನ್ನು ಹಂಚಿಕೆ ಮಾಡಿದೆ:

1. ವೊಡಾಫೋನ್ ಐಡಿಯಾ ಲಿಮಿಟೆಡ್ಗೆ ಗಾಂಧಿನಗರದ (ನಗರ ಪ್ರದೇಶ), ಮನ್ಸಾ(ಉಪನಗರ) ಮತ್ತು ಉನಾವದಲ್ಲಿ (ಗ್ರಾಮೀಣ) - ಉಪಕರಣಗಳ ಪೂರೈಕೆದಾರನಾಗಿ ನೋಕಿಯಾಗೆ ಪರವಾನಗಿ

2. ರಿಲಾಯನ್ಸ್ ಜಿಯೋ ಇನ್ಫೋಕಾಮ್‌ಗೆ ಜಾಮ್‌ನಗರದಲ್ಲಿ (ಉಪನಗರ/ಗ್ರಾಮೀಣ) - ಉಪಕರಣಗಳ ಪೂರೈಕೆದಾರನಾಗಿ ಸ್ಯಾಮ್ ಸಂಗ್ಗೆ ಪರವಾನಗಿ

11.11.2021ರಂದು ನಿರ್ದೇಶಕರಾದ ಶ್ರೀ ಸುಮಿತ್ ಮಿಶ್ರಾ, ಶ್ರೀ ವಿಕಾಸ್ ದಾದಿಚ್ ಮತ್ತು ಸಹಾಯಕ ವಿಭಾಗೀಯ ಎಂಜಿನಿಯರ್ ಶ್ರೀ ಸೂರ್ಯಶ್ ಗೌತಮ್ ಅವರನ್ನೊಳಗೊಂಡ ʻ5ಜಿʼ ಕುರಿತ ಗುಜರಾತ್ ʻಎಲ್ಎಸ್ಎʼ ಮತ್ತು ಟೆಲಿಕಾಂ ಇಲಾಖೆಯ ಸಂಚಾಲಕ ಸಮಿತಿಯು ವೊಡಾಫೋನ್ ಐಡಿಯಾ ಲಿಮಿಟೆಡ್ ಮತ್ತು ನೋಕಿಯಾ ತಾಂತ್ರಿಕ ತಂಡದೊಂದಿಗೆ ಗಾಂಧಿನಗರದಲ್ಲಿಪರೀಕ್ಷಾ ಸ್ಥಳಗಳಿಗೆ ಭೇಟಿ ನೀಡಿತು.

ಗಾಂಧಿನಗರದ `ಮಹಾತ್ಮಾ ಮಂದಿರ 5ಜಿ ಸ್ಥಳ’ದಲ್ಲಿ ತಂಡವು ಡೇಟಾ ವೇಗವನ್ನು ಪರಿಶೀಲಿಸಿತು. ಈ ವೇಗವು ಸುಮಾರು 1.5 ಜಿಬಿಪಿಎಸ್ ಇರುವುದು ಕಂಡುಬಂದಿದೆ - ಇದು 4ಜಿಗಿಂತ ಸುಮಾರು 100 ಪಟ್ಟು ವೇಗವಾಗಿದೆ. ನಾನ್-ಸ್ಟ್ಯಾಂಡ್ ಅಲೋನ್ 5ಜಿ ಮೋಡ್‌ನಲ್ಲಿ ವೇಗ ಪರೀಕ್ಷೆಯನ್ನು ಮಾಡಲಾಯಿತು.

ಕೆಳಗಿನ ನಾಲ್ಕು ಬಳಕೆಯ ಪ್ರಕರಣಗಳನ್ನೂ ಗುಜರಾತ್ ʻಎಲ್‌ಎಸ್ಎʼ, ʻಡಿಒಟಿʼ ತಂಡವು ಸ್ಥಳದಲ್ಲಿ ಪರೀಕ್ಷಿಸಿತು:-

1. 360 ಡಿಗ್ರಿ ವರ್ಚುವಲ್ ರಿಯಾಲಿಟಿ ಕಂಟೆಂಟ್‌ ಪ್ಲೇಬ್ಯಾಕ್ - ಬಳಕೆದಾರರು ಕಂಟೆಂಟ್‌ ಒದಗಿಸುವ ಸರ್ವರ್ಗೆ 5ಜಿ ಮೂಲಕ ಸಂಪರ್ಕಗೊಂಡು, ಆ ಸ್ಥಳವನ್ನು ವರ್ಚುವಲ್ ರಿಯಾಲಿಟಿ ಮೂಲಕ ನೋಡುತ್ತಾರೆ, ಅವರು ದೈಹಿಕವಾಗಿ ಆ ಸ್ಥಳದಲ್ಲೇ ಇರುವ ಅನುಭವವನ್ನು ಹೊಂದುತ್ತಾರೆ.

2. ವರ್ಚುವಲ್ ರಿಯಾಲಿಟಿ ಸಂಪರ್ಕಿತ ತರಗತಿ - 5ಜಿ ನೆಟ್‌ವರ್ಕ್ ಸಂರ್ಪಕಿತ 360 ಡಿಗ್ರಿ ಲೈವ್ ಸ್ಟ್ರೀಮಿಂಗ್ ಮೂಲಕ ದೂರದಿಂದಲೇ ವಿದ್ಯಾರ್ಥಿಗಳನ್ನು ತಲುಪಲು ಶಿಕ್ಷಕರಿಗೆ ಅನುಕೂಲ ಮಾಡಿಕೊಡುತ್ತದೆ. ಇಲ್ಲಿ ವಿದ್ಯಾರ್ಥಿಗಳು ಖಾಸಗಿ ತರಗತಿಯಲ್ಲೇ ಇರುವ ಅನುಭವವನ್ನು ಹೊಂದುತ್ತಾರೆ, ಅಲ್ಲಿ ಅವನು /ಅವಳು ಧ್ವನಿ ಚಾಟ್ ಮೂಲಕ ಶಿಕ್ಷಕರೊಂದಿಗೆ ನೇರ ಸಂವಹನ ನಡೆಸಬಹುದು.

3. 5ಜಿ ಇಮ್ಮರ್ಸೀವ್‌ ಗೇಮಿಂಗ್‌ – ಇಲ್ಲಿ ಗೇಮರ್‌ಗಳ ಚಲನವಲನಗಳನ್ನು ಆನ್‌ಲೈನ್‌ನಲ್ಲಿ ಸೆರೆಹಿಡಿದು, 5ಜಿ ನೆಟ್‌ವರ್ಕ್ ಮೂಲಕ ಗೇಮಿಂಗ್ ವೇದಿಕೆಗೆ ಕಳುಹಿಸಲಾಗುತ್ತದೆ, ಅಲ್ಲಿ ಅದು ಮೊದಲೇ ರೆಕಾರ್ಡ್ ಮಾಡಿದ ಗೇಮಿಂಗ್ ವೀಡಿಯೊದೊಂದಿಗೆ ವಿಲೀನವಾಗುತ್ತದೆ.

4. ಕೃತಕ ಬುದ್ಧಿಮತ್ತೆ ನೆರವಿನ 360 ಡಿಗ್ರಿ ಕ್ಯಾಮೆರಾ - 360 ಡಿಗ್ರಿ ಕ್ಯಾಮೆರಾಗಳಿಂದ ರಿಯಲ್ ಟೈಮ್ ವೀಡಿಯೊ ಸ್ಟ್ರೀಮ್ ಅನ್ನು 5ಜಿ ನೆಟ್‌ವರ್ಕ್ ಮೂಲಕ ಅಪ್‌ಲೋಡ್ ಮಾಡಲಾಗುತ್ತದೆ; ಅಂತಿಮ ಬಳಕೆದಾರರು ನಿಜವಾದ 360 ಡಿಗ್ರಿ ಅನುಭವವನ್ನು ಪಡೆಯುತ್ತಾರೆ ಮತ್ತು ಹೆಚ್ಚುವರಿ ಕೃತಕ ಬುದ್ಧಿಮತ್ತೆಯೊಂದಿಗೆ, ಅವರು ಅಲ್ಲಿರುವ ಜನರು, ಚೀಲಗಳು, ಬಾಟಲಿಗಳು, ಲ್ಯಾಪ್ ಟಾಪ್ ಮುಂತಾದ ವಸ್ತುಗಳನ್ನು ಸಹ ಪತ್ತೆ ಹಚ್ಚಬಹುದು.

ಬಳಕೆಯ ಪ್ರಕರಣಗಳನ್ನು ಸ್ಟ್ಯಾಂಡ್ ಅಲೋನ್ 5ಜಿ ಮೋಡ್ ಬಳಸಿ ಪರೀಕ್ಷಿಸಲಾಯಿತು.

***

 

 



(Release ID: 1771063) Visitor Counter : 168


Read this release in: English , Urdu , Hindi , Gujarati