ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಈ ದಂತೆರಸ್ ಮತ್ತು ದೀಪಾವಳಿಯಲ್ಲಿ ಹಾಲ್ ಮಾರ್ಕ್ ಇರುವ ಆಭರಣ ಮಾತ್ರ ಖರೀದಿಸುವಂತೆ ಗ್ರಾಹಕರಿಗೆ ಕೇಂದ್ರದ ಮನವಿ


ಖರೀದಿಗೆ ಮುನ್ನ ಆರು ಸಂಖ್ಯೆಗಳ ಆಲ್ಫಾನ್ಯೂಮರಿಕ್ ಕೋಡ್  ಪರೀಕ್ಷಿಸುವಂತೆ ಬಿ.ಐ.ಎಸ್. ಸಲಹೆ

ಆಭರಣ ಖರೀದಿಗೆ ಬಿಲ್ ನೀಡುವಂತೆ ಒತ್ತಾಯಿಸಿ

Posted On: 02 NOV 2021 5:14PM by PIB Bengaluru

ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದಡಿಯ ಭಾರತೀಯ ಮಾನಕ ಸಂಸ್ಥೆ (ಬಿ.ಐ.ಎಸ್.) ದಂತೇರಸ್ ಮತ್ತು ಮುಂಬರುವ ದೀಪಾವಳಿಯ ಸಂದರ್ಭದಲ್ಲಿ ತಾವು ಹಾಲ್ ಮಾರ್ಕ್ ಇರುವ ಆಭರಣಗಳನ್ನು ಮಾತ್ರ ಖರೀದಿಸುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ಜನತೆಗೆ ಮನವಿ ಮಾಡಿದೆ.   

ಇಂತಹ ಸಂದರ್ಭಗಳಲ್ಲಿ ಚಿನ್ನದ ಖರೀದಿ ಕುಟುಂಬಕ್ಕೆ ಸಮೃದ್ಧಿ ಮತ್ತು ಸಂತಸ ತರುತ್ತದೆ ಎಂದು ನಂಬಲಾಗಿದೆ ಮತ್ತು ಇದನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ಕೊಟ್ಟ ಹಣಕ್ಕೆ ಉತ್ತಮ ಮೌಲ್ಯಪಡೆಯಲು ತಾವು ಖರೀದಿಸುವ ಬಂಗಾರದ ಶುದ್ಧತ್ವವನ್ನು ಖಾತ್ರಿಪಡಿಸಿಕೊಳ್ಳಲು ಅರಿವು ಹೊಂದುವುದು ಮಹತ್ವದ್ದಾಗಿದೆ. ಹೀಗಾಗಿ ಖರೀದಿಗೆ ಮುನ್ನ ಕೆಲವು ಅಂಶಗಳನ್ನು ಗಮನದಲ್ಲಿಡಬೇಕು.

2021ರ ಜೂನ್ 23ರಿಂದ ಅನ್ವಯವಾಗುವಂತೆ, 14,18 ಮತ್ತು 22 ಕ್ಯಾರೆಟ್ ಚಿನ್ನದ ಆಭರಣ/ ಕಲಾಕೃತಿಗಳಿಗೆ ಹಾಲ್ ಮಾರ್ಕ್ ಅನ್ನು ದೇಶದ 256 ಜಿಲ್ಲೆಗಳಲ್ಲಿ ಕಡ್ಡಾಯ ಮಾಡಲಾಗಿದೆ. ಈ 256 ಜಿಲ್ಲೆಗಳು ಕನಿಷ್ಠ ಒಂದು ಪರೀಕ್ಷೆ ಮತ್ತು ಹಾಲ್‌ ಮಾರ್ಕಿಂಗ್ ಕೇಂದ್ರವನ್ನು ಹೊಂದಿರುವ ಜಿಲ್ಲೆಗಳಾಗಿವೆ. ಈ 256 ಜಿಲ್ಲೆಗಳ ಪಟ್ಟಿ ಬಿ.ಐ.ಎಸ್. ವೆಬ್‌ ಸೈಟ್ www.bis.gov.in ನಲ್ಲಿ ಲಭ್ಯವಿದೆ.

ಬಿಐಎಸ್ ನೋಂದಾಯಿತ ಆಭರಣಕಾರರು ಮಾತ್ರ ಹಾಲ್‌ ಮಾರ್ಕ್ ಆಭರಣಗಳನ್ನು ಮಾರಾಟ ಮಾಡಬಹುದು. ನಿಮ್ಮ ಜಿಲ್ಲೆಯಲ್ಲಿ ಬಿಐಎಸ್ ನೋಂದಾಯಿತ ಆಭರಣ ವ್ಯಾಪಾರಿಗಳ ವಿವರಗಳನ್ನು ಬಿಐಎಸ್ ಸೈಟ್‌ನಿಂದ https://www.manakonline.in/MANAK/ApplicationHMLicenceRelatedrpt. ಪಡೆಯಬಹುದು.

ಗ್ರಾಹಕರಿಗೆ ಈ ಕೆಳಗಿನವುಗಳಿಗೆ ಸ್ಪಂದನಾತ್ಮಕವಾಗಿರುವಂತೆ ಮನವಿ ಮಾಡಲಾಗುತ್ತದೆ:

·         ಬಿ.ಐ.ಎಸ್. ನೋಂದಾಯಿತ ಆಭರಣಕಾರರಿಂದ ಕೇವಲ ಹಾಲ್ ಮಾರ್ಕ್ ಇರುವ ಚಿನ್ನ/ಬೆಳ್ಳಿಯ ಆಭರಣ ಮತ್ತು ಕಲಾಕೃತಿಗಳನ್ನು ಮಾತ್ರ ಖರೀದಿಸಿ.

·         ಒಂದೊಮ್ಮೆ ಹಾಲ್ ಮಾರ್ಕ್ ಬರಿಗಣ್ಣಿಗೆ ಸ್ಪಷ್ಟವಾಗಿ ಗೋಚರಿಸದಿದ್ದರೆ, ಚಿನ್ನಾಭರಣದಂಗಡಿಯವರಿಂದ ಮ್ಯಾಗ್ನಿಫೈಯಿಂಗ್ ಗಾಜು ಕೇಳಿ ಪಡೆಯಿರಿ.

·         ಈ ಕೆಳಕಂಡ ಚಿನ್ಹೆಗಳನ್ನು ಹಾಲ್ ಮಾರ್ಕ್ ಇರುವ ಚಿನ್ನದ ಆಭರಣ/ಕಲಾಕೃತಿಗಳಲ್ಲಿ ಪರೀಕ್ಷಿಸಿ.

2021 ಜುಲೈ 1ರಿಂದ ಅನ್ವಯವಾಗುವಂತೆ ಆರು ಸಂಖ್ಯೆಯ ಆಲ್ಫಾ ನ್ಯೂಮರಿಕ್ ಕೋಡ್ ನ ಪರಿಚಯದೊಂದಿಗೆ ಹಾಲ್ ಮಾರ್ಕ್ ಇರುವ ಚಿನ್ನಾಭರಣ ಕಲಾಕೃತಿಗಳು ಮೂರು ಚಿನ್ಹೆಗಳನ್ನು ಒಳಗೊಂಡಿರುತ್ತವೆ.. ಅವುಗಳೆಂದರೆ..

 

 

 

ಬಿಐಎಸ್ ಮಾರ್ಕ್

 ಕ್ಯಾರೆಟ್‌ ನಲ್ಲಿ ಶುದ್ಧತೆ ಮತ್ತು ಚಿನ್ನಕ್ಕೆ ಸೂಕ್ಷ್ಮತೆ (ಉದಾ. 22ಕೆ 916,18ಕೆ750, 14ಕೆ585 )

 ಆರು ಸಂಖ್ಯೆಯ

ಆಲ್ಫಾನ್ಯೂಮರಿಕ್ ಎಚ್.ಯು.ಐ.ಡಿ.

ಕೋಡ್ AAAAAA

2021ರ ಜುಲೈ 1ಕ್ಕೆ ಮುನ್ನ ಹಾಲ್ ಮಾರ್ಕ್ ಚಿನ್ನಾಭರಣ/ಕಲಾಕೃತಿಗಳು ಈ ಕೆಳಕಂಡ ಚಿನ್ಹೆಗಳನ್ನು ಒಳಗೊಂಡಿರುತ್ತವೆ.:

 

ಬಿಐಎಸ್ ಮಾರ್ಕ್

ಕ್ಯಾರೆಟ್‌ ನಲ್ಲಿ ಶುದ್ಧತೆ ಮತ್ತು ಚಿನ್ನಕ್ಕೆ ಸೂಕ್ಷ್ಮತೆ (ಉದಾ. 22ಕೆ916,18ಕೆ750, 14ಕೆ585 )

ಬೆಳ್ಳಿಯ ಸಂದರ್ಭದಲ್ಲಿ ಕೇವಲ 990,970,925,900,835,800

ಪರೀಕ್ಷಾ ಕೇಂದ್ರದ ಗುರುತಿನ ಚಿನ್ಹೆ/ಸಂಖ್ಯೆ

ಆಭರಣಕಾರರ ಗುರುತು ಚಿನ್ಹೆ /ಸಂಖ್ಯೆ

o    ಆಭರಣ ಖರೀದಿಗೆ ಬಿಲ್ ಗೆ ಒತ್ತಾಯಿಸಿ.

o    ಹಾಲ್ ಮಾರ್ಕ್ ಇರುವ ಆಭರಣದ ಮಾರಾಟದ ಬಿಲ್ ಅಥವಾ ಇನ್ವಾಯ್ಸ್ ಪ್ರತಿ ವಸ್ತುವಿಗೆ ಪ್ರತ್ಯೇಕವಾಗಿ ವಿವರಣೆ, ಅಮೂಲ್ಯ ಲೋಹದ ನಿವ್ವಳ ತೂಕ, ಕ್ಯಾರೆಟ್‌ ನಲ್ಲಿ ಶುದ್ಧತೆ ಮತ್ತು ಸೂಕ್ಷ್ಮತೆ ಮತ್ತು ಹಾಲ್‌ ಮಾರ್ಕಿಂಗ್ ಶುಲ್ಕಗಳನ್ನು ಸೂಚಿಸುತ್ತದೆ.

ಬಿಐಎಸ್ ಈ ಸಂಬಂಧ ಟ್ವೀಟ್ ಮಾಡಿದ್ದು, ಕೇವಲ ಹಾಲ್ ಮಾರ್ಕ್ ಇರುವ ಆಭರಣ ಮಾತ್ರವೇ ಖರೀದಿಸುವಂತೆ ಮನವಿ ಮಾಡಿದೆ. 

 


***



(Release ID: 1769055) Visitor Counter : 149


Read this release in: English , Urdu , Hindi