ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಎಲೆಕ್ಟ್ರಾನಿಕ್ಸ್ ನಲ್ಲಿ ಭಾರತವನ್ನು ಗಮನಾರ್ಹ ಪಾತ್ರವಹಿಸುವಂತೆ ಮಾಡುವುದು ಪ್ರಧಾನಮಂತ್ರಿಯವರ ದೃಷ್ಟಿಕೋನವಾಗಿದೆ. "ಸ್ಥಳೀಯತೆ ಜಾಗತಿಕವಾಗುತ್ತಿದೆ"


ಭಾರತೀಯ ಎಲೆಕ್ಟ್ರಾನಿಕ್ಸ್ 2025ರ ವೇಳೆಗೆ  300 ಶತಕೋಟಿ ಡಾಲರ್ ಉದ್ಯಮವಾಗಲಿದೆ

"ಜಿವಿಸಿಗಳಲ್ಲಿ ಭಾರತದ ಎಲೆಕ್ಟ್ರಾನಿಕ್ಸ್ ರಫ್ತು ಮತ್ತು ಪಾಲು ಹೆಚ್ಚಿಸುವುದು" ಕುರಿತ ಮುನ್ನೋಟದ ದಸ್ತಾವೇಜು (ಸಂಪುಟ-1) ಬಿಡುಗಡೆ ಮಾಡಿದ ಸಹಾಯಕ ಸಚಿವ ಶ್ರೀ ರಾಜೀವ್ ಚಂದ್ರಶೇಖರ್

ಒಂದು ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕತೆಯನ್ನು ಸಾಧಿಸುವ ನಿಟ್ಟಿನಲ್ಲಿ ಇ.ಎಸ್. ಡಿ.ಎಂ. ವಲಯಕ್ಕೆ 1000 ದಿನಗಳ ದೃಷ್ಟಿಕೋನದ ಭಾಗವಾಗಿ ದಸ್ತಾವೇಜಿನ ಬಿಡುಗಡೆ

Posted On: 02 NOV 2021 8:21PM by PIB Bengaluru

ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಭಾರತದ ರಫ್ತು ಮತ್ತು ಪಾಲು ಹೆಚ್ಚಿಸುವ "ಸ್ಥಳೀಯತೆ ಜಾಗತಿಕವಾಗಿಸುವ" ಪ್ರಧಾನಮಂತ್ರಿಯವರ ದೃಷ್ಟಿಕೋನದಿಂದ ಪ್ರೇರಿತವಾದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇಂದು "ಭಾರತದ ಎಲೆಕ್ಟ್ರಾನಿಕ್ಸ್ ರಫ್ತು ಮತ್ತು ಜಿವಿಸಿಗಳಲ್ಲಿ ಪಾಲು ಹೆಚ್ಚಿಸುವ" ಕುರಿತ ಮುನ್ನೋಟದ ದಸ್ತಾವೇಜಿನ ಸಂಪುಟ-1ನ್ನು ಬಿಡುಗಡೆ ಮಾಡಿದೆ. ಇದು ಎಂ.ಇ.ಐ.ಟಿ.ವೈಯ ಮುನ್ನೋಟ 1000 ದಿನಗಳ ಭಾಗವಾಗಿದ್ದು, ಇದು ಆತ್ಮನಿರ್ಭರ ಭಾರತಕ್ಕಾಗಿ 1 ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕತೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.

ಜಾಗತಿಕ ಮೌಲ್ಯ ಸರಪಳಿಯಲ್ಲಿ ಭಾರತದ ಪಾಲನ್ನು ಹೆಚ್ಚಿಸಲು ಮತ್ತು ಜಾಗತಿಕ ಎಲೆಕ್ಟ್ರಾನಿಕ್ಸ್ ರಫ್ತಿನಲ್ಲಿ ಗಣನೀಯ ಪಾಲನ್ನು ಸಾಧಿಸಲು ದೊಡ್ಡ ಪ್ರಮಾಣದ ಉತ್ಪಾದನಾ ಸಾಮರ್ಥ್ಯ ನಿರ್ಮಿಸಲು ಅವಕಾಶಗಳು ಮತ್ತು ಪ್ರಮುಖ ಒಳಹರಿವುಗಳ ಮೇಲೆ ಮುನ್ನೋಟದ ದಸ್ತಾವೇಜು (ಸಂಪುಟ-1) ಕೇಂದ್ರೀಕರಿಸುತ್ತದೆ. ಇದನ್ನು ಭಾರತೀಯ ಸೆಲ್ಯುಲಾರ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಉದ್ಯಮದೊಂದಿಗೆ ಸಮಾಲೋಚಿಸಿ ಸಿದ್ಧಪಡಿಸಲಾಗಿದೆ. ಮುನ್ನೋಟದ ದಸ್ತಾವೇಜು ಸವಾಲುಗಳನ್ನು ವಿಶ್ಲೇಷಿಸುವ ಮತ್ತು ಎಲೆಕ್ಟ್ರಾನಿಕ್ಸ್ ರಫ್ತುಗಳನ್ನು ಹೆಚ್ಚಿಸಲು ಆದರೆ ಸ್ಪರ್ಧಾತ್ಮಕ ರಾಷ್ಟ್ರಗಳ ವಿರುದ್ಧ ಮಾನದಂಡವಾಗಿರುವ ಪ್ರಮುಖ ಯಶಸ್ಸಿನ ಅಂಶಗಳನ್ನು ವಿವರಿಸುವ ಕ್ರಮದ ಕರೆಯಾಗಿದೆ. ಇದು ಮುಂದಿನ 1000 ದಿನಗಳಲ್ಲಿ ಪ್ರಮಾಣ, ಸ್ಪರ್ಧಾತ್ಮಕತೆ ಮತ್ತು ದೇಶೀಯ ಮೌಲ್ಯವರ್ಧನೆಯನ್ನು ಹೆಚ್ಚಿಸಲು ಶಿಫಾರಸುಗಳನ್ನು ಮಾಡುತ್ತದೆ.

'ಭಾರತದ ಎಲೆಕ್ಟ್ರಾನಿಕ್ಸ್ ರಫ್ತು ಮತ್ತು ಜಿವಿಸಿಗಳಲ್ಲಿ ಪಾಲು ಹೆಚ್ಚಿಸುವುದು - ಆತ್ಮನಿರ್ಭರ ಭಾರತದತ್ತ ಹೆಜ್ಜೆ' ಎಂಬ ಶೀರ್ಷಿಕೆಯ ಮುನ್ನೋಟ ದಸ್ತಾವೇಜನ್ನು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಬಿಡುಗಡೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ರಾಜೀವ್ ಚಂದ್ರಶೇಖರ್, ಸಾಂಕ್ರಾಮಿಕ ರೋಗದ ನಂತರ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರದಲ್ಲಿನ ಪರಿವರ್ತನೆಯ ಬಗ್ಗೆ ಮಾತನಾಡಿದ ಶ್ರೀ ರಾಜೀವ್ ಚಂದ್ರಶೇಖರ್ ಅವರು, ಕೋವಿಡ್ ನಂತರದ ಜಗತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದರ್ಶಿತ್ವದ ನಾಯಕತ್ವದಲ್ಲಿ ನವೀಕೃತ ವಿಶ್ವಾಸ, ನೀತಿ ನಿರೂಪಣೆ, ಹೂಡಿಕೆಗಳು, ಉದ್ಯೋಗಗಳು ಮತ್ತು ಜಾಗತಿಕ ಮೌಲ್ಯ ಸರಪಳಿಗಳಲ್ಲಿನ  ವಿಶ್ವಾಸಕ್ಕೆ ಬಲವಾದ ಆದ್ಯತೆ ಸೇರಿದಂತೆ ಅನೇಕ ವಿಷಯಗಳು/ಅಂಶಗಳನ್ನು ಒಗ್ಗೂಡಿಸುವುದನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು. ಇವು ಒಟ್ಟಾರೆ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಭಾರತಕ್ಕೆ ಹಿಂದೆಂದೂ ಇಲ್ಲದ ಅವಕಾಶವನ್ನು ಒದಗಿಸುತ್ತದೆ. ಹೊಸ ಮಾರುಕಟ್ಟೆಗಳು ಮತ್ತು ಹೊಸ ರೀತಿಯ ಗ್ರಾಹಕರಿಗೆ ಸೇವೆ ನೀಡಬಲ್ಲ ಉತ್ಪನ್ನ ವರ್ಗಗಳನ್ನು ವಿಸ್ತರಿಸಲು ಉದ್ಯಮವು ಗಮನ ಹರಿಸಬೇಕಾಗಿದೆ ಎಂದು ಅವರು ಹೇಳಿದರು. ನಾವಿನ್ಯತೆಯಲ್ಲಿ ಯಂತ್ರಾಂಶ ಕಡಿಮೆ ಪಾತ್ರ ವಹಿಸುವ ಮತ್ತು ತಂತ್ರಾಂಶ ಹೆಚ್ಚು ಮಹತ್ವದ ಪಾತ್ರ ವಹಿಸುವ ಜಗತ್ತಿನಲ್ಲಿ ನಾವು ಇದ್ದೇವೆ. ಈ ಸನ್ನಿವೇಶದಲ್ಲಿ ಭಾರತವು ಎಲೆಕ್ಟ್ರಾನಿಕ್ಸ್ ವಿನ್ಯಾಸ, ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಜೊತೆಗೆ ಸಿಸ್ಟಮ್ ಗಳ ವಿನ್ಯಾಸದಲ್ಲಿ ತನ್ನ ಶಕ್ತಿಯನ್ನು ಬಳಸುವ ಸಾಮರ್ಥ್ಯವನ್ನು ಹೊಂದಿದೆ. ದೂರದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಉದ್ಯಮದ ಸಹಯೋಗದ ಬಗ್ಗೆ ಮಾತನಾಡಿದ ಶ್ರೀ ರಾಜೀವ್ ಚಂದ್ರಶೇಖರ್, ನಾವು ಪಾಲುದಾರರಾಗಿ ಉದ್ಯಮವನ್ನು ಸಂಪರ್ಕಿಸುತ್ತೇವೆ ಮತ್ತು ಆರ್ಥಿಕತೆಯ ಒಟ್ಟಾರೆ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಹೇಳಿದರು. ಮಾನ್ಯ ಪ್ರಧಾನಮಂತ್ರಿಯವರ ಭಾಷಣ "ಯಹಿ ಸಮಯ್ ಹೈ" (ಇದುವೇ ಸಮಯ)ವನ್ನು ಉಲ್ಲೇಖಿಸಿದ ಅವರು, ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಲಭ್ಯವಿರುವ ಅವಕಾಶದ ಕಿರಿದಾದ ಕಿಟಕಿಯನ್ನು ಸೂಚಿಸುತ್ತದೆ.

ಇ.ಎಸ್.ಡಿ.ಎಂ ವಲಯಕ್ಕೆ ಒತ್ತು ನೀಡುವ ಮೊದಲು ಭಾರತವು ವಿಶ್ವದ ಮೊಬೈಲ್ ಹ್ಯಾಂಡ್ ಸೆಟ್ ಗಳ 2ನೇ ಅತಿದೊಡ್ಡ ತಯಾರಕಾ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ, 2014-15ರಲ್ಲಿ ತಯಾರಿಸಲಾಗುತ್ತಿದ್ದ 6 ಕೋಟಿ ಹ್ಯಾಂಡ್ ಸೆಟ್ ಗಳಿಗೆ ಪ್ರತಿಯಾಗಿ (2020-21)ರಲ್ಲಿ 30 ಕೋಟಿ ಹ್ಯಾಂಡ್ ಸೆಟ್ ಗಳನ್ನು ಉತ್ಪಾದಿಸಲಾಗಿದೆ. ಭಾರತದಲ್ಲಿ 2014ರಲ್ಲಿ ಕೇವಲ 2 ಘಟಕಗಳಿದ್ದವು, ಈಗ 200ಕ್ಕೂ ಹೆಚ್ಚು ಘಟಕಗಳು ಸೆಲ್ಯುಲಾರ್ ಮೊಬೈಲ್ ಫೋನ್ ಗಳು ಮತ್ತು ಭಾಗಗಳನ್ನು ತಯಾರಿಸುತ್ತಿವೆ. ಮೊಬೈಲ್ ಹ್ಯಾಂಡ್ ಸೆಟ್ ಗಳ ಉತ್ಪಾದನೆಯು 2014-15ರಲ್ಲಿದ್ದ 19,000 ಕೋಟಿ ರೂ.ಗಳಿಂದ 2020-21ರಲ್ಲಿ 2,20,000 ಕೋಟಿಗೆ ಏರಿದೆ. ಇದು ಈ ವಲಯಕ್ಕೆ ಮತ್ತು ಆತ್ಮ ನಿರ್ಭರ ಭಾರತ ಅಡಿಯಲ್ಲಿ ಸ್ವಾವಲಂಬನೆ ಸಾಧಿಸುವ ದೃಷ್ಟಿಕೋನಕ್ಕೆ ಗಮನಾರ್ಹ ಉತ್ತೇಜನ ನೀಡಿದೆ.

ಮುನ್ನೋಟದ ದಸ್ತಾವೇಜು ಎರಡು ಭಾಗಗಳ ಸರಣಿಯಲ್ಲಿ ಮೊದಲನೆಯದಾಗಿದೆ. 5 ಟ್ರಿಲಿಯನ್ ಅಮೆರಿಕನ್ ಡಾಲರ್ ಜಿಡಿಪಿಯನ್ನು ತಲುಪುವ ಅನ್ವೇಷಣೆಯಲ್ಲಿ, ಎರಡನೇ ಸಂಪುಟವು 1 ಟ್ರಿಲಿಯನ್ ಅಮೆರಿಕನ್ ಡಾಲರ್ ಡಿಜಿಟಲ್ ಆರ್ಥಿಕತೆಯನ್ನು ರೂಪಿಸುವ ಅಭಿಯಾನದ ಭಾಗವಾಗಿ ಉತ್ಪನ್ನವಾರು ಕಾರ್ಯತಂತ್ರಗಳು ಮತ್ತು ಮುನ್ಸೂಚನೆಗಳನ್ನು ಪ್ರಸ್ತುತಪಡಿಸುತ್ತದೆ. ಮುನ್ನೋಟದ ದಸ್ತಾವೇಜು ಭಾರತದಿಂದ ಎಲೆಕ್ಟ್ರಾನಿಕ್ಸ್ ರಫ್ತನ್ನು ಹೆಚ್ಚಿಸಲು ಅಲ್ಪಾವಧಿ (1-4 ವರ್ಷಗಳು) ಮತ್ತು ದೀರ್ಘಕಾಲೀನ (5-10 ವರ್ಷಗಳು) ಕಾರ್ಯತಂತ್ರಗಳು, ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆ ಹೂಡಿಕೆಗಳ ಬದಲಾವಣೆ ಮತ್ತು ಸ್ಪರ್ಧಾತ್ಮಕತೆ ಮತ್ತು ಪ್ರಮಾಣವನ್ನು ಹೆಚ್ಚಿಸುವ ಮೂಲಕ ರಫ್ತನ್ನು ವಿಸ್ತರಿಸುವ ಬಗ್ಗೆ ಶಿಫಾರಸುಗಳನ್ನು ಮಾಡುತ್ತದೆ. ಭಾರತದ ಸ್ಪರ್ಧಾತ್ಮಕತೆಯ ಮೇಲೆ ಒಳಹರಿವುಗಳ ಮೇಲೆ ಸುಂಕದ ಪರಿಣಾಮವನ್ನು ಈ ದಾಖಲೆಯು ವಿಮರ್ಶಾತ್ಮಕವಾಗಿ ವಿಶ್ಲೇಷಿಸುತ್ತದೆ ಮತ್ತು ಪ್ರಧಾನಮಂತ್ರಿಯವರು ನಿಗದಿಪಡಿಸಿದ ಗುರಿಗಳ ಹಿನ್ನೆಲೆಯಲ್ಲಿ ನಿರ್ದಿಷ್ಟ ಶಿಫಾರಸುಗಳನ್ನು ಮಾಡುತ್ತದೆ. ಮುನ್ನೋಟದ ದಸ್ತಾವೇಜು ದೇಶೀಯ ಚಾಂಪಿಯನ್ ಗಳನ್ನು ರೂಪಿಸುವ ಕಾರ್ಯತಂತ್ರಗಳು ಮತ್ತು ತಮ್ಮ ಉತ್ಪನ್ನಗಳನ್ನು ಅಗ್ರ ಸಂಸ್ಥೆಗಳು ಮತ್ತು ಜಿವಿಸಿಗಳೊಂದಿಗೆ ಜೋಡಿಸುವ ಅಗತ್ಯವನ್ನು ಒತ್ತಿ ಹೇಳುತ್ತದೆ. ಇದು ದೇಶೀಯ ಚಾಂಪಿಯನ್ ಗಳನ್ನು ಅನ್ಯಾಯದ ವ್ಯಾಪಾರ ಪದ್ಧತಿಗಳಿಂದ ರಕ್ಷಿಸಲು ಪ್ರಯತ್ನಿಸುತ್ತದೆ, ಅದೇ ಸಮಯದಲ್ಲಿ ಹಣಕಾಸು ಮತ್ತು ವಿನ್ಯಾಸ ಅಭಿವೃದ್ಧಿ ಕ್ಷೇತ್ರಗಳಲ್ಲಿ ನೀತಿ ಬೆಂಬಲವನ್ನು ಕೋರುತ್ತದೆ. ಇದು ಪ್ರಮುಖ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಗುರುತಿಸುತ್ತದೆ, ಅವುಗಳೆಂದರೆ ಮೊಬೈಲ್ ಫೋನ್ ಗಳು, ಐಟಿ ಯಂತ್ರಾಂಶ, ಶ್ರವ್ಯಸಾಧನ / ಧರಿಸಬಹುದಾದವುಗಳು ಇತ್ಯಾದಿ, ಈ ಉತ್ಪನ್ನಗಳಿಗೆ ಭಾರಿ ಜಾಗತಿಕ ಬೇಡಿಕೆಯ ಹಿನ್ನೆಲೆಯಲ್ಲಿ ರಫ್ತುಗಳಿಗೆ ಹೆಚ್ಚಿನ ಸಾಮರ್ಥ್ಯವನ್ನು ಒದಗಿಸುತ್ತದೆ.

ಬಿಡುಗಡೆ ಸಮಾರಂಭವನ್ನು ದೆಹಲಿಯ ಹೊಸ ಮಾಧ್ಯಮ ಕೇಂದ್ರದಲ್ಲಿ ನಡೆಸಲಾಯಿತು, ಇದರಲ್ಲಿ ಉದ್ಯಮ/ಉದ್ಯಮ ಸಂಘಗಳು, ಎಂ.ಇ.ಐ.ಟಿ.ವೈ, ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಜನರು ಭಾಗವಹಿಸಿದ್ದರು. ಐಸಿಇಎ ಅಧ್ಯಕ್ಷ ಶ್ರೀ ಪಂಕಜ್ ಮಹಿಂದ್ರೋ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಐಕೆಡಿಎಚ್ ಡಬ್ಲ್ಯೂಎಜೆ ಸಲಹೆಗಾರರ ಎಲ್.ಎಲ್.ಪಿ ಅಧ್ಯಕ್ಷ ಡಾ. ಹರ್ಷವರ್ಧನ್ ಅವರು ಮುನ್ನೋಟದ ದಸ್ತಾವೇಜು ಕುರಿತ ಪ್ರಾತ್ಯಕ್ಷಿಕೆಯನ್ನು ನೀಡಿದರು. ಲಾವಾ ಮೊಬೈಲ್ಸ್ ನ ಸಿಎಂಡಿ ಶ್ರೀ ಹರಿ ಓಂ ರೈ, ಎಫ್.ಐ.ಸಿ.ಸಿ.ಐ.ನ ಐಸಿಟಿ ಮತ್ತು ಮೊಬೈಲ್ ತಯಾರಿಕೆ ಕುರಿತ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಶ್ರೀ ವಿರಾಟ್ ಭಾಟಿಯಾ ಅವರು ತಮ್ಮ ಹೇಳಿಕೆಗಳನ್ನು ನೀಡಿದರು. ಎಂ.ಇ.ಐ.ಟಿ.ವೈ. ಕಾರ್ಯದರ್ಶಿ ಶ್ರೀ ಅಜಯ್ ಸಾವ್ನಿ,  ಕೂಡ ಮುನ್ನೋಟದ ದಸ್ತಾವೇಜು ಕುರಿತು ಮಾಧ್ಯಮಗಳಿಗೆ ವಿವರಿಸಿದರು.

"ಭಾರತದ ಎಲೆಕ್ಟ್ರಾನಿಕ್ಸ್ ರಫ್ತನ್ನು ಹೆಚ್ಚಿಸುವ ಮತ್ತು ಜಿವಿಸಿಗಳಲ್ಲಿ ಹಂಚಿಕೊಳ್ಳುವ" (ಸಂಪುಟ-1) ಕುರಿತ ಮುನ್ನೋಟದ ದಸ್ತಾವೇಜು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

"ಭಾರತದ ಎಲೆಕ್ಟ್ರಾನಿಕ್ಸ್ ರಫ್ತು ಹೆಚ್ಚಿಸುವ ಮತ್ತು ಜಿವಿಸಿಗಳಲ್ಲಿ ಹಂಚಿಕೊಳ್ಳುವ" (ಸಂಪುಟ-1) ಕುರಿತ ಮುನ್ನೋಟದ ದಸ್ತಾವೇಜಿನ ಸಾರಾಂಶವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

***



(Release ID: 1769054) Visitor Counter : 243


Read this release in: Urdu , English , Hindi