ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೃಷಿ ಉಳಿಕೆಗಳಿಂದ ಜಲಜನಕದ ನೇರ ಉತ್ಪಾದನೆಗೆ ವಿಶಿಷ್ಟ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ

Posted On: 30 SEP 2021 7:43PM by PIB Bengaluru

ಭಾರತೀಯ ಸಂಶೋಧಕರು ಕೃಷಿ ಉಳಿಕೆಗಳಿಂದ ಜಲಜನಕದ ನೇರ ಉತ್ಪಾದನೆಗೆ ಒಂದು ಅನನ್ಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಭಾರತೀಯ ಸಂಶೋಧಕರ ಈ ಆವಿಷ್ಕಾರವು ಜಲಜನಕದ ಲಭ್ಯತೆಯ ಸವಾಲನ್ನು ನಿಭಾಯಿಸುವ ಮೂಲಕ ಪರಿಸರ ಸ್ನೇಹಿ ಜಲಜನಕ ಇಂಧನ ಸೆಲ್ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಬಹುದು.

2030 ರ ವೇಳೆಗೆ ಭಾರತವು ಸುಮಾರು 450 GW ನ 60% ನವೀಕರಿಸಬಹುದಾದ ಶಕ್ತಿಯ ಗುರಿಯನ್ನು ಹೊಂದಿದೆ. ಈ ಸಾಧನೆಯನ್ನು ಸಾಧಿಸಲು, ಪ್ರಸ್ತುತ ಸನ್ನಿವೇಶದಲ್ಲಿ, ಪ್ರಪಂಚದಾದ್ಯಂತದ ಸಂಶೋಧಕರು ನವೀಕರಿಸಬಹುದಾದ ಇಂಧನ ಪರಿಹಾರಗಳಿಗಾಗಿ ಕೆಲಸ ಮಾಡುತ್ತಿದ್ದಾರೆ, ಇದು ಸೀಮಿತ ಇಂಗಾಲದೊಂದಿಗೆ ಸಮರ್ಥನೀಯವಾಗಿರಬೇಕು. ಇದನ್ನು ಸಾಧಿಸಲು ಅತ್ಯಂತ ಮಿತವ್ಯಯದ ಮಾರ್ಗವೆಂದರೆ ಅಗ್ಗದ, ಸಮೃದ್ಧ ಮತ್ತು ನವೀಕರಿಸಬಹುದಾದ ಮೂಲದಿಂದ ಜಲಜನಕವನ್ನು  ಉತ್ಪಾದಿಸುವುದು. ವಿಲೇವಾರಿಗೆ ದೊಡ್ಡ ಸವಾಲನ್ನು ಎದುರಿಸುತ್ತಿರುವ ಕೃಷಿ ತ್ಯಾಜ್ಯವು ಜಲಜನಕದ  ಉತ್ಪಾದನೆಯ ಮೂಲಗಳಲ್ಲಿ ಒಂದಾಗಬಹುದು, ಮತ್ತು ಇದು ಶಕ್ತಿ ಉತ್ಪಾದನೆ ಮತ್ತು ತ್ಯಾಜ್ಯ ವಿಲೇವಾರಿಯ ಉಭಯ ಸಮಸ್ಯೆಯನ್ನು ಪರಿಹರಿಸಬಹುದು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್‌ಟಿ) ಸ್ವಾಯತ್ತ ಸಂಸ್ಥೆಯಾದ ಪುಣೆಯ ಅಘರ್ಕರ್ ಸಂಶೋಧನಾ ಸಂಸ್ಥೆಯ ಸಂಶೋಧಕರ ತಂಡ, ಕೆಪಿಐಟಿ ಟೆಕ್ನಾಲಜೀಸ್‌ನ ಸೆಂಟಿಂಟ್ ಪ್ರಯೋಗಾಲಯಗಳ ಸಹಯೋಗದೊಂದಿಗೆ, ಈ ತಂತ್ರಜ್ಞಾನವನ್ನು ಕೃಷಿ ಉಳಿಕೆಗಳಿಂದ ಜಲಜನಕ ಹೊರತೆಗೆಯಲು ಪ್ರಯೋಗಾಲಯ ಮಟ್ಟದಲ್ಲಿ ಅಭಿವೃದ್ಧಿಪಡಿಸಿದೆ.

"ಇಂದು ಬಳಸುವ ಸಾಂಪ್ರದಾಯಿಕ ಆಮ್ಲಜನಕರಹಿತ  ಪ್ರಕ್ರಿಯೆಗಳಿಗೆ ಹೋಲಿಸಿದರೆ ನಮ್ಮ ತಂತ್ರಜ್ಞಾನವು 25%ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಎರಡು ಹಂತದ ಪ್ರಕ್ರಿಯೆಯು ಜೀವರಾಶಿಯ ಪೂರ್ವಭಾವಿ ಕ್ರಿಯೆಯನ್ನು ತೆಗೆದುಹಾಕುತ್ತದೆ, ಹೀಗಾಗಿ ಈ ಪ್ರಕ್ರಿಯೆಯು ಮಿತವ್ಯಯ ಮತ್ತು ಪರಿಸರ ಸ್ನೇಹಿಯಾಗಿದೆ. ಈ ಪ್ರಕ್ರಿಯೆಯು ಜೈವಿಕ ಗೊಬ್ಬರವಾಗಿ ಬಳಸಬಹುದಾದ ಪೌಷ್ಟಿಕಾಂಶಗಳಿಂದ ಕೂಡಿದ ಡೈಜೆಸ್ಟೇಟ್ ಅನ್ನು ಉತ್ಪಾದಿಸುತ್ತದೆ ಎಂದು ಎಆರ್‌ಐ ನಿರ್ದೇಶಕ ಡಾ.ಪ್ರಶಾಂತ್ ಧಾಕೆಫಾಲ್ಕರ್ ಹೇಳಿದರು.

ಎಮ್ ಎ ಸಿ ಎಸ್-ಎಆರ್ ಐ ನ   ವಿಜ್ಞಾನಿಗಳಾದ ಡಾ.ಎಸ್.ಎಸ್.ದಾಗರ್ ಮತ್ತು ಪ್ರಣವ್ ಕ್ಷೀರಸಾಗರ್ ಮತ್ತು ಕೆಪಿಐಟಿ-ಸೆಂಟಿಂಟ್ ನಿಂದ ಶ್ರೀ ಕೌಸ್ತುಭ್ ಪಾಠಕ್ ಅವರು ಪ್ರಕ್ರಿಯೆಯ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿರುವರು. ತಂತ್ರಜ್ಞಾನದ ಅಭಿವರ್ಧಕರು ಜಲಜನಕ   ಇಂಧನ ಉತ್ಪಾದನಾ ಪ್ರಕ್ರಿಯೆಯು ವಿಶೇಷವಾಗಿ ಅಭಿವೃದ್ಧಿಪಡಿಸಿದ ಸೂಕ್ಷ್ಮಜೀವಿಯ ಒಕ್ಕೂಟವನ್ನು ಒಳಗೊಂಡಿದೆ, ಇದು ಸೆಲ್ಯುಲೋಸ್ ಮತ್ತು ಹೆಮಿಸೆಲ್ಯುಲೋಸ್ ಭರಿತ ಥರ್ಮೋ-ಕೆಮಿಕಲ್ ಅಥವಾ  ಪೂರ್ವ ಪ್ರಕ್ರಿಯೆಗೊಳಗೊಳ್ಳದ ಕಿಣ್ವಕದ   ಕೃಷಿ ಉಳಿಕೆಗಳಾದ ಭತ್ತ, ಗೋಧಿ ಅಥವಾ ಮೆಕ್ಕೆ ಜೋಳದಂತಹ ಜೈವಿಕ ವಿಘಟನೆಯನ್ನು ಬಳಸತ್ತದೆ. ಈ ಪ್ರಕ್ರಿಯೆಯು ಮೊದಲ ಹಂತದಲ್ಲಿ ಜಲಜನಕ  ಮತ್ತು ಎರಡನೇ ಹಂತದಲ್ಲಿ ಮೀಥೇನ್ ಉತ್ಪಾದಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ಮೀಥೇನ್ ಅನ್ನು ಹೆಚ್ಚುವರಿ ಜಲಜನಕವನ್ನು ಉತ್ಪಾದಿಸಲು ಸಹ ಬಳಸಬಹುದು ಎಂದು ಅವರು ಹೇಳಿದರು.

"ಬಳಕೆಯಾಗದ ಕೃಷಿ ಉಳಿಕೆಗಳಿಂದ ಜಲಜನಕವನ್ನು ಉತ್ಪಾದಿಸುವ ಈ ಪ್ರಗತಿಯು ಇಂಧನ ಸಂಪನ್ಮೂಲಗಳ ಮೇಲೆ ಸ್ವಾವಲಂಬಿಯಾಗಲು ನಮಗೆ ಸಹಾಯ ಮಾಡುತ್ತದೆ. ಇದು ರೈತ ಸಮುದಾಯಕ್ಕೆ ಪ್ರಮುಖ ಆದಾಯ ಮೂಲವನ್ನು ಕೂಡ ನೀಡುತ್ತದೆ ಎಂದು ಸೆಂಟಿಂಟ್ ಪ್ರಯೋಗಾಲಯಗಳ ಅಧ್ಯಕ್ಷ ರವಿ ಪಂಡಿತ್ ಹೇಳಿದರು. ಐಪಿಆರ್ ಅನ್ನು ರಕ್ಷಿಸಲು ಭಾರತೀಯ ಪೇಟೆಂಟ್ ಅರ್ಜಿಯನ್ನು ಸಲ್ಲಿಸಲಾಗಿದೆ.

ಎರಡು ಹಂತದ ಜೈವಿಕ ಜಲಜನಕ ಮತ್ತು ಜೈವಿಕ (ಬಯೋ) ಮೀಥೇನ್ ಉತ್ಪಾದನೆಗೆ ಆಮ್ಲಜನಕರಹಿತ ಡೈಜೆಸ್ಟರ್‌ಗಳು

ರಿಯಾಕ್ಟರ್‌ನಲ್ಲಿ ನಿರಂತರ ಜೈವಿಕ ಜಲಜನಕ ಉತ್ಪಾದನೆ

****



(Release ID: 1759818) Visitor Counter : 239


Read this release in: English , Urdu