ಇಂಧನ ಸಚಿವಾಲಯ
ನವೀಕರಿಸಬಹುದಾದ ಇಂಧನ ಪ್ರಮಾಣಪತ್ರ (ಆರ್ಇಸಿ) ಕಾರ್ಯವಿಧಾನವನ್ನು ಮರುವಿನ್ಯಾಸಗೊಳಿಸಿದ ಇಂಧನ ಸಚಿವಾಲಯ
ಫ್ಲೋರ್ ಮತ್ತು ಫಾರ್ಬೆರೆನ್ಸ್ ಬೆಲೆ ಮಿತಿಗಳನ್ನುತೆರವುಗೊಳಿಸಲಾಗಿದೆ
ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಸಾರವಾಗಿ ʻಆರ್ಇಸಿʼ ಬೆಲೆ ನಿರ್ಧರಣೆಯಾಗಲಿದೆ
Posted On:
29 SEP 2021 5:00PM by PIB Bengaluru
ಕೇಂದ್ರ ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ.ಸಿಂಗ್ ಅವರು ಪ್ರಸ್ತುತ ನವೀಕರಿಸಬಹುದಾದ ಇಂಧನ ಪ್ರಮಾಣಪತ್ರ (ಆರ್ಇಸಿ) ಕಾರ್ಯವಿಧಾನದಲ್ಲಿ ತಿದ್ದುಪಡಿಗಳಿಗೆ ಸಮ್ಮತಿ ಸೂಚಿಸಿದ್ದಾರೆ. ವಿದ್ಯುತ್ ಕ್ಷೇತ್ರದಲ್ಲಿ ಹೊರಹೊಮ್ಮುತ್ತಿರುವ ಬದಲಾವಣೆಗಳೊಂದಿಗೆ ಪ್ರಸ್ತುತ 'ಕಾರ್ಯವಿಧಾನ'ವನ್ನು ಹೊಂದಿಸುವುದು ಮತ್ತು ಹೊಸ ನವೀಕರಿಸಬಹುದಾದ ತಂತ್ರಜ್ಞಾನಗಳನ್ನು ಉತ್ತೇಜಿಸುವುದು ಈ ನಿರ್ಧಾರದ ಹಿಂದಿನ ಉದ್ದೇಶವಾಗಿದೆ.
ಉದ್ದೇಶಿತ ಬದಲಾವಣೆಗಳು ಸಂಬಂಧಪಟ್ಟ ಸಂಸ್ಥೆಗಳಿಗೆ ಕೊಂಚ ನಮ್ಯತೆ, ಹೆಚ್ಚುವರಿ ಮಾರ್ಗೋಪಾಯಗಳು, ಪುನರ್‌ವ್ಯವಸ್ಥೆಯನ್ನು ಒದಗಿಸುತ್ತವೆ. ಜೊತೆಗೆ ಆರ್ಇಸಿಗಳ ಸಿಂಧುತ್ವದ ಅವಧಿಯ ಅನಿಶ್ಚಿತತೆ ಸಮಸ್ಯೆಗಳನ್ನು ಪರಿಹರಿಸುತ್ತವೆ. ಈ ಬದಲಾವಣೆಗಳನ್ನು ರೂಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಲಾಯಿತು. ವಿದ್ಯುತ್ ಸಚಿವಾಲಯವು 2021ರ ಜೂನ್ 4ರಂದು ವಿದ್ಯುತ್ ವಲಯದ ಮಧ್ಯಸ್ಥಗಾರರ ಅಭಿಪ್ರಾಯಗಳನ್ನು ಸಂಗ್ರಹಿಸಲು ನವೀಕರಿಸಬಹುದಾದ ಇಂಧನ ಪ್ರಮಾಣಪತ್ರ (ಆರ್ಇಸಿ) ಕಾರ್ಯವಿಧಾನವನ್ನು ಮರುವಿನ್ಯಾಸಗೊಳಿಸುವ ಕುರಿತ ಚರ್ಚಾಟಿಪ್ಪಣಿ ಪತ್ರವನ್ನು ಹೊರಡಿಸಿತ್ತು.
ನವೀಕರಿಸಿದ ʻಆರ್ಇಸಿʼ ಕಾರ್ಯವಿಧಾನದಲ್ಲಿ ಪ್ರಸ್ತಾಪಿಸಲಾದ ಬದಲಾವಣೆಗಳ ಪ್ರಮುಖ ಲಕ್ಷಣಗಳು:
• ಆರ್ಇಸಿಯ ಸಿಂಧುತ್ವವು ಶಾಶ್ವತವಾಗಿರುತ್ತದೆ, ಅಂದರೆ ಅದನ್ನು ಮಾರಾಟ ಮಾಡುವವರೆಗೂ ಸಿಂಧುವಾಗಿರುತ್ತದೆ.
• ಫ್ಲೋರ್ ಮತ್ತು ಫಾರ್‌ಬೆರೆನ್ಸ್ ಬೆಲೆಗಳನ್ನು ನಿರ್ದಿಷ್ಟಪಡಿಸಬೇಕಾಗಿಲ್ಲ.
• ಆರ್ಇಸಿಗಳ ಅಕ್ರಮ ಸಂಗ್ರಹ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ʻಸಿಇಆರ್ಸಿʼ ಮೇಲ್ವಿಚಾರಣೆ ಮತ್ತು ಕಣ್ಗಾವಲು ವ್ಯವಸ್ಥೆಯನ್ನು ಹೊಂದಿರಬೇಕು.
• ಆರ್ಇಸಿಗೆ ಅರ್ಹರಾಗಿರುವ ನವೀಕರಿಸಬಹುದಾದ ಇಂಧನ (ಆರ್ಇ) ಉತ್ಪಾದಕರು, ಚಾಲ್ತಿಯಲ್ಲಿರುವ ಮಾರ್ಗಸೂಚಿಗಳ ಪ್ರಕಾರ ʻಪಿಪಿಎʼ ಅವಧಿಗೆ ʻಆರ್ಇಸಿʼಗಳ ವಿತರಣೆಗೆ ಅರ್ಹವಾಗಿರುತ್ತಾರೆ. ʻಆರ್ಇಸಿʼಗೆ ಅರ್ಹವಾಗಿರುವ ಪ್ರಸ್ತುತ ನವೀಕರಿಸಬಹುದಾದ ಇಂಧನ ಯೋಜನೆಗಳು 25 ವರ್ಷಗಳವರೆಗೆ ಆರ್ಇಸಿಗಳನ್ನು ಪಡೆಯಬಹುದು.
• ಹೊಸ ಮತ್ತು ಹೆಚ್ಚಿನ ಬೆಲೆಯ ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳ ಪ್ರಚಾರಕ್ಕಾಗಿ ತಂತ್ರಜ್ಞಾನ ಗುಣಕವನ್ನು ಪರಿಚಯಿಸಬಹುದು, ಇದನ್ನು ಪರಿಪಕ್ವತೆಗೆ ಅನುಗುಣವಗಿ ಆಯಾ ತಂತ್ರಜ್ಞಾನಗಳಿಗೆ ನಿರ್ದಿಷ್ಟವಾದ ವಿವಿಧ ವಿಭಾಗಗಳಲ್ಲಿ ಹಂಚಿಕೆ ಮಾಡಬಹುದು.
• ಕೇಂದ್ರ ಸರ್ಕಾರವು ಸೂಚಿಸಿದ ಆರ್ಪಿಒ ಅನುಸರಣೆಯನ್ನು ಮೀರಿ ನವೀಕರಿಸಬಹುದಾದ ಇಂಧನ ಖರೀದಿಸುವ ಬಾಧ್ಯಸ್ಥ ಘಟಕಗಳಿಗೆ (ಡಿಸ್ಕಾಂಗಳು ಮತ್ತು ಮುಕ್ತ ಪ್ರವೇಶ ಗ್ರಾಹಕರು ಸೇರಿದಂತೆ) ʻಆರ್ಇಸಿʼಗಳನ್ನು ನೀಡಬಹುದು.
• ಸಬ್ಸಿಡಿಗಳು/ ರಿಯಾಯಿತಿಗಳು ಅಥವಾ ಇತರೆ ಯಾವುದೇ ಶುಲ್ಕಗಳನ್ನು ಮನ್ನಾ ಸೌಲಭ್ಯ ಪಡೆದ ಫಲಾನುಭವಿಗೆ ಯಾವುದೇ ʻಆರ್ಇಸಿʼಯನ್ನು ನೀಡಲಾಗುವುದಿಲ್ಲ. ʻಆರ್ಇಸಿʼಗಳನ್ನು ನಿರಾಕರಿಸಲು ರಿಯಾಯಿತಿ ಶುಲ್ಕಗಳನ್ನು ʻಎಫ್‌ಒಆರ್ʼ ಏಕರೂಪವಾಗಿ ವ್ಯಾಖ್ಯಾನಿಸಲಿದೆ.
• ಆರ್ಇಸಿ ಕಾರ್ಯವಿಧಾನದಲ್ಲಿ ವ್ಯಾಪಾರಿಗಳು ಮತ್ತು ದ್ವಿಪಕ್ಷೀಯ ವಹಿವಾಟುಗಳಿಗೆ ಅವಕಾಶ ನೀಡಲಾಗಿದೆ.
ಪರಿಷ್ಕೃತ ʻಆರ್ಇಸಿ ಕಾರ್ಯವಿಧಾನದಲ್ಲಿ ಪ್ರಸ್ತಾಪಿಸಲಾದ ಬದಲಾವಣೆಗಳನ್ನು ನಿಯಂತ್ರಣ ಪ್ರಕ್ರಿಯೆಯ ಮೂಲಕ ʻಸಿಇಆರ್ಸಿʼ ಜಾರಿಗೊಳಿಸುತ್ತದೆ. ನವೀಕರಿಸಬಹುದಾದ ಇಂಧನ ಮೂಲಗಳ ಲಭ್ಯತೆ ಮತ್ತು ತಮ್ಮ ನವೀಕರಿಸಬಹುದಾದ ಇಂಧನ ಖರೀದಿ ಬಾಧ್ಯತೆಯನ್ನು (ಆರ್ಪಿಒ) ಪೂರೈಸಲು ಬಾಧ್ಯಸ್ಥ ಘಟಕಗಳಿಗೆ ಇರುವ ಅಗತ್ಯದ ಪ್ರಮಾಣದ ನಡುವೆ ಅಂತರವನ್ನು ತುಂಬಲು, ದೇಶಾದ್ಯಂತ ಮಾರುಕಟ್ಟೆ ಆಧಾರಿತ ನವೀಕರಿಸಬಹುದಾದ ಇಂಧನ ಪ್ರಮಾಣಪತ್ರ (ಆರ್ಇಸಿ) ಕಾರ್ಯವಿಧಾನವನ್ನು 2010ರಲ್ಲಿ ಪರಿಚಯಿಸಲಾಯಿತು.
***
(Release ID: 1759384)
Visitor Counter : 280