ಇಂಧನ ಸಚಿವಾಲಯ

ಕೇಂದ್ರ ಇಂಧನ ಕಾರ್ಯದರ್ಶಿಗಳಿಂದ ಕಲ್ಲಿದ್ದಲು ಪೂರೈಕೆ ಪರಿಶೀಲನೆ


ಸದ್ಯದ ಪರಿಸ್ಥಿತಿ ನಿಭಾಯಿಸಲು ಮಧ್ಯಪ್ರವೇಶ, 31ನೇ ಆಗಸ್ಟ್‌ ಇನ್ನೊಂದು ಪರಿಶೀಲನಾ ಸಭೆ

ಕಲ್ಲಿದ್ದಲು ಪೂರೈಕೆ ಕುರಿತ ಮಾಹಿತಿಗಾಗಿ ಉಷ್ಣ ಸ್ಥಾವರಗಳಿಗೆ ಒಂದೇ ಮೇಲ್‌ ಐಡಿ fmdiv.cea@gov.in

Posted On: 28 AUG 2021 6:55PM by PIB Bengaluru

ಕೇಂದ್ರೀಯ ವಿದ್ಯುತ್‌ ನಿಗಮ ಹಾಗೂ ಕಲ್ಲಿದ್ದಲು ಸಚಿವಾಲಯದೊಂದಿಗೆ ಈಚೆಗೆ ಕೇಂದ್ರ ಇಂಧನ ಕಾರ್ಯದರ್ಶಿ ಆಲೋಕ್‌ ಕುಮಾರ್‌ ಸಭೆ ನಡೆಸಿದರು. ಉಷ್ಣ ಸ್ಥಾವರ ಕೇಂದ್ರಗಳಲ್ಲಿ  ಕಲ್ಲಿದ್ದಲಿನ ಸಂಗ್ರಹದಲ್ಲಿ ಇಳಿಕೆ ಕಂಡು ಬಂದಿರುವುದರಿಂದ, ಪೂರೈಕೆಯ ವ್ಯವಸ್ತೇ ಏನಿದೆ ಎಂದು ಕಂಡುಕೊಳ್ಳಲು ಸಭೆ ಏರ್ಪಡಿಸಿದ್ದರು. ಇಂಧನ ಸಚಿವಾಲಯ, ವಿದ್ಯುತ್‌ ನಿಗಮ ಹಾಗೂ ಕೋಲ್‌ ಇಂಡಿಯಾ ಲಿಮಿಟೆಡ್‌ನಿಂದ ಪ್ರತಿ ದಿನದ ಕಲ್ಲಿದ್ದಲು ಸಂಗ್ರಹದ ಮಟ್ಟ ಗಮನಿಸಲು ಕೋರ್‌ ಮ್ಯಾನೇಜ್ಮೆಂಟ್‌ ತಂಡವನ್ನು ರಚಿಸಲಾಯಿತು. ಪ್ರತಿ ಉಷ್ಣ ಸ್ಥಾವರ ಕೇಂದ್ರಗಳು ಕಲ್ಲಿದ್ದಲ ಪೂರೈಕೆ, ಕೊರತೆಗಳ ಕುರಿತು ಆದ್ಯತೆಯ ಮೇಲೆ ನಿರ್ಧಾರ ಕೈಗೊಳ್ಳಲು ಒಂದು ಇ–ಮೇಲ್‌ ಖಾತೆಯನ್ನು ಸೃಷ್ಟಿಸಲಾಗಿದೆ. fmdiv.cea[at]gov[dot]in ಖಾತೆಗೆ ಅಗತ್ಯದ ಮಾಹಿತಿಯನ್ನು ಪ್ರತಿದಿನವೂ ಕಳಿಸಲು ಸಂಬಂಧಿತ ಆಡಳಿತ ಮಂಡಳಿಗಳಿಗೆ ಸೂಚಿಸಲಾಯಿತು. 

 ಇಂಧನ ಸಚಿವಾಲಯವು ಕೆಲವು ಉಷ್ಣ ಸ್ಥಾವರಗಳಲ್ಲಿ ಲಭ್ಯ ಇರುವ ಕಲ್ಲಿದ್ದಲ್ಲಿನ ಪ್ರಮಾಣವನ್ನು ಗಮನವಿರಿಸಲಾಗುತ್ತಿದೆ. ಪ್ರತಿವಾರವೂ ಇನ್ನು ಮೇಲೆ ಔಪಚಾರಿಕ ಸಭೆಗಳನ್ನು ಏರ್ಪಡಿಸಿ, ಕಲ್ಲಿದ್ದಲ್ಲಿನ ಪೂರೈಕೆಯ ಮಾಹಿತಿ ಪಡೆಯಲಾಗುವುದು. ಈ ಸಭೆಯಲ್ಲಿ ಕೇಂದ್ರೀಯ ವಿದ್ಯುತ್‌ ನಿಗಮ, ಕಲ್ಲಿದ್ದಲು ಸಚಿವಾಲಯ, ಇಂಧನ ಸಚಿವಾಲಯ, ರೇಲ್ವೇ, ಕಲ್ಲಿದ್ದಲ್ಲು ಕಂಪನಿಗಳು ಭಾಗವಹಿಸಿ, ಕಲ್ಲಿದ್ದಲು ಪೂರೈಕೆಯಲ್ಲಿ ಯಾವುದೇ ತಡೆಯುಂಟಾಗದಂತೆ ಕ್ರಮವಹಿಸಲಾಗುವುದು. 

ಹದಿನಾಲ್ಕು ದಿನಗಳಿಗೆ ಅಗತ್ಯವಿರುವ ಕಲ್ಲಿದ್ದಲ್ಲಿನ ಪೂರೈಕೆನ್ನು ಉಷ್ಣ ಸ್ಥಾವರಗಳಿಗೆ ಪೂರೈಸಲಾಗುವುದು. ಉಳಿದ ಕಲ್ಲಿದ್ದಲ್ಲನ್ನು ಆದ್ಯತೆಯ ಮೇರೆಗೆ ಕ್ಲಿಷ್ಟಕರ ಸ್ಥಿತಿಯನ್ನು ಎದುರಿಸುತ್ತಿರುವ ಉಷ್ಣಸ್ಥಾವರಗಳಿಗೆ ಪೂರೈಸಲಾಗುವುದು. ದೇಶದಾದ್ಯಂತ ಇರುವ ಉಷ್ಣಸ್ಥಾವರಗಳಿಗೆ ಸಮಪ್ರಮಾಣದ ಕಲ್ಲಿದ್ದಲು ಪೂರೈಕೆಯಾಗುವಂತೆ ಕ್ರಮಕೈಗೊಳ್ಳುವಲ್ಲಿ ಇದು ಸಹಾಯಕವಾಗುವುದು. 

 ಲಭ್ಯ ಇರುವ ಕಲ್ಲಿದ್ದಲ್ಲಿನಿಂದ ಅತಿಹೆಚ್ಚು ವಿದ್ಯುತ್‌ ಪಡೆಯುವುದರಿಂದ ಕೋಲ್‌ ಇಂಡಿಯಾ ಲಿಮಿಟೆಡ್‌ ಪೂರೈಸುವ ಕಲ್ಲಿದ್ದಲ್ಲಿನ ಮೇಲಿನ ಅವಲಂಬನೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಕಲ್ಲಿದ್ದಲು ಗಣಿಗಳನ್ನೂ ಈ ಅಂತರ್‌ ಸಂಬಂಧಿತ ಉಷ್ಣ ಸ್ಥಾವರಗಳ ಜೊತೆಗೆ ಸಂಯೋಜಿಸಲಾಗುವುದು. ಇದರಿಂದ ಕಲ್ಲಿದ್ದಲ್ಲಿನ ಪೂರೈಕೆ ಸಮರ್ಪಕವಾಗುವುದು. 

 ಕೋರ್‌ ಮ್ಯಾನೇಜ್ಮೆಂಟ್‌ ತಂಡವು, ಕಲ್ಲಿದ್ದಲು ಸಂಗ್ರಹವನ್ನು ಪ್ರತಿದಿನವೂ ನಿಗಾ ಇಡುವುದು. ಕೋಲ್‌ ಇಂಡಿಯಾ ಲಿಮಿಟೆಡ್‌ನಿಂದ ಪೂರೈಕೆಯಾಗುವ ಪ್ರಮಾಣದ ಮೇಲೆ ನಿಗಾ ಇಡಲಾಗುವುದು. ಜೊತೆಗೆ ರೈಲ್ವೆ ವಿಭಾಗವು ಉಷ್ಣಸ್ಥಾವರಗಳಿಗೆ ಸಕಾಲದಲ್ಲಿ ಪೂರೈಕೆ ಮಾಡುತ್ತಿದೆಯೇ ಎಂಬುದನ್ನೂ ಗಮನಿಸಲಾಗುವುದು. ಕೆಲದಿನಗಳ ನಂತರ ಕಲ್ಲಿದ್ದಲ್ಲಿನ ಸಮರ್ಪಕ ಪೂರೈಕೆಯ ಕುರಿತು ಮತ್ತೊಂದು ಸಭೆಯಲ್ಲಿ ಪುನರ್‌ಪರಿಶೀಲನೆ ಮಾಡಲಾಗುವುದು. ಈ ಸಭೆಯ ಪೂರ್ವ ತಯಾರಿಗೆ ಇನ್ನೊಂದು ಸಭೆಯನ್ನು ಆಗಸ್ಟ್‌ 31 2021ರಂದು ಹಮ್ಮಿಕೊಳ್ಳಲಾಗುವುದು. ಇಂಧನ, ಕಲ್ಲಿದ್ದಲು ಕ್ಷೇತ್ರದ ಕಾರ್ಯದರ್ಶಿಗಳು ರೈಲು ಸಂಚಾರ ವ್ಯವಸ್ಥೆಯ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಂಡು ಪರಿಸ್ಥಿತಿಯನ್ನು ಪರಿಶೀಲಿಸುವರು. 

 ಕೆಲವು ಉಷ್ಣಸ್ಥಾವರಗಳಲ್ಲಿ ಕಲ್ಲಿದ್ದಲ್ಲಿನ ಲಭ್ಯತೆಯ ಕೊರತೆ ಇದೆ. ಕೆಲವು ಕಾರಣಗಳಿಂದ ಕೊರತೆಯನ್ನು ಎದುರಿಸುತ್ತಿವೆ. ಆ ಕಾರಣಗಳಲ್ಲಿ ಅತಿ ಹೆಚ್ಚಿನ ವಿದ್ಯುತ್‌ ಬೇಡಿಕೆಯೂ ಒಂದಾಗಿದೆ. ಜಲವಿದ್ಯುತ್‌ ಶಕ್ತಿಯ ಉತ್ಪಾದನೆಯ ಮಟ್ಟ ಕಡಿಮೆಯಾಗಿರುವುದರಿಂದ, ದೇಶದಾದ್ಯಂತ ಆರ್ಥಿಕ ವ್ಯವಸ್ಥೆ ಚೇತರಿಸಿಕೊಂಡಿರುವುದರಿಂದಲೂ ಇದ್ದಕ್ಕಿದ್ದಂತೆ ಬೇಡಿಕೆ ಹೆಚ್ಚಿದೆ. ಈ ಬೇಡಿಕೆಯನ್ನು ಪೂರೈಸಲು ಉಷ್ಣಸ್ಥಾವರಗಳ ಮೇಲಿನ ಅವಲಂಬನೆ ಅತ್ಯಗತ್ಯವಾಗಿದೆ. ಜುಲೈ2021ರಲ್ಲಿ ಅತಿಗರಿಷ್ಠ 200 ಗಿಗಾ ವಾಟ್ಸ್‌ಗಳಷ್ಟು ವಿದ್ಯುತ್‌ ಬೇಡಿಕೆ ಇತ್ತು. ಸದ್ಯಕ್ಕೆ 192–193 ಗಿಗಾವಾಟ್ಸ್‌ಗಳ ಆಸುಪಾಸಿನಲ್ಲಿದೆ. ಐತಿಹಾಸಿಕವಾಗಿ ಸಾಮಾನ್ಯವಾಗಿ ಸೆಪ್ಟೆಂಬರ್‌ ತಿಂಗಳಲ್ಲಿ ಅತಿಹೆಚ್ಚು ಬೇಡಿಕೆ ಇರುವುದೂ ಕಂಡು ಬರುತ್ತದೆ.

****



(Release ID: 1750371) Visitor Counter : 225


Read this release in: English , Urdu , Hindi