ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಬಳಿ ಕೋವಿಡ್-19 ಲಸಿಕೆ ಲಭ್ಯತೆ ಕುರಿತು ಪರಿಷ್ಕೃತ ಮಾಹಿತಿ


ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 58.07 ಕೋಟಿ ಗೂ ಹೆಚ್ಚು ಕೊರೋನಾ ಲಸಿಕೆ ಪೂರೈಕೆ

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಬಳಿ ಬಳಕೆಯಾಗದ ಮತ್ತು ಬಾಕಿ 3.62 ಕೋಟಿ ಗೂ ಹೆಚ್ಚು ಲಸಿಕಾ ಡೋಸ್ ಗಳು ಲಭ್ಯ

Posted On: 25 AUG 2021 10:27AM by PIB Bengaluru

ದೇಶಾದ್ಯಂತ ಕೋವಿಡ್ -19 ಲಸಿಕಾ ಅಭಿಯಾನದ ವೇಗವರ್ಧನೆ ಮತ್ತು ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. 2021 ಜೂನ್ 21 ರಿಂದ ಕೋವಿಡ್19 ಹೊಸ ಸಾರ್ವತ್ರೀಕರಣದ ಲಸಿಕಾ ಅಭಿಯಾನ ಅರಂಭವಾಗಿದೆ. ಹೆಚ್ಚು ಲಸಿಕೆಗಳ ಲಭ್ಯತೆಯ ಮೂಲಕ ಲಸಿಕಾ ಅಭಿಯಾನವನ್ನು ತ್ವರಿತಗೊಳಿಸಲಾಗಿದ್ದು, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಮುಂದಾಗಿಯೇ ಲಸಿಕೆ ಲಭ್ಯತೆ ಗೋಚರವಾಗುವಂತೆ ವ್ಯವಸ್ಥೆ ಮಾಡಿರುವ ಕಾರಣ ಉತ್ತಮ ಯೋಜನೆ ರೂಪಿಸಲು ಮತ್ತು ಲಸಿಕೆ ಪೂರೈಕೆ ಸರಪಳಿಯನ್ನು ಸುಗಮಗೊಳಿಸಲು ಸಾಧ್ಯವಾಗಿದೆ.

ದೇಶಾದ್ಯಂತ ಲಸಿಕಾ ಅಭಿಯಾನದಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತ ಸರ್ಕಾರ ಉಚಿತವಾಗಿ ಲಸಿಕೆ ಒದಗಿಸುವ ಮೂಲಕ ಬೆಂಬಲ ನೀಡುತ್ತಿದೆ. ಕೋವಿಡ್19 ಹೊಸ ಸಾರ್ವತ್ರೀಕರಣದ ಲಸಿಕಾ ಅಭಿಯಾನದಡಿ ದೇಶದಲ್ಲಿ ಲಸಿಕೆ ಉತ್ಪಾದಕರು ಉತ್ಪಾದಿಸುವ ಶೇ 75% [ಉಚಿತವಾಗಿ] ಲಸಿಕೆಯನ್ನು ಕೇಂದ್ರ ಸರ್ಕಾರ ಖರೀದಿಸಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸುತ್ತಿದೆ.

ಲಸಿಕಾ ಡೋಸ್ ಗಳು

(2021 ಆಗಸ್ಟ್ 25 ರವರೆಗೆ)

ಪೂರೈಕೆ

58,07,64,210

ಪೂರೈಕೆ ಹಂತದಲ್ಲಿ

51,48,970

ಬಾಕಿ ಲಭ್ಯತೆ

3,62,24,601

58.07 ಕೋಟಿಗೂ ಹೆಚ್ಚು (58,07,64,210] ಲಸಿಕೆ ಡೋಸ್ ಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ ಭಾರತದ ಸರ್ಕಾರ [ಉಚಿತ ಮಾರ್ಗ] ರಾಜ್ಯಗಳಿಗೆ ನೇರ ಖರೀದಿ ವಲಯದ ಮೂಲಕ ಪೂರೈಸಿದೆ. ಇನ್ನೂ 51,48,970 ಡೋಸ್ ಗಳು ಪೂರೈಕೆ ಹಂತದಲ್ಲಿದೆ.

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಬಳಿ 3.62 ಕೋಟಿ ಗೂ (3,62,24,601) ಹೆಚ್ಚು ಬಳಕೆಯಾಗದ ಮತ್ತು ಬಾಕಿ ಕೋವಿಡ್ ಲಸಿಕಾ ಡೋಸ್ ಗಳು ಲಭ್ಯವಿದೆ.

***


(Release ID: 1748808) Visitor Counter : 292